ಕ್ರಿಕೆಟ್‌‌ ಎಂಬ ಕ್ರೀಡೆಯಲ್ಲಿ ಕ್ಷೇತ್ರರಕ್ಷಣೆ ಎಂಬುದು ಬ್ಯಾಟ್ಸ್‌‌ಮನ್‌‌ ಗಳಿಸುವ ಓಟಗಳ ಸಂಖ್ಯೆಯನ್ನು ನಿಯಂತ್ರಿಸುವ ಅಥವಾ ಗಾಳಿಯಲ್ಲಿ ಹಾರುತ್ತಿರುವ ಚೆಂಡನ್ನು ಕ್ಯಾಚ್‌ ಹಿಡಿದು ಬ್ಯಾಟ್ಸ್‌‌ಮನ್‌‌ನನ್ನು ಔಟ್‌ ಮಾಡುವ ಇಲ್ಲವೇ ಬ್ಯಾಟ್ಸ್‌‌ಮನ್‌‌ನನ್ನು ರನ್‌ಔಟ್‌ ಮಾಡುವ ರೀತಿಯಲ್ಲಿ ಬ್ಯಾಟ್ಸ್‌‌ಮನ್‌‌ ಹೊಡೆದ ನಂತರ ಕ್ಷೇತ್ರರಕ್ಷಣೆಗಾರರು ಚೆಂಡನ್ನು ಹಿಡಿದುಕೊಳ್ಳುವ ಕ್ರಿಯೆಯಾಗಿರುತ್ತದೆ. ಓರ್ವ ಕ್ಷೇತ್ರರಕ್ಷಣೆಗಾರ ಅಥವಾ ಕ್ಷೇತ್ರಪಾಲಕ ನು ತನ್ನ ದೇಹದ ಯಾವ ಭಾಗದಿಂದಾದರೂ ಚೆಂಡನ್ನು ತಡೆಯಬಹುದಾಗಿರುತ್ತದೆ. ಆದಾಗ್ಯೂ, ಚೆಂಡನ್ನು ಎಸೆದಾದ ನಂತರ ಆತ ಉದ್ದೇಶಪೂರ್ವಕವಾಗಿ ಇತರೆ ರೀತಿಯಲ್ಲಿ (e.g. ತನ್ನ ಟೊಪ್ಪಿಗೆಯನ್ನು ಬಳಸುವ ಮೂಲಕ) ಅದನ್ನು ತಡೆದರೆ, ಆ ಎಸೆತವನ್ನು ವ್ಯರ್ಥ ಎಸೆತವೆಂದು ಘೋಷಿಸಿ ಚೆಂಡು ಅದಕ್ಕೆ ಮುಂಚೆ ಚೆಂಡು/ಎಸೆತವನ್ನು ತಪ್ಪಿಸುವ ಅಥವಾ ಬಿಡುವ ಪ್ರಯತ್ನವನ್ನು ಮಾಡದ ಬ್ಯಾಟ್ಸ್‌‌ಮನ್‌‌ನನ್ನು ತಗಲಿ ಬಂದಿದ್ದ ಸಂದರ್ಭವನ್ನು ಹೊರತುಪಡಿಸಿದರೆ ತಂಡಕ್ಕೆ ದಂಡದ ರೂಪದಲ್ಲಿ ಪ್ರತಿಸ್ಪರ್ಧಿ ಬ್ಯಾಟಿಂಗ್‌ ವಿಭಾಗಕ್ಕೆ ೫ ದಂಡದ ಓಟಗಳನ್ನು ನೀಡಲಾಗುತ್ತದೆ. ಕ್ಷೇತ್ರರಕ್ಷಣೆಗಾರರಿಗೆ ಸಂಬಂಧಿಸಿದ ಬಹುತೇಕ ನಿಯಮಗಳನ್ನು ಕ್ರಿಕೆಟ್‌‌ ನ ನಿಯಮಗಳ ಪಟ್ಟಿಯಲ್ಲಿನ ನಿಯಮ ೪೧ರಲ್ಲಿ ಪಟ್ಟಿ ಮಾಡಲಾಗಿದೆ.

ಓರ್ವ ವಿಕೆಟ್‌‌ -ಕೀಪರ್‌‌ (ಬಾಗುತ್ತಿರುವವರು) ಹಾಗೂ ಮೂವರು ಸ್ಲಿಪ್‌ ಸ್ಥಾನಿಕ ಆಟಗಾರರು ಮುಂದಿನ ಎಸೆತಕ್ಕಾಗಿ ಕಾಯುತ್ತಿರುವುದು ಹೊಡೆತದಿಂದ ಔಟ್‌ ಆದ ಬ್ಯಾಟ್ಸ್‌‌ಮನ್‌‌ - ಓರ್ವ ಎಡಗೈ ಆಟಗಾರ

ಟೆಸ್ಟ್‌‌ ಕ್ರಿಕೆಟ್‌‌ನ ಆರಂಭದ ದಿನಗಳಲ್ಲಿ , ಕ್ಷೇತ್ರರಕ್ಷಣೆಯು ಆದ್ಯತೆಯನ್ನು ಹೊಂದಿರುತ್ತಿರಲಿಲ್ಲ ಹಾಗೂ ಹಲವು ಆಟಗಾರರು ಕ್ಷೇತ್ರರಕ್ಷಣೆಯ ವಿಚಾರಕ್ಕೆ ಬಂದಾಗ ಉದಾಸೀನತೆಯನ್ನು ತೋರುತ್ತಿದ್ದರು.[ಸಾಕ್ಷ್ಯಾಧಾರ ಬೇಕಾಗಿದೆ] ಏಕದಿನ ಅಂತರರಾಷ್ಟ್ರೀಯ ಪಂದ್ಯಾವಳಿಗಳ ಉದಯವಾಗುತ್ತಿದ್ದಂತೆ, ಓಟಗಳನ್ನು ಪಡೆಯದಂತೆ ತಡೆಯುವುದು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದ್ದ ಹಾಗೆ ಕ್ಷೇತ್ರರಕ್ಷಣೆಯು ಹೆಚ್ಚು ಹೆಚ್ಚು ವೃತ್ತಿಪರವಾಗತೊಡಗಿತು. ಒಂದು ಉತ್ತಮ ಕ್ಷೇತ್ರರಕ್ಷಣಾ ವಿಭಾಗವು ಒಂದು ODI ಇನ್ನಿಂಗ್ಸ್‌‌ನ ಅವಧಿಯಲ್ಲಿ ಅನೇಕವೇಳೆ ೩೦+ ಓಟಗಳನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿರುತ್ತದೆ.[ಸಾಕ್ಷ್ಯಾಧಾರ ಬೇಕಾಗಿದೆ]

ಕ್ಷೇತ್ರರಕ್ಷಣೆಯ ಸ್ಥಾನಗಳ ಹೆಸರುಗಳು ಹಾಗೂ ಸ್ಥಾನಗಳು

ಬದಲಾಯಿಸಿ
 
ಕ್ಷೇತ್ರರಕ್ಷಣೆ ಸ್ಥಾನಗಳು

ತಂಡವೊಂದರಲ್ಲಿ ಕೇವಲ ೧೧ ಆಟಗಾರರು ಮಾತ್ರ ಇರುವುದರಿಂದ, ಅವರಲ್ಲಿ ಓರ್ವ ಬೌಲರ್‌/ಚೆಂಡೆಸೆತಗಾರ ಹಾಗೂ ಸಾಧಾರಣವಾಗಿ ಮತ್ತೋರ್ವ ವಿಕೆಟ್‌‌ -ಕೀಪರ್‌‌ನಾಗಿದ್ದು, ಯಾವುದೇ ಸಮಯದಲ್ಲಿ ಬಹಳವೆಂದರೆ ಒಂಬತ್ತು ಇತರೆ ಕ್ಷೇತ್ರರಕ್ಷಣೆಯ ಸ್ಥಾನಗಳನ್ನು ಬಳಸಬಹುದಾಗಿರುತ್ತದೆ. ಯಾವ ಯಾವ ಸ್ಥಾನಗಳಿಗೆ ಆಟಗಾರರನ್ನು ಕಳಿಸಲಾಗುತ್ತದೆ ಹಾಗೂ ಯಾವುದನ್ನು ಖಾಲಿ ಬಿಡಲಾಗುತ್ತದೆ ಎಂಬುದು ಕ್ಷೇತ್ರರಕ್ಷಣೆ ತಂಡದ ನಾಯಕನು ಯುಕ್ತಿಪೂರ್ವಕವಾಗಿ ತೆಗೆದುಕೊಳ್ಳಬೇಕಾದ ನಿರ್ಧಾರವಾಗಿರುತ್ತದೆ. ಬೌಲರ್‌/ಚೆಂಡೆಸೆತಗಾರನೋರ್ವನು ಬ್ಯಾಟ್ಸ್‌‌ಮನ್‌‌ಗೆ ಚೆಂಡನ್ನು ಎಸೆಯುತ್ತಿರುವ ಸಮಯದಲ್ಲಿ ಹೊರತುಪಡಿಸಿ ಇತರ ಯಾವುದೇ ಸಮಯದಲ್ಲಿ ನಾಯಕನು (ಸಾಧಾರಣವಾಗಿ ಬೌಲರ್‌/ಚೆಂಡೆಸೆತಗಾರ ಹಾಗೂ ಕೆಲವೊಮ್ಮೆ ತಂಡದ ಇತರೆ ಸದಸ್ಯರೊಡನೆ ಸಮಾಲೋಚಿಸಿ) ಆಟಗಾರರನ್ನು ಬೇರೆ ಬೇರೆ ಕ್ಷೇತ್ರರಕ್ಷಣೆ ಸ್ಥಾನಗಳ ನಡುವೆ ಅದಲು ಬದಲು ಮಾಡಬಹುದಾಗಿರುತ್ತದೆ.

ನಿರ್ದಿಷ್ಟ ಹೆಸರನ್ನು ನೀಡಲಾಗಿರುವ ಹಲವು ಮೂಲಭೂತ ಕ್ಷೇತ್ರರಕ್ಷಣೆ ಸ್ಥಾನಗಳಿದ್ದು, ಅವುಗಳಲ್ಲಿ ಕೆಲವು ತೀರ ಸಾಮಾನ್ಯ ಬಳಕೆಯಲ್ಲಿದ್ದು ಇನ್ನೂ ಕೆಲವನ್ನು ಅಗತ್ಯವಿದ್ದ ಹಾಗೆ ಬಳಸಲಾಗುತ್ತದೆ. ಆದಾಗ್ಯೂ , ಕ್ಷೇತ್ರರಕ್ಷಣಾ ಸ್ಥಾನಗಳು ಸ್ಥಿರ ನೆಲೆಯನ್ನು ಹೊಂದಿರುವುದಿಲ್ಲ ಹಾಗೂ ಕ್ಷೇತ್ರರಕ್ಷಣೆಗಾರರನ್ನು ಮೂಲಭೂತ ಸ್ಥಾನಗಳಿಂದ ಭಿನ್ನವಾದ ಸ್ಥಾನಗಳಲ್ಲಿ ನಿಲ್ಲಿಸಬಹುದಾಗಿರುತ್ತದೆ. ಬಹುತೇಕ ಸ್ಥಾನಗಳಿಗೆ ಹೆಸರನ್ನು ಇಡಲಾಗಿದ್ದು ಸ್ಥೂಲವಾಗಿ ಧೃವೀಯ ನಿರ್ದೇಶನಾಂಕ ವ್ಯವಸ್ಥೆಯೊಂದರ ಪ್ರಕಾರ - ಒಂದು ಪದವು (ಲೆಗ್‌‌, ಕವರ್‌, ಮಿಡ್‌‌-ವಿಕೆಟ್‌‌ ) ಬ್ಯಾಟ್ಸ್‌‌ಮನ್‌‌ಗೆ ಸಂಬಂಧಪಟ್ಟ ಹಾಗೆ ಕೋನವನ್ನು ಸೂಚಿಸುತ್ತದೆ ಹಾಗೂ ಐಚ್ಛಿಕವಾದ ಮತ್ತೊಂದು ಪದವು ಬ್ಯಾಟ್ಸ್‌‌ಮನ್‌‌ನಿಂದ ಇರುವ ದೂರವನ್ನು ಸೂಚಿಸುವ ಗುಣಸೂಚಕವಾಗಿರುತ್ತದೆ (ತೀರಸಮೀಪ/ಸಿಲ್ಲಿ, ಲಘು/ಶಾರ್ಟ್‌, ಡೀಪ್‌ ಅಥವಾ ಲಾಂಗ್‌‌). "ಬ್ಯಾಕ್‌ವರ್ಡ್‌/ಹಿಂಭಾಗದ ", "ಫಾರ್ವರ್ಡ್‌/ಮುಂಭಾಗದ " ಅಥವಾ "ಸ್ಕ್ವೇರ್‌‌ "ನಂತಹಾ ಪದಗಳು ತಮ್ಮ ನಂತರ ಕೋನವನ್ನು ಕೂಡಾ ಸೂಚಿಸಬಹುದಾಗಿರುತ್ತದೆ.

