ಗೀಜಗ
Baya Weaver | |
---|---|
Male of race philippinus displaying at nest | |
Female of race philippinus | |
Conservation status | |
Scientific classification | |
ಸಾಮ್ರಾಜ್ಯ: | Animalia
|
ವಿಭಾಗ: | Chordata
|
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | P. philippinus
|
Binomial name | |
Ploceus philippinus |
ಗೀಜಗ ಹಕ್ಕಿ ಪ್ಲಾಸಿಡೇ ಕುಟುಂಬಕ್ಕೆ ಸೇರಿದ ಒಂದು ಹಕ್ಕಿಯಾಗಿದೆ. ನೇಯ್ಗೆ ಹಕ್ಕಿ ಎಂಬ ಪರ್ಯಾಯನಾಮದಿಂದ ಪ್ರಸಿದ್ಧವಾಗಿರುವ. ಪ್ಲೋಸಿಯಸ್ ಜಾತಿಗೆ ಈ ಹಕ್ಕಿಯು ಸೇರಿದೆ. ಈ ಪಕ್ಷಿಗಳ ಹಿಂಡುಗಳಲ್ಲಿ ಹುಲ್ಲುಗಾವಲುಗಳು, ಕೃಷಿ ಪ್ರದೇಶಗಳು, ಪೊದೆಗಳು ಮತ್ತು ದ್ವಿತೀಯ ಬೆಳವಣಿಗೆಯಲ್ಲಿ ಕಂಡುಬರುತ್ತವೆ ಮತ್ತು ಅವು ಎಲೆಗಳಿಂದ ನೇಯ್ದ ಪ್ರತೀಕಾರಾಕಾರಾದ ಗೂಡುಗಳಿಗೆ ಹೆಸರುವಾಸಿಯಾಗಿದೆ. ಈ ಗೂಡಿನ ವಸಾಹತುಗಳು ಸಾಮಾನ್ಯವಾಗಿ ಮುಳ್ಳಿನ ಮರಗಳು ಅಥವಾ ಪಾಮ್ ಫ್ರಾಂಡ್‌ಗಳಲ್ಲಿ ಕಂಡುಬರುತ್ತವೆ ಮತ್ತು ಗೂಡುಗಳನ್ನು ಹೆಚ್ಚಾಗಿ ನೀರಿನ ಬಳಿ ನಿರ್ಮಿಸಲಾಗುತ್ತದೆ ಅಥವಾ ಪರಭಕ್ಷಕಗಳು ಸುಲಭವಾಗಿ ತಲುಪಲು ಸಾಧ್ಯವಾಗದ ಸ್ಥಳಗಳಲ್ಲಿ ನಿರ್ಮಿಸುತ್ತವೆ. ಅವು ತಮ್ಮ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಮತ್ತು ಸಾಮಾನ್ಯವಾಗಿರುವ ಸ್ಥಳೀಯ, ಕಾಲೋಚಿತ ಚಲನೆಗಳಿಗೆ ಗುರಿಯಾಗುತ್ತವೆ, ಮುಖ್ಯವಾಗಿ ಮಳೆ ಮತ್ತು ಆಹಾರ ಲಭ್ಯತೆಗೆ ಪ್ರತಿಕ್ರಿಯೆಯಾಗಿ ಕಾಣಿಸುತ್ತವೆ.
ವೈಶಿಷ್ಟ್ಯಗಳು
ಬದಲಾಯಿಸಿಇವು ಗುಬ್ಬಚ್ಚಿ ಗಾತ್ರದ (15 ಸೆಂ.ಮೀ.) ಮತ್ತು ಅವುಗಳ ಸಂತಾನೋತ್ಪತ್ತಿ ಮಾಡದ ಪುಕ್ಕಗಳಲ್ಲಿ, ಗಂಡು ಮತ್ತು ಹೆಣ್ಣು ಇಬ್ಬರೂ ಹೆಣ್ಣು ಮನೆ ಗುಬ್ಬಚ್ಚಿಗಳನ್ನು ಹೋಲುತ್ತವೆ. ಅವರು ಸ್ಟೌಟ್ ಶಂಕುವಿನಾಕಾರದ ಬಾಯಿ ಮತ್ತು ಸಣ್ಣ ಚದರ ಬಾಲವನ್ನು ಹೊಂದಿರುತ್ತವೆ. ಸಂತಾನೋತ್ಪತ್ತಿ ಮಾಡದ ಗಂಡು ಮತ್ತು ಹೆಣ್ಣು ಒಂದಕ್ಕೊಂದು ಹೋಲುತ್ತವೆ: ಮೇಲೆ ಕಾಫೀ ಬಣ್ಣದ ಗೆರೆಗಳು ತುಂಬಿರುತ್ತವೆ, ಕೆಳಗೆ ಸರಳವಾದ ಬಿಳಿ ಬಣ್ಣವು ತುಂಬಿರುತ್ತದೆ, ಕಣ್ಣುಬ್ಬು ಉದ್ದವಾಗಿರುತ್ತದೆ, ಕೊಕ್ಕು ಕಟ್ಟಿಗೆಯ ಬಣ್ಣದ್ದಾಗಿದು. ಸಂತಾನೋತ್ಪತ್ತಿ ಮಾಡುವ ಪುರುಷ ಪಕ್ಷಿಗಳು ಪ್ರಕಾಶಮಾನವಾದ ಹಳದಿ ಕಿರೀಟ, ಕಪ್ಪು ಮಿಶ್ರಿತ ಕಾಫೀ ಬಣ್ಣದ ಕೊಕ್ಕನ್ನು ಹೊಂದಿರುತವೆ, ಮೇಲಿನ ಭಾಗಗಳು ಹಳದಿ ಬಣ್ಣದಿಂದ ಕಾಫೀ ಬಣ್ಣದಲ್ಲಿರುತ್ತವೆ.
