ಗದ್ದಕಟ್ಟು
ಗದ್ದಕಟ್ಟು (ಗದ್ದಬಾವು, ಮಂಗನ ಬಾವು) ಮಂಪ್ಸ್ ವೈರಾಣುವಿನಿಂದ ಉಂಟಾಗುವ ಒಂದು ವೈರಾಣು ರೋಗ.[೧] ಆರಂಭಿಕ ಚಿಹ್ನೆಗಳು ಮತ್ತು ಲಕ್ಷಣಗಳು ಹಲವುವೇಳೆ ಜ್ವರ, ಸ್ನಾಯು ನೋವು, ತಲೆನೋವು, ಕಡಿಮೆಯಾದ ಹಸಿವೆ, ಮತ್ತು ಸಾಮಾನ್ಯವಾಗಿ ಅಸ್ವಸ್ಥವೆನಿಸುವುದನ್ನು ಒಳಗೊಂಡಿರುತ್ತವೆ.[೨] ಇದರ ನಂತರ ಸಾಮಾನ್ಯವಾಗಿ ಕಿವಿಯ ಹತ್ತಿರದ ಒಂದು ಅಥವಾ ಎರಡೂ ಲಾಲಾಗ್ರಂಥಿಗಳು ಊದಿಕೊಳ್ಳುತ್ತದೆ.[೩] ಲಕ್ಷಣಗಳು ಸಾಮಾನ್ಯವಾಗಿ ಒಡ್ಡಿಕೆಯ ೧೬ರಿಂದ ೧೮ ದಿನಗಳ ನಂತರ ಕಾಣಿಸಿಕೊಳ್ಳುತ್ತವೆ ಮತ್ತು ೭ ರಿಂದ ೧೦ ದಿನಗಳ ನಂತರ ಕಡಿಮೆಯಾಗುತ್ತವೆ. ಲಕ್ಷಣಗಳು ಹಲವುವೇಳೆ ಮಕ್ಕಳಿಗಿಂತ ವಯಸ್ಕರಲ್ಲಿ ಹೆಚ್ಚು ಗಂಭೀರವಾಗಿರುತ್ತವೆ. ಸುಮಾರು ಮೂರನೇ ಒಂದು ಭಾಗದಷ್ಟು ಜನರು ಸೌಮ್ಯ ಲಕ್ಷಣಗಳನ್ನು ಹೊಂದಿರುತ್ತಾರೆ ಅಥವಾ ಯಾವುದೇ ಲಕ್ಷಣಗಳನ್ನು ಹೊಂದಿರುವುದಿಲ್ಲ. ಜಟಿಲತೆಗಳಲ್ಲಿ ಮಿದುಳ್ಪೊರೆಯುರಿತ, ಮೇದೋಜೀರಕ ಗ್ರಂಥಿಯ ಉರಿಯೂತ, ಹೃದಯದ ಉರಿಯೂತ, ಶಾಶ್ವತ ಕಿವುಡು, ಮತ್ತು ಅಸಾಮಾನ್ಯವಾಗಿ ಬಂಜೆತನವನ್ನು ಉಂಟುಮಾಡುವ ವೃಷಣಗಳ ಉರಿಯೂತ ಸೇರಿರಬಹುದು. ಮಹಿಳೆಯರಲ್ಲಿ ಅಂಡಾಶಯದ ಊತ ಕಾಣಿಸಿಕೊಳ್ಳಬಹುದು, ಆದರೆ ಇದು ಬಂಜೆತನದ ಅಪಾಯವನ್ನು ಹೆಚ್ಚಿಸುವುದಿಲ್ಲ.
ಉಲ್ಲೇಖಗಳು
ಬದಲಾಯಿಸಿ- ↑ Atkinson, William (ಮೇ 2012). Mumps Epidemiology and Prevention of Vaccine-Preventable Diseases (12th ed.). Public Health Foundation. pp. Chapter 14. ISBN 978-0-9832631-3-5. Archived from the original on 6 ಜುಲೈ 2016.
{{cite book}}
: Unknown parameter|dead-url=
ignored (help) - ↑ Bailey's head and neck surgery—otolaryngology. Johnson, Jonas T., Rosen, Clark A., Bailey, Byron J., 1934- (5th ed.). Philadelphia: Wolters Kluwer Health /Lippincott Williams & Wilkins. 2013. ISBN 9781609136024. OCLC 863599053.
{{cite book}}
: CS1 maint: others (link) - ↑ "Mumps". The Lancet. 371 (9616): 932–44. March 2008. doi:10.1016/S0140-6736(08)60419-5. PMID 18342688.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- NHS.uk – Encyclopedia – 'NHS Direct Online Health Encyclopaedia: Mumps', National Health Service (UK)
- WHO.int – "Immunization, Vaccines and Biologicals: Mumps vaccine", World Health Organization
- MicrobiologyBytes: Paramyxoviruses"
- Collection of information from the CDC concerning mumps
- Public Health Agency of Canada – Public Health Agency of Canada Vaccination Campaigns