ಈ ಚಿತ್ರವು ಹೆಸರನ್ನು ಹೊಂದಿರುವ ಬಹುತೇಕ ಕ್ಷೇತ್ರರಕ್ಷಣಾ ಸ್ಥಾನಗಳ ನೆಲೆಯನ್ನು ತೋರಿಸುತ್ತದೆ. ಈ ಚಿತ್ರದಲ್ಲಿ ಬ್ಯಾಟ್ಸ್‌‌ಮನ್‌‌ನನ್ನು ಬಲಗೈ ಆಟಗಾರನೆಂದು ಭಾವಿಸಲಾಗಿದೆ. ಬಲಗೈ ಬ್ಯಾಟ್ಸ್‌‌ಮನ್‌‌ನ ಎಡಕ್ಕಿರುವ ಪ್ರದೇಶವನ್ನು (ಬ್ಯಾಟ್ಸ್‌‌ಮನ್‌‌ನ ದೃಷ್ಟಿಕೋನದಿಂದ) ಲೆಗ್‌ ಸೈಡ್‌ ಅಥವಾ ಆನ್‌ಸೈಡ್‌ ಎಂದು ಕರೆಯಲಾದರೆ, ಬಲಕ್ಕಿರುವುದು ಆಫ್‌ ಸೈಡ್‌ ಆಗಿರುತ್ತದೆ. ಬ್ಯಾಟ್ಸ್‌‌ಮನ್‌‌ನು ಎಡಗೈ ಆಟಗಾರನಾಗಿದ್ದರೆ, ಲೆಗ್‌ ಹಾಗೂ ಆಫ್‌ ಸೈಡ್‌ಗಳು ವಿರುದ್ಧ ದಿಕ್ಕಿನವಾಗಿರುತ್ತವೆ ಹಾಗೂ ಕ್ಷೇತ್ರರಕ್ಷಣೆ ಸ್ಥಾನಗಳು ತೋರಿಸಿದ ಚಿತ್ರದ ಪ್ರತಿಬಿಂಬದ ರೀತಿಯಿರುತ್ತದೆ.

ಕ್ಯಾಚ್‌ ಹಿಡಿಯಬಹುದಾದ ಸ್ಥಾನಗಳು

ಬದಲಾಯಿಸಿ

ಕೆಲವು ಕ್ಷೇತ್ರರಕ್ಷಣೆ ಸ್ಥಾನಗಳನ್ನು ಆಕ್ರಮಣಕಾರಿಯಾಗಿ ಬಳಸಲಾಗುತ್ತದೆ. ಎಂದರೆ ಆಟಗಾರರನ್ನು ಆಯಾ ಸ್ಥಾನಗಳಲ್ಲಿ ನಿಲ್ಲಿಸುವುದರ ಮುಖ್ಯ ಉದ್ದೇಶ ಓಟಗಳನ್ನು ಗಳಿಸುವುದನ್ನು ಅಥವಾ ಅದರ ವೇಗವನ್ನು ತಡೆಯುವುದರ ಬದಲಿಗೆ ಕ್ಯಾಚ್‌‌ ಹಿಡಿಯುವುದರ ಮೂಲಕ ಬ್ಯಾಟ್ಸ್‌‌ಮನ್‌‌ನನ್ನು ಔಟ್‌ ಮಾಡುವುದಾಗಿರುತ್ತದೆ. ಇಂತಹಾ ಸ್ಥಾನಗಳಲ್ಲಿ ಸ್ಲಿಪ್‌ ಸ್ಥಾನ (ಅನೇಕ ವೇಳೆ ಪರಸ್ಪರ ಹತ್ತಿರದ ಹಲವು ವಿಭಿನ್ನ ಸ್ಲಿಪ್‌ ಸ್ಥಾನಗಳಿರುತ್ತವೆ, ಅವುಗಳನ್ನು ಫರ್ಸ್ಟ್/ಪ್ರಥಮ ಸ್ಲಿಪ್‌ ಸ್ಥಾನ , ದ್ವಿತೀಯ/ಸೆಕೆಂಡ್‌ ಸ್ಲಿಪ್‌ ಸ್ಥಾನ , ಥರ್ಡ್‌/ತೃತೀಯ ಸ್ಲಿಪ್‌ ಸ್ಥಾನ , etc, ವಿಕೆಟ್‌‌ -ಕೀಪರ್‌‌ನಿಂದ ದೂರಕ್ಕನುಗುಣವಾದ ಸಂಖ್ಯೆಯ ಹೆಸರಿನಿಂದ ಕರೆಯಲಾಗುತ್ತದೆ) ಅವುಗಳನ್ನು ಬ್ಯಾಟನ್ನು ತಗಲಿ ಹೊರಬಂದ ಕ್ಷಣವೇ ಚೆಂಡುಗಳನ್ನು ಹಿಡಿಯುವ ಉದ್ದೇಶದಿಂದ ರೂಪಿಸಿರಲಾಗುತ್ತದೆ ; ಫ್ಲೈ ಸ್ಲಿಪ್‌ ಸ್ಥಾನ ; ಗಲ್ಲಿ ; ಲೆಗ್‌ ಸ್ಲಿಪ್‌ ಸ್ಥಾನ ; ಲೆಗ್‌ ಗಲ್ಲಿ ; ಶಾರ್ಟ್‌ ಮತ್ತು ತೀರಸಮೀಪ/ಸಿಲ್ಲಿ ಸ್ಥಾನಗಳು ಸೇರಿವೆ. ಬ್ಯಾಟ್‌‌ ಪ್ಯಾಡ್ ಎಂಬುದು ನಿರ್ದಿಷ್ಟವಾಗಿ ಅನಿರೀಕ್ಷಿತವಾಗಿ ಬ್ಯಾಟ್‌ ಹಾಗೂ ಲೆಗ್‌ ಪ್ಯಾಡ್‌ಗಳಿಗೆ ಹೊಡೆದು ಅದರ ಪುಟಿತದಿಂದ ಲೆಗ್‌ ಸೈಡ್‌ಗೆ ಒಂದು ಅಥವಾ ಎರಡು ಮೀಟರ್‌ಗಳಷ್ಟು ಅಂತರದಲ್ಲಿಯೇ ಸಿಗುವ ಚೆಂಡುಗಳನ್ನು ಕ್ಯಾಚ್‌ ಹಿಡಿಯಲೆಂದೇ ಯೋಜಿಸಲಾಗಿರುವುದಾಗಿದೆ

ಇತರೆ ಸ್ಥಾನಗಳು

ಬದಲಾಯಿಸಿ

ಇತರೆ ಸ್ಥಾನಗಳಲ್ಲಿ ಕೆಳಕಂಡವು ಗಮನಾರ್ಹವಾಗಿವೆ :

  • ವಿಕೆಟ್-ಕೀಪರ್
  • ಲಾಂಗ್‌ ಸ್ಟಾಪ್‌, ಬೌಂಡರಿಯ ಕಡೆಗೆ ವಿಕೆಟ್‌‌ -ಕೀಪರ್‌‌ಗಿಂತ ಹಿಂದೆ ನಿಲ್ಲುವ ವ್ಯಕ್ತಿಯ ಸ್ಥಾನ (ಸಾಧಾರಣವಾಗಿ ಇದನ್ನು ವಿಕೆಟ್‌‌ -ಕೀಪರ್‌‌ ಅಸಮರ್ಥನೆಂಬ ಭಾವನೆಯಿದ್ದರೆ ಮಾಡುವುದಾಗಿದ್ದು ಬಹುತೇಕ ವೃತ್ತಿಪರ ಕ್ರಿಕೆಟ್‌‌ನಲ್ಲಿ ಇದನ್ನು ಬಹುತೇಕ ಎಲ್ಲಿಯೂ ಕಾಣಲಾಗಿಲ್ಲ). ಈ ಸ್ಥಾನವನ್ನು ಕೆಲವೊಮ್ಮೆ ಸೌಮ್ಯೋಕ್ತಿಯಾಗಿ ವೆರಿ ಫೈನ್‌ ಲೆಗ್‌‌ ಎಂದೂ ಕರೆಯಲಾಗುತ್ತದೆ.[]
  • ಡೀಪ್‌‌ ಕವರ್‌‌‌ , ಡೀಪ್‌ ಎಕ್ಸ್‌ಟ್ರಾ ಕವರ್‌‌ ಅಥವಾ ಡೀಪ್‌ ಮಿಡ್‌‌ವಿಕೆಟ್‌ ಗಳಿಗೆ ಪರ್ಯಾಯವಾದ ಸ್ವೀಪರ್‌ ಸ್ಥಾನವು ‌ (ಎಂದರೆ, ಆಫ್‌ಸೈಡ್‌ನಲ್ಲಿ ಬೌಂಡರಿಗೆ ಸಮೀಪವಾಗಿ ಅಥವಾ ಆನ್‌ ಸೈಡ್‌ನಲ್ಲಿ), ಸಾಧಾರಣವಾಗಿ ರಕ್ಷಣಾತ್ಮಕವಾದ ಸ್ಥಾನವಾಗಿದ್ದು ಇದರ ಮೂಲ ಉದ್ದೇಶ ಫೋರ್‌ಗಳನ್ನು ಗಳಿಸದಂತೆ ತಡೆಯುವುದಾಗಿರುತ್ತದೆ.
  • ಕೌ ಕಾರ್ನರ್‌‌ ಇದು ಡೀಪ್‌ ಮಿಡ್‌‌ವಿಕೆಟ್‌ ‌ ಮತ್ತು ಲಾಂಗ್‌ ಆನ್‌ ಗಳ ನಡುವಿನ ಬೌಂಡರಿಯಲ್ಲಿನ ಸ್ಥಾನಕ್ಕೆ ನೀಡಲಾಗಿರುವ ಒಂದು ಅನೌಪಚಾರಿಕ ತಮಾಷೆಯ ಹೆಸರು.
  • ೪೫ ಆನ್‌ ದ ೧. ಬಿಡಿಓಟಗಳನ್ನು ತಡೆಯುವ ಉದ್ದೇಶದ ಸ್ಕ್ವೇರ್‌‌ನ ಹಿಂದೆ ೪೫° ಕೋನದಲ್ಲಿ ಲೆಗ್‌ ಸೈಡ್‌ನಲ್ಲಿನ ಸ್ಥಾನವಾಗಿರುತ್ತದೆ. ಬ್ಯಾಕ್‌ವರ್ಡ್‌/ಹಿಂಭಾಗದ ಶಾರ್ಟ್‌ ಲೆಗ್‌ಗೆ ಒಂದು ಪರ್ಯಾಯ ವಿವರಣೆ ಇದಾಗಿದೆ.

ಸಾಧಾರಣವಾಗಿ ಸಿಲ್ಲಿ ಮಿಡ್‌ಆನ್‌ ಅಥವಾ ಸಿಲ್ಲಿ ಮಿಡ್‌ ಆಫ್‌ ನ ಬಳಿಯೇ ಆದರೆ ಪಿಚ್‌ಗೆ ಸಾಕಷ್ಟು ಸನಿಹದಲ್ಲಿಯೇ ಕ್ಷೇತ್ರರಕ್ಷಣೆಯು ಕೊನೆಗೊಳ್ಳುವಂತೆ ಚೆಂಡನ್ನು ಎಸೆದ ನಂತರ ಬೌಲರ್‌/ಚೆಂಡೆಸೆತಗಾರನು ಕೂಡಾ ಮೈದಾನದಲ್ಲಿ ಓಡುವುದನ್ನು ತಪ್ಪಿಸಬೇಕು.

ಗುಣವಾಚಕ ಪಾರಿಭಾಷಿಕ ಪದಗಳು

ಬದಲಾಯಿಸಿ
 
ಇಂಗ್ಲೆಂಡ್‌ ಕ್ರಿಕೆಟ್‌‌ ತಂಡದ ಅಲಸ್ಟೇರ್‌ ಕುಕ್‌ರು ಸಿಲ್ಲಿ ಕ್ಯಾಚ್‌ ಹಿಡಿಯುವ ಸ್ಥಾನದಲ್ಲಿನ ಕ್ಷೇತ್ರಪಾಲಕರಿಗೆ ಸಾಮಾನ್ಯವಾದ ಕ್ಯಾಚ್‌ ಹಿಡಿಯುವ ನಿಲುವಿನಲ್ಲಿ ನಿಂತಿರುವುದು
ಡೀಪ್, ಲಾಂಗ್
ಬ್ಯಾಟ್ಸ್‌‌ಮನ್‌‌ನಿಂದ ಇನ್ನಷ್ಟು ದೂರವಿರುವಂತಹದು.
ಷಾರ್ಟ್‌
ಬ್ಯಾಟ್ಸ್‌‌ಮನ್‌‌ಗೆ ಸನಿಹವಿರುವುದು.
ಸಿಲ್ಲಿ
ಬ್ಯಾಟ್ಸ್‌‌ಮನ್‌‌ಗೆ ತೀರಸಮೀಪವಿರುವುದು.
ಸ್ಕ್ವೇರ್‌‌
ಪಾಪ್ಪಿಂಗ್‌ ಕ್ರೀಸ್‌‌ನ ಕಾಲ್ಪನಿಕ ವಿಸ್ತರಣೆಯಲ್ಲಿ ಯಾವುದೋ ಒಂದು ಸ್ಥಾನ.
ಫೈನ್‌
ಸ್ಕ್ವೇರ್‌‌ನ ಹಿಂದೆ ಇರುವ ಕ್ಷೇತ್ರರಕ್ಷಣೆಗಾರನನ್ನು ವರ್ಣಿಸುವಾಗ ಸ್ಟಂಪುಗಳನ್ನು ವಿಭಾಗಿಸುವ ಪಿಚ್‌‌ನ ಮಧ್ಯಭಾಗದಲ್ಲಿರುವ ಕಾಲ್ಪನಿಕ ರೇಖೆಯೊಂದರೆ ವಿಸ್ತರಣೆಗೆ ಸನಿಹವಾದ ಒಂದು ಸ್ಥಾನ.
ನೇರ/ಸ್ಟ್ರೈಟ್‌
ಸ್ಕ್ವೇರ್‌‌ನ ಮುಂಭಾಗದಲ್ಲಿರುವ ಕ್ಷೇತ್ರರಕ್ಷಣೆಗಾರನನ್ನು ವರ್ಣಿಸುವಾಗ ಸ್ಟಂಪುಗಳನ್ನು ವಿಭಾಗಿಸುವ ಪಿಚ್‌‌ನ ಮಧ್ಯಭಾಗದಲ್ಲಿರುವ ಕಾಲ್ಪನಿಕ ರೇಖೆಯೊಂದರೆ ವಿಸ್ತರಣೆಗೆ ಸನಿಹವಾದ ಒಂದು ಸ್ಥಾನ.
ವೈಡ್‌‌
ಸ್ಟಂಪುಗಳನ್ನು ವಿಭಾಗಿಸುವ ಪಿಚ್‌‌ನ ಮಧ್ಯಭಾಗದಲ್ಲಿರುವ ಕಾಲ್ಪನಿಕ ರೇಖೆಯೊಂದರೆ ವಿಸ್ತರಣೆಯಲ್ಲಿ ಮತ್ತಷ್ಟು ದೂರದ ಸ್ಥಾನ.
ಮುಂಭಾಗ/ಫಾರ್ವರ್ಡ್‌/ಮುಂದುವರಿಕೆ
ಸ್ಕ್ವೇರ್‌‌ ನ ಮುಂದೆ  ; ಬೌಲರ್‌/ಚೆಂಡೆಸೆತಗಾರನು ಇರುವ ಪಿಚ್‌ನ ಭಾಗದ ಮತ್ತಷ್ಟು ಮುಂದೆ ಹಾಗೂ ಸಕ್ರಿಯ ಬ್ಯಾಟ್ಸ್‌‌ಮನ್‌‌ನು ಇರುವ ಪಿಚ್‌ನ ಭಾಗದ ಮತ್ತಷ್ಟು ಮುಂದಿನ ಸ್ಥಾನ.
ಬ್ಯಾಕ್‌ವರ್ಡ್‌/ಹಿಂಭಾಗದ
ಸ್ಕ್ವೇರ್‌‌ ಪ್ರದೇಶದ ಹಿಂದೆ ; ಸಕ್ರಿಯ ಬ್ಯಾಟ್ಸ್‌‌ಮನ್‌‌ನು ಇರುವ ಪಿಚ್‌ನ ಭಾಗದೆಡೆ ಮತ್ತಷ್ಟು ಮುಂದಿನ ಸ್ಥಾನ ಹಾಗೂ ಬೌಲರ್‌/ಚೆಂಡೆಸೆತಗಾರಗಾರನು ಇರುವ ಪಿಚ್‌ನ ಭಾಗದ ಮತ್ತಷ್ಟು ಆಚೆಯ ಭಾಗ.

