ಗಿಯೋರ್ಡಾನೋ ಇಂಟರ್ನ್ಯಾಷನಲ್ ಲಿಮಿಟೆಡ್

ವಿಕಿಪೀಡಿಯ:ದ್ವಂದ್ವ ನಿವಾರಣೆ


ಗಿಯೋರ್ಡಾನೋ ಇಂಟರ್ನ್ಯಾಷನಲ್ ಲಿಮಿಟೆಡ್ ಕಂಪನಿಯು ಹಾಂಗ್ ಕಾಂಗ್ ಮೂಲದ ಅಂತಾರಾಷ್ಟ್ರೀಯ ಸಂಸ್ಥೆ. ಈ ಕಂಪನಿಯು 1981 ರಲ್ಲಿ ಸ್ಥಾಪಿಸಲಾಯಿತು. ಗಿಯೋರ್ಡಾನೋ ಈಗ ವಿಶ್ವದಾದ್ಯಂತ 30 ದೇಶಗಳಲ್ಲಿ ವ್ಯಾಪರ ನಿರ್ವಹಿಸುತ್ತಿದೆ, ಸುಮಾರು 2,400 ಅಂಗಡಿಗಳು, 8,100 ಕಾರ್ಮಿಕರು ಕೆಲಸ ಮಾಡುತ್ತಿದರೆ. ಇದರ ಪ್ರಸ್ತುತ ಅಧ್ಯಕ್ಷ ಮತ್ತು ಸಿಇಒ(CEO) ಡಾ.ಲಾವ್ ಕ್ವಾಕ್ ಮತ್ತು ಪೀಟರ್. ಏಷ್ಯಾ-ಪೆಸಿಫಿಕ್ ಅತ್ಯಂತದಲ್ಲಿ ಪ್ರಾಮುಖ್ಯತೆ ಪಡೆದ ಮಾರಟಗಾರರೆಂದು ಹೆಸರು ದೊರಕಿದ ಬ್ರ್ಯಾಂಡ್ "ಗಿಯೋರ್ಡಾನೋ". ಪುರುಷರು, ಮಹಿಳೆಯರು ಮತ್ತು ಮಕ್ಕಳು ಧರಿಸುವ ಉಡುಪು,ಗಡಿಯಾರ ಮತ್ತು ಇತರ ವಸ್ತು ಮಾರಟ ಮಾಡುವರು.ಒಂದೋಂದು ವಸ್ತುವನ್ನು ಅದರ ಹೆಸರಿನಲ್ಲಿ ಬೇರ್ಪಡಿಸಿ ಮಾರಟಮಾಡುತ್ತಾರೆ. ಅವರು ಬೇರೆಪಡಿಸುವ ರೀತಿ ಹೀಗಿದೆ "ಗಿಯೋರ್ಡಾನೋ ಜೂನಿಯರ್", "ಗಿಯೋರ್ಡಾನೋ ಲೇಡೀಸ್", ಮತ್ತು "ಬ್ಯೂ ಮಾಂಡೆ". ಗಿಯೋರ್ಡಾನೋ 1991 ರಲ್ಲಿ ಹಾಂಗ್ ಕಾಂಗ್ ಷೇರು ವಿನಿಮಯ ಮಾರುಕಟ್ಟೆಯ ಪಟ್ಟಿಯಲ್ಲಿ ಒಳಗೊಂಡಿತ್ತು ಮತ್ತು ಅದರ ಚಿಹ್ನೆ 709.HK ಎಂಬ ಗುರುತು ಮಾಡಲಾಗಿದೆ.

