ಖುಸ್ರೋ ಬಾಗ್
ಖುಸ್ರೊ ಬಾಗ್ ಭಾರತದ ಉತ್ತರ ಪ್ರದೇಶದ ಅಲಹಾಬಾದ್ನ ಮುಹಲ್ಲಾ ಖುಲ್ದಾಬಾದ್‌ನಲ್ಲಿ ಸ್ಥಿತವಾಗಿರುವ ಗೋಡೆಯುಳ್ಳ ಉದ್ಯಾನವನ ಮತ್ತು ಸಮಾಧಿ ಸಂಕೀರ್ಣ. ಇದು ನಲವತ್ತು ಎಕರೆ ಪ್ರದೇಶದಲ್ಲಿದ್ದು ಚತುರ್ಭುಜ ಆಕಾರದಲ್ಲಿದೆ. ಇದರಲ್ಲಿ ಜಹಾಂಗೀರ್‌ನ ರಜಪೂತ್ ಪತ್ನಿ ಮತ್ತು ಮಹಾರಾಜ ಭಗವಂತ್ ದಾಸ್‍ನ ಮಗಳು ಹಾಗೂ ಖುಸ್ರೋ ಮಿರ್ಜಾಳ ತಾಯಿಯಾದ ಶಾ ಬೇಗಂ (ಜನ್ಮನಾಮ - ಮನ್ಭಾವತಿ ಬಾಯಿ) (ಮ. 1604), ಜಹಾಂಗೀರ್‌ನ ಹಿರಿಯ ಮಗನಾದ ಖುಸ್ರೋ ಮಿರ್ಜ಼ಾ ಮತ್ತು ಜಹಾಂಗೀರ್‌ನ ಮಗಳು ನಿಥಾರ್ ಬೇಗಮ್‍ನ (ಮರಣ: 1624) ಗೋರಿಗಳಿವೆ. ಇದನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಭಾರತೀಯ ತಾಣವಾಗಿ ಪಟ್ಟಿ ಮಾಡಲಾಗಿದೆ.
ಈ ಗೋಡೆಯುಳ್ಳ ಉದ್ಯಾನದೊಳಗಿನ ಮೂರು ಮರಳುಗಲ್ಲಿನ ಗೋರಿಗಳು ಮೊಘಲ್ ವಾಸ್ತುಕಲೆಯ ಒಂದು ಸೊಗಸಾದ ಉದಾಹರಣೆಯನ್ನು ಪ್ರಸ್ತುತಪಡಿಸುತ್ತವೆ. ಷಾ ಬೇಗಮ್‍ನ ಗೋರಿಯು ದೊಡ್ಡ ಛತ್ರಿಯನ್ನು ಹೊಂದಿದ್ದು ಅಡಿಪೀಠದ ಮೇಲಿದೆ. ಗೋರಿಯನ್ನು ಅಲಂಕರಿಸುವ ಅರಬ್ಬಿ ಶಾಸನಗಳನ್ನು ಜಹಾಂಗೀರ್‌ನ ಶ್ರೇಷ್ಠ ಸುಂದರ ಬರಹಗಾರನಾದ ಮೀರ್ ಅಬ್ದುಲ್ಲಾ ಮುಷ್ಕಿನ್ ಕಲಾಮ್ ಕೆತ್ತಿದ್ದಾನೆ. [೧]
ಛಾಯಾಂಕಣ
ಬದಲಾಯಿಸಿ-
ಬೀಬಿ ತಮೋಲನ್ಳ ಗೋರಿ
-
ನಿಥಾರ್ ಮತ್ತು ಖುಸ್ರೋರ ಗೋರಿಗಳು
-
ನಿಥಾರ್ಳ ಗೋರಿಯ ಒಳಾಂಗಣ
-
ಷಾ ಬೇಗಮ್‍ನ ಗೋರಿ
-
ಸುಲ್ತಾನ್ ಬೇಗಂ, ನಿಥಾರ್ ಬೇಗಮ್ ಮತ್ತು ಖುಸ್ರೌ ಅವರ ಗೋರಿಗಳು; 1870 ರ ದಶಕದಲ್ಲಿ ತೆಗೆದ ಖುಸ್ರೋ ಬಾಗ್ನ ಛಾಯಾಚಿತ್ರ.
-
ಥಾಮಸ್ ಡೇನಿಯಲ್ರ 1796 ರ ಬಣ್ಣದ ಜಲಚಿತ್ರಣ
ಉಲ್ಲೇಖಗಳು
ಬದಲಾಯಿಸಿ- ↑ "Elegant tombs, unkempt greens". The Hindu. 22 September 2012. Archived from the original on 25 ಅಕ್ಟೋಬರ್ 2012. Retrieved 8 ನವೆಂಬರ್ 2020.