ಆವಾಸ ಮತ್ತು ಗೂಡುಕಟ್ಟುವುದು
ಬದಲಾಯಿಸಿಗೀಜಗನ ಹಕ್ಕಿಗಳ ವಾಸ ಕೃಷಿಯ ಬಯಲು ಪ್ರದೇಶಗಳಲ್ಲಿ. ಸಾಮಾನ್ಯವಾಗಿ ಗುಂಪುಗಳಲ್ಲಿರುವುದೇ ವಾಡಿಕೆ. ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬರ್ಮಾಗಳಲ್ಲಿ ಈ ಹಕ್ಕಿಗಳ ವ್ಯಾಪ್ತಿ ಇದೆ. ಇವುಗಳಲ್ಲಿ ವಲಸೆ ಹೋಗುವ ಕ್ರಮವೂ ಉಂಟು. ಸಾಮಾನ್ಯವಾಗಿ ದೊಡ್ಡ ಗುಂಪುಗಳು ಕೊಯ್ಲಿಗೆ ಬಂದ ಬತ್ತ ಮತ್ತು ಇತರ ಧಾನ್ಯಗಳ ಕೃಷಿಭೂಮಿಗಳ ಬಳಿ ಮಾತ್ರ ಇರುತ್ತವೆ. ಕೆಲವೊಮ್ಮೆ ಬಲಿಯುತ್ತಿರುವ ತೆನೆಗಳನ್ನು ಹಾಳು ಮಾಡುವುದುಂಟು.ಗೂಡು ಕಟ್ಟುವ ಕಾಲ ಮೇ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ, ಈ ಅವಧಿ ಮುಂಗಾರು ಮಳೆಗಾಲಕ್ಕೂ ಬತ್ತದ ಅಥವಾ ದವಸಗಳ ಕೊಯ್ಲಿಗೂ ಹೊಂದಿಕೊಳ್ಳತ್ತದೆ. ಗೀಜಗನ ಹಕ್ಕಿಗಳು ಗೂಡುಕಟ್ಟುವುದರಲ್ಲಿ ಬಹಳ ಬುದ್ಧಿಶಕ್ತಿಯನ್ನೂ ಕುಶಲತೆಯನ್ನೂ ಪ್ರದರ್ಶಿಸುತ್ತದೆ. ಸಾಧಾರಣವಾಗಿ ನದಿ, ಕೆರೆ ನೀರಿನ ಮೇಲೆ ಬಾಗಿರುವ ಮರದ ರೆಂಬೆಗಳ, ಈಚಲುಗರಿಗಳ ತುದಿಯಲ್ಲಿ ಇಲ್ಲವೆ ನೀರಿನಲ್ಲಿ ಬೆಳೆಯುವ ಜೋಡುಗಳ ಮಧ್ಯೆ ಗೂಡನ್ನು ನಿರ್ಮಿಸುತ್ತವೆ. ಗೂಡುಗಳ ನಿರ್ಮಾಣಕ್ಕೆ ಬತ್ತದ ಹುಲ್ಲುಗಳನ್ನು ಬಳಸುತ್ತವೆ. ತಮ್ಮ ಕೊಕ್ಕು ಕಾಲುಗಳನ್ನು ಕುಶಲತೆ ಯಿಂದ ಬಳಸುತ್ತ ರೆಕ್ಕೆಗಳನ್ನು ಬಡಿಯುತ್ತ ಗೂಡು ನಿರ್ಮಿಸು ವುದನ್ನು ನೋಡಲು ಚೆನ್ನ. ಗೂಡು ಹೂಜಿಯಂತೆ ಇಲ್ಲವೆ ಬಟ್ಟಿಪಾತ್ರೆ ಯಂತೆ ಇರುತ್ತದೆ. ಇದರಲ್ಲಿ ಕೊಂಬೆಗೆ ತೂಗುಹಾಕುವ ಭಾಗ, ಮೊಟ್ಟೆಯಿಡುವ ವಿಶಾಲವಾದ ಗುಂಡು ಭಾಗ ಮತ್ತು ಉದ್ದವಾದ ನೇರವಾದ ಪ್ರವೇಶದ್ವಾರ ಭಾಗ ಎಂಬ ಮೂರು ಭಾಗಗಳಿವೆ. ಪ್ರವೇಶದ್ವಾರ ಕೆಳಮುಖವಾಗಿ ತೆರೆಯುತ್ತದೆ. ಮೊಟ್ಟೆಯಿಡುವ ಭಾಗದ ತಳಕ್ಕೆ ಹಸಿ ಜೇಡಿಮಣ್ಣನ್ನು ಮೆತ್ತಿರುವುದುಂಟು. ಗೂಡು ನಿರ್ಮಾಣದ ಕೆಲಸ ಗಂಡಿನದಾದರೆ, ಮೊಟ್ಟೆಗೆ ಕಾವು ಕೊಡುವ ಕೆಲಸ ಹೆಣ್ಣಿನದು.ಸಾಮಾನ್ಯವಾಗಿ ಒಂದು ಗಂಡು ಹಕ್ಕಿ ಹಲವಾರು ಹೆಣ್ಣು ಹಕ್ಕಿಗಳೊಂದಿಗೆ ಸಂಪರ್ಕವಿಟ್ಟು ಕೊಂಡಿರುತ್ತದೆ.