ಇಷ್ಟು ಮಾತ್ರವಲ್ಲದೇ ವೀಕ್ಷಣ ವಿವರಣಕಾರರು ಅಥವಾ ವೀಕ್ಷಕರು ಮೈದಾನದಲ್ಲಿನ ಸ್ಥಾನ ನಿಯೋಜನೆಯ ಬಗ್ಗೆ ವಿವರಗಳನ್ನು ಚರ್ಚಿಸುವಾಗ "ಗಲ್ಲಿಯು ಸಾಮಾನ್ಯಕ್ಕಿಂತ ಹೆಚ್ಚಿಗೆ ಅಗಲವಾಗಿದೆ " ಅಥವಾ "ಮಿಡ್‌ ಆಫ್‌ ಸಾಕಷ್ಟು ಒಳಭಾಗಕ್ಕಿರುವಂತಿದೆ, ಆತನು ಇನ್ನಷ್ಟು ಹತ್ತಿರ ಬರಬೇಕು " ಎಂದು ಹೇಳುವಂತೆ ವಿವರಣಾತ್ಮಕ ಪದಪುಂಜಗಳನ್ನು ಆಗ್ಗಾಗ್ಗೆ ಬಳಸುತ್ತಿರುತ್ತಾರೆ.

ಕ್ಷೇತ್ರ ರಕ್ಷಣೆಯ ಮೇಲೆ ವಿಧಿಸಲಾಗುವ ನಿರ್ಬಂಧಗಳು

ಬದಲಾಯಿಸಿ

ಕೆಳಕಂಡ ನಿಯಮಗಳಿಗೆ ಬದ್ಧವಾಗಿದ್ದು ಕ್ಷೇತ್ರರಕ್ಷಣೆಗಾರರನ್ನು ಮೈದಾನದ ಯಾವ ಸ್ಥಳದಲ್ಲಿಯಾದರೂ ನಿಲ್ಲಿಸಬಹುದಾಗಿರುತ್ತದೆ. ಚೆಂಡನ್ನು ಎಸೆಯುವಂತಹಾ ಸಮಯದಲ್ಲಿ :

  • ಯಾವುದೇ ಕ್ಷೇತ್ರರಕ್ಷಣೆಗಾರನು ಪಿಚ್‌‌ನ ಮೇಲೆ ತನ್ನ ದೇಹದ ಯಾವುದೇ ಭಾಗವು ಬರುವಂತಿರಬಾರದು ಅಥವಾ ತಾನು ನಿಂತಿರಬಾರದು (ವಿಕೆಟ್‌‌ಗಳ ನಡುವಿನ ಆಡುವ ಪ್ರದೇಶದಲ್ಲಿ ಮಧ್ಯದಲ್ಲಿರುವ ಪಟ್ಟಿ). ಆತನ ದೇಹವು ಪಿಚ್‌‌ನ ಮೇಲೆ ನೆರಳನ್ನುಂಟು ಮಾಡುತ್ತಿದ್ದರೆ, ಆ ನೆರಳು ಬ್ಯಾಟ್ಸ್‌‌ಮನ್‌‌ (ಅಥವಾ ಆಡುವ ಅವಕಾಶವು) ಎಸೆತವನ್ನು ಆಡುವುದು ಮುಗಿಯುವವರೆಗೆ ಅಲುಗಕೂಡದು.
  • ಸ್ಕ್ವೇರ್‌‌ ಲೆಗ್‌ನ ಹಿಂಭಾಗದ ಮೈದಾನದ ಚತುರ್ಥ ಭಾಗದಲ್ಲಿ ಬಹುಶಃ ವಿಕೆಟ್‌‌ -ಕೀಪರ್‌‌ನನ್ನು ಹೊರತುಪಡಿಸಿ ಇತರೆ ಇಬ್ಬರಿಗಿಂತ ಹೆಚ್ಚಿನ ಸಂಖ್ಯೆಯ ಕ್ಷೇತ್ರರಕ್ಷಣೆಗಾರರು ಇರುವ ಹಾಗಿಲ್ಲ. ಈ ನಿಯಮವು ಅಸ್ತಿತ್ವದಲ್ಲಿರುವ ಒಂದು ಕಾರಣದ ವಿವರವನ್ನು ತಿಳಿದುಕೊಳ್ಳಲು ಬಾಡಿಲೈನ್‌ ಭಾಗವನ್ನು ನೋಡಿ.
  • ಕೆಲವು ಏಕ-ದಿನ ಪಂದ್ಯಗಳಲ್ಲಿ:
    • ಇನ್ನಿಂಗ್ಸ್‌‌ (ನೋಡಿ ಪವರ್‌ಪ್ಲೇ (ಕ್ರಿಕೆಟ್‌‌ )) ಒಂದರ ಗೊತ್ತುಪಡಿಸಿದ ಓವರ್‌ಗಳ ಅವಧಿಯಲ್ಲಿ, ೩೦ ಗಜಗಳ ತ್ರಿಜ್ಯದ ಪ್ರತಿ ವಿಕೆಟ್‌‌ ನ ಮಧ್ಯ ಸ್ಟಂಪ್‌ಅನ್ನು ಕೇಂದ್ರವಾಗಿಟ್ಟುಕೊಂಡಿರುವ ಅರ್ಧವೃತ್ತಗಳಾಗಿರುವುದನ್ನು ಪಿಚ್‌‌ಗೆ ಸಮಾಂತರವಾಗಿರುವ ನೇರ ರೇಖೆಯು ಪೂರ್ಣಗೊಳಿಸುವ ಮೂಲಕ ಮೂಡಿಸಿರುವ ಅಂಡಾಕಾರದ ರೇಖೆಯ ಹೊರಗೆ ಇಬ್ಬರಿಗಿಂತ ಹೆಚ್ಚಿನ ಕ್ಷೇತ್ರರಕ್ಷಣೆಗಾರರು ನಿಲ್ಲುವಂತಿಲ್ಲ. ಇದನ್ನು ಕ್ಷೇತ್ರರಕ್ಷಣೆ ವೃತ್ತವನ್ನಾಗಿ ಕರೆಯಲಾಗುತ್ತದೆ. ಇಷ್ಟು ಮಾತ್ರವಲ್ಲದೇ ಈ ಓವರ್‌ಗಳ ಅವಧಿಯಲ್ಲಿ ಇಬ್ಬರು ಕ್ಷೇತ್ರರಕ್ಷಣೆಗಾರರು (ವಿಕೆಟ್‌‌ -ಕೀಪರ್‌ರನ್ನು ಹೊರತುಪಡಿಸಿ‌ ) ನಿಗದಿಪಡಿಸಿದ "ಸನಿಹದ ಕ್ಯಾಚ್‌ ಹಿಡಿಯುವ" ಸ್ಥಾನಗಳಲ್ಲಿ ಇರಲೇಬೇಕು.
    • ಇನ್ನಿಂಗ್ಸ್‌‌ನ ಉಳಿದ ಭಾಗಗಳಲ್ಲಿ ಕ್ಷೇತ್ರರಕ್ಷಣಾ ವೃತ್ತದ ಹೊರಭಾಗದಲ್ಲಿ ಐವರಿಗಿಂತ ಹೆಚ್ಚಿನ ಸಂಖ್ಯೆಯ ಕ್ಷೇತ್ರರಕ್ಷಣೆಗಾರರು ಇರುವ ಹಾಗಿಲ್ಲ.
    • ಇಷ್ಟು ಮಾತ್ರವಲ್ಲದೇ ನೇರವಾಗಿ ವಿಕೆಟ್‌‌ ಕೀಪರ್‌‌ನ ಹಿಂದೆ ಯಾವುದೇ ಕ್ಷೇತ್ರರಕ್ಷಣೆಗಾರ ನಿಲ್ಲುವಂತಿಲ್ಲ. ವಿಕೆಟ್‌‌ ಕೀಪರ್‌‌ನ ಹಿಂದೆ ಅಥವಾ ಪಿಚ್‌‌ಅನ್ನು ಹೊರತುಪಡಿಸಿ ಕ್ಷೇತ್ರರಕ್ಷಣೆಗಾರರನ್ನು ಇತರ ಯಾವುದೇ ಸ್ಥಳದಲ್ಲಿ ನಿಲ್ಲಿಸಬಹುದಾಗಿರುತ್ತದೆ.
ಏಕ-ದಿನ ಕ್ರಿಕೆಟ್‌‌ನಲ್ಲಿ ನಿರ್ಬಂಧಗಳನ್ನು ವಿಧಿಸಿರುವ ಪ್ರಮುಖ ಉದ್ದೇಶವು ಕ್ಷೇತ್ರರಕ್ಷಣೆ ತಂಡವು ಬ್ಯಾಟಿಂಗ್‌ ತಂಡವು ಓಟಗಳನ್ನು ಮಾಡಲು ಅವಕಾಶ ನೀಡದಿರುವ ಏಕಮೇವ ಉದ್ದೇಶದಿಂದ ವಿಪರೀತವಾಗಿ ರಕ್ಷಣಾತ್ಮಕ ಕ್ಷೇತ್ರರಕ್ಷಣಾ ವ್ಯವಸ್ಥೆಯನ್ನು ಮಾಡಿಕೊಳ್ಳುವುದನ್ನು ತಡೆಯುವುದಾಗಿದೆ ಹಾಗೆ ಮಾಡಲು ಅವಕಾಶ ನೀಡಿದರೆ ಹಲವರ ಪ್ರಕಾರ ಆಟವು ಬೇಸರ ತರಿಸುವಂತಿರುತ್ತದೆ.

ಇವುಗಳಲ್ಲಿ ಯಾವುದೇ ನಿಯಮವನ್ನು ಉಲ್ಲಂಘಿಸಿದರೆ, ಅಂಪೈರ್‌‌ ರವರು ಆಯಾ ಎಸೆತವನ್ನು ವ್ಯರ್ಥ ಎಸೆತವೆಂದು ಘೋಷಿಸುತ್ತಾರೆ. ಇಷ್ಟು ಮಾತ್ರವಲ್ಲದೇ ಚೆಂಡಿನ ಎಸೆತವಾದ ನಂತರ ಹಾಗೂ ಹೊಡೆತಗಾರ/ಸ್ಟ್ರೈಕರ್‌ಅನ್ನು ಚೆಂಡು ತಲುಪುವ ಮುನ್ನ ಓರ್ವ ಆಟಗಾರನು ಯಾವುದೇ ಗಮನಾರ್ಹವಾದ ಚಲನೆಯನ್ನು ಮಾಡುವಂತಿಲ್ಲ. ಅಂತಹದು ಸಂಭವಿಸಿದರೆ ಅಂಪೈರ್‌‌ ಆಯಾ ಎಸೆತವನ್ನು 'ವ್ಯರ್ಥ ಎಸೆತ'ವೆಂದು ಪರಿಗಣಿಸಿ ಹಾಗೆ ಘೋಷಿಸುತ್ತಾರೆ. ಸಮೀಪ ಕ್ಷೇತ್ರರಕ್ಷಣೆಗಾರರ ವಿಚಾರದಲ್ಲಿ ಹೊಡೆತಗಾರ/ಸ್ಟ್ರೈಕರ್‌ಗೆ ಸಂಬಂಧಿಸಿದಂತೆ ನಿಲುವಿನಲ್ಲಿನ ಅಥವಾ ಸ್ಥಾನದಲ್ಲಿನ ಅಲ್ಪಸ್ವಲ್ಪ ಹೊಂದಾಣಿಕೆಗಳನ್ನು ಬಿಟ್ಟು ಇತರೆ ಯಾವುದೇ ರೀತಿಯ ನಡೆಯು ಗಮನಾರ್ಹವಾದ ಚಲನೆಯೆನಿಸಿಕೊಳ್ಳುತ್ತದೆ. ಹೊರಮೈದಾನದಲ್ಲಿ ಕ್ಷೇತ್ರರಕ್ಷಣೆಗಾರರು ಹೊಡೆತಗಾರ/ಸ್ಟ್ರೈಕರ್‌ರ ಕಡೆಗೆ ಅಥವಾ ಹೊಡೆತಗಾರ/ಸ್ಟ್ರೈಕರ್‌ರ ವಿಕೆಟ್‌‌ನೆಡೆಗೆ ಚಲನೆಯನ್ನು ಮಾಡಬಹುದು ; ವಾಸ್ತವದಲ್ಲಿ ಅವರು ಸಾಧಾರಣವಾಗಿ ಹಾಗೆ ಮಾಡುತ್ತಾರೆ ಕೂಡಾ. ಆದಾಗ್ಯೂ ಆಯಾ ಗಡಿಯ ಹೊರಗಿನ ಅಲ್ಪಸ್ವಲ್ಪ ಚಲನೆಗಿಂತ ಹೆಚ್ಚಿನ ಅಥವಾ ಹೊಡೆತಗಾರ/ಸ್ಟ್ರೈಕರ್‌ನಿಂದ ಆಚೆಗೆ ಮಾಡುವ ನಡೆಗಳನ್ನು ಗಮನಾರ್ಹ ಚಲನೆಗಳೆಂದು ಕರೆಯಲಾಗುತ್ತದೆ.

