ಅನ್ವಿತಾ ಸಾಗರ್ (ನಟಿ)

ನಟಿ

ಅನ್ವಿತಾ ಸಾಗರ್ ಅಲಿಯಾಸ್ ಪಾರ್ವತಿ(ಜನನ:20 ಫೆಬ್ರವರಿ 1992) ಇವರು ಭಾರತೀಯ ದೂರದರ್ಶನ ನಟಿ ಹಾಗೂ ಮಾಡೆಲ್.ಇವರು ಕನ್ನಡ ಮತ್ತು ತುಳು ಸಿನಿಮಾದಲ್ಲಿ ನಟಿಸಿದ್ದಾರೆ.ಇವರು ತುಳುಚಿತ್ರರಂಗ ನಟ ಅನೂಪ್ ಸಾಗರ್ ರವರ ತಂಗಿ.ಕನ್ನಡ ಸಿನಿಮಾಗಳಾದ ಬಣ್ಣ ಬಣ್ಣದ ಬದುಕು [], ಸ್ನೇಹಚಕ್ರ [], ಮಾಯಾಕನ್ನಡಿ , ಜೀವನ ಯಜ್ಞ [] ಹಾಗೂ ತುಳು ಸಿನಿಮಾಗಳಾದ ದಂಡ್ , ಪೆಟ್ಕಮ್ಮಿ, ಬಲೆ ಪುದರ್ ದೀಕ ಈ ಪ್ರೀತಿಗ್ ಎಂಬ ಸಿನಿಮಾಗಳಲ್ಲಿ ಪಾತ್ರವಹಿಸಿ ನಟಿಸಿದ್ದಾರೆ. ಪ್ರಸ್ತುತವಾಗಿ ಇವರು ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಣ್ಣ ತಂಗಿ' ಎಂಬ ಧಾರವಾಹಿಯಲ್ಲಿ 'ಜ್ಯೋತಿ' ಎಂಬ ಪಾತ್ರದಲ್ಲಿ; ಜೀ ಕನ್ನಡ ದಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ[] ಎಂಬ ಧಾರವಾಹಿಯಲ್ಲಿ 'ಆಧ್ಯಾ' ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಅನ್ವಿತಾ ಸಾಗರ್
ಅನ್ವಿತಾ ಸಾಗರ್(ಪಾರ್ವತಿ)
Born೨೦ ಫೆಬ್ರವರಿ ೧೯೯೨[]
Other namesಪಾರ್ವತಿ
Educationಎಂ.ಬಿ.ಎ ಸ್ನಾತಕೋತ್ತರ ಪದವಿ - ಎಸ್.ಡಿ.ಎಂ ಕಾಲೇಜು, ಮಂಗಳೂರು
Occupation(s)ಮಾಡೆಲ್ ,ನೃತ್ಯಗಾರ್ತಿ, ನಟಿ, ಗಾಯಕಿ.
Years active೨೦೧೪ - ಈವರೆಗೆ
Known forಗಟ್ಟಿಮೇಳ ಧಾರವಾಹಿಯ ಆಧ್ಯಾ
Parent(s)ಹೇಮಚಂದ್ರ (ತಂದೆ), ಭಾರತಿ (ತಾಯಿ)

ಜನನ , ಆರಂಭಿಕ ಜೀವನ ಮತ್ತು ಶಿಕ್ಷಣ

ಬದಲಾಯಿಸಿ

ಅನ್ವಿತಾ ಇವರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ 20 ಫೆಬ್ರವರಿ 1992 ರಂದು ಜನಿಸಿದರು. ಇವರ ತಂದೆ ಹೇಮಚಂದ್ರ(ಉದ್ಯಮಿ), ತಾಯಿ ಭಾರತಿ(ಗೃಹಣಿ), ಅಣ್ಣ ಅನೂಪ್ ಸಾಗರ್ ತುಳುಚಿತ್ರರಂಗ ನಟ.
ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಜೋಸೆಫ್ ಹೈಯರ್ ಪ್ರೈಮರಿ ಇಂಗ್ಲಿಷ್ ಸ್ಕೂಲ್ ಹಾಗೂ ಪ್ರೌಢ ಶಿಕ್ಷಣವನ್ನು ನಿರ್ಮಲಾ ಗರ್ಲ್ಸ್ ಹೈಸ್ಕೂಲ್ , ಸಾಗರದಲ್ಲಿ ಪಡೆದರು.ನಂತರ ಮಂಗಳೂರಿನ ಶಾರದಾ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪಡೆದು, ಬಿ.ಬಿ.ಎ ಪದವಿ ಮತ್ತು ಎಂ.ಬಿ.ಎ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಮಂಗಳೂರಿನ ಎಸ್.ಡಿ.ಎಂ ಕಾಲೇಜಿನಲ್ಲಿ ಪುರ್ಣಗೊಳಿಸಿದರು.

ವೃತ್ತಿಜೀವನ

ಬದಲಾಯಿಸಿ

ಬಿ.ಬಿ.ಎ ಪದವಿ ಶಿಕ್ಷಣವನ್ನು ಪಡೆದ ನಂತೆ ಸುಮಾರು ನಾಲ್ಕು ವರುಷಗಳ ಕಾಲ ಅನ್ವಿತಾರವರು ನಮ್ಮ ಟಿ.ವಿ ಚಾನಲ್ ನಲ್ಲಿ ಮಂಗಳೂರಿನಲ್ಲಿರುವ ತನಕ ನಿರೂಪಕಿಯಾಗಿ ಕೆಲಸ ಮಾಡಿದರು. ನಂತರ ೨೦೧೫ ರಲ್ಲಿ ಇವರು ರಂಜಿತ್ ಬಜ್ಪೆ ನಿರ್ದೇಶನದ ದಂಡ್ ತುಳುಚಿತ್ರದ ಮೂಲಕ ಸಿನಿಮಾ ಲೋಕಕ್ಕೆ ಪಾದಾರ್ಪಿಸಿದರು.ಇದರ ನಂತರ ಹಲವಾರು ತುಳು ಮತ್ತು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಇವರು ಜೀ ಕನ್ನಡ ದಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ[] ಎಂಬ ಧಾರವಾಹಿಯಲ್ಲಿ ಆಧ್ಯಾ ಎಂಬ ಪಾತ್ರವನ್ನು ವಹಿಸಿ ನಟಿಸುತ್ತಿದ್ದಾರೆ .

ಅಭಿನಯಿಸಿದ ಚಿತ್ರಗಳ ಪಟ್ಟಿ

ಬದಲಾಯಿಸಿ

ಕನ್ನಡ ಸಿನಿಮಾಗಳು

ಬದಲಾಯಿಸಿ
Key
ಇನ್ನೂ ಬಿಡುಗಡೆಯಾಗದ ಸಿನಿಮಾಗಳನ್ನು ಸೂಚಿಸುತ್ತದೆ
ವರ್ಷ ಚಲನಚಿತ್ರ ಪಾತ್ರ ನಿರ್ದೇಶಕ ಉಲ್ಲೇಖ
೨೦೧೭ ಬಣ್ಣ ಬಣ್ಣದ ಬದುಕು ಶಾಯಿದಾ ಇಸ್ಮಾಯಿಲ್ []
೨೦೧೭ ಸ್ನೇಹ ಚಕ್ರ ಮಂಜು ವಿಷ್ಣುವರ್ಧನ್ []
೨೦೧೮ ಜೀವನ ಯಜ್ಞ ಶಿವು ಸರಳಬೆಟ್ಟು []
೨೦೨೦ ಮಾಯಾ ಕನ್ನಡಿ ಮಧು ಚರಣ್ []
೨೦೨೧ ವಿರಾಟ ಪರ್ವ ಖುಷಿ ಅನಂತ್ ಶೈನ್ [೧೦]

