ಗಂಗ್ನಿಹೆಸ್ಸೊ
ಗಂಗ್ನಿಹೆಸ್ಸೊ - ಸಾಂಪ್ರದಾಯಿಕ "ದಹೊಮಿಯ ಹನ್ನೆರಡು ರಾಜರು" ಗಳಲ್ಲಿ ಮೊದಲನೆಯವ. ಇವನ ರಾಜ್ಯಭಾರ ಸುಮಾರು ೧೬೨೦ರಲ್ಲಿ ನಡೆದಿರಬಹುದು. ಇವನ ಲಾಂಛನಗಳು ಒಂದು ಗಂಗ್ನಿಹೆಸ್ಸೊ ಪಕ್ಷಿ (ಈ ಪಕ್ಷಿ ಅವನ ಹೆಸರನ್ನು ಸೂಚಿಸುತ್ತಿತ್ತು), ಒಂದು ಡೋಲು, ಹಾಗೂ ಎಸೆಯುವ/ಶಿಕಾರಿ ಮಾಡುವ ಕೋಲುಗಳು. ಇವನು ನಿಜವಾಗಿಯೂ ರಾಜನಾಗಿ ಕಾರ್ಯನಿರ್ವಹಿಸಿದ್ದು ಐತಿಹಾಸಿಕವಾಗಿ ಸ್ಪಷ್ಟವಿಲ್ಲ. ಆದರೆ ಇವನು ತನ್ನ ತಮ್ಮ ಡಾಕೊಡೊನೊ ಮೂಲಕ ತನ್ನ ಸಲಹೆಗಳ ಶಕ್ತಿಯನ್ನುಪಯೋಗಿಸಿ ಸಮುದಾಯದ ವ್ಯವಹಾರಗಳನ್ನು ನಡೆಸಲು ಸಹಾಯ ಮಾಡಿದ ಪ್ರಭಾವಶಾಲಿ ನಾಯಕನಾಗಿದ್ದಿರಬಹುದು. ಡಾಕೊಡೊನೊ ತನ್ನ ಜೀವನಕಾಲದಲ್ಲಿ ರಾಜನೆಂದು ಕರೆಯಲ್ಪಟ್ಟಿದ್ದ.
ದೊ-ಅಕ್ಲಿನ್ | |
---|---|
ದಹೋಮಿ ಸಾಮ್ರಾಜ್ಯದ ಸ್ಥಾಪಕ | |
ರಾಜ್ಯಭಾರ | c. ೧೬೦೦ |
ಉತ್ತರಾಧಿಕಾರಿ | ಡಾಕೊಡೊನೊ |
ಸಂತತಿ | Aladaxonou |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |