ಗಗನ್ ಅಜಿತ್ ಸಿಂಗ್ (ಜನನ ೯ ಡಿಸೆಂಬರ್ ೧೯೮೦) ಒಬ್ಬ ಭಾರತೀಯ ಮಾಜಿ ಫೀಲ್ಡ್ ಹಾಕಿ ಆಟಗಾರ.[][] ಅವರು ೨೦೦೧ ರ ಜೂನಿಯರ್ ವಿಶ್ವಕಪ್ ಗೆದ್ದ ಭಾರತದ ನ್ಯಾಷನಲ್ ಅಂಡರ್ - ೨೧ ತಂಡದ ನಾಯಕರಾಗಿದ್ದರು. ಅವರು ೨೦೦೦ ದ ಸಿಡ್ನಿ ಮತ್ತು ೨೦೦೪ ರ ಅಥೆನ್ಸ್ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಆಡಿದ ಭಾರತೀಯ ಹಿರಿಯ ರಾಷ್ಟ್ರೀಯ ತಂಡದ ಸದಸ್ಯರಾಗಿದ್ದರು.

ಗಗನ್ ಅಜಿತ್ ಸಿಂಗ್
Personal information
ಜನನ (1980-12-09) ೯ ಡಿಸೆಂಬರ್ ೧೯೮೦ (ವಯಸ್ಸು ೪೪)
ಫಿರೋಜ್‍ಪುರ, ಪಂಜಾಬ್, ಭಾರತ
Playing position ಫಾರ್ವರ್ಡ್‌
Senior career
ವರ್ಷಗಳು ತಂಡ Apps (Gls)
ಪಂಜಾಬ್ ಪೊಲೀಸ್
೨೦೦೫–೨೦೦೭ ಎಚ್‍ಸಿ ಕ್ಲೈನ್ ಜ್ವಿಟ್ಸರ್ಲ್ಯಾಂಡ್
೨೦೧೨ ಶೇರ್‌-ಇ-ಪಂಜಾಬ್‍[] ೧೬ (೫)
ರಾಷ್ಟ್ರೀಯ ತಂಡ
–೨೦೦೧ ಇಂಡಿಯ ಯು೨೧
೧೯೯೭–೨೦೦೭ ಭಾರತ ೨೦೦+ (೧೦೦+)

ವೈಯಕ್ತಿಕ ಜೀವನ

ಬದಲಾಯಿಸಿ

ಗಗನ್ ಅಜಿತ್ ಸಿಂಗ್ ೧೯೮೦ ರ ಡಿಸೆಂಬರ್ ೯ ರಂದು ಭಾರತದ ಪಂಜಾಬ್ ರಾಜ್ಯದ ಫಿರೋಜ್‍ಪುರದಲ್ಲಿ ಜನಿಸಿದರು. ಅವರ ತಂದೆ ಅಜಿತ್ ಸಿಂಗ್ ಕೂಡ ಒಲಿಂಪಿಯನ್ ಆಗಿದ್ದರು ಮತ್ತು ೧೯೭೬ ರ ಮಾಂಟ್ರಿಯಲ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕಾಗಿ ಆಡಿದ್ದರು. ಅವರ ಅಂಕಲ್‍ ಹರ್ಮಿಕ್ ಸಿಂಗ್ ಇನ್ನೊಬ್ಬ ಒಲಿಂಪಿಯನ್ ಆಗಿದ್ದರು. ಗಗನ್ ಅಜಿತ್ ನವದೆಹಲಿಯ ಯೂನಿಯನ್ ಅಕಾಡೆಮಿ ಸೀನಿಯರ್ ಸೆಕೆಂಡರಿ ಶಾಲೆ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಶಿಕ್ಷಣ ಪಡೆದರು.[]

ಸಿಂಗ್ ೧೯೯೫ ರಲ್ಲಿ ಜಲಂಧರ್‌ನ ಸರ್ಕಾರಿ ಕಲಾ ಮತ್ತು ಕ್ರೀಡಾ ಕಾಲೇಜಿನಲ್ಲಿ ಹಾಕಿಯಲ್ಲಿ ತರಬೇತಿ ಪಡೆದರು. ೧೯೯೭ ರಲ್ಲಿ, ಅವರು ನವದೆಹಲಿಯ ಏರ್ ಇಂಡಿಯಾ ಹಾಕಿ ಅಕಾಡೆಮಿಯಿಂದ ಜೂನಿಯರ್ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಸ್ಪರ್ಧಿಸಲು ಆಯ್ಕೆಯಾದರು. ಸಿಂಗ್ ೨೬ ಗೋಲುಗಳನ್ನು ಗಳಿಸಿ ಪಂದ್ಯಾವಳಿಯ ಅಗ್ರ ಸ್ಕೋರರ್ ಆಗಿ ಹೊರಹೊಮ್ಮಿದರು. ಅವರು ೧೯೯೯ ರಲ್ಲಿ ತಂಡದ ನಾಯಕರಾಗಿದ್ದರು.[]