ಗಿಯೋರ್ಡಾನೋ ಇಂಟರ್ನ್ಯಾಷನಲ್ ಲಿಮಿಟೆಡ್
ಸ್ಥಾಪನೆHong Kong, 1981.
ಉದ್ಯಮRetail

ಇತಿಹಾಸ

ಬದಲಾಯಿಸಿ

ಜಿಮ್ಮಿ ಲೈ ಅವರು 1981 ರಂದು ಗಿಯೋರ್ಡಾನೋ ಕಂಪನಿಯನ್ನು ಸ್ಥಾಪಿಸಿದರು.ಕಂಪನಿ ಈಗ ಇಂಡೋನೇಷ್ಯಾ, ಮ್ಯಾನ್ಮಾರ್, ವಿಯೆಟ್ನಾಂ, ಹಾಂಗ್ ಕಾಂಗ್, ಫಿಲಿಪ್ಪೀನ್ಸ್, ತೈವಾನ್, ಚೀನಾ, ದಕ್ಷಿಣ ಕೊರಿಯಾ, ಮಧ್ಯಪ್ರಾಚ್ಯ, ಸಿಂಗಾಪುರ್, ಮಲೇಷ್ಯಾ, ಥೈಲ್ಯಾಂಡ್,ಕಾಂಬೋಡಿಯಾ, ಆಸ್ಟ್ರೇಲಿಯಾ ಮತ್ತು ಜಪಾನ್ ಸೇರಿದಂತೆ ಹಲವಾರು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. 1996 ರಲ್ಲಿ ಕಂಪನಿ ಸಂಪೂರ್ಣವಾಗಿ ಜಿಮ್ಮಿ ಲೈ ಸಂಘದಿಂದ ಸ್ಥಗಿತಗೊಳಿಸಿಲಾಗಿತ್ತು. ಡಾ.ಲಾವ್ ಕ್ವಾಕ್ ಪೀಟರ್ ಈಗ ಸಂಸ್ಥೆಯ ಅಧ್ಯಕ್ಷ ಮತ್ತು ಸಿಇಒ.

ಬ್ರಾಂಡ್ ಗಳು

ಬದಲಾಯಿಸಿ

ಗಿಯೋರ್ಡಾನೋ ಮೆನ್ ಮತ್ತು ವೊಮನ್ ಸ್ಟೋರ್

ಬದಲಾಯಿಸಿ

1981 ರಲ್ಲಿ ಗಿಯೋರ್ಡಾನೋ ಪುರುಷರು ಮತ್ತು ಮಹಿಳೆಯರಿಗಾಗಿ ಕ್ಯಾಶುಯಲ್ ಉಡುಪು, ಮನೆಯಲ್ಲಿ ಧರಿಸುವಂತಹ ವಸ್ತ್ರಗಳನ್ನು ಮಾರಟ ಮಾಡಲು ಪ್ರಾರಂಭಿಸಿದರು.

ಗಿಯೋರ್ಡಾನೋ ಲೇಡೀಸ್

ಬದಲಾಯಿಸಿ

ಗಿಯೋರ್ಡಾನೋ ಲೇಡೀಸ್ 1997 ರಂದು ಬಿಡುಗಡೆ ಮಾಡಿದರು. ಸಂಪೂರ್ಣ ಮಹಿಳಯರಿಗಾಗಿ ಬೇಕಾದ ಉಡುಪು,ಗಡಿಯಾರ,ಮಹಿಳೆಯರ ಪಾದರಕ್ಷೆಗಳು ಮುಂದಾದ ವಸ್ತುವನ್ನು ಮಾರಟ ಮಾಡಿದರು.

ಗಿಯೋರ್ಡಾನೋ ಜೂನಿಯರ್

ಬದಲಾಯಿಸಿ

'ಗಿಯೋರ್ಡಾನೋ ಜೂನಿಯರ್' ಮಕ್ಕಳಿಗೆ ಬೇಕಾದ ಉಡುಪು,ಗಡಿಯಾರ,ಪಾದರಕ್ಷೆಗಳು ಇತ್ಯಾದಿ ವಸ್ತುವನ್ನು ಮಾರಟಮಾಡಿದರು.

ಬ್ಯೂ ಮಾಂಡೆ

ಬದಲಾಯಿಸಿ

ಬ್ಯೂ ಮಾಂಡೆ ನ್ಯಾಯವಾದ ಬೆಲೆಯಲ್ಲಿ ಉಡುಪುಗಳನ್ನು ನೀಡುತ್ತಿರುವ ಗಿಯೋರ್ಡಾನೋ ಎಂಬ ಕಂಪನಿಯ ಹೊಸ ಬ್ರ್ಯಾಂಡ್ ಆಗಿದೆ. ಇದು 2014 ರಂದು ಪ್ರರಂಭವಾಯಿತು. ಬ್ಯೂ ಮಾಂಡೆ ಅಂಗಡಿಗಳು ಪ್ರಾಥಮಿಕವಾಗಿ ಚೀನಾ ಮತ್ತು ತೈವಾನ್ ಪ್ರದೇಶದ ಶಾಪಿಂಗ್ ಜಿಲ್ಲೆಗಳಲ್ಲಿ ಮಾರಟ ಮಾಡಲಾಯಿತು.