ಕ್ಷೇತ್ರರಕ್ಷಣಾ ವ್ಯೂಹರಚನೆಯ ತಂತ್ರಗಾರಿಕೆಗಳು

ಬದಲಾಯಿಸಿ

ಕೇವಲ ಒಂಬತ್ತು ಮಂದಿ ಕ್ಷೇತ್ರರಕ್ಷಣೆಗಾರರೊಂದಿಗೆ (ಬೌಲರ್‌/ಚೆಂಡೆಸೆತಗಾರ ಮತ್ತು ವಿಕೆಟ್‌‌ -ಕೀಪರ್‌‌ರನ್ನು ಹೊರತುಪಡಿಸಿ) ಕ್ಷೇತ್ರರಕ್ಷಣೆ ತಂಡದ ನಾಯಕನು ಯಾವ ಯಾವ ಕ್ಷೇತ್ರರಕ್ಷಣಾ ಸ್ಥಾನಗಳಲ್ಲಿ ಅವರನ್ನು ನಿಲ್ಲಿಸಬೇಕು ಎಲ್ಲಿ ಖಾಲಿ ಬಿಡಬೇಕು ಎಂಬುದನ್ನು ನಿರ್ಧರಿಸಬೇಕಾಗಿರುತ್ತದೆ. ಕ್ಷೇತ್ರರಕ್ಷಣೆಗಾರರ ನಿಯೋಜನೆಯು ಕ್ಷೇತ್ರರಕ್ಷಣಾ ತಂಡದ ನಾಯಕನು ಪ್ರಧಾನವಾಗಿ ಕೈಗೊಳ್ಳಬೇಕಾದ ಮಹತ್ವದ ತಂತ್ರಗಾರಿಕೆಗಳಲ್ಲಿ ಒಂದಾಗಿದೆ.

ದಾಳಿ ಮಾಡುವಿಕೆ ಹಾಗೂ ರಕ್ಷಿಸಿಕೊಳ್ಳುವಿಕೆ

ಬದಲಾಯಿಸಿ
ಚಿತ್ರ:Tresco opps.JPG
ಟ್ವೆಂಟಿ20 ಪಂದ್ಯವೊಂದರಲ್ಲಿ ಸ್ಲಿಪ್‌ ಸ್ಥಾನದಲ್ಲಿ ಮಾರ್ಕಸ್‌ ಟ್ರೆಸ್ಕೋಥಿಕ್‌ ಕ್ಷೇತ್ರರಕ್ಷಣೆಯಲ್ಲಿ ಎಡವಿರುವುದು.

ಕ್ಷೇತ್ರರಕ್ಷಣಾ ನಾಯಕನು ತೆಗೆದುಕೊಳ್ಳಬೇಕಾದ ಪ್ರಧಾನ ನಿರ್ಧಾರವು ದಾಳಿಕಾರಕ ಕ್ಷೇತ್ರ ನಿಯೋಜನೆ ಹಾಗೂ ರಕ್ಷಣಾತ್ಮಕ ಕ್ಷೇತ್ರ ನಿಯೋಜನೆಗಳ ನಡುವೆ ಸಮತೋಲನೆಯನ್ನು ಕಾಯ್ದುಕೊಳ್ಳುವುದನ್ನು ಒಳಗೊಂಡಿರುತ್ತದೆ. ದಾಳಿಕಾರಕ ಕ್ಷೇತ್ರ ನಿಯೋಜನೆ ಎಂದರೆ ಕ್ಯಾಚ್‌ಗಳನ್ನು ಹಿಡಿಯುವ ಸಂಭಾವ್ಯತೆ ಹೆಚ್ಚಿರುವ ಹಾಗೂ ಆ ಮೂಲಕ ಕ್ಷೇತ್ರರಕ್ಷಣೆಗಾರರು ಬ್ಯಾಟ್ಸ್‌‌ಮನ್‌‌ನನ್ನು ಔಟ್‌ ಮಾಡುವ ಸಂಭಾವ್ಯತೆ ಹೆಚ್ಚಾಗುವ ರೀತಿಯಲ್ಲಿ ಆಟಗಾರರನ್ನು ನಿಯೋಜಿಸುವುದಾಗಿರುತ್ತದೆ. ಅಂತಹಾ ಕ್ಷೇತ್ರ ನಿಯೋಜನೆಯು ಬ್ಯಾಟ್ಸ್‌‌ಮನ್‌‌ಗೆ ಸಮೀಪವಾಗಿ ವಿಶೇಷವಾಗಿ ಬ್ಯಾಟ್ಸ್‌‌ಮನ್‌‌ನ ಹಿಂದೆ ಸ್ಲಿಪ್‌ ಸ್ಥಾನ ಅಥವಾ ಷಾರ್ಟ್‌ ಲೆಗ್‌‌ ಸ್ಥಾನಗಳಲ್ಲಿ ಹಲವು ಕ್ಷೇತ್ರರಕ್ಷಣೆಗಾರರನ್ನು ನಿಲ್ಲಿಸುವುದನ್ನು ಇದು ಸಾಧಾರಣವಾಗಿ ಒಳಗೊಂಡಿರುತ್ತದೆ.

ರಕ್ಷಣಾತ್ಮಕ ಕ್ಷೇತ್ರ ನಿಯೋಜನೆಯಲ್ಲಿ ಮೈದಾನದ ಬಹುಪಾಲು ಭಾಗವನ್ನು ಕ್ಷೇತ್ರರಕ್ಷಣೆಗಾರರು ಆವರಿಸಿರುತ್ತಾರೆ ; ಇದರಿಂದಾಗಿ ಬ್ಯಾಟ್ಸ್‌‌ಮನ್‌‌ ಹೆಚ್ಚಿನ ಮೊತ್ತದ ಓಟಗಳನ್ನು ಗಳಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಈ ನಿಯೋಜನೆಯಲ್ಲಿ ಸಾಧಾರಣವಾಗಿ ಬ್ಯಾಟ್ಸ್‌‌ಮನ್‌‌ನಿಂದ ದೂರವಾಗಿ ಹಾಗೂ ಆತನ ಹತ್ತಿರವಾಗಿ ಒಟ್ಟಿನಲ್ಲಿ ಹಲವು ಕ್ಷೇತ್ರರಕ್ಷಣೆಗಾರರು ಚೆಂಡನ್ನು ಯಾವ ಸ್ಥಾನಗಳೆಡೆಗೆ ಹೊಡೆಯುವ ಸಂಭಾವ್ಯತೆ ಹೆಚ್ಚಿರುತ್ತದೆಯೋ ಅಂತಹಾ ಕಡೆಗಳಲ್ಲಿ ನಿಲ್ಲಿಸಲಾಗಿರುತ್ತದೆ.

ಕ್ಷೇತ್ರ ನಿಯೋಜನೆಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಪಂದ್ಯದ ತಂತ್ರಗಾರಿಕೆಗಳ ಪರಿಸ್ಥಿತಿಗಳು ; ಯಾವ ಬೌಲರ್‌/ಚೆಂಡೆಸೆತಗಾರ ಚೆಂಡೆಸೆಯುತ್ತಿರುವರು ; ಎಷ್ಟು ಹೊತ್ತಿನಿಂದ ಬ್ಯಾಟ್ಸ್‌‌ಮನ್‌‌ ಆಡುತ್ತಿದ್ದಾರೆ  ; ಚೆಂಡು ಎಷ್ಟರಮಟ್ಟಿಗೆ ಸವೆದಿದೆ ; ವಿಕೆಟ್‌‌ನ ಪರಿಸ್ಥಿತಿ ; ಬೆಳಕು; ಅಥವಾ ಪಂದ್ಯದ ಮಧ್ಯಂತರಕ್ಕೆ ಎಷ್ಟು ಸನಿಹದಲ್ಲಿ ನೀವಿದ್ದೀರಿ ಎಂಬಂಶಗಳೂ ಸೇರಿದಂತೆ ಹಲವು ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ.

ಕೆಲವು ಸಾರ್ವತ್ರಿಕ ನಿಯಮಗಳು:

ದಾಳಿ…
…ನವೀನ ಬ್ಯಾಟ್‌ಮನ್‌ಗಳಾಗಿದ್ದರೆ
ತನ್ನ ಇನ್ನಿಂಗ್ಸ್‌‌ನ ಆದಿಭಾಗದಲ್ಲಿರುವ ಬ್ಯಾಟ್ಸ್‌‌ಮನ್‌‌ ತಪ್ಪು ನಿರ್ಧಾರದ ಅಥವಾ ದುಡುಕಿನ ಹೊಡೆತಗಳನ್ನು ಆಡುವ ಸಂಭಾವ್ಯತೆಗಳು ಹೆಚ್ಚಿದ್ದು, ಕ್ಯಾಚ್‌ ಹಿಡಿಯಬಲ್ಲ ಕ್ಷೇತ್ರರಕ್ಷಣೆಗಾರರು ಸಿದ್ಧರಾಗಿರುವುದು ಖಂಡಿತಾ ಪ್ರಯೋಜನಕಾರಿಯಾಗಬಲ್ಲದು.
…ಹೊಸತಾದ ಚೆಂಡಿನಲ್ಲಿ ಆಡುತ್ತಿರುವಾಗ
ತ್ವರಿತ ಬೌಲರ್‌/ಚೆಂಡೆಸೆತಗಾರರು ಹೊಸತಾದ ಚೆಂಡುಗಳಲ್ಲಿ ತಪ್ಪಿಲ್ಲದೆ ಬ್ಯಾಟಿಂಗ್‌ ಮಾಡಲು ಕಷ್ಟಸಾಧ್ಯ ಪರಿಸ್ಥಿತಿ ನಿರ್ಮಾಣ ಮಾಡುವ ಹೆಚ್ಚಿನ ಮಟ್ಟದ ಪುಟಿತ ಹಾಗೂ ತಿರುಗುವಿಕೆಗಳನ್ನು ಪಡೆಯುತ್ತಾರೆ.
…ಆಟದ ಬಿಡುವಿನಿಂದ ಮರಳಿ ಆಡುತ್ತಿರುವಾಗ
ಹೊಸತಾದ ಕಾಲಾವಧಿಯಲ್ಲಿ ಅಥವಾ ಪಾನೀಯ ಬಿಡುವಿನ, ಕೆಟ್ಟ ಹವಾಮಾನದ ಅಥವಾ ಗಾಯಗೊಳ್ಳುವಿಕೆಗಳಿಂದ ಅಡ್ಡಿಪಡಿಸಿದ ನಂತರ ಆಡುವುದಕ್ಕೆ ಮರಳಿದಾಗ ಬ್ಯಾಟ್ಸ್‌ಮನ್ನರು ಬ್ಯಾಟಿಂಗ್‌ ಲಯಕ್ಕೆ ಮತ್ತೆ ಹೊಂದಿಕೊಳ್ಳುವುದು ಅನಿವಾರ್ಯವಾಗಿರುತ್ತದೆ. ಹಾಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಅವರು ತಪ್ಪುಮಾಡುವ ಸಂಭವ ಹೆಚ್ಚಿರುತ್ತದೆ.
…ಉತ್ತಮ ಗುಣಮಟ್ಟದ ಆಟ ಪ್ರದರ್ಶಿಸುವ ಬೌಲರ್‌/ಚೆಂಡೆಸೆತಗಾರರಿರುವಾಗ
ಒಂದು ತಂಡದ ಅತ್ಯುತ್ತಮ ಬೌಲರ್‌/ಚೆಂಡೆಸೆತಗಾರರು ಹೊಡೆಯಲು ತೀರ ಕಷ್ಟಕರವಾಗುವಂತಹಾ ಎಸೆತಗಳನ್ನು ಹಾಕುವ ಪ್ರವೃತ್ತಿಯವರಾಗಿದ್ದು, ಅವರು ಆಕ್ರಮಣಕಾರಕ ಕ್ಷೇತ್ರ ನಿಯೋಜನೆಯಿಂದ ಬಹಳಷ್ಟು ಅನುಕೂಲತೆಗಳನ್ನು ಪಡೆಯುತ್ತಾರೆ.
…ಬೌಲರ್‌/ಚೆಂಡೆಸೆತಗಾರನಿಗೆ ಪಿಚ್‌‌ ಅನುಕೂಲಕರವಾಗಿದ್ದಾಗ
ತೇವಪೂರಿತವಾದ ಪಿಚ್‌‌ ವೇಗದ ಬೌಲರ್‌/ಚೆಂಡೆಸೆತಗಾರರಿಗೆ ನಡುಗೆರೆಯ ಸುತ್ತ ಚೆಂಡಿನ ಊಹಿಸಲಸಾಧ್ಯವಾಗುವ ಸ್ತರಗಳಿಂದ ಕೂಡಿದ ಚಲನೆಯನ್ನು ಪಡೆಯಲು ಸಹಾಯ ಮಾಡಿದರೆ, ಒಣದಾದ, ಹುಡುಹುಡಿಯಾದ/ಹಾಳಾದ ಪಿಚ್‌‌ ಸ್ಪಿನ್‌ ಬೌಲರ್‌/ಚೆಂಡೆಸೆತಗಾರರಿಗೆ ಊಹಿಸಲಸಾಧ್ಯವಾಗುವ ತಿರುಗು ಹಾಗೂ ಚುರುಕಿಲ್ಲದ ನಡೆಯನ್ನು ಮೂಡಿಸಲು ಸಹಾಯ ಮಾಡುತ್ತದೆ, ಮೋಡಕವಿದ ವಾತಾವರಣವು ಸ್ವಿಂಗ್‌ ಬೌಲರ್‌/ಚೆಂಡೆಸೆತಗಾರರಿಗೆ ಅನುಕೂಲಕರವಾಗಿ ಪರಿಣಮಿಸುತ್ತದೆ. ಈ ಮೂರೂ ತರಹದ ಪರಿಸ್ಥಿತಿಗಳಲ್ಲಿ ಸನಿಹದಲ್ಲಿರುವ ಆಕ್ರಮಣಕಾರಕ ಕ್ಷೇತ್ರರಕ್ಷಣೆಗಾರರ ಬಳಿಗೆ ಹಾರಿ ಬರುವ ಕ್ಯಾಚ್‌ಗಳಿಗೆ ಕಾರಣವಾಗಬಲ್ಲವು.
…ಬ್ಯಾಟಿಂಗ್‌ ತಂಡವು ಒತ್ತಡದ ಪರಿಸ್ಥಿತಿಯಲ್ಲಿದ್ದಾಗ
ಬ್ಯಾಟಿಂಗ್‌ ತಂಡವು ಕಳಪೆಯಾಗಿ ಆಡುತ್ತಿದ್ದಲ್ಲಿ ಅಥವಾ ತನ್ನ ಉತ್ಸಾಹವನ್ನು ಕಳೆದುಕೊಂಡಿದ್ದಲ್ಲಿ,ಆಕ್ರಮಣಕಾರಕ ಕ್ಷೇತ್ರರಕ್ಷಣೆಯಿಂದ ಒತ್ತಡವನ್ನು ಹೆಚ್ಚಿಸಬಹುದಾಗಿರುತ್ತದೆ.
 