ವೃತ್ತಿಜೀವನ

ಬದಲಾಯಿಸಿ

ಸಿಂಗ್ ೧೯೯೭ ರಲ್ಲಿ ರಷ್ಯಾ ವಿರುದ್ಧದ ಟೆಸ್ಟ್ ಸರಣಿಯ ಮೂಲಕ ಹಿರಿಯ ರಾಷ್ಟ್ರೀಯ ಹಾಕಿಗೆ ಪಾದಾರ್ಪಣೆ ಮಾಡಿದರು. ಸಿಂಗ್ ೨೦೦೦ ಮತ್ತು ೨೦೦೪ ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಆಡಿದರು, ಅಲ್ಲಿ ಭಾರತವು ಎರಡೂ ಸಂದರ್ಭಗಳಲ್ಲಿ ಏಳನೇ ಸ್ಥಾನವನ್ನು ಗಳಿಸಿತು. ೨೦೦೪ ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಸಿಂಗ್ ಏಳು ಗೋಲುಗಳೊಂದಿಗೆ ಭಾರತದ ಪರ ಅಗ್ರ ಸ್ಕೋರರ್ ಆಗಿದ್ದರು.[]

ಅಖಿಲ ಭಾರತ ಗುರ್ಮಿತ್ ಸಿಂಗ್ ಟೂರ್ನಮೆಂಟ್ ಮತ್ತು ೧೯೯೭ ರ ಜವಾಹರಲಾಲ್ ನೆಹರು ಟೂರ್ನಮೆಂಟ್‍ನಲ್ಲಿ ಗಗನ್ ಅಜಿತ್ ಸಿಂಗ್ ಏರ್ ಇಂಡಿಯಾ ಪರ ಆಡಿ ಅತಿ ಹೆಚ್ಚು ಗೋಲುಗಳನ್ನು ಗಳಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿದರು. ಗಗನ್ ಅಜಿತ್ ಸಿಂಗ್ ಶೀಘ್ರದಲ್ಲೇ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದರು. ಕೌಲಾ ಲಂಪುರ್‌ನಲ್ಲಿ ನಡೆದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ೧೯೯೮ ರಲ್ಲಿ ನಡೆದ ಟ್ರಿನಿಡಾಡ್ ಮತ್ತು ಟೊಬಾಗೊ ವಿರುದ್ಧದ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅವರು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಿದರು. ಅವರ ನಾಯಕತ್ವದಲ್ಲಿ, ಜೂನಿಯರ್ ಇಂಡಿಯನ್ ಹಾಕಿ ತಂಡ ಗಮನಾರ್ಹವಾಗಿ ಪ್ರದರ್ಶನ ನೀಡಿತು ಮತ್ತು ಆಸ್ಟ್ರೇಲಿಯಾದ ಹೋಬಾರ್ಟ್‌ನಲ್ಲಿ ೨೦೦೧ ರ ಜೂನಿಯರ್ ವಿಶ್ವಕಪ್‍ನಲ್ಲಿ ಜಯಗಳಿಸಿತು. ದಕ್ಷಿಣ ಕೊರಿಯಾದ ಬುಸಾನ್‍ನಲ್ಲಿ ನಡೆದ ೨೦೦೨ ರ ೧೪ ನೆಯ ಏಷ್ಯನ್ ಕ್ರೀಡಾಕೂಟದಲ್ಲಿ ಗಗನ್ ಅಜಿತ್ ಸಿಂಗ್ ಅವರನ್ನು ಆಲ್-ಏಷ್ಯನ್ ಪುರುಷರ ಹಾಕಿ ತಂಡದಲ್ಲಿ ಆಯ್ಕೆ ಮಾಡಲಾಯಿತು.

