ಖಡಕ್‍ವಾಸ್ಲಾ ಅಣೆಕಟ್ಟು
ಖಡಕ್ವಾಸ್ಲಾ ಪುಣೆಯಿಂದ ನೈಋತ್ಯಕ್ಕೆ ೧೭ ಕಿ.ಮೀಗಳ ದೂರದಲ್ಲಿ ಇರುವ ಒಂದು ಹಳ್ಳಿ. ರಾಷ್ಟ್ರೀಯ ರಕ್ಷಣಾ ಅಕಾಡೆಮಿ (National Defence Academy) ಇಲ್ಲಿದೆ. ಅಲ್ಲದೆ, ಇದರ ಹತ್ತಿರ ಮುಠಾ ನದಿಗೆ ಸರ್ ಎಂ.ವಿಶ್ವೇಶ್ವರಯ್ಯನವರಿಂದ ನಿರ್ಮಿಸಲ್ಪಟ್ಟ ಅಣೆಕಟ್ಟು ಇದೆ.[೧][೨][೩] ಇದರ ಉದ್ದ 4,820`, ಎತ್ತರ 167`. ಇದನ್ನು 1879ರಲ್ಲಿ ಕಟ್ಟಲಾಯಿತು. ಇದರಿಂದ ಇಲ್ಲಿ ಒಂದು ದೊಡ್ಡ ಜಲಾಶಯದ ನಿರ್ಮಾಣವಾಗಿದೆ. ಅಲ್ಲಿಂದ ಎರಡು ಮುಖ್ಯ ಕಾಲುವೆಗಳನ್ನು ತೆಗೆದಿದ್ದಾರೆ. ಮೊದಲನೆಯದು ಹಡಪಸರದಿಂದ ಪಾಟಸ್ ಪರ್ಯಂತ ಮತ್ತು ಎರಡನೆಯದು ಕೋಥರೂಡದಿಂದ ಖಡಕೀ ವರೆಗೆ ಸಾಗುತ್ತವೆ.
ಖಡಕ್‍ವಾಸ್ಲಾ ಆಣೆಕಟ್ಟು | |
---|---|
ಅಧಿಕೃತ ಹೆಸರು | ಖಡಕ್ವಾಸ್ಲಾ ಆಣೆಕಟ್ಟು |
ಸ್ಥಳ | ಖಡಕ್ವಾಸ್ಲಾ ಗ್ರಾಮ, ಪುಣೆ, ಮಹಾರಾಷ್ಟ್ರ ಭಾರತ |
ಅಕ್ಷಾಂಶ ರೇಖಾಂಶ | 18°26′30″N 73°46′5″E / 18.44167°N 73.76806°E |
ಉದ್ಘಾಟನಾ ದಿನಾಂಕ | 1869 |
ಯಜಮಾನ್ಯ | ಮಹಾರಾಷ್ಟ್ರ ಸರ್ಕಾರ |
Dam and spillways | |
ಇಂಪೌಂಡ್ಸ್ | ಮುತ್ತಾ ನದಿ |
ಎತ್ತರ | 31.79 m |
ಉದ್ದ | 1939 m |
Reservoir | |
ರಚಿಸುವಿಕೆ | ಖಡಕ್ವಾಸ್ಲಾ ಸರೋವರ |
ಒಟ್ಟು ಸಾಮರ್ಥ್ಯ | 374 million cubic meter |
ಖಡಕವಾಸ್ಲಾ ಕಟ್ಟೆಗೆ ಪಶ್ಚಿಮದಲ್ಲಿ ಘಟ್ಟಪ್ರದೇಶದಲ್ಲಿ ಮಳೆ ಹೇರಳವಾಗಿ ಬೀಳುತ್ತದೆ; ಈ ನೀರು ಉಪಯೋಗವಾಗದೆ ಹರಿದುಹೋಗುತ್ತಿದ್ದುದನ್ನು ತಪ್ಪಿಸಿ ಇದನ್ನು ಉಪಯುಕ್ತವಾಗಿ ಬಳಸಿಕೊಳ್ಳುವ ಉದ್ದೇಶದಿಂದಲೂ, ಈ ಕಟ್ಟೆಯನ್ನು ಹೆಚ್ಚು ದೃಢಪಡಿಸಲೂ, ಕ್ಷೇತ್ರವನ್ನು ವಿಸ್ತಾರಮಾಡಲೂ ಯೋಚಿಸಿ ಪಶ್ಚಿಮ ದಿಕ್ಕಿನಲ್ಲಿರುವ ಅಂಬಿ ನದಿಗೆ ಪಾನಶೇತ್ ಎಂಬಲ್ಲಿ ಒಂದು ಮಣ್ಣಿನ ಕಟ್ಟೆಯನ್ನು ನಿರ್ಮಿಸಲಾಗುತ್ತಿತ್ತು. ಆ ಕಟ್ಟೆ ಮುಕ್ತಾಯದ ಘಟ್ಟದಲ್ಲಿದ್ದಾಗ ಬಿದ್ದ ಅತಿಶಯ ಮಳೆಯಿಂದಾಗಿ ಅದು ತೇಲಿಹೋಗಿ, ಪ್ರವಾಹದ ರಭಸದಿಂದಾಗಿ ಖಡಕವಾಸ್ಲಾ ಕಟ್ಟೆಯೂ ಒಡೆದು ಹೋಯಿತು. ಈ ದುರ್ಘಟನೆ 1961ರ ಜುಲೈ 12 ರಂದು ಸಂಭವಿಸಿತು.
ಇತ್ತೀಚೆಗೆ ಪುನಃ ಪಾನಶೇತ್ ಕಟ್ಟೆಯನ್ನು ಕಟ್ಟಿ ಮುಗಿಸಲಾಗಿದೆಯಲ್ಲದೆ, ಖಡಕವಾಸ್ಲಾ ಕಟ್ಟೆಯ ದುರಸ್ತಿಯೂ ಆಗಿದೆ. ಈ ಕಟ್ಟೆಯ ಒಂದು ಪಕ್ಕದಲ್ಲಿ ಕೇಂದ್ರ ಜಲ ಮತ್ತು ಶಕ್ತಿ ಸಂಶೋಧನ ಕೇಂದ್ರವಿದೆ. ಇದು ಈ ಕ್ಷೇತ್ರದಲ್ಲಿ ಏಷ್ಯದಲ್ಲೇ ಅತ್ಯಂತ ದೊಡ್ಡದಾದ ಮತ್ತು ಮಹತ್ತ್ವದ ಸಂಶೋಧನಾ ಕೇಂದ್ರ. ಕಟ್ಟೆಯ ಇನ್ನೊಂದು ಪಕ್ಕದಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡಮಿ ಎಂಬ ಸೈನಿಕ ಶಿಕ್ಷಣ ಮಹಾವಿದ್ಯಾಲಯವಿದೆ.
ಉಲ್ಲೇಖಗಳು
ಬದಲಾಯಿಸಿ- ↑ "India News, Latest Sports, Bollywood, World, Business & Politics News". The Times of India. Archived from the original on 3 January 2013. Retrieved 10 April 2015.
- ↑ Mutha River (Approved) at GEOnet Names Server, United States National Geospatial-Intelligence Agency
- ↑ "oneindia.com". Preeti Panwar. 15 September 2015. Retrieved 15 September 2015.