ಟ್ವೆಂಟಿ20 ಪಂದ್ಯವೊಂದರಲ್ಲಿ ಟಾಂಟನ್‌ನಲ್ಲಿ ಮಾರ್ಕ್‌ ಟರ್ನರ್‌ ಸ್ಲೈಡಿಂಗ್‌ ಸ್ಟಾಪ್‌ಅನ್ನು ಕಾರ್ಯಗತಗೊಳಿಸುತ್ತಿದ್ದಾರೆ.
ರಕ್ಷಣಾತ್ಮಕ…
…ಬ್ಯಾಟ್‌ಮನ್ನರು ಈಗಾಗಲೇ ಸ್ಥಿರತೆಯನ್ನು ಕಂಡುಕೊಂಡಿದ್ದಲ್ಲಿ
ದೀರ್ಘ ಕಾಲದಿಂದ ಬ್ಯಾಟಿಂಗ್‌ ಮಾಡುತ್ತಿರುವಂತಹಾ ಹಾಗೂ ಚೆಂಡೆಸೆತದ ಶೈಲಿಯನ್ನು ಹಿತವಾಗಿಸಿಕೊಂಡಿದ್ದ ಸಂದರ್ಭಗಳಲ್ಲಿ ಬ್ಯಾಟ್‌ಮನ್ನರನ್ನು ಔಟ್‌ ಮಾಡುವುದು ಬಹಳ ಕಷ್ಟಕರವಾಗಿರುತ್ತದೆ. ಅನೇಕವೇಳೆ ಇದಕ್ಕೆ ಅತ್ಯುತ್ತಮವಾದ ತಂತ್ರವೆಂದರೆ ರಕ್ಷಣಾತ್ಮಕ ಕ್ಷೇತ್ರರಕ್ಷಣೆಗೆ ಮೊರೆಹೋಗಿ ಒತ್ತಡದಿಂದ ಓಟಗಳ ಗಳಿಕೆಯ ವೇಗವನ್ನು ನಿಧಾನಗೊಳಿಸುವುದಾಗಿರುತ್ತದೆ, ಇದು ಬ್ಯಾಟ್ಸ್‌‌ಮನ್‌‌ನನ್ನು ವಿಹ್ವಲಗೊಳಿಸಿ ಆತನು ದುಡುಕಿ ಭಾರೀ ಹೊಡೆತಗಳನ್ನು ಹೊಡೆಯುವ ಪರಿಸ್ಥಿತಿಯನ್ನು ಉಂಟುಮಾಡಬಹುದಾಗಿರುತ್ತದೆ.
…ಬ್ಯಾಟಿಂಗ್‌ ತಂಡವು ತ್ವರಿತವಾಗಿ ಓಟಗಳನ್ನು ಗಳಿಸುವುದು ಅನಿವಾರ್ಯವಾಗಿದ್ದಾಗ
ಬ್ಯಾಟಿಂಗ್‌ ತಂಡವು ಗೆಲ್ಲಲು ಅಥವಾ ಮುನ್ನಡೆಯನ್ನು ಕಾಯ್ದುಕೊಳ್ಳಲು ಓಟಗಳನ್ನು ತ್ವರಿತವಾಗಿ ಗಳಿಸುವುದು ಅನಿವಾರ್ಯವಾಗುವಂತಹಾ ಸಂದರ್ಭಗಳಲ್ಲಿ (ಏಕೆಂದರೆ ಉದಾಹರಣೆಗೆ, ತಂಡವೊಂದು ನಿಯಮಿತ ಓವರ್‌ಗಳ ಇನ್ನಿಂಗ್ಸ್‌‌ನ ಮಿತಿಗೆ ಹತ್ತಿರವಾಗುತ್ತಿರುವಾಗ), ಓಟಗಳ ಗಳಿಕೆಯ ವೇಗವನ್ನು ಕುಗ್ಗಿಸುವುದು ಅವರು ಹಾಗೆ ಮಾಡುವ ಸಾಧ್ಯತೆಗಳನ್ನು ಕಡಿಮೆಗೊಳಿಸಬಲ್ಲದು.
…ಬ್ಯಾಟಿಂಗ್‌ ತಂಡವು ತ್ವರಿತವಾಗಿ ಓಟಗಳನ್ನು ಗಳಿಸುತ್ತಿರುವಾಗ
ಬ್ಯಾಟ್‌ಮನ್ನರು ತ್ವರಿತವಾಗಿ ಓಟಗಳನ್ನು ಗಳಿಸುವುದಕ್ಕೆ ಶಕ್ಯರಾಗಿದ್ದಲ್ಲಿ , ಅವರು ತಮ್ಮನ್ನು ಔಟ್‌ ಮಾಡುವ ಹಲವು ಅವಕಾಶಗಳನ್ನು ನೀಡುತ್ತಿರಬೇಕೆಂದೇನಿಲ್ಲ, ಆದ್ದರಿಂದ ಅವರ ಓಟದ ಗಳಿಕೆಯ ವೇಗವನ್ನು ನಿಯಂತ್ರಿಸಬೇಕು.
…ಚೆಂಡು ಹಾಗೂ ಪಿಚ್‌‌ಗಳು ಬೌಲರ್‌/ಚೆಂಡೆಸೆತಗಾರರಿಗೆ ಅನುಕೂಲಕರವಾಗಿರದಿದ್ದಲ್ಲಿ
ಚೆಂಡು ಹೆಚ್ಚೇನೂ ಚಲನೆಯನ್ನು ಹೊಂದಿರದಿದ್ದಲ್ಲಿ ಹಾಗೂ ಬ್ಯಾಟ್‌ಮನ್ನರು ಪ್ರತಿಬಾರಿಯೂ ಸುಲಭವಾಗಿಯೇ ಅದನ್ನು ಹೊಡೆಯಲು ಸಾಧ್ಯವಾಗುತ್ತಿದ್ದರೆ ಸನಿಹದ ಕ್ಯಾಚಿಂಗ್‌ ಕ್ಷೇತ್ರರಕ್ಷಣೆಗಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವುದು ಯಾವುದೇ ರೀತಿ ಪೂರಕವಲ್ಲ.
…ಅಸಮರ್ಥ ಬೌಲರ್‌/ಚೆಂಡೆಸೆತಗಾರರು ಆಡುತ್ತಿರುವಾಗ
ಯಾವುದೇ ಒಂದು ಕಾರಣದಿಂದ ತುಲನಾತ್ಮಕವಾಗಿ ಕಳಪೆ ಸಾಮರ್ಥ್ಯದ ಬೌಲರ್‌/ಚೆಂಡೆಸೆತಗಾರನು ಚೆಂಡೆಸೆತವನ್ನು ಮಾಡಲೇಬೇಕಾದಲ್ಲಿ, ಅನೇಕ ವೇಳೆ ಇದಕ್ಕೆ ಅತ್ಯುತ್ತಮ ಕಾರ್ಯತಂತ್ರವೆಂದರೆ ಆಗಬಹುದಾದ ಹಾನಿಯ ಪ್ರಮಾಣವನ್ನು ಉಚಿತ ಓಟಗಳ ಲಭ್ಯತೆಯನ್ನು ಕಡಿಮೆಗೊಳಿಸುವುದಾಗಿರುತ್ತದೆ.

ಆಫ್‌ ಮತ್ತು ಲೆಗ್‌ ಸೈಡ್‌ ಕ್ಷೇತ್ರ ರಕ್ಷಣೆಗಳು

ಬದಲಾಯಿಸಿ

ಕ್ಷೇತ್ರರಕ್ಷಣೆಯನ್ನು ನಿಯೋಜಿಸುವ ಮುನ್ನ ಮತ್ತೊಂದು ಗಮನಾರ್ಹವಾದ ವಿಚಾರವೆಂದರೆ ಪಿಚ್‌‌ನ ಪ್ರತಿ ಬದಿಯಲ್ಲಿ ಎಷ್ಟು ಮಂದಿ ಕ್ಷೇತ್ರರಕ್ಷಣೆಗಾರರು ಇರಬೇಕೆಂದು ನಿರ್ಣಯಿಸುವುದು. ಒಂಬತ್ತು ಮಂದಿ ಕ್ಷೇತ್ರರಕ್ಷಣೆಗಾರರನ್ನು ನಿಯೋಜಿಸಬೇಕಿದ್ದಾಗ, ಸಹಜವಾಗಿಯೇ ವರ್ಗೀಕರಣವು ಅಸಮತೆಯನ್ನು ಹೊಂದಿರಲೇಬೇಕಿರುತ್ತದೆ, ಆದರೆ ಅಸಮತೆಯ ಪ್ರಮಾಣವು ವ್ಯತ್ಯಾಸವಾಗಬಲ್ಲದು.

ಕ್ಷೇತ್ರದ ನಿಯೋಜನೆಯ ಬಗ್ಗೆ ವರ್ಣಿಸುವ ಸಂದರ್ಭದಲ್ಲಿ, ಅನೇಕವೇಳೆ ಆಫ್‌ ಸೈಡ್‌ ಹಾಗೂ ಲೆಗ್‌ ಸೈಡ್‌ನಲ್ಲಿರುವ ಕ್ಷೇತ್ರರಕ್ಷಣೆಗಾರರ ಸಂಖ್ಯೆಯನ್ನು ಹೇಳುತ್ತಾ ಮೊದಲಿಗೆ ಆಫ್‌ ಸೈಡ್‌ನ ಸಂಖ್ಯೆಯನ್ನು ಹೇಳುತ್ತಾ ಸಂಕ್ಷಿಪ್ತಗೊಳಿಸಿದ ರೂಪದಲ್ಲಿ ಹೇಳಲಾಗುತ್ತದೆ. ಉದಾಹರಣೆಗೆ, ೫-೪ ಕ್ಷೇತ್ರ ರಕ್ಷಣೆ ಎಂದು ಹೇಳಿದರೆ ಆಫ್‌ ಸೈಡ್‌ನಲ್ಲಿ ೫ ಕ್ಷೇತ್ರರಕ್ಷಣೆಗಾರರು ಹಾಗೂ ಲೆಗ್‌ ಸೈಡ್‌ನಲ್ಲಿ ೪ ಮಂದಿ ಎಂದರ್ಥ.

ಸಾಧಾರಣವಾಗಿ, ಬಹುತೇಕ ಕ್ಷೇತ್ರರಕ್ಷಣೆಗಾರರನ್ನು ಆಫ್‌ ಸೈಡ್‌ನಲ್ಲಿ ನಿಲ್ಲಿಸಿರಲಾಗುತ್ತದೆ. ಹೀಗೇಕೆಂದರೆ ಬಹುತೇಕ ಬೌಲರ್‌/ಚೆಂಡೆಸೆತಗಾರರು ತಮ್ಮ ಎಸೆತಗಳ ಪಥವನ್ನು ಆಫ್‌ ಸ್ಟಂಪ್‌ನ ಮೇಲೆ ಅಥವಾ ಹೊರಗೆ ಕೇಂದ್ರೀಕರಿಸುವ ಪ್ರವೃತ್ತಿಯನ್ನು ಹೊಂದಿರುವುದರಿಂದ ಬಹುತೇಕ ಹೊಡೆತಗಳು ಆಫ್‌ ಸೈಡ್‌ನ ಕಡೆಗೆ ಬರುತ್ತವೆ.

ಆಕ್ರಮಣಕಾರಕ ನಿಯೋಜನೆಯಿದ್ದಾಗ ಅದರಲ್ಲಿ ಬಹುಶಃ ೩ ಅಥವಾ ೪ ಸ್ಲಿಪ್‌ ಸ್ಥಾನಗಳು ಹಾಗೂ ೧ ಅಥವಾ ೨ ಗಲ್ಲಿಗಳಿರಬಹುದಾಗಿದ್ದು, ಸಂಭಾವ್ಯತಃ ಅದೊಂದೇ ಪ್ರದೇಶದಲ್ಲಿಯೇ ಆರು ಕ್ಷೇತ್ರರಕ್ಷಣೆಗಾರರನ್ನು ಬಳಸಿದಂತಾಗಿರುತ್ತದೆ. ಲಾಕ್ಷಣಿಕವಾಗಿ ಇದರೊಂದಿಗೆ ಮಿಡ್‌ ಆಫ್‌, ಮಿಡ್‌ ಆನ್‌ ಹಾಗೂ ಫೈನ್‌ ಲೆಗ್‌‌ಗಳಲ್ಲೂ ನಿಯೋಜಿಸಲಾಗುವುದರಿಂದ, ಅದನ್ನು ೭-೨ ಕ್ಷೇತ್ರರಕ್ಷಣೆಯನ್ನಾಗಿಸಿಬಿಡುತ್ತದೆ. ಲೆಗ್‌ ಸೈಡ್‌ನಲ್ಲಿ ಕೇವಲ ಇಬ್ಬರು ಕ್ಷೇತ್ರರಕ್ಷಣೆಗಾರರಿದ್ದರೂ, ಬೌಲರ್‌/ಚೆಂಡೆಸೆತಗಾರರು ತಮ್ಮ ಚೆಂಡಿನ ಪಥವನ್ನು ಆಫ್‌ ಸ್ಟಂಪ್‌ನ ಹೊರಗೆ ಇಟ್ಟುಕೊಂಡಿರುವಷ್ಟು ಸಮಯ ಅವರಿಗೆ ಸಾಪೇಕ್ಷವಾಗಿ ಕಡಿಮೆ ಹೊಣೆಯನ್ನು ಹೊಂದಿರುತ್ತಾರೆ. ಈ ರೀತಿಯ ಕ್ಷೇತ್ರರಕ್ಷಣಾ ನಿಯೋಜನೆಯು ವಿಕೆಟ್‌‌ನ ಮುಂಭಾಗದಲ್ಲಿ ದೊಡ್ಡದಾದ ಅಂತರಗಳನ್ನು ಉಂಟುಮಾಡುವುದರಿಂದ, ಅವರು ತಪ್ಪುನಿರ್ಧಾರವನ್ನು ತೆಗೆದುಕೊಂಡು ತಮ್ಮ ಹಿಂದೆ ಕಾಯುತ್ತಿರುವ ಕ್ಯಾಚ್‌ ಹಿಡಿಯುವವರಿಗೆ ಚೆಂಡಿತ್ತು ಹೋಗಬಹುದೆಂಬ ಆಶಯದಿಂದ ಬ್ಯಾಟ್‌ಮನ್ನರು ಅಲ್ಲಿ ಹೊಡೆತವನ್ನು ಬಾರಿಸುವಂತೆ ಆಕರ್ಷಿಸಲಾಗುತ್ತದೆ.

ಕ್ಷೇತ್ರರಕ್ಷಣಾ ನಿಯೋಜನೆಗಳು ಹಂತಹಂತವಾಗಿ ಹೆಚ್ಚು ರಕ್ಷಣಾತ್ಮಕವಾಗುತ್ತಾ ಹೋದಂತೆ, ಕ್ಷೇತ್ರರಕ್ಷಣೆಗಾರರು ಮೈದಾನದ ಹೆಚ್ಚು ಭಾಗವನ್ನು ಆವರಿಸಿಕೊಳ್ಳಲು ಸ್ಲಿಪ್‌ ಸ್ಥಾನ ಮತ್ತು ಗಲ್ಲಿ ಪ್ರದೇಶಗಳ ಹೊರಕ್ಕೆ ಹೋಗುವುದರಿಂದ ೬-೩ ಹಾಗೂ ೫-೪ರ ಕ್ಷೇತ್ರ ರಕ್ಷಣಾ ನಿಯೋಜನೆಗಳು ಉಂಟಾಗುತ್ತವೆ.

ಓರ್ವ ಬೌಲರ್‌/ಚೆಂಡೆಸೆತಗಾರ ಸಾಧಾರಣವಾಗಿ ತಾನು ಲೆಗ್‌ ಸ್ಪಿನ್‌ ಬೌಲರ್‌/ಚೆಂಡೆಸೆತಗಾರನಾಗಿದ್ದರೆ , ಸ್ಟಂಪ್‌ಆಗುವಿಕೆಯನ್ನು ಅನಿವಾರ್ಯಗೊಳಿಸುವಂತೆ ಮಾಡುವ ಪ್ರಯತ್ನದಲ್ಲಿ ಬ್ಯಾಟ್ಸ್‌‌ಮನ್‌‌ನ ಕಾಲುಗಳ ಬಳಿ ದಾಳಿ ಮಾಡಲು ನಿರ್ಧರಿಸಿ, ಆತನ ಕಾಲುಗಳ ಹಿಂದೆ ಹೋಗುವಂತೆ ಚೆಂಡನ್ನು ಎಸೆಯುತ್ತಾನೆ ಅಥವಾ ಲೆಗ್‌ ಸೈಡ್‌ನಲ್ಲಿ ಒಂದು ಕ್ಯಾಚ್‌ ಅನ್ನು ಪ್ರೇರಿಸುತ್ತಾನೆ, ಇದರಿಂದ ಕ್ಷೇತ್ರರಕ್ಷಣಾ ನಿಯೋಜನೆಯು ಲೆಗ್‌ ಸೈಡ್‌ನ ಕಡೆಯೇ ೪-೫ಅನ್ನು ಪೇರಿಸಬಹುದಾಗಿರುತ್ತದೆ. ಲೆಗ್‌ ಸೈಡ್‌ನಲ್ಲಿ ೫ಕ್ಕಿಂತ ಹೆಚ್ಚಿನ ಸಂಖ್ಯೆಯ ಕ್ಷೇತ್ರರಕ್ಷಣೆಗಾರರನ್ನು ಹೊಂದಿರುವುದು ಅಪರೂಪವಾಗಿದ್ದು ಇದಕ್ಕೆ ಕಾರಣ ಸ್ಕ್ವೇರ್‌‌ ಲೆಗ್‌ನ ಹಿಂದೆ ಇಬ್ಬರಿಗಿಂತ ಹೆಚ್ಚು ಕ್ಷೇತ್ರರಕ್ಷಣೆಗಾರರನ್ನು ನಿಲ್ಲಿಸುವಂತಿಲ್ಲ ಎಂಬ ನಿಬಂಧನೆಯಾಗಿರುತ್ತದೆ.

ಕೆಲವೊಮ್ಮೆ ಓರ್ವ ಸ್ಪಿನ್ನರ್‌ ಓಟಗಳಿಕೆಯನ್ನು ನಿಯಂತ್ರಿಸಲು ಲೆಗ್‌ ಸೈಡ್‌ ಕ್ಷೇತ್ರದ ಕಡೆಗೆ ಚೆಂಡೆಸೆಯಲೆಂದು ಲೆಗ್‌ ಸೈಡ್‌ನ ಬಳಿ ಏಳು ಮಂದಿ ಕ್ಷೇತ್ರರಕ್ಷಣೆಗಾರರನ್ನು ಪಡೆದುಕೊಂಡು ಲೆಗ್‌ ಸ್ಟಂಪ್‌ನ ಗಮನಾರ್ಹ ಅಂತರಕ್ಕೆ ಚೆಂಡೆಸೆಯಬಲ್ಲರು. ಅನೇಕವೇಳೆ ಇಂತಹಾ ಎಸೆತಗಳು ಎಷ್ಟು ಹೊರಗಿರುತ್ತವೆಂದರೆ ಬ್ಯಾಟ್ಸ್‌‌ಮನ್‌‌ ನೇರವಾಗಿ ನಿಂತು ಚೆಂಡನ್ನು ಮಿಡ್‌ ಆನ್‌ನ ನೇರಕ್ಕೆ ಹೊಡೆಯಲು ಸಾಧ್ಯವಿರುವುದಿಲ್ಲ , ಹಾಗೂ ಕೈಗಳ ಬದಲಿಕೆ ಮಾಡದೇ ಅಥವಾ ವಿರುದ್ಧ ಬಾಚು ಹೊಡೆತ ಅಥವಾ ಎಡ ಹೊಡೆತಗಳಂತಹಾ ಅಸಾಂಪ್ರದಾಯಿಕ ಹಾಗೂ ಅಪಾಯಕಾರಿ ಹೊಡೆತಗಳನ್ನು ಪ್ರಯತ್ನಿಸದೇ ಆಫ್‌ ಸೈಡ್‌ ಕಡೆಗೆ ಹೊಡೆಯಲು ಸಾಧ್ಯವಾಗುವುದಿಲ್ಲ. ಬ್ಯಾಟ್ಸ್‌‌ಮನ್‌‌ ಲೆಗ್‌ ಸೈಡ್‌ನ ಕಡೆಗೆ ಹಿಂದಿರುಗಿ ಆಫ್‌ ಸೈಡ್‌ನ ಕಡೆಗೆ ಹೊಡೆಯಲು ಪ್ರಯತ್ನಿಸಬಹುದಾದರೂ ಹಾಗೆ ಮಾಡುವಾಗ ತಮ್ಮ ಸ್ಟಂಪುಗಳನ್ನು ಅಪಾಯಕ್ಕೀಡು ಮಾಡುವ ಸಾಧ್ಯತೆಯಿರುತ್ತದೆ.

ಆಫ್‌ ಸೈಡ್‌ನಲ್ಲಿ ಏಳು ಅಥವಾ ಎಂಟು ಮಂದಿ ಕ್ಷೇತ್ರರಕ್ಷಣೆಗಾರರನ್ನು ನಿಯೋಜಿಸಿ ಆಫ್‌ ಸ್ಟಂಪ್‌ನ ಸಾಕಷ್ಟು ದೂರಕ್ಕೆ ಚೆಂಡೆಸೆಯುವ ಮೂಲಕ ವೇಗದ ಮತ್ತು ನಿಧಾನ ಬೌಲರ್‌/ಚೆಂಡೆಸೆತಗಾರಗಳಿಬ್ಬರೂ ಒಂದೇ ರೀತಿಯಲ್ಲಿ ಇದರ ವಿರುದ್ಧ ತಂತ್ರವನ್ನು ಕೂಡಾ ಬಳಸಬಹುದಾಗಿರುತ್ತದೆ. ಓರ್ವ ಬ್ಯಾಟ್ಸ್‌‌ಮನ್‌‌ ಚೆಂಡನ್ನು ಸ್ಟಂಪುಗಳನ್ನು ತಗಲಬಹುದೆಂಬ ಭಯವಿಲ್ಲದೇ ಅಪಾಯರಹಿತವಾಗಿ ಹಾದುಹೋಗಲು ಬಿಡಬಹುದಾಗಿದ್ದರೂ ಓಟ ಗಳಿಸಲು ಅವಕಾಶವಿರುವುದಿಲ್ಲ. ಅವರು ಓಟಗಳನ್ನು ಗಳಿಸಲೇಬೇಕೆಂದು ಬಯಸಿದಲ್ಲಿ ದೂರದ ಚೆಂಡಿನ ಅಪಾಯಕ್ಕೆ ಸಿದ್ಧರಾಗಿದ್ದು ಸಂಪೂರ್ಣವಾಗಿ ಆವರಿಸಿರುವ ಆಫ್‌ ಸೈಡ್‌ನ ಮೂಲಕ ಹಾದುಹೋಗುವ ಹಾಗೆ ಹೊಡೆಯುವ ಅಪಾಯಕರ ಪ್ರಯತ್ನ ಮಾಡಬೇಕಾಗುತ್ತದೆ ಅಥವಾ ಚೆಂಡನ್ನು ಸ್ಟಂಪುಗಳ ಸಾಕಷ್ಟು ದೂರದ ಸ್ಥಾನದಿಂದ ತೀರ ಕಡಿಮೆ ಕ್ಷೇತ್ರರಕ್ಷಣೆಯ ಲೆಗ್‌ ಸೈಡ್‌ನ ಕಡೆಗೆ ಎಳೆದು ಬಾರಿಸುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.

