ಗಾಂಧೀನಗರ ಜಿಲ್ಲೆ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಗಾಂಧೀನಗರ ಜಿಲ್ಲೆ : ಗಾಂಧೀನಗರ ಮತ್ತು ಸುತ್ತಲಿನ ಸ್ವಲ್ಪ ಪ್ರದೇಶವನ್ನು ಸೇರಿಸಿ ಹೊಸದೊಂದು ಜಿಲ್ಲೆಯನ್ನು ರಚಿಸಲಾಗಿದೆ. ಒಟ್ಟು 58,000 ಹೆಕ್ಟೇರ್ ವಿಸ್ತಾರವುಳ್ಳ ಈ ಜಿಲ್ಲೆ ನಗರದ ಸುತ್ತಮುತ್ತ ಸು.12 ಕಿಮೀ ವರೆಗೆ ಹರಡಿಕೊಂಡಿದೆ. ಇದರಲ್ಲಿ ಒಟ್ಟು 79 ಗ್ರಾಮಗಳಿವೆ. ನಾಲ್ಕು ಗ್ರಾಮಗಳು ಗಾಂಧೀನಗರದ ನಿವೇಶನದಲ್ಲಿ ಸೇರಿಹೋಗಿವೆ. ಜಿಲ್ಲೆಯ ಒಟ್ಟು ಜನಸಂಖ್ಯೆ 13,87,478 (2011). ಸಣ್ಣ ಪುಟ್ಟ ಹಳ್ಳಿಗಳಿಂದ ಕೂಡಿರುವ ಗಾಂಧೀನಗರ ಜಿಲ್ಲೆಯಲ್ಲಿ ಅನೇಕ ಸಮಸ್ಯಗಳಿವೆ.ಅಶುದ್ಧ ನೀರು,ತಗ್ಗು-ದಿನ್ನೆ ರಸ್ತೆ,ಮಹಿಳಾ ಶೌಚಾಲಯವ ಕೊರತೆ ಮುಂತಾದ ಹಲವಾರು ಸಮಸ್ಯಗಳಿಂದ ಗಾಂಧೀನಗರ ಜಿಲ್ಲೆಯ ನಿವಾಸಿಗಳು ಕಷ್ಟವನ್ನು ಅನುಭವಿಸುತ್ತಿದ್ದಾರೆ.ಶುದ್ಧೀಕರಣಗೊಳಿಸದ ತುಂಗಭದ್ರಾ ಎಡದಂಡೆ ನಾಲೆಯಿಂದ ನೇರವಾಗಿ ಪೈಪ್ ಲೈನ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು.ಇದನ್ನೆ ಗಾಂಧೀನಗರ ಜಿಲ್ಲೆಯ ನಿವಾಸಿಗಳು ಕುಡಿಯಲು ಮತ್ತು ಬಳಸುತ್ತಿದ್ದರು.ಒಮ್ಮೊಂಮ್ಮೆ ಈ ನೀರಿನಲ್ಲಿ ಪಾಚಿಯು ಸಹ ಸೇರುತ್ತಿತ್ತು.
ಉಲ್ಲೇಖಗಳು [೧]