ಮಾರ್ಕೆಟಿಂಗ

ಬದಲಾಯಿಸಿ

ಗಿಯೋರ್ಡಾನೋ ಬ್ರ್ಯಾಂಡ್ ತನ್ನ ವ್ಯಕ್ತಿತ್ವವನ್ನು ನಿರ್ಮಿಸಲು ಮತ್ತು ಅದರ ಬ್ರ್ಯಾಂಡ್ ಮೌಲ್ಯಗಳನ್ನು ಸಂಪರ್ಕಿಸಲು ಜೀವನಚಕ್ರದ ವಿವಿಧ ಉತ್ಪನ್ನ ಮತ್ತು ವಿಷಯಾಧಾರಿತ ಮಾರ್ಕೆಟಿಂಗ್ ಮಿಶ್ರಣವನ್ನು ಹೊಂದಿದೆ. ಜನರನ್ನು ಆಕರ್ಷಿಸಲು ಹೋಸ ರೀತಿಯ ಜಾಹಿರಾತು,ಪ್ರಚಾರ ಕಾರ್ಯಕ್ರಮಗಳು, ರಿಯಾಯಿತಿಯ ಚಟುವಟಿಕೆಗಳು ಮತ್ತು ವಾಣಿಜ್ಯ ಬಳಕೆಗೆ ಸಂಬಂಧಿಸಿದಂತೆ ತನಿಖೆಗಳನ್ನು ಒಳಗೊಂಡಿವೆ. ಗಿಯೋರ್ಡಾನೋನ ಪ್ರಚಾರಾಂದೋಲನವನ್ನು, ವಿಶ್ಲೇಷಣೆಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ.

ಲೈಫ್ ಒಂದು ಜರ್ನಿ

ಬದಲಾಯಿಸಿ

ಗಿಯೋರ್ಡಾನೋ ಕಂಪನಿಯು "ಏಷ್ಯಾ ಡಿಸೈನ್ ಪವರ್ ಎಕ್ಸ್ ಗಿಯೋರ್ಡಾನೋ- ಲೈಫ್ ಒಂದು ಪ್ರಯಾಣವು" ಎಂಬ ಪ್ರಚಾರಕ್ಕೆ ಏಷ್ಯಾದ ವಿವಿಧ ರಾಷ್ಟ್ರಗಳಿಂದ 11 ಸೃಜನ ಶೀಲ ಕಂಪನಿಯನ್ನು ಆಹ್ವಾನಿಸಿತು.ಅದರಲ್ಲಿ ಹಾಂಗ್ ಕಾಂಗ್, ಚೀನಾ, ತೈವಾನ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಥೈಲ್ಯಾಂಡ್ ಮುಂತಾದ ದೇಶದ ಪ್ರಮುಖ ಜನರು ಭಾಗವಹಿಸಿದರು.ಖ್ಯಾತ ಅಂತಾರಾಷ್ಟ್ರೀಯ ಫ್ಯಾಷನ್ ಡಿಸೈನರ್ ಮತ್ತು ಪೌರಾಣಿಕ ಹಾಂಗ್ ಕಾಂಗ್ ಡಿಸೈನರಾದ ಡಾ.ಕನ್ ತೈ-ಕ್ಯುಂಗ್ ಎಸ್ಬಿಎಸ್ ,ಚಾಕೊಲೇಟ್ ರೇನ್ ಬ್ರ್ಯಾಂಡ್ ಸೃಜನಶೀಲರು,ನಿರ್ದೇಶಕರಾದ ಡೋರಿಯನ್ ಹೋ, ವಿವೇಕ ಮ್ಯಾಕ್,ಇತರರು ಸೇರಿದಂತೆ ಮುಂತಾದ ಪ್ರಮುಖರು ಭಾಗವಾಹಿಸಿದರು. ಜಪಾನಿನ ಆಟಿಕೆ ಡಿಸೈನರಾದ ಟೊಮ್ ಹಾಗು ಕೊರಿಯನ್ ಡಿಸೈನರ್ ಮತ್ತು ಸೃಷ್ಟಿಕರ್ತರಾದ ಎಸ್ತರ್ ಕಿಮ್. ಮತ್ತಷ್ಟು ಪ್ರಚಾರವನ್ನು ಬಲಪಡಿಸಲು, ವಾಂಗ್ ಚಿಯಾನ್-ಯಾಂಗ್ ಚೀನಾದ ಕಲಾವಿದ / ಛಾಯಾಗ್ರಾಹಕ ಗಿಯೋರ್ಡಾನೋ ಅವರನ್ನು ಸಹ ಆಹ್ವಾನಿಸಿದರು ಮತ್ತು ಹೆಸರಾಂತ ಕ್ರಿಸ್ಸೀ ಚೌ, ಸಹ ಅಭಿನಯಾಗಾರನದ ಅವರು ಸಮಕಾಲೀನ ಕಲೆಯ ಪ್ರಶಂಸೆ ಮತ್ತು ಪ್ರಚಾರ ಮಾಡಿದರು.

