ಗಂಟಲುಮಣಿ, ಅಥವಾ ಗಳಕುಹರದ ಉಬ್ಬು ಮಾನವನ ಕುತ್ತಿಗೆಯ ವೈಶಿಷ್ಟ್ಯವಾಗಿದೆ. ಇದು ಗಂಟಲಗೂಡನ್ನು ಸುತ್ತುವರಿದಿರುವ ಥೈರಾಯ್ಡ್ ಮೃದ್ವಸ್ಥಿಯ ಕೋನದಿಂದ ರಚನೆಗೊಂಡಿರುವ ಗಡ್ಡೆ ಅಥವಾ ಉಬ್ಬು ಆಗಿದೆ ಮತ್ತು ವಿಶೇಷವಾಗಿ ಪುರುಷರಲ್ಲಿ ಕಂಡುಬರುತ್ತದೆ.

ಇದು ಧ್ವನಿನಾಳ (larynx) ಇಲ್ಲವೇ ಧ್ವನಿಸಂಪುಟದಲ್ಲಿ ಬಲು ದೊಡ್ಡ ಭಾಗವಾಗಿರುವ ಗುರಾಣಿಕ ಮೆಲ್ಲೆಲುಬಿನ (thyroid cartilage) ಮೇಲಂಚು ಮುಂಗತ್ತಿನಲ್ಲಿ ಉಬ್ಬಿದಂತಿರುವ ಭಾಗ (ಅದಾಮ್ಸ್ ಆಪಲ್). ತಿನ್ನಬಾರದ ಹಣ್ಣನ್ನು ಆದಮ ನುಂಗಿ ಬಿಟ್ಟಿದ್ದರಿಂದ ಅದು ಗಂಟಲಲ್ಲೇ ಸಿಲುಕಿಕೊಂಡು ಆ ಭಾಗ ಊದಿಕೊಂಡಿತೆಂಬ ಕತೆ ಉಂಟು.[] ಗಂಟಲಮಣಿ ಹೆಂಗಸರಿಗಿಂತಲೂ ಗಂಡಸರಲ್ಲೇ ಎದ್ದು ತೋರುತ್ತದೆ. ಏನಾದರೂ ನುಂಗುವಾಗ ಗಂಟಲಮಣಿ ಮೇಲಕ್ಕೆ ಏರುತ್ತದೆ. ನುಂಗುವಾಗ ಆಹಾರ ಉಸಿರುನಾಳದೊಳಕ್ಕೆ ಹೋಗದಂತೆ ಅಡ್ಡಗಟ್ಟುವ ಕವಾಟ ಏರ್ಪಾಡಿದು. ಗಂಟಲಮಣಿಯ ಮೇಲೆ ಗಟ್ಟಿಯಾಗಿರುವ ಕ್ರೈಕಾಯ್ಡ್ ಮೆಲ್ಲೆಲುಬಿನ ಒಂದು ಉಂಗುರ ತಾಕುತ್ತದೆ. ಗಂಟಲಲ್ಲಿ ಏನಾದರೂ ಹೇಗಾದರೂ ಅಡಚಣೆಯಾಗಿ ಉಸಿರು ಕಟ್ಟಿದ್ದರೆ ವೈದ್ಯರು ಹಿಂದುಮುಂದು ನೋಡದೆ ತುರ್ತಾಗಿ ಈ ಗುಣಿಯಲ್ಲಿ ತೂತು ಮಾಡಿ ಸರಾಗವಾಗಿ ಉಸಿರಾಡುವಂತೆ ಮಾಡುವುದುಂಟು.

ಗಂಟಲುಮಣಿಯ ರಚನೆಯು ಚರ್ಮದ ಕೆಳಗೆ ಉಬ್ಬನ್ನು ರೂಪಿಸುತ್ತದೆ. ಇದು ಸಾಮಾನ್ಯವಾಗಿ ವಯಸ್ಕ ಪುರುಷರಲ್ಲಿ ಹೆಚ್ಚು ದೊಡ್ಡದಾಗಿದ್ದು, ಸಾಮಾನ್ಯವಾಗಿ ಸ್ಪಷ್ಟವಾಗಿ ಗೋಚರವಾಗುತ್ತದೆ ಮತ್ತು ಇದನ್ನು ಮುಟ್ಟಬಹುದಾಗಿದೆ. ಸ್ತ್ರೀಯರಲ್ಲಿ, ಈ ಉಬ್ಬು ಅಷ್ಟಾಗಿ ಕಾಣುವುದಿಲ್ಲ ಮತ್ತು ಥೈರಾಯ್ಡ್ ಮೃದ್ವಸ್ಥಿಯ ಮೇಲಿನ ಅಂಚಿನ ಮೇಲೆ ಕಷ್ಟದಿಂದ ಗ್ರಹಿಸಲ್ಪಡುತ್ತದೆ.[]

ಇದರ ಬೆಳವಣಿಗೆಯು ಪುರುಷರ ಒಂದು ದ್ವಿತೀಯಕ ಲೈಂಗಿಕ ಲಕ್ಷಣವೆಂದು ಪರಿಗಣಿಸಲಾಗುತ್ತದೆ ಮತ್ತು ಹಾರ್ಮೋನಿನ ಚಟುವಟಿಕೆಯ ಪರಿಣಾಮವಾಗಿ ಕಾಣಿಸಿಕೊಳ್ಳುತ್ತದೆ. ಇದರ ಬೆಳವಣಿಗೆಯ ಪ್ರಮಾಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ ಮತ್ತು ಗಂಟಲಗೂಡಿನಲ್ಲಿ ಆ ಪ್ರದೇಶದ ಅಗಲವಾಗುವಿಕೆ ಬಹಳ ಹಠಾತ್ತಾಗಿ ಮತ್ತು ಕ್ಷಿಪ್ರವಾಗಿ ಆಗಬಹುದು. 

ಉಲ್ಲೇಖಗಳು

ಬದಲಾಯಿಸಿ
  1. Bartholin, Thomas (1662) [1651]. Bartholinus Anatomy. Translated by Culpeper, Nicholas; Cole, Abdiah. London: Peter Cole. p. 123. That same bunch which is seen on the foreside of the Neck, is called Adams Apple, because the common people have a belief, that by the judgment of God, a part of that fatal Apple, abode sticking in Adams Throat, and is so communicated to his posterity [Protuberantia illa in collo anterius conspicua, dicitur Pomum Adami; [quia vulgo persuasum in Adami faucibus pomi fatalis partem ex pœna Divina remansisse, & ad posteros translatam]]
  2. "Laringe". Sisbib.unmsm.edu.pe. Retrieved 2013-02-27.



ಹೊರಗಿನ ಕೊಂಡಿಗಳು

ಬದಲಾಯಿಸಿ
  • Lesson 11 at The Anatomy Lesson by Wesley Norman (Georgetown University)



 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: