ಕ್ರಿಶ್ಚಿಯಾನ್ ಐಕ್ಮನ್

ಕ್ರಿಶ್ಚಿಯಾನ್ ಐಕ್ಮನ್ ( 11 ಅಗಸ್ಟ್ 1858 – 5 ನವೆಂಬರ್ 1930) ಆಹಾರ ಪುಷ್ಟಿಯನ್ನು ಕುರಿತ ಸಂಶೋಧನೆಗಳಿಗೆ ಹೆಸರಾದ ಡಚ್ (ನೆದರ್‍ಲ್ಯಾಂಡ್ಸ್)ರೋಗವಿಜ್ಞಾನಿ. ಬೆರಿಬೆರಿ ರೋಗವನ್ನು ನಿವಾರಿಸುವ ಜೀವಾಣುವಾದ ಅನ್ಯೂರಿನನ್ನು ಕಂಡುಹಿಡಿದು ನೊಬೆಲ್ ಬಹುಮಾನ ಪಡೆದ (1929). ಆಂಸ್ಟರ್ಡಾಂ ವಿಶ್ವವಿದ್ಯಾನಿಲಯದಲ್ಲಿ ವೈದ್ಯ ಪದವೀಧರನಾದ. ಬರ್ಲಿನ್‍ನಲ್ಲಿದ್ದ ವಿಶ್ವ ಪ್ರಸಿದ್ಧ ರಾಬರ್ಟ್ ಕಾಕ್ ಕೈಕೆಳಗೆ ಏಕಾಣುಜೀವಿ ವಿಜ್ಞಾನ ಕಲಿತ. ಅಲ್ಲಿಂದ ಡಚ್ಚರ ವಸಾಹತಾಗಿದ್ದ ಬಟೇವಿಯ (ಇಂದಿನ ಇಂಡೋನೇಷ್ಯ)ಕ್ಕೆ ಹೋಗಿ ಅಲ್ಲಿ ರೋಗವಿಜ್ಞಾನ ಸಂಶೋಧನಾ ಸಂಸ್ಥೆಗೆ ನಿರ್ದೇಶಕನಾದ. ಆ ದೇಶದಲ್ಲಿ ಬಹುವಾಗಿ ಹರಡಿ ಕಾರಣವೇ ಗೊತ್ತಿಲ್ಲದೆ ಜನರು ಬಲಿಯಾಗುತ್ತಿದ್ದ ಬೆರಿಬೆರಿ ರೋಗದ ಸಂಶೋಧನೆಯನ್ನು 1890ರಿಂದ ಸುಮಾರು ಏಳು ವರ್ಷಗಳ ಕಾಲ ನಡೆಸಿದ. ಹೊಳಪಿಟ್ಟ ಬಿಳಿಯ ಅಕ್ಕಿ ಹಾಕಿ ಪಾರಿವಾಳಗಳನ್ನು ಸಾಕಿ ಬೆರಿಬೆರಿ ರೋಗ ಬರುವುದನ್ನು ಮೊದಲು ತೋರಿಸಿಕೊಟ್ಟ ಇನ್ನೊಬ್ಬ ಡಚ್ ವೈದ್ಯ ಗ್ರಿನ್ಸ್‌ನೊಂದಿಗೆ ಸೇರಿ ಬೆರಿಬೆರಿ ರೋಗಕ್ಕೆ ಅಕ್ಕಿ ತವುಡೇ ಮದ್ದು ಎನ್ನುವುದನ್ನು ತೋರಿಸಿದಾಗ ಇಡೀ ಜೀವಾಣುಗಳ ಶೋಧನೆಯ ನಾಂದಿ ಆಯಿತು. ಐಕ್ಮನ್ ಮತ್ತೆ ಹಾಲೆಂಡಿಗೆ ಮರಳಿ 1928ರವರೆಗೂ ಆರೋಗ್ಯವಿಜ್ಞಾನ ಪ್ರಾಧ್ಯಾಪಕನಾಗಿದ್ದ. ಸಾಯುವ 2 ವರ್ಷ ಮುಂಚೆ ನಿವೃತ್ತನಾದ.

ಕ್ರಿಶ್ಚಿಯಾನ್ ಐಕ್ಮನ್
ಕ್ರಿಶ್ಚಿಯಾನ್ ಐಕ್ಮನ್
ಜನನ(೧೮೫೮-೦೮-೧೧)೧೧ ಆಗಸ್ಟ್ ೧೮೫೮
Nijkerk, Netherlands
ಮರಣNovember 5, 1930(1930-11-05) (aged 72)
Utrecht, Netherlands
ರಾಷ್ಟ್ರೀಯತೆಡಚ್
ಕಾರ್ಯಕ್ಷೇತ್ರPhysiology
ಪ್ರಸಿದ್ಧಿಗೆ ಕಾರಣBeriberi, vitamins
ಗಮನಾರ್ಹ ಪ್ರಶಸ್ತಿಗಳುNobel Prize for Physiology or Medicine (1929)

ಬಾಹ್ಯ ಸಂಪರ್ಕಗಳು

ಬದಲಾಯಿಸಿ