ಅಭಿನಯಿಸಿದ ತುಳು ಸಿನಿಮಾಗಳು

ಬದಲಾಯಿಸಿ
Key
ಇನ್ನೂ ಬಿಡುಗಡೆಯಾಗದ ಸಿನಿಮಾಗಳನ್ನು ಸೂಚಿಸುತ್ತದೆ
ವರ್ಷ ಚಲನಚಿತ್ರ ಪಾತ್ರ ನಿರ್ದೇಶಕ/ನಿರ್ದೇಶಕಿ ಉಲ್ಲೇಖ
೨೦೧೫ ದಂಡ್ ಅನ್ವಿತಾ ರಂಜಿತ್ ಬಜ್ಪೆ [೧೧]
೨೦೧೮ ಪೆಟ್ಕಮ್ಮಿ ಪ್ರಿಯಾ ಕೀರ್ತಿ ಬಿ.ಐ , ಕೀರ್ತಿ [೧೨]
೨೦೧೮ ಬಲೆ ಪುದರ್ ದೀಕ ಈ ಪ್ರೀತಿಗ್ ಶಾನ್ವಿ ಮನೋರಂಜನ್ ಜೆ.ವಿ.ಆಚಾರ್ಯ [೧೩]
೨೦೨೧ ತಂಬಿಲ ವೇದ ಅಶ್ವಿನಿ ಕೋಟ್ಯಾನ್ [೧೪]

ಉಲ್ಲೇಖನಗಳು

ಬದಲಾಯಿಸಿ
  1. "Anvitha Sagar Biography Archives". TuluCinema.com. Retrieved 27 June 2021.
  2. "Banna Bannada Baduku (2017) | Banna Bannada Baduku Movie | Banna Bannada Baduku Kannada Movie Cast & Crew, Release Date, Review, Photos, Videos". FilmiBeat (in ಇಂಗ್ಲಿಷ್). Retrieved 27 June 2021.
  3. ೩.೦ ೩.೧ "Sneha Chakra Movie: Showtimes, Review, Trailer, Posters, News & Videos | eTimes". Retrieved 27 June 2021.
  4. "Gvana Yajna Movie Review {2.0/5}: Critic Review of Gvana Yajna by Times of India". Retrieved 27 June 2021.
  5. "Kannada Tv Serial Gattimela - Full Cast and Crew". nettv4u (in ಇಂಗ್ಲಿಷ್). Retrieved 27 June 2021.
  6. "Kannada Tv Serial Gattimela - Full Cast and Crew". nettv4u (in ಇಂಗ್ಲಿಷ್). Retrieved 27 June 2021.
  7. "Banna Bannada Baduku Movie Review {2.5/5}: Critic Review of Banna Bannada Baduku by Times of India". Retrieved 26 June 2021.
  8. "Gvana Yajna Cast & Crew, Gvana Yajna Kannada Movie Cast, Actor, Actress, Director". FilmiBeat (in ಇಂಗ್ಲಿಷ್). Retrieved 26 June 2021.
  9. "Maya Kannadi (2020) - Movie | Reviews, Cast & Release Date in tirupati - BookMyShow". in.bookmyshow.com. Retrieved 26 June 2021.
  10. "'Virataparva' will be based on true events that took place in three different timelines? - Times of India". The Times of India (in ಇಂಗ್ಲಿಷ್). Retrieved 26 June 2021.
  11. "Dhand (2015) - Movie | Reviews, Cast & Release Date - BookMyShow". in.bookmyshow.com. Retrieved 27 June 2021.
  12. "Pettkammi Movie: Showtimes, Review, Trailer, Posters, News & Videos | eTimes". Retrieved 27 June 2021.
  13. "Bale Pudar Deeka E Preethig Movie: Showtimes, Review, Trailer, Posters, News & Videos | eTimes". Retrieved 27 June 2021.
  14. daijiworld.com/news/newsDisplay.aspx?newsID=606174