ಲೆಗ್‌ ಸೈಡ್‌ನ ಬಳಿಯ ಮತ್ತೊಂದು ಆಕ್ರಮಣಕಾರಕ ನಿಯೋಜನೆಯೆಂದರೆ ಡೀಪ್‌ ಸ್ಕ್ವೇರ್‌ನಲ್ಲಿ ಬೌಂಡರಿ ಹಾಗೂ ಬ್ಯಾಕ್‌ವರ್ಡ್‌/ಹಿಂಭಾಗದ ಸ್ಕ್ವೇರ್‌‌ ಲೆಗ್‌ನ ಬಳಿಯಲ್ಲಿ ಕ್ಷೇತ್ರರಕ್ಷಣೆಗಾರರನ್ನು ನಿಯೋಜಿಸಿ ಬೌನ್ಸರ್‌ ಎಸೆತಗಳ ಮೂಲಕ ಚೆಂಡನ್ನು ಗಾಳಿಯಲ್ಲಿ ಕೊಕ್ಕೆ ಹೊಡೆತವನ್ನು ಬೀಸುವಂತೆ ಬ್ಯಾಟ್ಸ್‌‌ಮನ್‌‌ನನ್ನು ಪ್ರೇರಿಸುವ ಪ್ರಯತ್ನವನ್ನು ಒಳಗೊಂಡಿರುವ ಲೆಗ್‌ ಸೈಡ್‌ ಟ್ರ್ಯಾಪ್‌ ಆಗಿದೆ. ನಿಧಾನ ಬೌಲರ್‌/ಚೆಂಡೆಸೆತಗಾರರ ಸಂದರ್ಭದಲ್ಲಿ, ಲೆಗ್‌ ಓರೆಹೊಡೆತಗಳು ಹಾಗೂ ಬಾಚುಹೊಡೆತಗಳನ್ನು ಕ್ಯಾಚ್‌ ಹಿಡಿಯಲು ಲೆಗ್‌ ಟ್ರಾಪ್‌ನ ಕ್ಷೇತ್ರರಕ್ಷಣೆಗಾರರನ್ನು ಬ್ಯಾಟ್‌ ಹಿಂದಿನ ಸ್ಕ್ವೇರ್‌‌ನಿಂದ ೧೦–೧೫ m ಅಂತರದೊಳಗೆ ನಿಲ್ಲಿಸಲಾಗಿರುತ್ತದೆ.

ರಕ್ಷಣಾ ಸಾಧನ

ಬದಲಾಯಿಸಿ
 
ನಾಟಿಂಗ್‌ಹ್ಯಾಮ್‌ಷೈರ್‌ ತಂಡದ ಪರವಾಗಿ ಸಿಲ್ಲಿ ಪಾಯಿಂಟ್‌‌ (ದೂರದ) ಹಾಗೂ ಶಾರ್ಟ್‌ ಲೆಗ್‌ಗಳ (ಸನಿಹದ) ಕ್ಷೇತ್ರರಕ್ಷಣೆ. ಶಿರಸ್ತ್ರಾಣಗಳನ್ನು ಈರ್ವರೂ ಧರಿಸಿರುವುದು. ವಿಕೆಟ್‌‌ -ಕೀಪರ್‌‌ರ ಮೊಣಕಾಲ ರಕ್ಷಣಾಸಾಧನಗಳು ಆತನ ಪ್ಯಾಂಟ್‌ನ ಹೊರಭಾಗದಲ್ಲಿದೆ, ಆದರೆ ಕ್ಷೇತ್ರರಕ್ಷಣೆಗಾರರು ತಮ್ಮ ರಕ್ಷಣಾ ಸಾಧನಗಳನ್ನು ತಮ್ಮ ವಸ್ತ್ರಗಳ ಒಳಗೆ ಧರಿಸತಕ್ಕದ್ದು.

ಕ್ಷೇತ್ರರಕ್ಷಣೆಗಾರರು (ನಿರ್ದಿಷ್ಟವಾಗಿ ಬ್ಯಾಟ್‌ಗೆ ಸನಿಹವಿರುವ ಕ್ಷೇತ್ರರಕ್ಷಣಾ ಆಟಗಾರರು ) ಕಾಲಿನ ಮಂಡಿ ರಕ್ಷಕಗಳು, ತಮ್ಮ ಪೋಷಾಕಿನ ಒಳಗೆ ಧರಿಸುವ ತೊಡೆಸಂದು ರಕ್ಷಕಗಳು ('ಬಾಕ್ಸ್‌ಗಳು') ಹಾಗೂ ಎದೆರಕ್ಷಕಗಳನ್ನು ಕೂಡಾ ಧರಿಸಬಹುದಾದರೂ ವಿಕೆಟ್‌‌ -ಕೀಪರ್‌‌ರನ್ನು ಹೊರತುಪಡಿಸಿ ಕ್ಷೇತ್ರರಕ್ಷಣಾ ಕಡೆಯ ಬೇರೆ ಯಾವುದೇ ಸದಸ್ಯರು ಕೈಗವಸುಗಳನ್ನು ಅಥವಾ ಬಾಹ್ಯ ಪಾದ ರಕ್ಷಕಗಳನ್ನು ಧರಿಸುವಂತಿಲ್ಲ. ವಿಕೆಟ್‌‌ -ಕೀಪರ್‌ನನ್ನು‌ ಹೊರತುಪಡಿಸಿ, ಅಂಪೈರ್‌‌ಗಳ ಒಪ್ಪಿಗೆಯನ್ನು ಪಡೆದುಕೊಂಡ ನಂತರವಷ್ಟೇ ಕೈಗಳು ಹಾಗೂ ಬೆರಳುಗಳಿಗೆ ರಕ್ಷಕಸಾಧನಗಳನ್ನು ಧರಿಸಬಹುದಾಗಿರುತ್ತದೆ.

ಮುಖ ರಕ್ಷಕಸಾಧನ ಹಾಗೂ ಶಿರಸ್ತ್ರಾಣಗಳನ್ನು ಧರಿಸಲು ಕ್ಷೇತ್ರರಕ್ಷಣೆಗಾರರಿಗೆ ಅನುಮತಿ ನೀಡಿರುತ್ತದೆ. ಸಾಧಾರಣವಾಗಿ ಬ್ಯಾಟ್ಸ್‌‌ಮನ್‌‌ನಿಂದ ಇರುವ ಅಂತರವು ನೇರವಾಗಿ ತಮ್ಮ ತಲೆಗೆ ಹೊಡೆತವು ತಗುಲದಂತೆ ತಪ್ಪಿಸಿಕೊಳ್ಳಲು ಕಡಿಮೆ ಸಮಯವಿರುವ ಸಿಲ್ಲಿ ಪಾಯಿಂಟ್‌‌ ಅಥವಾ ತೀರಸಮೀಪ/ಸಿಲ್ಲಿ ಮಿಡ್‌‌-ವಿಕೆಟ್‌‌ನಂತಹಾ ಸ್ಥಾನಗಳಲ್ಲಿ ಇವುಗಳನ್ನು ಬಳಕೆ ಮಾಡಲಾಗುತ್ತದೆ. ಅನನುಕೂಲತೆಯಿಂದಾಗಿ "ಶಿರಸ್ತ್ರಾಣ ಸಹಿತ " ಅಥವಾ "ಟೊಪ್ಪಿಗೆಯ ಸಹಿತ"ದ ಕ್ಷೇತ್ರರಕ್ಷಣೆಯ ಜವಾಬ್ದಾರಿಯನ್ನು ಅನೇಕವೇಳೆ ತಂಡದ ಅತ್ಯಂತ ಕಿರಿಯ ಸದಸ್ಯನಿಗೆ ನೀಡಲಾಗುತ್ತದೆ. ಕೇವಲ ಒಂದೆಡೆಯಿಂದ ಮಾಡುತ್ತಿರುವ ಓವರ್‌ಗಳ ಅವಧಿಯಲ್ಲಿ ಮಾತ್ರವೇ ಶಿರಸ್ತ್ರಾಣಗಳನ್ನು ಬಳಸಲಾಗುತ್ತಿದ್ದರೆ , ಅವುಗಳನ್ನು ಬಳಕೆಯಿಲ್ಲದಿದ್ದಾಗ ವಿಕೆಟ್‌‌ ಕೀಪರ್‌‌ನ ಹಿಂದೆ ಇಟ್ಟಿರಲಾಗುತ್ತದೆ. ಕೆಲವು ಕ್ರೀಡಾಂಗಣಗಳ ಮೈದಾನಗಳು ಇದಕ್ಕೆಂದೇ ಉದ್ದೇಶಪೂರ್ವಕವಾಗಿ ನಿರ್ಮಿತವಾದ ತಾತ್ಕಾಲಿಕ ಸಂಗ್ರಹಣಾ ತಾಣವನ್ನು ಪಿಚ್‌‌ನ ಕೆಳಗಿರುವ ಗುಣಿಯೊಂದರ ರೂಪದಲ್ಲಿ ಹೊಂದಿರುತ್ತವೆ, ಇವು ಗಾತ್ರದಲ್ಲಿ ಸರಿಸುಮಾರು ೧m x ೧m x ೧m ಅಳತೆಯದಾಗಿದ್ದು, ಶಿರಸ್ತ್ರಾಣ, ಮೊಣಕಾಲು ರಕ್ಷಕಗಳು ಅಥವಾ ಕ್ಷೇತ್ರರಕ್ಷಣಾ ಪಡೆಯ ಪಾನೀಯಗಳನ್ನು ಸಂಗ್ರಹಿಸಿಡಲು ಬಳಸಬಹುದಾದ ಹುಲ್ಲನ್ನು ಹೊಂದಿರುವ ಸಪಾಟಾದ ಕಂಡಿದ್ವಾರದ ಮೂಲಕ ಇದನ್ನು ತೆರೆಯಬಹುದಾಗಿರುತ್ತದೆ. ಚೆಂಡು ಮುಂಚೆಯೇ ಚೆಂಡು/ಎಸೆತವನ್ನು ತಪ್ಪಿಸಿಕೊಳ್ಳುವ ಅಥವಾ ಹೊಡೆಯಲು ಪ್ರಯತ್ನ ಮಾಡದ ಬ್ಯಾಟ್ಸ್‌‌ಮನ್‌‌ಗೆ ತಗಲಿದ್ದರ ಹೊರತು ಚೆಂಡೊಂದು ಓರ್ವ ಕ್ಷೇತ್ರರಕ್ಷಣೆಗಾರನ ಶಿರಸ್ತ್ರಾಣಕ್ಕೆ ಅದನ್ನು ಧರಿಸಿರದಿದ್ದಾಗ ತಗಲಿದರೆ ಬ್ಯಾಟಿಂಗ್‌ ತಂಡಕ್ಕೆ ೫ ಪೆನಾಲ್ಟಿ ಓಟಗಳನ್ನು ನೀಡಲಾಗುತ್ತದೆ. ೧೯ನೆಯ ಶತಮಾನದಲ್ಲಿ ಈ ನಿಯಮವನ್ನು ಓರ್ವ ಕ್ಷೇತ್ರರಕ್ಷಣೆಗಾರ ತನ್ನ ಟೊಪ್ಪಿಗೆಯನ್ನು ಕ್ಯಾಚ್‌ ಹಿಡಿಯಲು ಬಳಸುವ ಅನುಚಿತ (ಅನೇಕವೇಳೆ ಕೊಳಗದಾಕಾರದ ಟೊಪ್ಪಿಗೆ) ಪದ್ಧತಿಯನ್ನು ತಡೆಗಟ್ಟಲು ಪರಿಚಯಿಸಲಾಯಿತು.

ಕ್ರಿಕೆಟ್‌‌ ಚೆಂಡುಗಳು ಗಡಸಾಗಿರುವುದಿಂದ ಬ್ಯಾಟ್‌ನಿಂದ ಹೊರಹೊಮ್ಮಿ ಅಧಿಕ ವೇಗದಿಂದ ಹೋಗಬಲ್ಲವಾದುದರಿಂದ, ಗಾಯಗೊಳ್ಳುವಿಕೆಯನ್ನು ತಪ್ಪಿಸಲು ರಕ್ಷಣಾ ಸಾಧನಗಳ ಬಳಕೆಯನ್ನು ಶಿಫಾರಸು ಮಾಡಲಾಗುತ್ತದೆ. ಕ್ರಿಕೆಟ್‌‌ ,[] ನಲ್ಲಿ ಕೆಲವೊಂದು ಸಾವುಗಳು ನಡೆದಿದ್ದು ದಾಖಲಾಗಿದ್ದರೂ ಅಂತಹಾ ಸನ್ನಿವೇಶಗಳು ತೀರಾ ವಿರಳ.