ಮಾನ್ಸ್ಟರ್ಸ್ ಯೂನಿವರ್ಸಿಟಿ

ಬದಲಾಯಿಸಿ

ಗಿಯೋರ್ಡಾನೋ ಡಿಸ್ನಿ ಪಿಕ್ಚರ್ಸ್ ಜತೆಗೂಡಿ ಹೊಲ್ಲಿವೊಡ್ನಲ್ಲಿ "ಮಾನ್ಸ್ಟರ್ಸ್ ಯೂನಿವರ್ಸಿಟಿ" ಎಂಬ ಅನಿಮೇಷನ್ ಚಿತ್ರವನ್ನು ,೨೦೧೩ ರಂದು ಬಿಡುಗಡೆ ಮಾಡಲಾಯಿತು,ಈ ಚಿತ್ರಕ್ಕೆ ಗಣ್ಯ ವಿಶ್ವವಿದ್ಯಾಲಯದಿಂದ ಕ್ರೀಡಾಪಟುಗಳಿಗಾಗಿ ಒಂದು ಶಕ್ತಿಯುತ ಧನಾತ್ಮಕ ಯುವ ಜನರು ನಟನೆ ಮಾಡಿ ಅದ್ದಕೆ ಉಡುಪು ಮತ್ತು ಅಭಿನಯಾ ಮಾದರಿಯಲ್ಲಿ ವರ್ತಿಸಲು ಗಿಯೋರ್ಡಾನೋರವರು ವೇದಿಕೆಯನ್ನು ಏರ್ಪಡಿಸಿದರು.

ಚೀರ್ ಯು ಅಪ್

ಬದಲಾಯಿಸಿ

ಜನತೆಯ ಆತ್ಮಶಕ್ತಿಯನ್ನು ಹೆಚ್ಚಿಸಲು,ಹಾಸ್ಯವನ್ನು ಬಳಸಿ ಅವರಿಗೆ ಆರ್ಥಿಕ ಜಾಗೃತಿಯನ್ನು ನಿರ್ಮಿಸಲು ಗಿಯೋರ್ಡಾನೋ ಅವರು ಖ್ಯಾತ ಹಾಂಗ್ ಕಾಂಗ್-ಆಧಾರಿತ ಹಾಸ್ಯನಟರಾದ ಶ್ರೀ ಜಿಮ್ ಛಿಮ್ ಸೂಯಿ ಸಹಯೋಗದೊಂದಿಗೆ "ಚೀರ್ ಯು ಅಪ್" ಎಂಬ ಟೀ-ಷರ್ಟ್ ಅನ್ನು ಗಿಯೋರ್ಡಾನೋ ಕಂಪನಿಯವರು ನಿರ್ಮಿಸಿದರು ಮತ್ತು ಧನಾತ್ಮಕ ಉಳಿಯಲು ಹಾಸ್ಯವನ್ನು ಪ್ರೋತ್ಸಾಹಿಸಿ ಸಾಮಾನ್ಯ ಕಾರ್ಯಕ್ರಮವನ್ನು ಗಿಯೋರ್ಡಾನೋ ಅವರು ಏರ್ಪಡಿಸಿದರು .

