ಕ್ರಿಸ್ತ ಶಕ

(ಕ್ರಿಸ್ತಪೂರ್ವ ಇಂದ ಪುನರ್ನಿರ್ದೇಶಿತ)

ಕ್ರಿಸ್ತಶಕ- ಪ್ರಪಂಚದಲ್ಲಿ ಈಗ ವ್ಯಾಪಕವಾಗಿ ಬಳಕೆಯಲ್ಲಿರುವ ವರ್ಷ ತಿಂಗಳು ದಿವಸಗಳನ್ನು ಸೂಚಿಸುವ ಒಂದು ವ್ಯವಸ್ಥೆ (ಕ್ರಿಶ್ಚನ್ ಈರ). ಉದಾಹರಣೆಗೆ, 15-8-1972 ಎಂದರೆ ಒಂದು ನಿಶ್ಚಿತ ಮುಹೂರ್ತದಿಂದ ತೊಡಗಿ 1971 ವರ್ಷಗಳು ಮತ್ತು 7 ತಿಂಗಳುಗಳು ಸಂದ ಬಳಿಕ ಬರುವ 15ನೆಯ ದಿವಸ ಎಂದು ಅರ್ಥವಾಗುತ್ತದೆ.

ಹಿನ್ನೆಲೆ

ಬದಲಾಯಿಸಿ

ಇದು ಸಾಂಪ್ರದಾಯಿಕವಾಗಿ ನಜರೆತ್ ನ ಯೇಸುವಿನ ಜನ್ಮದ ವರ್ಷಕ್ಕೆ ಸಂಬಂಧಿಸಿದ್ದು , ಕ್ರಿಸ್ತಶಕವನ್ನು ಆ ಘಟನೆಯಿಂದ ವರ್ಷಗಳನ್ನು ಎಣಿಸುತ್ತದೆ. ಕ್ರಿಸ್ತಪೂರ್ವ ಎಂಬುದು ಅದಕ್ಕಿಂತ ಹಿಂದಿನ ವರ್ಷಗಳನ್ನು ಸೂಚಿಸುತ್ತದೆ. ಈ ಯೋಜನೆಯಲ್ಲಿ ಯಾವುದೇ ಶೂನ್ಯವರ್ಷವಿಲ್ಲ, ಆದ್ದರಿಂದ ಕ್ರಿ.ಶ. ೧ ವರ್ಷವು ಕ್ರಿ.ಪೂ. ೧ ವರ್ಷದ ನಂತರ ಕೂಡಲೇ ಆರಂಭ. ಈ ವರ್ಷಗಣನೆಯ ವ್ಯವಸ್ಥೆಯನ್ನು 525 ರಲ್ಲಿ ಸೈಥಿಯಾ ಮೈನರ್ ನ ಡಿಯೊನಿಯಿಸಿಯಸ್ ಎಕ್ಸಿಗ್ಯೂಸ್ (ಸು. 496-540) ಎಂಬ ಇಟಲಿ ದೇಶದ ಕ್ರಿಶ್ಚನ್ ಪಾದ್ರಿ ಅವರು ರೂಪಿಸಿದರು, ಆದರೆ ಇದು 800 ರ ವರೆಗೂ ವ್ಯಾಪಕವಾಗಿ ಬಳಕೆಯಾಗಲಿಲ್ಲ.ವಾಸ್ತವಿಕವಾಗಿ ಈತನೇ ಕ್ರಿಸ್ತಶಕದ ಸಂಸ್ಥಾಪಕ.

