ಗಲ್ತಾಜಿ
ಗಲ್ತಾಜಿ ಭಾರತದ ರಾಜಸ್ಥಾನದ ಜೈಪುರದಿಂದ ಸುಮಾರು 10 ಕಿ.ಮಿ. ದೂರವಿರುವ ಒಂದು ಪ್ರಾಚೀನ ಹಿಂದೂ ತೀರ್ಥಯಾತ್ರಾ ಸ್ಥಳವಾಗಿದೆ. ಈ ಸ್ಥಳವು ಜೈಪುರವನ್ನು ಸುತ್ತುವರೆದಿರುವ ಬೆಟ್ಟಗಳ ವರ್ತುಲದಲ್ಲಿನ ಕಿರಿದಾದ ಬಿರುಕಿನೊಳಗೆ ನಿರ್ಮಿಸಲಾದ ದೇವಾಲಯಗಳ ಸರಣಿಯನ್ನು ಒಳಗೊಂಡಿದೆ. ಒಂದು ನೈಸರ್ಗಿಕ ಬುಗ್ಗೆಯು ಗುಡ್ಡದ ಮೇಲಿನ ಭಾಗದಲ್ಲಿ ಹೊರಹೊಮ್ಮಿ ಕೆಳಕ್ಕೆ ಹರಿಯುತ್ತದೆ, ಮತ್ತು ಹಲವಾರು ಪವಿತ್ರ ಕುಂಡಗಳನ್ನು ತುಂಬುತ್ತದೆ. ಯಾತ್ರಿಕರು ಇವುಗಳಲ್ಲಿ ಸ್ನಾನ ಮಾಡುತ್ತಾರೆ. ಗುಡ್ಡದ ಮೇಲೆ ಒಂದು ದೇವಾಲಯವಿದ್ದು ಇಲ್ಲಿಂದ ಜೈಪುರ ನಗರವನ್ನು ನೋಡಬಹುದು. ಇದರ ರಕ್ಷಣಾತ್ಮಕ ಗೋಡೆಗಳು ಕಣಿವೆಯ ನೆಲದಾದ್ಯಂತ ಹರಡಿಕೊಂಡಿವೆ. ಗಲಾವ್ ಎಂಬ ಸಂತನು ಇಲ್ಲಿ ವಾಸಿಸಿ, ಧ್ಯಾನವನ್ನು ಅಭ್ಯಾಸ ಮಾಡಿ ತಪಸ್ಸು ಮಾಡುತ್ತಿದ್ದನು ಎಂದು ನಂಬಲಾಗಿದೆ.[೧]
ಶ್ರೀ ಗಲ್ತಾ ಪೀಠ್ (ಶ್ರೀ ಗಲ್ತಾ ಜಿ ಅಥವಾ ಗಲಾವ್ ಆಶ್ರಮ)
ಬದಲಾಯಿಸಿಇದನ್ನು ಅರಾವಳ್ಳಿ ಬೆಟ್ಟಗಳಲ್ಲಿನ ಕಣಿವೆ ಮಾರ್ಗದೊಳಗೆ ನಿರ್ಮಿಸಲಾಗಿದೆ.[೨] 15 ನೇ ಶತಮಾನದ ಆರಂಭದಿಂದಲೂ ಗಲ್ತಾಜಿ ವೈಷ್ಣವ ರಾಮಾನುಜ ಪಂಥಕ್ಕೆ ಸೇರಿದ ಹಿಂದೂ ತಪಸ್ವಿಗಳಿಗೆ ಏಕಾಂತ ಸ್ಥಳವಾಗಿದೆ.[೧] ಇದು ದೀರ್ಘಕಾಲದವರೆಗೆ ಯೋಗಿಗಳ ಸ್ವಾಧೀನದಲ್ಲಿತ್ತು ಎಂದು ಹೇಳಲಾಗಿದೆ; 15 ನೇ ಶತಮಾನದ ಆರಂಭದಲ್ಲಿ ಪಯೋಹಾರಿ ಕೃಷ್ಣದಾಸ್ ಎಂಬ ರಾಮಾನುಜ ಪಂಥದ ಸಾಧು ಗಲ್ತಾಕ್ಕೆ ಬಂದು ತನ್ನ ಯೋಗಿಕ ಶಕ್ತಿಗಳಿಂದ ಇತರ ಯೋಗಿಗಳನ್ನು ಈ ಸ್ಥಳದಿಂದ ಓಡಿಸಿದನು ಎಂದು ಹೇಳಲಾಗಿದೆ.[೩]
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ Vibhuti Sachdev; Giles Henry Rupert Tillotson (2002). Building Jaipur: The Making of an Indian City. Reaktion Books. pp. 39–. ISBN 978-1-86189-137-2. Retrieved 29 August 2013.
- ↑ Dr. Daljeet; P. C. Jain (Prof.) (2002). Monuments Of India. Aravali Books International Pvt. Limited. p. 161. ISBN 978-81-86880-76-0.
- ↑ Gupta, Dr R.K; Bakshi, Dr S.R. Rajsthan through the ages - Vol 4. Jaipur rulers and administrators. Sarup & sons. p. 118. ISBN 978-81-7625-841-8.