ಖಗೋಳ ಸರ್ವೇಕ್ಷಣ ಎಂದರೆ ಭೂಗೋಳದ ಮೇಲಿನ ಯಾವುದಾದರೊಂದು ಸ್ಥಳದ ನೈಜ ಸ್ಥಾನವನ್ನು (ಅಬ್ಸೊಲ್ಯೂಟ್ ಪೊಸಿಷನ್) ಅದರ ಅಕ್ಷಾಂಶ ರೇಖಾಂಶಗಳಿಂದ ಗೊತ್ತುಪಡಿಸುವಾಗ, ಒಂದು ಸ್ಥಳದ ಮಧ್ಯಾಹ್ನರೇಖೆಯನ್ನು (ಕಾಂತ ಮಧ್ಯಾಹ್ನರೇಖೆಯಿಂದ ಭಿನ್ನವಾದದ್ದು) ನಿರ್ಧರಿಸುವಾಗ, ಅಕ್ಷಾಂಶ ರೇಖಾಂಶಗಳಿಗೆ ಅನುಸಾರವಾಗಿ ಗೊತ್ತು ಮಾಡಲ್ಪಟ್ಟಿರುವ ಅಂತರರಾಷ್ಟ್ರೀಯ ಎಲ್ಲೆಯನ್ನು ನೆಲದ ಮೇಲೆ ಖಚಿತವಾಗಿ ಗುರುತಿಸಬೇಕಾದಾಗ, ಇವೇ ಮುಂತಾದ ಸಂದರ್ಭಗಳಲ್ಲಿ ಆಕಾಶಕಾಯಗಳ ನೆರವಿನಿಂದ ನಡೆಸುವ ಸರ್ವೇಕ್ಷಣ (ಅಸ್ಟ್ರಾನಾಮಿಕಲ್ ಸರ್ವೆ). ಈ ಕ್ರಮದಲ್ಲಿ ಬೃಹದಾಕಾರದ ಖಗೋಳದ ಕೇಂದ್ರದಲ್ಲಿ ಭೂಗೋಳ ಸ್ಥಿರವಾಗಿರುವಂತೆಯೂ, ಆಕಾಶಕಾಯಗಳು ಖಗೋಳದ ಒಳಮೈಯಲ್ಲಿ ಕ್ರಮವಾಗಿ ಸಂಚರಿಸುತ್ತಿರುವಂತೆಯೂ ಪರಿಗಣಿಸುತ್ತೇವೆ. ಭೂಗೋಳದ ಮೇಲೆಯೂ ರೇಖೆಗಳನ್ನು ರಚಿಸಬಹುದು. ಭೂಗೋಳದ ಯಾವುದಾದರೊಂದು ನಿಗದಿಯಾದ ಮಧ್ಯಾಹ್ನರೇಖೆಗೆ ಅನುಸಾರವಾದ ಖಗೋಳರೇಖೆಯನ್ನು ಆಧಾರವಾಗಿಟ್ಟುಕೊಂಡು ಆ ರೇಖೆಗೂ ಮಿಕ್ಕ ಎಲ್ಲ ಆಕಾಶಕಾಯಗಳ ಮಧ್ಯಾಹ್ನರೇಖೆಗಳಿಗೂ ಇರುವ ಕಾಲಪ್ರಮಾಣದ ಅಂತರಗಳ ಪಟ್ಟಿಯೇ ಆಲ್ಮನಾಕ್ (ಪಂಚಾಂಗ). ಭೂಗೋಳದ ಒಂದು ಸ್ಥಾನದ ಮೇಲೆ ಪ್ರತಿಷ್ಠಿತವಾಗಿರುವ ಥಿಯೊಡೊಲೈಟಿನ ದೂರದರ್ಶಕ ಕೊಳವೆಯ ಅಕ್ಷವನ್ನು ಆ ಸ್ಥಳದ ಮಧ್ಯಾಹ್ನರೇಖೆಗೆ ಅನುಸಾರವಾಗಿಟ್ಟುಕೊಂಡು ಕೊಳವೆಯ ಮೂಲಕ ವೀಕ್ಷಿಸಿ ಯಾವುದಾದರೊಂದು ಆಕಾಶಕಾಯ ಆ ಸ್ಥಳದ ರೇಖೆಯನ್ನು ದಾಟುವ ಕಾಲವನ್ನು ಖಚಿತವಾಗಿ ಗೊತ್ತುಮಾಡಬಹುದು. ಅದೇ ಕಾಯ ಮೇಲೆ ಹೇಳಿದ ಆಧಾರ ಮಧ್ಯಾಹ್ನರೇಖೆಯನ್ನು ಎಷ್ಟು ಕಾಲಪ್ರಮಾಣದಲ್ಲಿ ದಾಟುತ್ತದೆ ಅಥವಾ ದಾಟಿದೆ ಎಂಬ ಅಂಶವನ್ನು ಆಲ್ಮನಾಕ್‌ನಿಂದ ತಿಳಿದುಕೊಂಡರೆ ಈ ಎರಡು ಘಟನೆಗಳ ಕಾಲಾಂತರವನ್ನು ನಿರ್ಧರಿಸಬಹುದು. ಇದನ್ನು ಕೋಣಾಂತರಕ್ಕೆ ರೂಪಾಂತರಿಸಿ ಆ ಸ್ಥಾನದ ಮಧ್ಯಾಹ್ನರೇಖೆಯನ್ನು ಗೊತ್ತುಮಾಡಬಹುದು.

ಫ಼ರ್ಮಿ ಗಾಮಾ-ಕಿರಣ ಬಾಹ್ಯಾಕಾಶ ದೂರದರ್ಶಕದಿಂದ ಪತ್ತೆಯಾದ ಗಾಮಾ-ಕಿರಣ ಪಲ್ಸಾರ್‌ಗಳು

ವಿಭಿನ್ನ ಸರ್ವೇಕ್ಷಣಗಳಿಂದ ತೆಗೆದ ಒಂದೇ ಕಾಯದ ಚಿತ್ರಗಳನ್ನು ಹೋಲಿಸಿ ಚಂಚಲ ನಕ್ಷತ್ರಗಳಂತಹ ಅಸ್ಥಿರ ಖಗೋಳ ಘಟನೆಗಳನ್ನು ಪತ್ತೆಹಚ್ಚಬಹುದು.[]

ಉಲ್ಲೇಖಗಳು

ಬದಲಾಯಿಸಿ
  1. Gay, Dr. Pamela; Cain, Fraser (26 May 2008). "Episode #90: The Scientific Method". Astronomy Cast (Podcast). Retrieved 16 Dec 2009.