ಖುಷಿ ಖುಷಿಯಾಗಿ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಖುಷಿ ಖುಷಿಯಾಗಿ 2015 ರ ಕನ್ನಡ ರೋಮ್ಯಾಂಟಿಕ್ ಹಾಸ್ಯ ಚಲನಚಿತ್ರವಾಗಿದ್ದು, ನಿರ್ದೇಶಕರಾದ ಪ್ರೀತಂ ಗುಬ್ಬಿ ಮತ್ತು ಹರ್ಷ ಅವರೊಂದಿಗೆ ನಿರ್ದೇಶಕ ಯೋಗಿ ಜಿ. ರಾಜ್ ಅವರ ಚೊಚ್ಚಲ ಚಿತ್ರವಾಗಿದೆ. ಚಿತ್ರದಲ್ಲಿ ಗಣೇಶ್, ಅಮೂಲ್ಯ, [೧] ಮತ್ತು ನಂದಿನಿ ರೈ ನಟಿಸಿದ್ದಾರೆ. ಖುಷಿ ಖುಷಿಯಾಗಿ ತೆಲುಗಿನ ಬ್ಲಾಕ್ ಬಸ್ಟರ್ ಚಿತ್ರ ಗುಂಡೆ ಜಾರಿ ಗಲ್ಲಂತಯ್ಯಿಂಡೆ (2013)ದ ರಿಮೇಕ್ ಆಗಿದೆ. [೨] ಚಲನಚಿತ್ರವು 1 ಜನವರಿ 2015 ರಂದು ಬಿಡುಗಡೆಯಾಯಿತು. [೩]

ಸಾರಾಂಶ ಬದಲಾಯಿಸಿ

ರಾಜ್ ಒಬ್ಬ ನಿರಾತಂಕದ ವ್ಯಕ್ತಿ, ಅವನು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ಎಲ್ಲರಿಗೂ ಇದೆ ಎಂದು ನಂಬುತ್ತಾನೆ. ಸ್ನೇಹಿತ ಸಾಧು ' ಮದುವೆಯ ಆರತಕ್ಷತೆಯಲ್ಲಿ, ಅವನು ಪ್ರಿಯಾಳನ್ನು ನೋಡುತ್ತಾನೆ ಮತ್ತು ಅವಳ ಪ್ರೇಮಕ್ಕೆ ಸಿಲುಕುತ್ತಾನೆ. ಪ್ರಿಯಾ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಾಧುವಿನ ಹೆಂಡತಿಯನ್ನು ಕೇಳುತ್ತಾನೆ. ಸಾಧುವಿನ ಹೆಂಡತಿ ಪ್ರಿಯಾಳ ನಂಬರ್ ಅನ್ನು ತನ್ನ ಗಂಡನಿಗೆ ಕೊಟ್ಟು ರಾಜ್ ಗೆ ಕೊಡುವಂತೆ ಕೇಳುತ್ತಾಳೆ. ರಾಜ್ ಮತ್ತು ಸಾಧು ನಡುವಿನ ತಪ್ಪು ಸಂವಹನವು ರಾಜ್ ಇನ್ನೊಬ್ಬ ಮಹಿಳೆ ನಂದಿನಿಯನ್ನು ಫೋನ್‌ನಲ್ಲಿ ಕರೆಯಲು ಕಾರಣವಾಗುತ್ತದೆ. ರಾಜ್ ಫೋನ್‌ನಲ್ಲಿ ನಂದಿನಿಯನ್ನು ಪ್ರಿಯಾ ಎಂದು ತಪ್ಪಾಗಿ ಭಾವಿಸುತ್ತಾನೆ ಮತ್ತು ಅವಳೊಂದಿಗೆ ಸಂಭಾಷಣೆ ನಡೆಸುತ್ತಾನೆ. ಅವನಿಗೆ ತಿಳಿಯದಂತೆ, ನಂದಿನಿಗೆ ರಾಜ್ ಯಾರೆಂದು ತಿಳಿದಿದ್ದು ಅವನಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾಳೆ. ಘಟನೆಗಳ ಸರಮಾಲೆಯ ಮೂಲಕ ಎಲ್ಲವೂ ಬಹಿರಂಗಗೊಂಡು ರಾಜ್ ನ ಗೊಂದಲ ನಿವಾರಣೆಯಾಗುತ್ತದೆ.

