ಗರ್ತಿಗೆರೆ ರಾಘಣ್ಣ

ಗರ್ತಿಗೆರೆ ರಾಘಣ್ಣ ಒಬ್ಬ ಖ್ಯಾತ ಸುಗಮ ಸಂಗೀತ ಸಂಗೀತ ಸಂಯೋಜಕ ಮತ್ತು ಗಾಯಕ. ಇವರ ಪೂರ್ತಿ ಹೆಸರು ಹೊಸನಗರ ನಾಗಪ್ಪ ರಾಘವೇಂದ್ರ ರಾವ್. ಇವರ ಹುಟ್ಟೂರು ಕುಂದಾಪುರ ತಾಲೂಕಿನ ನಾವುಂದದ ಸಮೀಪದ ಬಡಕೆರೆ ಗ್ರಾಮ. ಇವರ ತಂದೆ ನಾಗಪ್ಪಯ್ಯ ಮತ್ತು ತಾಯಿ ಮೂಕಾಂಬಿಕಮ್ಮ. ಜನಿಸಿದ್ದು ನವೆಂಬರ್ ೨, ೧೯೩೬ರಂದು. ಬಾಲ್ಯದಲ್ಲಿ ಮನೆಯಲ್ಲಿದ್ದ ಭಜನೆ ವಾತಾವರಣದಿಂದಾಗಿ ಇವರಿಗೆ ಸಂಗೀತದಲ್ಲಿ ಆಸಕ್ತಿ ಹುಟ್ಟಿತು. ನಾರಾಯಣ ಶಾಸ್ತ್ರಿಗಳಿಂದ ಶಾಸ್ತ್ರೀಯ ಸಂಗೀತವನ್ನು ಕಲಿತರು. ನಂತರ ಸುಗಮ ಸಂಗೀತದತ್ತ ಆಕರ್ಷಿತರಾದರು. ಸುಗಮ ಸಂಗೀತದ ಹರವನ್ನು ವಿಸ್ತರಿಸಲು ರಾಘಣ್ಣನವರು ತುಂಬ ಪರಿಶ್ರಮಿಸಿದ್ದಾರೆ. ಸುಮಾರು ೧೦೦೦ಕ್ಕಿಂತ ಹೆಚ್ಚು ಭಾವಗೀತೆಗಳಿಗೆ ರಾಗಸಂಯೋಜಿಸಿದ್ದಾರೆ ಮತ್ತು ಹಾಡಿನ ಮೂಲಕ ಜೀವ ತುಂಬಿದ್ದಾರೆ. ಹಲವು ಕ್ಯಾಸೆಟ್‌ಗಳನ್ನು ಹೊರತಂದಿದ್ದಾರೆ. ಸುಗಮ ಸಂಗೀತ ಕ್ಷೇತ್ರದ ದಿಗ್ಗಜ ಎನ್ನಿಸಿಕೊಂಡ ಶಿವಮೊಗ್ಗ ಸುಬ್ಬಣ್ಣ, ಸಿ. ಅಶ್ವಥ್, ಮೈಸೂರು ಅನಂತಸ್ವಾಮಿ ಮೊದಲಾದವರು ರಾಘಣ್ಣನವರ ರಾಗಸಂಯೋಜನೆಯಲ್ಲಿ ಹಾಡಿದ್ದಾರೆ.

ಗರ್ತಿಗೆರೆ ರಾಘಣ್ಣ

ಸನ್ಮಾನ ಮತ್ತು ಪ್ರಶಸ್ತಿಗಳು

ಬದಲಾಯಿಸಿ
  1. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೧೯೯೧
  2. ಜಿ.ವಿ. ಅತ್ರಿಯವರಿಂದ ಸುಗಮ ಸಂಗೀತ ಸಮ್ಮೇಳನದಲ್ಲಿ ಸನ್ಮಾನ, ಬೆಂಗಳೂರು, ೧೯೯೩
  3. ದಕ್ಷಿಣ ಕನ್ನಡ ಜಿಲ್ಲಾ ವೇದಿಕೆಯಿಂದ ಭಾರ್ಗವ ಪ್ರಶಸ್ತಿ, ೧೯೯೩
  4. ಕಲಾಚೇತನ ಪ್ರಶಸ್ತಿ, ಗದಗ