ಕ್ರಿಶನ್ ಕಾಂತ್ ಸೈನಿ

ಭಾರತೀಯ ವಾಯುಪಡೆಯ ಅಧಿಕಾರಿ

ಕ್ರಿಶನ್ ಕಾಂತ್ ಸೈನಿ (೨೬ ಅಕ್ಟೋಬರ್ ೧೯೩೧-೧೪ ಅಕ್ಟೋಬರ್ ೨೦೧೮) ಅವರು ಭಾರತೀಯ ವಾಯುಪಡೆಯ ೧೦೪ ಸ್ಕ್ವಾಡ್ರನ್‌ನ ಹೆಲಿಕಾಪ್ಟರ್ ಪೈಲಟ್.[] ಇವರು ವಿಶ್ವದ ಅತಿ ಎತ್ತರದ ಹೆಲಿಕಾಪ್ಟರ್ ಲ್ಯಾಂಡಿಂಗ್ ಅನ್ನು ಸಾಧಿಸುವ ಮೂಲಕ ಹೆಲಿಕಾಪ್ಟರ್ ಏವಿಯಾನಿಕ್ಸ್‌ನಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ೧೯೬೯ರ ಮೇ ೮ ರಂದು ಕಾರ್ಕೋರಂ ಶ್ರೇಣಿಗಳಲ್ಲಿ ೬೮೫೮ ಮೀಟರ್ (೨೨೫೦೦ ಅಡಿ) ಎತ್ತರದಲ್ಲಿ ಚೀತಾ ಹೆಲಿಕಾಪ್ಟರ್ ಅನ್ನು ಭೂಸ್ಪರ್ಶ ಮಾಡುವ ಮೂಲಕ ಅವರು ಈ ಸಾಧನೆಯನ್ನು ಮಾಡಿದರು.[]   

ವಿಂಗ್ ಕಮಾಂಡರ್

ಕ್ರಿಶನ್ ಕಾಂತ್ ಸೈನಿ

ಅತಿ ವಿಶಿಷ್ಟ ಸೇವಾ ಪದಕ, ವೀರ ಚಕ್ರ, ವಾಯು ಸೇನಾ ಪದಕ
ಜನನ(೧೯೩೧-೧೦-೨೬)೨೬ ಅಕ್ಟೋಬರ್ ೧೯೩೧
ಮರಣ14 October 2018(2018-10-14) (aged 86)
ನವ ದೆಹಲಿ, ಭಾರತ
ವ್ಯಾಪ್ತಿಪ್ರದೇಶ ಭಾರತ
ಶಾಖೆ Indian Air Force
ಸೇವಾವಧಿ1953–1973
ಶ್ರೇಣಿ(ದರ್ಜೆ) ವಿಂಗ್ ಕಮಾಂಡರ್
ಘಟಕ೧೦೪ ಹೆಲಿಕಾಪ್ಟರ್ ಸ್ವಾರ್ ಡನ್
ಅಧೀನ ಕಮಾಂಡ್೧೦೪ ಹೆಲಿಕಾಪ್ಟರ್ ಸ್ವಾರ್ ಡನ್
ಭಾಗವಹಿಸಿದ ಯುದ್ಧ(ಗಳು)ಚೀನಾ-ಭಾರತ ಯುದ್ಧ
ಪ್ರಶಸ್ತಿ(ಗಳು) ಅತಿ ವಿಶಿಷ್ಟ ಸೇವಾ ಪದಕ
ವೀರ ಚಕ್ರ
ವಾಯು ಸೇನಾ ಪದಕ
ಸಂಗಾತಿದಿ. ಪ್ರೇಮ್ ಭಲ್ಲಾ

ಸೈನಿ ಅವರು ಭಾರತೀಯ ವಾಯುಪಡೆಯ ಒಬ್ಬ ಪ್ರತಿಷ್ಠಿತ ಅಧಿಕಾರಿ ಆಗಿದ್ದರು. ೧೯೬೨ರ ಚೀನಾ-ಭಾರತ ಯುದ್ಧದಲ್ಲಿ, ಚೀನಾದ ಪಡೆಗಳು ಅನೇಕ ದಿಕ್ಕುಗಳಿಂದ ಶತ್ರುಗಳ ಗುಂಡಿನ ದಾಳಿಯ ನಡುವೆಯೂ ತಮ್ಮ ಹೆಲಿಕಾಪ್ಟರ್ ನಲ್ಲಿ ಧೈರ್ಯಶಾಲಿಯಾಗಿ ಯುದ್ಧ ಪೀಡಿತರನ್ನು ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ನಡೆಸಿದಾಗ, ಭಾರತೀಯ ಸಶಸ್ತ್ರ ಪಡೆಗಳಲ್ಲಿನ ಶೌರ್ಯಕ್ಕಾಗಿ ಮೂರನೇ ಅತ್ಯುನ್ನತ ಪ್ರಶಸ್ತಿಯಾದ ಪ್ರತಿಷ್ಠಿತ ವೀರ ಚಕ್ರವನ್ನು ಗೆದ್ದರು.[] ಗುಂಡೇಟಿನಿಂದ ತಾತ್ಕಾಲಿಕವಾಗಿ ಕುರುಡರಾಗಿದ್ದರೂ, ತಮ್ಮ ಕಾರ್ಯಾಚರಣೆಯನ್ನು ಶೌರ್ಯದಿಂದ ನಿರ್ವಹಿಸಿದಕ್ಕಾಗಿ ವೀರ ಚಕ್ರವನ್ನು ಪಡೆದರು. ವಿಂಗ್ ಕಮಾಂಡರ್ ಸೈನಿ ನಂತರ ತಮ್ಮ ಶೌರ್ಯಕ್ಕಾಗಿ ವಾಯುಸೇನ ಪದಕ ಮತ್ತು ಸಾರ್ಥಕ ಸೇವೆಗಾಗಿ ಅತಿ ವಿಶಿಷ್ಠ ಸೇವಾ ಪದಕ ಪಡೆದರು.