ಈ ಮಧ್ಯೆ, ರಾಜ್ ತನ್ನ ಸ್ನೇಹಿತ ಆನಂದನಿಗೆ ಇನ್ನೊಬ್ಬ ಹುಡುಗಿಯ ಗಮನ ಸೆಳೆಯಲು ಸಹಾಯ ಮಾಡುತ್ತಿದ್ದಾನೆ. ಈ ಹುಡುಗಿ ಆನಂದ್‌ ನನ್ನು ಪ್ರೀತಿಸುವ ಪ್ರಿಯಾ ಆಗಿ ರುತ್ತಾಳೆ. ಹಾಸ್ಯಮಯ ಘಟನೆಗಳು ಆನಂದ್ ಅಂತಿಮವಾಗಿ ಪ್ರಿಯಾಳನ್ನು ಅನುಮಾನಿಸಲು ಕಾರಣವಾಗುತ್ತವೆ, ಇದು ಅವರ ಸಂಬಂಧವನ್ನು ಅಪಾಯಕ್ಕೆ ತಳ್ಳುತ್ತದೆ. ಇದನ್ನು ನಂತರ ಪರಿಹರಿಸಲಾಗುತ್ತದೆ ಮತ್ತು ಅವರು ಒಟ್ಟಿಗೆ ಸೇರುತ್ತಾರೆ.

ಏತನ್ಮಧ್ಯೆ, ನಂದಿನಿ ರಾಜ್ ತನಗೆ ಮಾಡಿದ ಮೋಸ ಮತ್ತು ನೋವಿಗೆ ಸೇಡು ತೀರಿಸಿಕೊಳ್ಳಲು ಯೋಜಿಸುತ್ತಾಳೆ. ಅವಳು ರಾಜ್‌ನ ಮೇಲಧಿಕಾರಿಯಾಗಿ ಉದ್ಯೋಗವನ್ನು ಪಡೆದು ಅವನನ್ನು ಪ್ರಲೋಭಿಸಲು ಈ ಸ್ಥಾನವನ್ನು ಬಳಸುತ್ತಾಳೆ, ಅವನನ್ನು ಕಷ್ಟಗಳಿಗೆ ಸಿಲುಕಿಸಿ ಅವನನ್ನು ಮೋಹಿಸುತ್ತಾಳೆ. ರಾಜ್ ತನ್ನ ಬಾಸ್ ಜತೆಗೆ ಪ್ರೇಮದ ಪ್ರಸ್ತಾಪ ಮಾಡಲು ಯೋಜಿಸುತ್ತಾನೆ, ಆದರೆ ಅವಳು ತನ್ನ ನೋವನ್ನು ತೀರಿಸಿಕೊಳ್ಳಲು ಅವನ ಪ್ರಸ್ತಾಪವನ್ನು ತಿರಸ್ಕರಿಸಲು ಈಗಾಗಲೇ ಯೋಜಿಸುತ್ತಿದ್ದಾಳೆ. ಅವನು ಪ್ರಸ್ತಾಪಿಸುವ ಸ್ವಲ್ಪ ಮೊದಲು, ರಾಜ್ ತಾನು ನಿಜವಾಗಿಯೂ ನಂದಿನಿಯನ್ನು ಪ್ರೀತಿಸುತ್ತಿದ್ದೇನೆ ಎಂದು ಅರಿತುಕೊಳ್ಳುತ್ತಾನೆ. ಕ್ಷಮೆಗಾಗಿ ಮನವಿ ಮಾಡಲು ಅವನು ಅವಳ ಮನೆಗೆ ಓಡುತ್ತಾನೆ.

