ಗಟ್ಟಿಮೇಳ (ಧಾರಾವಾಹಿ)

ಗಟ್ಟಿಮೇಳ ಎಂಬುದು 2019 ರ ಭಾರತೀಯ ಕನ್ನಡ ಭಾಷೆಯ ದೂರದರ್ಶನ ದೈನಂದಿನ ಧಾರಾವಾಹಿಯಾಗಿದ್ದು ಅದು ಝೀ ಕನ್ನಡದಲ್ಲಿ ಪ್ರಸಾರವಾಗುತ್ತದೆ. ಈ ಧಾರಾವಾಹಿಯನ್ನು ಕೋರಮಂಗಲ ಅನಿಲ್ ನಿರ್ದೇಶಿಸಿದ್ದಾರೆ ಮತ್ತು ಜೋನಿ ಹರ್ಷ ನಿರ್ಮಿಸಿದ್ದಾರೆ. ಇದು ಮಾರ್ಚ್ 11, 2019 ರಂದು ಪ್ರಥಮ ಪ್ರದರ್ಶನಗೊಂಡಿದ್ದು, ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8:00ಕ್ಕೆ ಪ್ರಸಾರವಾಗುತ್ತದೆ. [೧] ಈ ಪ್ರದರ್ಶನವು ತಮಿಳು ಧಾರಾವಾಹಿ 'ಪೂವೇ ಪೂಚುದವ'ದ ರಿಮೇಕ್ ಆಗಿದೆ, ಇದು ಝೀ ತಮಿಳು ವಾಹಿನಿಯಲ್ಲಿ[೨] ಪ್ರಸಾರವಾಗಿತ್ತು. ಈ ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ರಕ್ಷ್, ನಿಶಾ ರವಿಕೃಷ್ಣನ್ ನಟಿಸಿದ್ದಾರೆ. ಗಟ್ಟಿಮೇಳ 2020ರಲ್ಲಿ ಕನ್ನಡ ದೂರದರ್ಶನದಲ್ಲಿ ಅತಿಹೆಚ್ಚು ವೀಕ್ಷಿಸಿದ ದೈನಂದಿನ ಧಾರಾವಾಹಿಯಾಗಿದೆ. [೩]

ಗಟ್ಟಿಮೇಳ (ಧಾರಾವಾಹಿ)
Gattimela Serial Title Card.jpg
Gattimela title card
ಶೈಲಿಕೌಟುಂಬಿಕ, ನಾಟಕೀಯ
ಬರೆದವರುನಿಶ್ಚಿತಾ ಶರತ್, ಸೃಜನ್‌ ರಾಘವೇಂದ್ರ
ನಿರ್ದೇಶಕರುಯತೀಶ್‌ ಎನ್.ಎಂ.ಎಸ್.ಗೌಡ
ನಟರುನಿಶಾ ರವಿಕೃಷ್ಣನ್
ರಕ್ಷ್ ಗೌಡ
ಸುಧಾ ನರಸಿಂಹರಾಜು
ಅಭಿಷೇಕ್ ದಾಸ್
ಅಶ್ವಿನಿ
ಮತ್ತು ಇತರರು
ನಿರೂಪಣಾ ಸಂಗೀತಕಾರಮಣಿಕಾಂತ್ ಕದ್ರಿ
ನಿರೂಪಣಾ ಗೀತೆಗಟ್ಟಿಮೇಳ ಇದು ಗಟ್ಟಿಮೇಳ
ದೇಶಭಾರತ
ಭಾಷೆ(ಗಳು)ಕನ್ನಡ
ಒಟ್ಟು ಸರಣಿಗಳು1
ಒಟ್ಟು ಸಂಚಿಕೆಗಳು1188 (13 ಅಕ್ಟೋಬರ್‌,2023 ರ ವರೆಗೆ)
ನಿರ್ಮಾಣ
ಕಾರ್ಯನಿರ್ವಾಹಕ ನಿರ್ಮಾಪಕ(ರು)ಗಣಪತಿ ಭಟ್
ನಿರ್ಮಾಪಕ(ರು)ರಕ್ಷ್‌ - ಅನುಷಾ ಶಿವಪ್ರಸಾದ್
ಸಂಕಲನಕಾರರುಲೋಕೇಶ್
ಛಾಯಾಗ್ರಹಣಕುಮಾರ್‌ ಮಂಡ್ಯ
ಕ್ಯಾಮೆರಾ ಏರ್ಪಾಡುಬಹು ಕ್ಯಾಮೆರಾ
ಸಮಯ20-22 ನಿಮಿಷಗಳು
ನಿರ್ಮಾಣ ಸಂಸ್ಥೆ(ಗಳು)ಶ್ರೀ ಸಾಯಿ ಆಂಜನೇಯ ಕಂಪೆನಿ
ಪ್ರಸಾರಣೆ
ಮೂಲ ವಾಹಿನಿಝಿ ಕನ್ನಡ
ಚಿತ್ರ ಶೈಲಿ576i SD
1080 HD
Original airing11 ಮಾರ್ಚ್ 2019 - ಪ್ರಸ್ತುತ