ಡಯೊನೀಸಿಯಸನ ಸುಧಾರಣೆಯನ್ನು ಎಲ್ಲ ಗುರುಗಳೂ ಎಲ್ಲ ಪಂಥಗಳವರೂ ಒಡನೆಯೇ ಸ್ವೀಕರಿಸಲಿಲ್ಲ : ಸಾಕಷ್ಟು ದೀರ್ಘಕಾಲ ಕ್ರಿಸ್ತನ ಹುಟ್ಟಿನ - ಆದ್ದರಿಂದ ಕ್ರಿಸ್ತಶಕದ - ಆರಂಭದ ದಿವ¸ ಮತ್ತು ವರ್ಷವನ್ನು ಕುರಿತು ವಿವಾದ ಮುಂದುವರಿದಿತ್ತು. ಇಂಗ್ಲೆಂಡ್ 676ರಲ್ಲಿ ಡಯೊನೀಸಿಯಸ್ ವಿಧಾನವನ್ನು ಬಳಕೆಗೆ ತಂದಿತು. ಯುರೋಪ್ ಖಂಡದಲ್ಲಿ ಇದು ವ್ಯಾಪಕವಾಗಿ ಪಸರಿಸಿದ್ದು 11ನೆಯ ಶತಮಾನದ ಅನಂತರ; ಗ್ರೀಕ್ ಪ್ರಪಂಚದಲ್ಲಿ ಕಾಲೂರಿದ್ದು 15ನೆಯ ಶತಮಾನದಲ್ಲಿ.

ಕ್ರಿ.ಶ ( ಕ್ರಿಸ್ತಶಕ) ಮತ್ತು ಕ್ರಿ.ಪೂ. (ಕ್ರಿಸ್ತಪೂರ್ವ)

ಬದಲಾಯಿಸಿ

ಜೂಲಿಯನ್ ಮತ್ತು ಗ್ರೆಗೋರಿಯನ್ ಕ್ಯಾಲೆಂಡರ್ ಗಳಲ್ಲಿ ಕನ್ನಡದಲ್ಲಿ ಕ್ರಿ.ಶ ( ಕ್ರಿಸ್ತಶಕ) ( ಇಂಗ್ಲೀಶಿನಲ್ಲಿ AD - ಅಂದರೆ anno Domini [][] ) ಮತ್ತು ಕ್ರಿ.ಪೂ. (ಕ್ರಿಸ್ತಪೂರ್ವ) ( ಇಂಗ್ಲೀಶಿನಲ್ಲಿ BC - (before Christ[][][] ) ಪದಗಳನ್ನು ಕ್ರಿಸ್ತಶಕ ಮತ್ತು ಕ್ರಿಸ್ತಪೂರ್ವ ವರ್ಷಗಳನ್ನು ಹೆಸರಿಸಲು ಬಳಸಲಾಗುತ್ತದೆ. ಅನ್ನೊ ಡೊಮಿನಿ ಎಂಬ ಮಧ್ಯಯುಗದ ಲ್ಯಾಟಿನ್ ಭಾಷೆಯ ಪದದ ಅರ್ಥ 'ಪ್ರಭುವಿನ ವರ್ಷ' ಎಂದರ್ಥ ಇದನ್ನು "ನಮ್ಮ ಪ್ರಭುವಿನ ವರ್ಷದ" ಎಂದೂ ಅನುವಾದಿಸಲಾಗುತ್ತದೆ.

BC ಎಂಬುದು Before Christ ( ಕ್ರಿಸ್ತನ ಮುಂಚೆ ) ಎಂಬುದರ ಇಂಗ್ಲಿಷ್ ಸಂಕ್ಷಿಪ್ತ ರೂಪವಾಗಿರುವುದರಿಂದ, ಎಡಿ ಎಂದರೆ After Death (ಯೇಸುವಿನ ಮರಣಾನಂತರ ) ಎಂದು ತಪ್ಪಾಗಿ ಅನೇಕಸಲ ನಿರ್ಣಯಕ್ಕೆ ಬರಲಾಗುತ್ತದೆ, ಹಾಗಾದಲ್ಲಿ ಯೇಸುವಿನ ಜೀವಿತದ ಅಂದಾಜು 33 ವರ್ಷಗಳು ಕ್ರಿ.ಪೂ. ಮತ್ತು ಕ್ರಿ.ಶ. ಸಮಯದ ಅಳತೆಗಳಲ್ಲಿ ಸೇರಿಕೊಳ್ಳುವುದಿಲ್ಲ.