ಅವರು ೨೦೦೨ ರಲ್ಲಿ ನಡೆದ ಬುಸಾನ್ ಏಷ್ಯನ್ ಕ್ರೀಡಾಕೂಟದಲ್ಲಿ ಆಡಿದ ರಾಷ್ಟ್ರೀಯ ಹಾಕಿ ತಂಡದ ಅಂಗವಾಗಿದ್ದರು ಮತ್ತು ಅವರು ಪಂದ್ಯದಲ್ಲಿ ೪ ಗೋಲುಗಳನ್ನು ಪಡೆದರು. ಹಾಗೂ ಸೆಮಿ-ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಅಂತಿಮವಾಗಿ ಗೆಲುವನ್ನು ಸಾಧಿಸಿದರು. ಅಂತರರಾಷ್ಟ್ರೀಯ ಹಾಕಿ ಪಂದ್ಯಾವಳಿಗಳಲ್ಲಿ ರಾಷ್ಟ್ರೀಯ ಹಾಕಿ ತಂಡದ ಅಂಗವಾಗಿಲ್ಲದೆ, ಗಗನ್ ಅಜಿತ್ ಸಿಂಗ್ ಸಾಗರೋತ್ತರ ಹಾಕಿ ಕ್ಲಬ್‍ಗೆ ಸಂಪರ್ಕ ಹೊಂದಿದ್ದಾರೆ. ಅವರು ೨೦೦೫ ರಿಂದ, ನೆದರ್ಲೆಂಡ್ಸ್‌ನ ಕ್ಲಬ್‍ಗಾಗಿ ತಂಡವೊಂದರಲ್ಲಿ ಆಡುತ್ತಿದ್ದಾರೆ, ಇದನ್ನು ಎಚ್‍ಸಿ ಕ್ಲೈನ್ ​​ಜ್ವಿಟ್ಸರ್ಲ್ಯಾಂಡ್ ಎಂಬ ಹೆಸರಿನ ಪ್ರಸಿದ್ಧ ಹಾಕಿ ಲೀಗ್‍ನಲ್ಲಿ ಹೂಫ್ಡಕ್ಲಾಸ್ ಎಂದು ಹೆಸರಿಸಲಾಯಿತು.

ಫೀಲ್ಡ್ ಹಾಕಿಯಲ್ಲಿ ಅವರ ಅತ್ಯುತ್ತಮ ಕೌಶಲ್ಯ ಮತ್ತು ರಾಷ್ಟ್ರೀಯ ಹಾಕಿ ತಂಡದಲ್ಲಿನ ಸಾಧನೆಗಾಗಿ ಗಗನ್ ಅಜಿತ್ ಸಿಂಗ್ ಅವರಿಗೆ, ೨೦೦೨ ರಲ್ಲಿ ಭಾರತೀಯ ಸರ್ಕಾರದಿಂದ ಅರ್ಜುನ ಪ್ರಶಸ್ತಿಯನ್ನು ನೀಡಿದರು. ಗಗನ್ ಅಜಿತ್ ಸಿಂಗ್ ೧೯೯೭ ರಲ್ಲಿ ದೆಹಲಿ ಸ್ಪೋರ್ಟ್ಸ್ ಜರ್ನಲಿಸ್ಟ್ಸ್ ಅಸೋಸಿಯೇಷನ್, ೨೦೦೩ ರಲ್ಲಿ ಹೀರೋ ಹೋಂಡಾ ಸ್ಪೋರ್ಟ್ಸ್ ಪ್ರಶಸ್ತಿ ಮತ್ತು ೨೦೦೪ ರಲ್ಲಿ ಪ್ರಾಮಿಸಿಂಗ್ ಜೂನಿಯರ್ ಸ್ಪೋರ್ಟ್ಸ್‌ಪರ್ಸನ್ ಪ್ರಶಸ್ತಿಯನ್ನು ಒಳಗೊಂಡಂತೆ ಹಲವಾರು ಇತರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರಿಗೆ ೨೦೦೨ ರಲ್ಲಿ ಬಿರ್ಲಾ ಫೌಂಡೇಶನ್ ಪ್ರಶಸ್ತಿ ಕೂಡ ಲಭಿಸಿದೆ.

ಉಲ್ಲೇಖಗಳು

ಬದಲಾಯಿಸಿ
  1. "Gagan Ajit Singh to Make Come Back in World Series Hockey". The Fans of Hockey. 10 February 2012. Retrieved 2013-01-14.
  2. "India look to break 15-year jinx at Junior Hockey World Cup". The Indian Express (in ಅಮೆರಿಕನ್ ಇಂಗ್ಲಿಷ್). 7 December 2016. Retrieved 2017-06-23.
  3. "Hockey: India's Top Five Victories Over Pakistan". News18. 23 October 2016. Retrieved 2017-06-23.
  4. ೪.೦ ೪.೧ "FORMER PLAYER GAGAN AJIT SINGH-INDIANMIRROR". indianmirror.com. Retrieved 24 May 2022.
  5. "Gagan Ajit India's leading goal scorer". Zee News (in ಇಂಗ್ಲಿಷ್). 29 August 2004. Retrieved 24 May 2022.

ಬಾಹ್ಯ ಕೊಂಡಿಗಳು

ಬದಲಾಯಿಸಿ