ನಂತರ ಅವರನ್ನು ಪವನ್ ಹನ್ಸ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿಸಲಾಯಿತು. ಆ ಅವಧಿ ಯಲ್ಲಿ ಅವರು ಹೆಲಿಕಾಪ್ಟರ್‌ಗಳ ಗುಣಮಟ್ಟವನ್ನು ಸರ್ಕಾರದ ಗಮನಕ್ಕೆ ತಂದರು.

ಶೌರ್ಯ ಪ್ರಶಸ್ತಿ

ಬದಲಾಯಿಸಿ

ವಿಂಗ್ ಕಮಾಂಡರ್ ಸೈನಿ ಅವರ ಶೌರ್ಯ ಪ್ರಶಸ್ತಿ ಉಲ್ಲೇಖವು ಈ ಕೆಳಗಿನಂತಿದೆ:

ಫ್ಲೈಟ್ ಲೆಫ್ಟಿನೆಂಟ್ ಕ್ರಿಶನ್ ಕಾಂತ್ ಸೈನಿ ಅವರು ಅಕ್ಟೋಬರ್, ೧೯೬೦ ರಿಂದ ಎನ್‌ಇ‌ಎಫ್‌ಎ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನವೆಂಬರ್ ೧೮, ೧೯೬೨ ರಂದು, ಅವರು ತಮ್ಮ ಸಹ-ಪೈಲಟ್‌ನೊಂದಿಗೆ ವಾಲಾಂಗ್ ಪ್ರದೇಶದಲ್ಲಿ ಯುದ್ಧದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಸ್ಥಳಾಂತರಿಸುತ್ತಿದ್ದರು. ಶತ್ರು ಪಡೆಗಳಿಂದ ಮುಕ್ತವಾಗಿದೆ ಎಂದು ವರದಿಯಾದ ಶತ್ರು ರೇಖೆಯ ಸಮೀಪವಿರುವ ಹೆಲಿಪ್ಯಾಡ್‌ನಲ್ಲಿ ಇಳಿಯಲು ಅವರಿಗೆ ಸೂಚಿಸಲಾಯಿತು. ಅವರು ಹೆಲಿಪ್ಯಾಡ್ ಮೇಲೆ ಬಂದಾಗ, ಚೀನಾ ಪಡೆಗಳು ಅನೇಕ ದಿಕ್ಕುಗಳಿಂದ ಗುಂಡಿನ ದಾಳಿ ನಡೆಸಿತು. ದಾಳಿಯಿಂದಾಗಿ ಹೆಲಿಕಾಪ್ಟರ್ ನ ಹಲವಾರು ಕಡೆ ಹಾನಿಗೊಳಗಾಗಿ, ಮುಖ್ಯ ರಿಡಕ್ಟರ್ ಹಾನಿಗೊಳಗಾಯಿತು. ಅದರಿಂದ ರಭಸವಾಗಿ ಚಿಮ್ಮಿದ ತೈಲವು ಅವರನ್ನು ತಾತ್ಕಾಲಿಕವಾಗಿ ಕುರುಡನನ್ನಾಗಿ ಮಾಡಿತು. ಅವರ ಬಲ ಪಾದವು ಗಾಯಗೊಂಡು ತೀವ್ರ ರಕ್ತಸ್ರಾವವಾಗಿತ್ತು. ದೃಢ ನಿರ್ಣಯ, ಮನಸ್ಸಿನ ನಿಗ್ರಹ ಮತ್ತು ಕೌಶಲ್ಯದಿಂದ, ಅವರು ಶತ್ರುಗಳ ಬೆಂಕಿಯಿಂದ ಹೆಚ್ಚಿನ ಹಾನಿಯನ್ನು ತಪ್ಪಿಸಲು ಹೆಲಿಕಾಪ್ಟರ್ ಅನ್ನು ಬಹುತೇಕ ನೆಲದ ಮಟ್ಟಕ್ಕೆ ಧುಮುಕಿಸಿದರು. ಹೀಗೆ, ಹೆಲಿಕಾಪ್ಟರ್, ಅವರ ಸಹ ಪೈಲಟ್ ಮತ್ತು ಪ್ರಯಾಣಿಕರ ಜೀವಗಳನ್ನು ಉಳಿಸಿದರು. ಹಾನಿಗೊಳಗಾದ ಹೈಡ್ರಾಲಿಕ್ ಸಿಸ್ಟಮ್ ನೊಂದಿಗೆ ವೈಯಕ್ತಿಕವಾಗಿ ತೀವ್ರ ಗಾಯಗೊಂಡಿದ್ದರೂ, ಅವರು ತಮ್ಮ ಕೌಶಲ್ಯದಿಂದ ವಿಮಾನವನ್ನು ನೆಲಕ್ಕೆ ತಂದರು.

ಉಲ್ಲೇಖಗಳು

ಬದಲಾಯಿಸಿ
  1. ವಿಂಗ್ ಕಮಾಂಡರ್ ಕ್ರಿಶನ್ ಕಾಂತ್ ಸೈನಿ
  2. "ಭಾರತ ರಕ್ಷಕ". Archived from the original on 2024-04-07. Retrieved 2024-04-07.
  3. ಪವನ್ ಹನ್ಸ್