ಸಾಂಪ್ರದಾಯಿಕವಾಗಿ, ಇಂಗ್ಲಿಷ್ ನಲ್ಲಿ ಲ್ಯಾಟಿನ್ ನಲ್ಲಿನ ಬಳಕೆಯನ್ನು ಅನುಸರಿಸಿ "AD" ನಂತರ ವರ್ಷದ ಸಂಖ್ಯೆಯ ಮೊದಲಿಗೂ ಬಿ.ಸಿ ಯನ್ನು ವರ್ಷದ ಸಂಖ್ಯೆಯ ನಂತರವೂ ಇರಿಸಲಾಗುತ್ತದೆ (ಉದಾಹರಣೆಗೆ: AD 2017, ಆದರೆ 68 BC),

ಈಗಿನ ಬಳಕೆ

ಬದಲಾಯಿಸಿ

ಇಂದು ಕ್ರಿಸ್ತಶಕ ಪ್ರಪಂಚದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವುದು ಮಾತ್ರವಲ್ಲ, ಎಲ್ಲ ನಾಗರಿಕರಿಗೂ ಸುಲಭವಾಗಿ ಅರ್ಥವೂ ಆಗುವುದು. ಇದರಿಂದಾಗಿ ವರ್ಷ, ತಿಂಗಳು, ದಿವಸಗಳ ನಿರೂಪಣೆಯಲ್ಲಿ ಒಂದು ವಿಧದ ಏಕತೆ ಒದಗಿದೆ.

ಗ್ರೆಗೋರಿಯನ್ ಕ್ಯಾಲೆಂಡರ್ ಇಂದು ಜಗತ್ತಿನಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಕ್ಯಾಲೆಂಡರ್ ಆಗಿದೆ. ದಶಕಗಳವರೆಗೆ, ಅಂತರರಾಷ್ಟ್ರೀಯ ಸಂವಹನ, ಸಾಗಣೆ ಮತ್ತು ವಾಣಿಜ್ಯ ಏಕೀಕರಣದ ಪ್ರಾಯೋಗಿಕ ಆಸಕ್ತಿಗಳಲ್ಲಿ ಅಳವಡಿಸಿಕೊಂಡ ಅನಧಿಕೃತ ಜಾಗತಿಕ ಮಾನದಂಡವಾಗಿದೆ ಮತ್ತು ವಿಶ್ವಸಂಸ್ಥೆಯಂತಹ ಅಂತರಾಷ್ಟ್ರೀಯ ಸಂಸ್ಥೆಗಳಿಂದ ಗುರುತಿಸಲ್ಪಟ್ಟಿದೆ.

ಈ ಕ್ರಿ.ಶ ( AD ) ವನ್ನು ಪ್ರಸ್ತುತ ಶಕ ವರ್ಷ ( ಇಂಗ್ಲೀಷಿನಲ್ಲಿ Current or Common Era -ಹ್ರಸ್ವರೂಪದಲ್ಲಿ CE ) ಎಂದೂ ಹಿಂದಿನ ವರ್ಷಗಳನ್ನು Before the Common or Current Era (BCE) ಎಂದೂ ಬಳಸುವುದನ್ನು ಕೆಲವರು ಹೆಚ್ಚು ತಟಸ್ಥವಾಗಿಯೂ ಕ್ರಿಶ್ಚಿಯನ್ನೇತರ ಜನರನ್ನು ಒಳಗೊಳ್ಳುವಂತೆಯೂ ನೋಡುತ್ತಾರೆ

ಖಗೋಳಶಾಸ್ತ್ರದ ವರ್ಷ ಸಂಖ್ಯಾಪದ್ಧತಿ ಮತ್ತು ಐಎಸ್ಒ 8601 ವ್ಯವಸ್ಥೆಗಳು ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದ ಪದಗಳು ಅಥವಾ ಸಂಕ್ಷೇಪಣಗಳನ್ನು ಬಳಸುವುದಿಲ್ಲ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಉಲ್ಲೇಖಗಳು

ಬದಲಾಯಿಸಿ
  1. "anno Domini". Collins English Dictionary.
  2. "anno Domini". American Heritage Dictionary. Houghton Mifflin Harcourt.
  3. "BC". Collins English Dictionary.
  4. "before Christ". American Heritage Dictionary. Houghton Mifflin Harcourt.
  5. "BC". Merriam Webster Online Dictionary.