ಕ್ಷೇತ್ರರಕ್ಷಣೆಯ ವೈಶಿಷ್ಟ್ಯಗಳು

ಬದಲಾಯಿಸಿ

ಹಲವು ಕ್ರಿಕೆಟ್‌‌ ಆಟಗಾರರು ನಿರ್ದಿಷ್ಟವಾಗಿ ಒಂದು ಕ್ಷೇತ್ರರಕ್ಷಣಾ ಸ್ಥಾನದಲ್ಲಿ ನಿಪುಣರಾಗಿದ್ದು ಸಾಧಾರಣವಾಗಿ ಅಲ್ಲಿಯೇ ಅವರನ್ನು ಕಾಣಬಹುದಾಗಿರುತ್ತದೆ:

  • ಸ್ಲಿಪ್‌ ಸ್ಥಾನಗಳು ಹಾಗೂ ಬ್ಯಾಟ್‌ ಪ್ಯಾಡ್‌ ಸ್ಥಾನಗಳು ತೀವ್ರತರದ ಏಕಾಗ್ರತೆ ಹಾಗೂ ತಗಲಿದ ತಕ್ಷಣ ಚೆಂಡಿನ ವಿಕ್ಷೇಪದ ಪಥವನ್ನು ಅಂದಾಜಿಸಬಲ್ಲ ಸಾಮರ್ಥ್ಯ ಹಾಗೂ ತ್ವರಿತ ಪ್ರತಿಕ್ರಿಯೆಯನ್ನು ಬೇಡುತ್ತವೆ. ಬಹುತೇಕ ಉನ್ನತ ಸಂಖ್ಯೆಯ/ಅಗ್ರ ಸ್ಲಿಪ್‌ ಸ್ಥಾನ ಕ್ಷೇತ್ರರಕ್ಷಣೆಗಾರರು ಉನ್ನತ ಕ್ರಮಾಂಕದ ಬ್ಯಾಟ್‌ಮನ್ನರು (ಶೇನ್‌ ವಾರ್ನೆ, ಆಂಡ್ರ್ಯೂ ಪ್ಲಿಂಟಾಫ್‌ ಮತ್ತು ಗ್ರೇಮ್‌ ಸ್ವಾನ್‌ ಮುಂತಾದ ಕೆಲವರು ಮಾತ್ರವೇ ಈ ನಿಯಮಕ್ಕೆ ಇತ್ತೀಚಿನ ಅಪವಾದಗಳಾಗಿದ್ದರೂ) ಆಗಿರುವ ಪ್ರವೃತ್ತಿ ಹೆಚ್ಚಿದೆ ಏಕೆಂದರೆ ಇವೆರಡೂ ಚಟುವಟಿಕೆಗಳಲ್ಲಿ ಅತ್ಯುತ್ತಮ ಕೈಗಳು ಹಾಗೂ ಕಣ್ಣುಗಳ ಸಹಯೋಗಿತ್ವವು ಅಗತ್ಯವಾಗಿರುತ್ತದೆ.
  • ವೇಗದ ಬೌಲರ್‌/ಚೆಂಡೆಸೆತಗಾರರು ತಾವು ಬೌಲಿಂಗ್‌/ಚೆಂಡೆಸೆಯುವ ಅವಧಿಗಳ ಮಧ್ಯದಲ್ಲಿ ಥರ್ಡ್‌ ಮ್ಯಾನ್‌/ಮೂರನೇ ಸ್ಥಾನದಲ್ಲಿ ಫೈನ್‌ ಲೆಗ್‌‌ ಹಾಗೂ ಡೀಪ್‌ ಬ್ಯಾಕ್‌ವರ್ಡ್‌/ಹಿಂಭಾಗದ ಸ್ಕ್ವೇರ್‌‌ ಸ್ಥಾನಗಳಲ್ಲಿ ಕ್ಷೇತ್ರರಕ್ಷಣೆಗೆ ನಿಂತಿರುವುದನ್ನು ಕಾಣಬಹುದಾಗಿದೆ. ಈ ಸ್ಥಾನಗಳ ಆಯ್ಕೆಯು ಅವರು ತಮ್ಮ ಓವರ್‌ಅನ್ನು ಮಾಡುವುದಕ್ಕೆ ಸೂಕ್ತವಾದ ಭಾಗದಲ್ಲಿದ್ದಾರೆ ಎಂದರ್ಥ. ತುಲನಾತ್ಮಕವಾಗಿ ಅವರು ಪ್ರತಿಕ್ರಿಯಿಸಲು ಬೇಕಾದಷ್ಟು ಸಮಯದೊಂದಿಗೆ ಅಲ್ಪ ಮಟ್ಟಿನ ಕ್ಷೇತ್ರರಕ್ಷಣೆಯ ಕಾರ್ಯದ ಜವಾಬ್ದಾರಿಯನ್ನು ಮಾತ್ರವೇ ಹೊಂದಿದ್ದು ಓವರ್‌ಗಳ ನಡುವೆ ಅವರಿಗೆ ಬೇಕಾದಷ್ಟು ವಿರಾಮವನ್ನು ಪಡೆಯಲು ಸೂಕ್ತವಾಗಿರುತ್ತದೆ. ಸಾಧಾರಣವಾಗಿ ಅವರು ದೂರದ ಸ್ಥಾನಗಳಿಗೆ ಕೂಡಾ ನಿಖರವಾಗಿ ಚೆಂಡನ್ನು ಎಸೆಯುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.
  • ತಮ್ಮ ಕೈಚಳಕ, ಶೀಘ್ರಗತಿ, ನೆಲದ ಮೇಲೆ ಜಿಗಿಯುವಿಕೆ ಹಾಗೂ ಎಸೆತಗಳ ನಿಖರತೆಗಳಿಗೆ ಹೆಸರಾಗಿರುವ ಆಟಗಾರರು ಅನೇಕವೇಳೆ ಪಾಯಿಂಟ್‌, ಕವರ್‌ ಹಾಗೂ ಮಿಡ್‌‌-ವಿಕೆಟ್‌‌ನಂತಹಾ ಒಳಮೈದಾನದ ಸ್ಥಾನಗಳಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿರುತ್ತಾರೆ.

ಆದಾಗ್ಯೂ ಪೂರ್ತಿಯಾಗಿ ತಮ್ಮ ಕ್ಷೇತ್ರರಕ್ಷಣಾ ಕೌಶಲ್ಯಗಳಿಂದಾಗಿಯೇ ಆಟಗಾರರು ಆಯ್ಕೆಯಾಗುವುದು ಅಪರೂಪವಾಗಿದ್ದು ಎಲ್ಲಾ ಆಟಗಾರರು ಒಂದೋ ವಿಶೇಷಜ್ಞ ಬ್ಯಾಟ್ಸ್‌‌ಮನ್‌‌ ಅಥವಾ ಬೌಲರ್‌/ಚೆಂಡೆಸೆತಗಾರ (ಅಥವಾ ಎರಡೂ) ಆಗಿ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಾರಾಗಿ ನಿರೀಕ್ಷಿಸಲಾಗುತ್ತದೆ. ಇದು ವಿಕೆಟ್‌‌ ಕೀಪರ್‌‌ಗಳಿಗೂ ಕೂಡಾ ಅನ್ವಯಿಸುತ್ತಿದ್ದು , ಇವರು ಸಾಧಾರಣವಾಗಿ ಸಮರ್ಥ ಮಧ್ಯಮ ಕ್ರಮಾಂಕದ ಬ್ಯಾಟ್‌ಮನ್ನರಾಗಿರಬೇಕೆಂದು ನಿರೀಕ್ಷಿಸಲಾಗುತ್ತದೆ.

ಕ್ರಿಕೆಟ್‌‌ ಚೆಂಡನ್ನು ಎಸೆಯುವಿಕೆ

ಬದಲಾಯಿಸಿ

ಕ್ರಿಕೆಟ್‌‌ ಚೆಂಡನ್ನು ಸಾಧ್ಯವಾದಷ್ಟೂ ಹೆಚ್ಚಿನ ದೂರಕ್ಕೆ ಎಸೆಯುವ ಹಲವು ಸ್ಪರ್ಧೆಗಳನ್ನು, ನಿರ್ದಿಷ್ಟವಾಗಿ ಆಟದ ಆರಂಭಿಕ ವರ್ಷಗಳ ಅವಧಿಯಲ್ಲಿ ಅಸ್ತಿತ್ವದಲ್ಲಿದ್ದವು. ಎರಡು ಅಡಿ ೧೪೦ಗಜಗಳ ದೂರದ ದಾಖಲೆಯನ್ನು (೧೨೮.೭ m) ಡ/ಡುರ್‌ಹ್ಯಾಮ್‌ ಸ್ಯಾಂಡ್ಸ್‌ ರೇಸ್‌ಕೋರ್ಸ್‌ನಲ್ಲಿ ರಾಬರ್ಟ್‌‌ ಪರ್ಸಿವಲ್‌ ಎಂಬಾತ ೧೮೮೨ರ ಸುಮಾರಿಗೆ ದಾಖಲೆಯನ್ನು ಹೇಗೆ ಸೃಷ್ಟಿಸಿದರು ಎಂಬುದನ್ನು ವಿಸ್ಡೆನ್‌ ವರ್ಣಿಸುತ್ತಾರೆ. ಎಸ್ಸೆಕ್ಸ್‌ನ ಮಾಜಿ ಆಲ್‌ರೌಂಡರ್‌/ಸವ್ಯಸಾಚಿ ಇಯಾನ್‌ ಪಾಂಟ್‌ ೧೯೮೧ರಲ್ಲಿ ಕೇಪ್‌ ಟೌನ್‌ನಲ್ಲಿ ೧೩೮ ಗಜಗಳಷ್ಟು (೧೨೬.೧೯ m) ದೂರಕ್ಕೆ ಚೆಂಡನ್ನು ಎಸೆದಿದ್ದರು. ೧೯೬೮ರ ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಗಳಿಸಿದ ಜಾನಿಸ್‌ ಲ್ಯೂಸಿಸ್‌ ಎಂಬ ಓರ್ವ ಸೋವಿಯೆಟ್‌ ಜ್ಯಾವೆಲಿನ್‌ ಎಸೆತಗಾರ ಒಮ್ಮೆ ಚೆಂಡನ್ನು ೧೫೦ ಗಜಗಳಷ್ಟು ದೂರ ಎಸೆದಿದ್ದರು ಎಂಬ ಬಗ್ಗೆ ಖಚಿತಪಡಿಸದ ವರದಿಗಳಿವೆ.

ವಿಶೇಷಜ್ಞ ಕ್ಷೇತ್ರರಕ್ಷಣಾ ತರಬೇತುದಾರರು

ಬದಲಾಯಿಸಿ

ಇತ್ತೀಚಿನ ವರ್ಷಗಳಲ್ಲಿ ವಿಶೇಷಜ್ಞ ವೃತ್ತಿಪರ ಕ್ರಿಕೆಟ್‌‌ನಲ್ಲಿ ವಿಶೇಷಜ್ಞ ಬ್ಯಾಟಿಂಗ್‌ & ಚೆಂಡೆಸೆತ ತರಬೇತುದಾರರ ಬಳಕೆಯ ಪ್ರವೃತ್ತಿಯ ನಂತರ ವಿಶೇಷಜ್ಞ ಕ್ಷೇತ್ರರಕ್ಷಣಾ ತರಬೇತುದಾರರ ಬಳಕೆಯನ್ನು ಮಾಡುವುದು ಹೆಚ್ಚು ಪ್ರಚಲಿತವಾಗುತ್ತಲಿದೆ. ಕ್ರಿಕೆಟ್‌‌ನಲ್ಲಿ ಪ್ರಸ್ತುತ ಕಾರ್ಯಪ್ರವೃತ್ತರಾಗಿರುವ ಸುಪ್ರಸಿದ್ಧ ವಿಶೇಷಜ್ಞ ಕ್ಷೇತ್ರರಕ್ಷಣಾ ತರಬೇತುದಾರರುಗಳೆಂದರೆ :

  • ಜ್ಯೂಲಿಯೆನ್‌ ಫೌಂಟೇನ್‌ (೧೯೯೮ರಲ್ಲಿ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌‌ ತಂಡವನ್ನು ಸೇರಿಕೊಂಡ, ಓರ್ವ ಮಾಜಿ ಕ್ರಿಕೆಟಿಗೆ & ಬ್ರಿಟಿಷ್‌ ಒಲಿಂಪಿಕ್‌ ಬೇಸ್‌ಬಾಲ್‌ ಆಟಗಾರ )[]
  • ಮೈಕ್‌ ಯಂಗ್‌ (೨೦೦೧ರಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌‌ ತಂಡವನ್ನು ಸೇರಿಕೊಂಡ , ಓರ್ವ ಮಾಜಿ ವೃತ್ತಿಪರ ಬೇಸ್‌ಬಾಲ್‌ ಆಟಗಾರ , ನಿರ್ವಾಹಕ & ತರಬೇತುದಾರ )
  • ಟ್ರೆವರ್‌ ಪೆನ್ನೆ (೨೦೦೫ರಲ್ಲಿ ಶ್ರೀಲಂಕಾ ಕ್ರಿಕೆಟ್‌‌ ತಂಡವನ್ನು ಸೇರಿಕೊಂಡ , ಓರ್ವ ಮಾಜಿ ವೃತ್ತಿಪರ ಕ್ರಿಕೆಟಿಗ)
  • ರಿಚರ್ಡ್‌‌ ಹಲ್‌ಸಾಲ್‌ (೨೦೦೮ರಲ್ಲಿ ಇಂಗ್ಲೆಂಡ್‌ ಕ್ರಿಕೆಟ್‌‌ ತಂಡವನ್ನು ಸೇರಿಕೊಂಡ ಜಿಂಬಾಬ್ವೆಯ ಓರ್ವ ಮಾಜಿ PE ಶಿಕ್ಷಕ & ಮಾಜಿ ವೃತ್ತಿಪರ ಕ್ರಿಕೆಟಿಗ)

ಟಿಪ್ಪಣಿಗಳು

ಬದಲಾಯಿಸಿ
  1. "ಬ್ಲಫರ್ಸ್‌ ಗೈಡ್‌ ಟು ಕ್ರಿಕೆಟ್‌‌". Archived from the original on 2008-07-23. Retrieved 2011-04-16.
  2. ಶಾರ್ಟ್‌ ಲೆಗ್‌ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿರುವಾಗ ಕಣತಲೆಗೆ ಪೆಟ್ಟು ಬಿದ್ದು ರಮಣ್‌ ಲಾಂಬಾ ಮರಣಿಸಿದ್ದರು.
  3. ವಿಂಡೀಸ್‌ ಕ್ರಿಕೆಟ್‌ ಮಂಡಳಿಯಿಂದ ಉತ್ತಮ ಹೆಜ್ಜೆ Cricinfo ಪಡೆದಿದ್ದು ೦೩ ನವೆಂಬರ್‌‌ ೨೦೦೯

ಇವನ್ನೂ ಗಮನಿಸಿ‌

ಬದಲಾಯಿಸಿ
  • ಕ್ರಿಕೆಟ್‌ನ ಪಾರಿಭಾಷಿಕ ಶಬ್ದಗಳು
  • ಕ್ರಿಕೆಟ್‌ನ ನಿಯಮಗಳು
  • ಬೌಲಿಂಗ್/ಚೆಂಡೆಸೆತ
  • ಬ್ಯಾಟಿಂಗ್

ಬಾಹ್ಯ ಕೊಂಡಿಗಳು‌

ಬದಲಾಯಿಸಿ