ನೇಯ್ಗೆ ಹಕ್ಕಿಯು ಹೆಣ್ಣನ್ನು ಒಲಿಸಿಕೊಳ್ಳುವ ಪರಿ ವಿಶೇಷವಾದದ್ದು. ಗಂಡುಹಕ್ಕಿ ತನ್ನ ಪ್ರಭೇದಕ್ಕೆ ವಿಶಿಷ್ಟವಾದ (ಮೇಲೆ ವಿವರಿಸಿರುವ)ಗೂಡನ್ನು ಅರ್ಧ ನಿರ್ಮಿಸಿ ಹೆಣ್ಣಿಗೆ ತೋರಿಸುತ್ತದೆ. ಅದು ಒಪ್ಪಿದರೆ, ಗಂಡು ಮುಂದುವರೆದು ಗೂಡನ್ನು ಪುರೈಸಿ ಸಂತಾನೋತ್ಪತ್ತಿಯಾಗುತ್ತದೆ. ಇಲ್ಲದಿದ್ದಲ್ಲಿ ಗಂಡು ಆ ಗೂಡನ್ನು ಅಷ್ಟಕ್ಕೇ ಬಿಟ್ಟು ಮತ್ತೊಂದು ಗೂಡು ನಿರ್ಮಿಸಿ ಹೆಣ್ಣಿಗೆ ತೋರಿಸುತ್ತದೆ ಮತ್ತು ಪ್ರಕ್ರಿಯೆ ಮುಂದುವರೆಯುತ್ತದೆ. ಹೀಗಾಗಿ ಅರೆನಿರ್ಮಿತ ಅನೇಕ ಗೂಡುಗಳು ನೇಯ್ಗೆ ಹಕ್ಕಿ ಗೂಡು ಮಾಡುವ ಸ್ಥಳಗಳಲ್ಲಿ (ಸಾಮಾನ್ಯವಾಗಿ ನೀರಿನ ಬಳಿ ಬಳಸದ ಆದರೆ ನೀರಿರುವ ಬಾವಿಗಳು) ಕಂಡುಬರುತ್ತದೆ. ಈ ಹಕ್ಕಿಗಳ ವಿಶಿಷ್ಟ ಈ ನಡವಳಿಕೆಯನ್ನು ಜಗತ್ತಿಗೆ ಪರಿಚಯಿಸಿದವರು ಭಾರತದ ಹಕ್ಕಿ ಮನುಷ್ಯ ಸಲೀಂ ಅಲಿ. ಸಲೀಂ ಅಲಿಯವರ ಮುಖ್ಯ ವೈಜ್ಞಾನಿಕ ಕೊಡುಗೆಗಳಲ್ಲಿ ಇದು ಪ್ರಮುಖವಾದದ್ದು ಸಲೀಂ ಅಲಿ
ಆಹಾರ
ಬದಲಾಯಿಸಿಸಾಮಾನ್ಯವಾಗಿ ಸಸ್ಯಾಹಾರಿಗಳಾದ ಇವು ಕೆಲವೊಮ್ಮೆ ಕೀಟಗಳನ್ನೂ ತಿನ್ನುತ್ತವೆ. ಸಂತಾನೋತ್ಪತ್ತಿ ಕಾಲದಲ್ಲಿ ಗಂಡು ಚೀ ಚೀ ಎಂದು ಕೂಗುತ್ತ ಹೆಣ್ಣನ್ನು ಬಹುದೂರ ಅಟ್ಟಿಸಿಕೊಂಡು ಹೋಗುವುದುಂಟು.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Baya weaver media Archived 2016-05-06 ವೇಬ್ಯಾಕ್ ಮೆಷಿನ್ ನಲ್ಲಿ. on the Internet Bird Collection
ಉಲ್ಲೇಖಗಳು
ಬದಲಾಯಿಸಿ- ↑ BirdLife International (2008). Ploceus philippinus. In: IUCN 2008. IUCN Red List of Threatened Species. Retrieved 20 May 2009.