ಪಾತ್ರವರ್ಗ ಬದಲಾಯಿಸಿ

ಚಿತ್ರದ ತಯಾರಿಕೆ ಬದಲಾಯಿಸಿ

ಖ್ಯಾತ ನಿರ್ದೇಶಕರಾದ ಪ್ರೀತಂ ಗುಬ್ಬಿ ಮತ್ತು ಹರ್ಷ ಅವರೊಂದಿಗೆ ಕೆಲಸ ಮಾಡಿದ ನಂತರ ಯೋಗಿ ಜಿ. ರಾಜ್ ಸ್ವತಂತ್ರ ನಿರ್ದೇಶಕರಾಗುವ ಇಂಗಿತವನ್ನು ವ್ಯಕ್ತಪಡಿಸಿದರು. ನಿರ್ದೇಶಕರು ತಮ್ಮ ಚೊಚ್ಚಲ ನಿರ್ದೇಶನಕ್ಕಾಗಿ ರೀಮೇಕ್ ಅನ್ನು ಆಯ್ಕೆ ಮಾಡಿದರು ಮತ್ತು ಹಕ್ಕುಗಳನ್ನು ಪಡೆದರು. ಚಿತ್ರ ಶೀರ್ಷಿಕೆ ಆರಂಭದಲ್ಲಿ ಸಾವಿರ ಜನುಮಕು ಎಂದಿತ್ತು. ನಂತರ ಕ್ರೇಜಿ ಬಾಯ್ ಆಗಿ ಶೋಕಿಲಾಲ್ ಆಯಿತು . ಕೊನೆಗೆ ಖುಷಿ ಖುಷಿಯಾಗಿ ಎಂದು ತೀರ್ಮಾನವಾಯಿತು. [೪]

ಗಣೇಶ್‌ಗೆ ಪ್ರಮುಖ ಪಾತ್ರವನ್ನು ನೀಡುವ ಮೊದಲು , ನಿರ್ಮಾಪಕರು ಪುನೀತ್ ರಾಜ್‌ಕುಮಾರ್ ಅವರನ್ನು ಪರಿಗಣಿಸಿದ್ದರು, ಆದರೆ ಅವರ ವೇಳಾಪಟ್ಟಿಯಲ್ಲಿನ ತೊಂದರೆಗಳಿಂದಾಗಿ ಅದು ಸಾಧ್ಯವಾಗಲಿಲ್ಲ . ನಾದಿನಿ ಪಾತ್ರವನ್ನು ಕಾಜಲ್ ಅಗರ್ವಾಲ್ ಅವರನ್ನು ಸಂಪರ್ಕಿಸಲಾಯಿತು, (ಮೂಲ ಚಿತ್ರವಾದಗುಂಡೆ ಜಾರಿ ಗಲ್ಲಂತಯ್ಯಿಂದೆ ದಲ್ಲಿ ಆ ಪಾತ್ರವನ್ನು ನಿತ್ಯಾ ಮೆನೆನ್ ಅವರು ನಿರ್ವಹಿಸಿದ್ದರು). [೫] ನಿರ್ದೇಶಕರು ಚೆಲುವಿನ ಚಿತ್ತಾರ ಮತ್ತು ಶ್ರಾವಣಿ ಸುಬ್ರಹ್ಮಣ್ಯದಲ್ಲಿ ಗಣೇಶ್ ಜೊತೆ ಯಶಸ್ವಿಯಾಗಿ ಜೋಡಿಯಾದ ಅಮೂಲ್ಯ ಅವರನ್ನು ಆಯ್ಕೆ ಮಾಡಿದರು. ಮೂಲ ತೆಲುಗು ಆವೃತ್ತಿಯಲ್ಲಿ ಇಶಾ ತಲ್ವಾರ್ ನಿರ್ವಹಿಸಿದ ಫ್ಯಾಷನ್ ಡಿಸೈನರ್‌ನ ಎರಡನೇ ನಾಯಕಿಯಾಗಿ ತೆಲುಗು ನಟಿ ನಂದಿನಿ ರೈ ಅವರನ್ನು ಪಾತ್ರವರ್ಗಕ್ಕೆ ಸೇರಿಸಲಾಯಿತು. [೬]

