ಗಜಾನನ ಯಾಜಿ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಮುಂಬಯಿನಗರದ 'ಮಾಹಿಮ್' ಉಪನಗರದಲ್ಲಿರುವ, ’ಕರ್ನಾಟಕ ಸಂಘ’ದ ಸದಸ್ಯ,'ಗಜಾನನ ಯಾಜಿ'ಯವರು, ’ಕಾರ್ಯ ಚಟುವಟಿಕೆ’ಗಳಲ್ಲಿ ಉತ್ಸಾಹದಿಂದ ಸಕ್ರಿಯರಾಗಿ ಭಾಗವಹಿಸುತ್ತಿದ್ದ ಹಿರಿಯ ಚೇತನ. ಅವರು, ೧೯೯೦-೯೭ ರವರೆಗೆ, ’ಕಾರ್ಯಕಾರಿ ಸಮಿತಿಯ ಸದಸ್ಯ’ರಾಗಿದ್ದು, ’ಗ್ರಂಥಾಲಯ’ ಹಾಗೂ ’ಮಾಹಿತಿ ಕೇಂದ್ರ’, ’ಕಲಾಭಾರತಿ’, ’ಸಾಂಸ್ಕೃತಿಕ’, ’ಸಾಹಿತ್ಯಕ ಉಪಸಮಿತಿ’ ಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಜನನ ಹಾಗೂ ವಿದ್ಯಾಭ್ಯಾಸ
ಬದಲಾಯಿಸಿ'ಗಜಾನನ ಯಾಜಿ' ಯವರು, ’ಉತ್ತರ ಕನ್ನಡದ ಜಿಲ್ಲೆ’ಯ ’ಹೊನ್ನಾವರ’ ತಾಲ್ಲೂಕಿನ ’ಇಡಗುಂಜಿ’ಯವರು. ಅವರಿಗೆ ಮನೆಯಿಂದಲೇ ಸಹಜವಾಗಿ ಬಂದ ಕಲೆಗಳು ಸಂಗೀತ ಮತ್ತು ಅಭಿನಯ. ’ಯಕ್ಷಗಾನದ ಚಂಡೆ’, ’ಮೃದಂಗ’, ’ಭಾಗವತಿಕೆ’ಗಳಲ್ಲಿ ಪರಿಣಿತಿಯನ್ನು ಹೊಂದಿದ್ದರು. ಮೊದಲ ಗುರುಗಳು, ’ಕೆರೆಮನೆ ಮಹಾಬಲ ಹೆಗಡೆ’, ಪಂ. ಚಂದ್ರಶೇಖರ ಪುರಾಣಿಕ ಮಠ’, ೧೯೬೧ ರಲ್ಲಿ ’ಇಡಗುಂಜಿಯ ಶ್ರೀ ಸಿದ್ಧಿವಿನಾಯಕ ಸಂಗೀತ ಸಭಾ’ ಆರಂಭಮಾಡಿದ್ದರು. ಬೊಂಬಾಯಿಗೆ ಬಂದಕೂಡಲೇ, ಪಂ. ಪ್ರಭುದೇವ ರ ಬಳಿ ಸಂಗೀತಾಭ್ಯಾಸ ನಡೆಸಿದರು. ಸಂಗೀತದಲ್ಲಿ ’ಸಂಗೀತ ವಿಶಾರದ,’ ಹಾಗೂ ’ವಿದ್ವತ್’ ಪರೀಕ್ಷೆಗಳನ್ನು ಮಾಡಿಕೊಂಡಿದ್ದಾರೆ. ಬೊಂಬಾಯಿನಲ್ಲಿ ಸ್ವಂತ ಸಂಗೀತ ಶಾಲೆಯನ್ನು ಆರಂಭಿಸಿದರು. ’ಬೃಹನ್ ಮುಂಬಯಿ ನಗರಪಾಲಿಕೆಯ ಶಾಲೆಗಳಲ್ಲಿ ’ಸಂಗೀತ ಶಿಕ್ಷಕರ ಹುದ್ದೆ’ಯಲ್ಲಿದ್ದು, ನಿವೃತ್ತರಾದರು.
’ಭಾವನಾ ಲಲಿತಕಲಾ ವೇದಿಕೆ’ಯಲ್ಲಿ
ಬದಲಾಯಿಸಿ’ಭಾವನಾ ಲಲಿತಕಲಾ ವೇದಿಕೆ’ ಯ ಆಶ್ರಯದಲ್ಲಿ, ಬೇರೆ,ಬೇರೆ ಸಂಘ ಸಂಸ್ಥೆಗಳ ಕಾರ್ಯಕಲಾಪಗಳಲ್ಲಿ,
- 'ಭಾವಗೀತೆ',
- 'ಗಾಯನ',
- 'ಗೀತಗುಂಜನ',
- 'ಭಾವಬೈಗು',
- 'ಕಾವ್ಯಸಂಧ್ಯಾ'
- 'ನಾಟಕ,'
- 'ಯಕ್ಷಗಾನ,' ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದು, ಪ್ರಶಂಸೆ, ಪ್ರಶಸ್ತಿಗಳನ್ನು ಹಾಸಿಲ್ ಮಾಡಿದ್ದಾರೆ.
ಆತ್ಮಚರಿತ್ರೆ-'ನೆನಪು-ನೆನಹು'
ಬದಲಾಯಿಸಿ೨೦೦೬ ರಲ್ಲಿ 'ಗಜಾನನ ಯಾಜಿ' ಯವರು, ತಮ್ಮ 'ಆತ್ಮ ಚರಿತ್ರೆ', 'ನೆನಪು-ನೆನಹು,' ಬರೆದು ಪ್ರಕಟಿಸಿರುತ್ತಾರೆ.
ಮರಣ
ಬದಲಾಯಿಸಿ'ಗಜಾನನ ಯಾಜಿ' ಯವರು, ೨೨,ಜೂನ್, ೨೦೧೦ ರ ರಾತ್ರಿ, ಹೊನ್ನಾವರದ, 'ಗುಣವಂತೆ'ಯ ತಮ್ಮ 'ಸ್ವಗೃಹ'ದಲ್ಲಿ ಮೃತರಾದರು. ೭೧ ವರ್ಷ ಪ್ರಾಯದ 'ಗಜಾನನ ಯಾಜಿ' ಯವರು, ಸ್ವಲ್ಪ ದಿನಗಳಿಂದ ಅನಾರೋಗ್ಯದಿಂದ ನರಳುತ್ತಿದ್ದರು.'ಗಜಾನನ ಯಾಜಿ' ಯವರು, 'ಪತ್ನಿ' ಮೂವರು ಹೆಣ್ಣುಮಕ್ಕಳು, ಹಾಗೂ ಅಪಾರ ಬಂಧುವರ್ಗ, ಮತ್ತು ಅಭಿಮಾನಿ-ಮಿತ್ರರನ್ನು ಅಗಲಿದ್ದಾರೆ.