ಸಾಮಾಜಿಕ ಹೊಣೆಗಾರಿಕೆ

ಬದಲಾಯಿಸಿ

ಜನವರಿ 2005 ರಲ್ಲಿ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ( "ಸಿಎಸ್ಆರ್")ಎಂಬ ಸರ್ಕಾರದ ನೀತಿಯನ್ನು ಅಳವಡಿಸಿ,ಗಿಯೋರ್ಡಾನೋ ಅವರು ಹಲವಾರು ಸಾಮಾಜಿಕ ಚಟುವಟಿಕೆಯನ್ನು ನಡೆಸಿದರು. ಮತ್ತು ಸಿಎಸ್ಆರ್ ಪ್ರಚಾರದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಜನರು ಭಾಗವಹಿಸಿದರು. ಪ್ರಾಜೆಕ್ಟ್ ಹೋಪ್; ಎಂಬ ವಿಶೇಷವಾದ ಕಾರ್ಯಕ್ರಮವನ್ನು ನಡೆಸಿದರು, ಇದುವರೆ ಗಿಯೋರ್ಡಾನೋ ಕಂಪನಿಯವರು 'ಗುಡ್ ಹೋಪ್' ಎಂಬ ಪ್ರಾಜೆಕ್ಟ್ ಗೆ 22 ಪ್ರಾಥಮಿಕ ಶಾಲೆಗಳನ್ನು ನಿರ್ಮಾಣಿಸಲು ಧನಸಹಾಯ ಮಾಡಿದರು.ಗಿಯೋರ್ಡಾನೋರವರು "ವರ್ಲ್ಡ್ ವಿಥೌಟ್ ಸ್ಟ್ರೇಂಜರ್ಸ್" ಎಂಬ ಸಾಲನ್ನು ನಂಬಿದರು, ಗಿಯೋರ್ಡಾನೋ ಹಲವಾರು ಧನಸಹಾಯ ಸಾಮಾಜಕ್ಕೆ ಮಾಡಿದರು. 2015 ರಲ್ಲಿ ನೇಪಾಳದ ಭೂಕಂಪಕ್ಕೆ ಸಹಾಯಮಾಡಿದರು, ಹಾಗೆಯೇ ಏಷ್ಯಾದಲ್ಲಿ 2005 ರಂದು ಬಾಕ್ಸಿಂಗ್ ಡೇ ಭೂಕಂಪ ಮತ್ತು ಸುನಾಮಿಯಲ್ಲಿ ಜನರಿಗೆ ಸಹಾಯವನ್ನು ಮಾಡಿದರು. ಬಟ್ಟೆಗಳು,ಆಹಾರ ವಿವಿಧ ರೀತಿ ಪರಿಹಾರ ಚಟುವಟಿಕೆಗಳಲ್ಲಿ ಬೆಂಬಲಿಸಿದರು.$ 140,000 ಮೌಲ್ಯದ ಬಟ್ಟೆಗಳನ್ನು ಮತ್ತು ಆಹಾರವನ್ನು ಕೊಡುವುದರ ಮೂಲಕ ಸಾಹಾಯ ಮಾಡಿದರು. ಗಿಯೋರ್ಡಾನೋ ತನ್ನ ಕಂಪನಿಯಲ್ಲಿ ಕೆಲೆಸ ಮಾಡುವ ಕಾರ್ಮಿಕರಿಗೆ ಜೀವನದ ಸಮತೋಲನ, ಆರೋಗ್ಯ ಮತ್ತು ಹೊಸ ರೀತಿಯ ಬೆಳವಣಿಗೆಗಾಗಿ ಸಾಹಾಯ ಮಾಡಿದರು. ಆರೋಗ್ಯಕರ ಜೀವನದ ಕಾರ್ಯಕ್ರಮ ಸೇರಿದಂತೆ ವಿವಿಧ ಚಟುವಟಿಕೆಗಳು, ಆಯೋಜಿಸಿದರು. ನೌಕರರಿಗೆ ಹಲವಾರು ಕ್ರೀಡೆಗಳು ಮತ್ತು ಅವರನ್ನು ಎಲ್ಲ ರೀತಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಸ್ಪೂರ್ತಿಯನ್ನು ತುಂಬಿದರು.