ಹಿನ್ನೆಲೆಸಂಗೀತ ಬದಲಾಯಿಸಿ

ಸಂಗೀತ ನಿರ್ದೇಶಕ ಅನುಪ್ ರೂಬೆನ್ಸ್ ಮೂಲ ಚಿತ್ರಕ್ಕೆ ( ಗುಂಡೆ ಜಾರಿ ಗಲ್ಲಂತಯ್ಯಿಂದೆ ) ಮತ್ತು ಈ ರಿಮೇಕ್‌ಗೆ ಸಂಗೀತ ಸಂಯೋಜಿಸಿದ್ದಾರೆ. [೭] ಚಲನಚಿತ್ರವು ಐದು ಹಾಡುಗಳನ್ನು ಒಳಗೊಂಡಿರುದೆ. [೮] ಹಾಡುಗಳಿಗೆ ಸಾಹಿತ್ಯವನ್ನು ಜಯಂತ್ ಕಾಯ್ಕಿಣಿ, ಕೆ. ಕಲ್ಯಾಣ್ ಮತ್ತು ವಿ.ನಾಗೇಂದ್ರ ಪ್ರಸಾದ್ ಬರೆದಿದ್ದಾರೆ .

ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಅರೇ ಅರೇ"ಕವಿರಾಜ್ಅನೂಪ್ ರೂಬೆನ್ಸ್, ಅನುರಾಧಾ ಭಟ್ 4:05
2."ಅತಿಯಾಯಿತು"ಜಯಂತ ಕಾಯ್ಕಿಣಿಅಂಕಿತ್ ತಿವಾರಿ, ಶ್ರೇಯಾ ಘೋಷಾಲ್4:11
3."ನೀನೇ ನೀನೇ"ಜಯಂತ ಕಾಯ್ಕಿಣಿಅಡ್ನಾನ್ ಸಾಮಿ4:12
4."ನೀನ್ಯಾರೇ ನೀನ್ಯಾರೇ"ಕವಿರಾಜ್ಸಂತೋಷ್, ಶರ್ಮಿಳಾ ಕಾಟ್ಕೆ4:02
5."ರಿಂಬೋಲಾ ರಿಂಬೋಲಾ"ವಿ. ನಾಗೇಂದ್ರ ಪ್ರಸಾದ್ದಿವ್ಯಾ, ಸಂತೋಷ್4:06
ಒಟ್ಟು ಸಮಯ:20:36

ಉಲ್ಲೇಖಗಳು ಬದಲಾಯಿಸಿ

  1. "Ganesh To Romance Amoolya in Gunde Jaari Gallanthayyinde Remake". Filmibeat. 7 April 2014.
  2. "Gunde Jaari Gallanthayyinde remake in Kannada". My First Show. 2014.
  3. "It Will be Ganesh v/s Upendra in the New Year". The New Indian Express. Archived from the original on 26 ಡಿಸೆಂಬರ್ 2014. Retrieved 19 December 2014.
  4. "Gunde Jaari Gallanthayyinde' to be remade in kannada". Sify. 2014. Archived from the original on 2015-09-24.
  5. "Ganesh To Romance Kajal Aggarwal in Gunde Jaari Gallanthayyinde Remake". Filmibeat. 13 March 2014.
  6. "Nandini Rai comes between Ganesh and Amoolya". The Times of India. 3 April 2014.
  7. "Anoop Rubens composes for Ganesh's film". The Times of India. 17 July 2014.
  8. "Khushi Khushiyaagi (Original Motion Picture Soundtrack) – EP". iTunes. Retrieved 8 March 2015.

ಬಾಹ್ಯ ಕೊಂಡಿಗಳು ಬದಲಾಯಿಸಿ