ಪಾತ್ರವರ್ಗ ಬದಲಾಯಿಸಿ

ಮುಖ್ಯ ಪಾತ್ರವರ್ಗ [೪] ಬದಲಾಯಿಸಿ

  • ವೇದಾಂತ್ ವಸಿಷ್ಠ ಪಾತ್ರದಲ್ಲಿ ರಕ್ಷ್ ಗೌಡ
  • ಅಮೂಲ್ಯ ಮಂಜುನಾಥ್ ಆಗಿ ನಿಶಾ ರವಿಕೃಷ್ಣನ್
  • ಪರಿಮಳ ಪಾತ್ರದಲ್ಲಿ ಸುಧಾ ನರಸಿಂಹರಾಜು
  • ವಿಕ್ರಾಂತ್ ವಸಿಷ್ಠ ಪಾತ್ರದಲ್ಲಿ ಅಭಿಷೇಕ್ ದಾಸ್
  • ಆರತಿ ಮಂಜುನಾಥ್ ಆಗಿ ಅಶ್ವಿನಿ
  • ಆದಿತಿ ಮಂಜುನಾಥ್ ಆಗಿ ಪ್ರಿಯಾ ಆಚಾರ್
  • ಅಂಜಲಿ (ಅಂಜು) ಪಾತ್ರದಲ್ಲಿ ಮಹತಿ ಭಟ್
  • ಸಾರ್ಥಕ್ ಅಶ್ವಥ್ ಪಾತ್ರದಲ್ಲಿ ಗಿರೀಶ್ ಬೆಟ್ಟಪ್ಪ
  • ಆದ್ಯ ಸಾರ್ಥಕ್ ಆಗಿ ಅನ್ವಿತಾ ಸಾಗರ್
  • ಸಾರಿಕಾ ಅಶ್ವಥ್ ಪಾತ್ರದಲ್ಲಿ ರಶ್ಮಿತಾ ಚಂಗಪ್ಪ
  • ಸಾಹಿತ್ಯ ಆಗಿ ಶರಣ್ಯ ಶೆಟ್ಟಿ
  • ಕಾಂತ ಆಗಿ ರವಿಚಂದ್ರ
  • ಧ್ರುವ ಪಾತ್ರದಲ್ಲಿ ರಂಜನ್ ಸನತ್
  • ಪರಮಾನಂದ ಪಾತ್ರದಲ್ಲಿ ಲಯ ಕೋಕಿಲಾ

ಜನಪ್ರಿಯತೆ ಬದಲಾಯಿಸಿ

ಈ ಧಾರಾವಾಹಿಯನ್ನು ದೂರದರ್ಶನ ಪ್ರೇಕ್ಷಕರು ವ್ಯಾಪಕವಾಗಿ ಸ್ವೀಕರಿಸಿದ್ದಾರೆ. ಈ ಧಾರಾವಾಹಿಯು ನಿಯಮಿತವಾಗಿ ಟಾಪ್ 5 ಕನ್ನಡ ಕಾರ್ಯಕ್ರಮಗಳ ಟಿಆರ್‌ಪಿ ರೇಟಿಂಗ್‌ನ ಅಗ್ರಸ್ಥಾನದಲ್ಲಿದೆ [೫] [೬] [೭] . COVID-19 ಕಾರಣ ೨೦೨೦ರಲ್ಲಿ ಮತ್ತು ೨೦೨೧ರ ಏಪ್ರಿಲ್, ಮೇ ತಿಂಗಳುಗಳಲ್ಲಿ ಲಾಕ್‌ಡೌನ್ ವಿಧಿಸಲಾಗಿತ್ತು ಮತ್ತು ಶೂಟಿಂಗ್ ಸ್ಥಗಿತಗೊಂಡಿತ್ತು. ಈ ಸಮಯದಲ್ಲಿ, ಕನ್ನಡ ಚಲನಚಿತ್ರಗಳು ಅಗ್ರ ಸ್ಥಾನಗಳನ್ನು ಪಡೆದುಕೊಂಡಾಗ ಗಟ್ಟಿಮೇಳ ಧಾರಾವಾಹಿಯು ಬರುತ್ತಿದ್ದಏಕೈಕ ಸರಣಿಯಾಗಿದ್ದು, ಪುನರಾವರ್ತಿತ ಪ್ರಸಾರದ ಹೊರತಾಗಿಯೂ ಹೆಚ್ಚಿನ ಸಮಯದವರೆಗೆ ಟಾಪ್ 5 ಕನ್ನಡ ಕಾರ್ಯಕ್ರಮಗಳ ಪಟ್ಟಿಯಲ್ಲಿ ಉಳಿದಿತ್ತು. [೮]

ಉಲ್ಲೇಖಗಳು ಬದಲಾಯಿಸಿ

  1. "Zee Kannada launches latest fiction show 'Gattimela' - Exchange4media". Indian Advertising Media & Marketing News – exchange4media.
  2. "remake soap operas rule Kannada television". Times of India.
  3. "Gattimela continues to top the TRP charts; details inside - Times of India". The Times of India.
  4. "Aarthi To Sarika: 7 Supporting Gattimela Actors Who Helped In Making The Show A SUPERHIT". 8 October 2019.[ಶಾಶ್ವತವಾಗಿ ಮಡಿದ ಕೊಂಡಿ]
  5. "trp-of-kannada-serials-this-week-february-2020-22nd-to-28-complete-list-gattimela-kannada-serial-is-on-top". 28 February 2020.
  6. https://timesofindia.indiatimes.com/tv/news/kannada/gattimela-continues-to-rule-the-trp-charts/articleshow/74509138.cms
  7. "jothe-jotheyali-fails-to-overtake-gattimela-in-trp". 15 March 2020.
  8. "ಆರ್ಕೈವ್ ನಕಲು". Archived from the original on 2020-07-08. Retrieved 2020-07-08.