ಚೀನಾ ದೇಶ

ಬದಲಾಯಿಸಿ

ಗಿಯೋರ್ಡಾನೋ ಕಂಪನಿ ಗಿಯೋರ್ಡಾನೋ ಕಂಪನಿಯು ೧೯೯೨ ರಲ್ಲಿ ಮೊದಲ ಎರಡು ಅಂಗಡಿಗಳನ್ನು ಪರ್ಲ್ ನದಿಯ ಪ್ರದೇಶದಲ್ಲಿ ಘೋಹ್ನಜ್ ನಲ್ಲಿ ಸ್ಥಾಪಿಸಿದರು ಚೀನೀ ಮಾರುಕಟ್ಟೆಯನ್ನು ಪ್ರವೇಶಿಸಿದರು. ಗಿಯೋರ್ಡಾನೋ ಕ್ರಮೇಣ ಚೀನಾ ಅಂಗಡಿಯಲ್ಲಿ ಉತ್ಪನ್ನಗಳನ್ನು ಉತ್ಪಾದಿಸಿ ಮಾರಟ ಮಾಡಿದರು. ಈಗ 945 ಕ್ಕೂ ಹೆಚ್ಚು ಸಂಸ್ಧೆಯನ್ನು ಯುನ್ನಾನ್ ಶಾಂಘಾಯ್ ಮತ್ತು ಲ್ಲಿಜಿಯಂಗ್ ನಾನ್ಜಿಂಗ್ ಡಾಂಗ್ ಸೇರಿದಂತೆ ಪ್ರಮುಖ ನಗರದಲ್ಲಿ ತಮ್ಮ ವಸ್ತುವನ್ನು ಮಾರಟಮಾಡುತ ಎಲ್ಲಾ ಪ್ರಮುಖ ನಗರಗಳಲ್ಲಿ ಕಾರ್ಯನಿರ್ವಹಿಸಿದರು.

ಹಾಂಗ್ ಕಾಂಗ್

ಬದಲಾಯಿಸಿ

ಗಿಯೋರ್ಡಾನೋ 1981 ರಂದು ಹಾಂಗ್ ಕಾಂಗ್ ನಲ್ಲಿ ಸ್ಥಾಪಿಸಿದರು. 2 ಅಂತಸ್ತಿನ ಪ್ರಮುಖ ಮಾಳಿಗೆಯು ಸೇರಿದಂತೆ 73 ಅಂಗಡಿಗಳು,ತ್ಸಿಂ ಶಾ ತ್ಸುಯಿ ಎಂಬ ನಗರದಲಿ ಕಾರ್ಯನಿರ್ವಹಿಸಿತು.

ತೈವಾನ್

ಬದಲಾಯಿಸಿ

ಗಿಯೋರ್ಡಾನೋ 1988 ರಲ್ಲಿ ತೈವಾನ್ ಅಲ್ಲಿ ತನ್ನ ಮೊದಲ ಔಟ್ಲೆಟ್ ತೆರೆದಾಗ,ಮಾರ್ಚ್ 2015 ಬಳಿಕ ಗಿಯೋರ್ಡಾನೋರವರಿಗೆ 3 ಪ್ರಮುಖ ಮಳಿಗೆಗಳು ಸೇರಿದಂತೆ ಥೈವಾನ್ 197 ಅಂಗಡಿಗಳು,ನಿರ್ವಹಿಸುತ್ತಿದೆ; ಅವುಗಳೆಂದರೆ, ಶೋಂಗ್ಜ಼್ಗ್, ತೈಪೆ, ಕಾವೋಹ್ಸುಂಗ್ ಆಫ್ ‍‌‍‌ಜ಼ಿಗ್ಜ಼ೀಗ್ ಜಿಲ್ಲಾ ಮತ್ತು ಕೇಂದ್ರೀಯ ಸ್ಕ್ವೇರ್ ಸ್ಟೋರ್ನಾದ ಉತ್ತರ ಜಿಲ್ಲೆಯ ತಾಯ್ಚುಂಗ್ ನಲ್ಲಿ ಮಾರಟ ಮಾಡಿದರು.

