ಗಾರ್ಗಿ
ಗಾರ್ಗಿ ಪುರಾಣ ಕಾಲದಲ್ಲಿದ್ದ ದಿಟ್ಟ ಮಹಿಳಾ ವಿದ್ವಾಂಸೆ. ಮುಂದಿನ ಮಹಿಳೆಯರಿಗೆ ಆದರ್ಶಪ್ರಾಯವಾದವಳು. ಇವಳು ಬ್ರಹ್ಮಜಿಜ್ಞಾಸೆಯಲ್ಲಿ ಆಸಕ್ತಳಾಗಿದ್ದಳು. ವಿದ್ಯಾವಂತ ಮಹಿಳೆ ಪ್ರಶ್ನಿಸುವ ಹಕ್ಕನ್ನ ಪಡೆದಿರುತ್ತಾಳೆ ಎಂಬುದಕ್ಕೆ ಈಕೆ ಜ್ವಲಂತ ನಿದರ್ಶನ.ಈಕೆ ಅಸ್ತಿತ್ವ ಮೂಲದ ಕುರಿತು ಎತ್ತಿದ ಪ್ರಶ್ನೆಗಳು ಬೃಹದಾರಣ್ಯಕ ಉಪನಿಷತ್ತಿನಲ್ಲಿವೆ. [೧]
ಗಾರ್ಗಿಯ ಪ್ರಶ್ನೆಗಳು
ಬದಲಾಯಿಸಿ- ಈಕೆ ಗರ್ಗ ವಂಶದಲ್ಲಿ ಜನಿಸಿದವಳು. ಮಹರ್ಷಿ ಮಿಥಿಲೆಯ ಜನಕ ಮಹಾರಾಜ ತಾನು ಕೈಕೊಂಡ ಯಜ್ಞ ಪೂರ್ತಿಯಾದ ಅನಂತರ ಸಂತುಷ್ಟ ಬ್ರಹ್ಮಸಭೆಯನ್ನುದ್ದೇಶಿಸಿ ಬ್ರಹ್ಮಿಷ್ಠಿನಾದವನು ಸುವರ್ಣಾಲಂಕೃತವಾದ ಸಾವಿರ ಆಕಳುಗಳನ್ನು ಕೊಂಡೊಯ್ಯಲಿ ಎಂದಾಗ ಯಾಜ್ಞವಲ್ಕ್ಯ ಋಷಿ ಮುಂದೆ ಬಂದನಷ್ಟೆ. ಆಗ ಯಾಜ್ಞವಲ್ಕ್ಯನ ಬ್ರಹ್ಮಜ್ಞಾನವನ್ನು ಕುರಿತು ಪ್ರಶ್ನಿಸ ಹೊರಟವರಲ್ಲಿ 6ನೆಯವಳಾಗಿ ಗಾರ್ಗಿ ಬರುತ್ತಾಳೆ. ಎಲ್ಲವನ್ನೂ ಆವರಿಸಿದ್ದು ಎನ್ನಲಾದ ನೀರು ಯಾವುದರಿಂದ ಆವೃತವಾಗಿದೆ-ಎಂದು ಮುಂತಾಗಿ ಅವಳು ಪ್ರಶ್ನಿಸುತ್ತಾಳೆ.
- ಕೊನೆಗೆ ಬ್ರಹ್ಮನನ್ನು ತರ್ಕದಿಂದ ಅರಿಯಲಸಾಧ್ಯ, ವಿಪರೀತ ಪ್ರಶ್ನಿಸಿದರೆ ತಲೆ ಸಿಡಿದೀತು ಎಂದು ಯಾಜ್ಞವಲ್ಕ್ಯ ಹೇಳಿದಾಗ ಸುಮ್ಮನಾಗುತ್ತಾಳೆ. ಏಳನೆಯವನಾಗಿ ಪ್ರಶ್ನಿಸಿದ ಉದ್ದಾಲಕನೂ ಸೋತಮೇಲೆ, ತಡೆಯಲಾರದೆ, ಬ್ರಹ್ಮಸಭೆಯ ಅಪ್ಪಣೆಯೊಂದಿಗೆ ಗಾರ್ಗಿ ಮತ್ತೆರಡು ಪ್ರಶ್ನೆಗಳನ್ನು ಕೇಳುತ್ತಾಳೆ. ಸ್ವರ್ಗಮರ್ತ್ಯಗಳನ್ನು ಸದಾಕಾಲವೂ ಆವರಿಸಿದ್ದು ಯಾವುದು-ಎಂಬ ಪ್ರಶ್ನೆಗೆ ಯಾಜ್ಞವಲ್ಕ್ಯನಿಂದ ಆಕಾಶವೆಂಬ ಉತ್ತರ ಸಿಗುತ್ತದೆ.
- ಆಕಾಶವನ್ನು ಆವರಿಸಿದ್ದು ಯಾವುದು-ಎಂಬ ಪ್ರಶ್ನೆಗೆ ಆಕಾಶವನ್ನು ಯಾವುದು ತಾನೇ ಆವರಿಸಬಲ್ಲದು-ಎಂಬ ಪ್ರಶ್ನೆಯಿಂದಲೇ ಯಾಜ್ಞವಲ್ಕ್ಯ ಉತ್ತರಿಸುತ್ತಾನೆ. ಆಕಾಶ ಎಲ್ಲದರಲ್ಲಿದ್ದು ಎಲ್ಲವನ್ನೂ ಮೀರಿದ್ದು, ಬ್ರಹ್ಮನನ್ನು ಸಂಪೂರ್ಣವಾಗಿ ಅರಿಯುವುದು ಯಾರಿಂದಲೂ ಎಂದಿಗೂ ಸಾಧ್ಯವಿಲ್ಲ ಎಂದು ಮುಂತಾದ ಯಾಜ್ಞ ವಲ್ಕ್ಯನ ನುಡಿಗಳಿಂದ ಗಾರ್ಗಿ ಸಮಾಧಾನ ಹೊಂದಿ ಯಾಜ್ಞವಲ್ಕ್ಯನನ್ನು ಬ್ರಹ್ಮಿಷ್ಠನೆಂದು ಮನ್ನಿಸಲು ಸಭೆಯನ್ನು ಕೇಳಿಕೊಳ್ಳುತ್ತಾಳೆ.[೨][೩]
ಹೊರಗಿನ ಕೊಂಡಿಗಳು
ಬದಲಾಯಿಸಿವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
ಉಲ್ಲೇಖ
ಬದಲಾಯಿಸಿ- ↑ ಬೃಹದಾರಣ್ಯಕ ಉಪನಿಷತ್ತು
- ↑ ತತ್ತ್ವಜ್ಞಾನಿ ಗಾರ್ಗಿ ವಾಚಕ್ನವಿಯ ಯಶೋಗಾಥೆ
- ↑ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