ದಕ್ಷಿಣ ಕೊರಿಯಾ

ಬದಲಾಯಿಸಿ

1994 ರಲ್ಲಿ ಸ್ಥಾಪಿಸಿದರು, ಗಿಯೋರ್ಡಾನೋ ಪುರುಷರ, ಮಹಿಳೆಯರ ಮತ್ತು ಮಕ್ಕಳಿಗಾಗಿ ಉಡುಪು ಮತ್ತು ಭಾಗಗಳು ಒಂದು ವ್ಯಾಪಕ ಸಂಗ್ರಹ ನೀಡುತ್ತಿರುವ ದಕ್ಷಿಣ ಕೊರಿಯಾದ ಪ್ರಮುಖ ಉಡುಪು ಅಂಗಡಿಯಲ್ಲಿ ಒಂದಾಗಿದೆ. ಅದರ ಕಟ್ಟಡ ನೆಟ್ವರ್ಕ್ ದೂರದ ದಕ್ಷಿಣದಲ್ಲಿ ಭುಸನ್ ಗೆ ಸಿಯೋಲ್ನ ಉತ್ತರದಲ್ಲಿರುವ 208 ಅಂಗಡಿಗಳು ಒಳಗೊಂಡಿದೆ. ಗಿಯೋರ್ಡಾನೋ ಪ್ರಮುಖ ಮಳಿಗೆಗಳಲ್ಲಿ ಯೋಂಘ್ಜ಼್ ಮತ್ತು ಘೇರೊಸುಲ್ಗಿಲ್ ಜಿಲ್ಲೆಗಳಲ್ಲಿ ಲೊಟೆ ಡಿಪಾರ್ಟ್ಮೆಂಟ್ ಸ್ಟೋರ್ಸ್ ಮತ್ತು ಅದರ ಮುಖ್ಯ ಅಂಗಡಿಗಳಿವೆ ಗೆಂಘ್ಣ್ಂ, ಮತ್ತು ಮ್ಯೆಯ್ಂಗ್-ಡಾಂಗ್ ಸೇರಿವೆ.

ಮಧ್ಯಪ್ರಾಚ್ಯ

ಬದಲಾಯಿಸಿ

ಗಿಯೋರ್ಡಾನೋ ಅರಬ್ ಪ್ರದೇಶದಲ್ಲಿ ಟಾಪ್ 5 ಉಡುಪು ಮಾರಟಗಾರರಲ್ಲಿ ಒಂದಾಗಿದೆ. ಮಧ್ಯಪ್ರಾಚ್ಯದಲ್ಲಿ ಸರಾಸರಿ ಗಾತ್ರ 1000-2000 ಚದರ ಅಡಿ ನಡುವೆ ಗಿಯೋರ್ಡಾನೋ ಅಂಗಡಿಗಳಿವೆ. ಬ್ರ್ಯಾಂಡ್ ಸಹ ಯುಎಇಯಲ್ಲಿ ಡೇರಾ ಸಿಟಿ ಸೆಂಟರ್ ಮತ್ತು ದುಬೈ ಮಾಲ್ ಪ್ರಮುಖ ಸ್ಥಳಗಳಲ್ಲಿ 7,500 ಚದರ ಅಡಿಯಲ್ಲಿ ಮುಖ್ಯ ಅಂಗಡಿಗಳು ಕಾರ್ಯನಿರ್ವಹಿಸುತ್ತಿದೆ. ಗಿಯೋರ್ಡಾನೋ ಮಧ್ಯಪ್ರಾಚ್ಯದ ಪ್ರದೇಶದಲ್ಲಿ, 23 ದೇಶಗಳಲ್ಲಿ 240 ಮಳಿಗೆಗಳನ್ನು ಹೋಂದಿವೆ. ಮಧ್ಯಪ್ರಾಚ್ಯದ ಗಿಯೋರ್ಡಾನೋ ಕಂಪನಿಯ ಮುಖ್ಯ ಕಚೇರಿಯಾದ ಯುನೈಟೆಡ್ ಅರಬ್ ಎಮಿರೇಟ್ಸ್ ,ದುಬೈ ನಗರದಲ್ಲಿ ಎಲ್ಲಾ ಪ್ರಾದೇಶಿಕ ಕಾರ್ಯಾಚರಣೆಗಳನ್ನು ನಡೆಸುತ್ತಿದೆ.

ಉಲೇಖಗಳು

ಬದಲಾಯಿಸಿ