ಕ್ರಯೋನಿಕ್ಸ್ ಎನ್ನುವುದು ಆಧೂನಿಕ ವಿಜ್ಞಾನದ ತಂತ್ರವಾಗಿದೆ. ಈ ಪದವನ್ನು ಗ್ರೀಕ್ ಭಾಷೆಯಿಂದ ಅಳವಡಿಸಲಾಗಿದೆ (ಕ್ರಯೋಸ್= ಶೀಥಲ) ಇದರಲ್ಲಿ ಕಡಿಮೆ ತಾಪಮಾನದಲ್ಲಿ (ಸಾಮಾನ್ಯವಾಗಿ -196 ° C ನಲ್ಲಿ) ನಿರ್ಜೀವವಾದ ದೇಹಗಳ ಸಂರಕ್ಷಣೆ ಮಾಡಲಾಗುತ್ತದೆ.ಮಿಚಿಗನ್ ಕಾಲೇಜಿನ ಭೌತವಿಜ್ಞಾನ ಅಧ್ಯಾಪಕ ರಾಬರ್ಟ್ ಈಟಿಂಜರ್ ಅವರು ತಮ್ಮ ಪುಸ್ತಕ " ದ ಪ್ರಾಸ್ಪೆಕ್ಟ್ ಆಫ಼್ ಇಮ್ಮೊರ್ಟೆಲಿಟಿ " ಮೂಲಕ ಕ್ರಯೋನಿಕ್ಸ್ ಪದ್ಧತಿಗೆ ಬುನಾದಿ ನೀಡಿದರು.[]

ಮೃತ ಶರೀರಗಳನ್ನು ಹೀಗೆ ಕಡಿಮೆ ತಾಪಮಾನದಲ್ಲಿ ಹಲವಾರು ವರ್ಷಗಳು ಇಟ್ಟೂ ಭವಿಷ್ಯದಲ್ಲಿ ಉನ್ನತ ವೈಜ್ಞಾನಿಕ ಪ್ರಗತಿಯ ಕಾಲದಲ್ಲಿ ಇಂತಗಹ ಶರೀರಗಳನ್ನು ನವೀಕೃತಗೊಳಿಸಿ ಮತ್ತು ಪುನಃ ಜೀವಕ್ಕೆ ತರುವ ಆಶಯದಿಂದ ಕ್ರಯೋನಿಕ್ಸ್ ಮೇಲೆ ಸ೦ಶೋದನೆ ದಿನೇ ದಿನೇ ಹೆಚ್ಚುತ್ತಿದೆ. ಕ್ರಯೋನಿಕ್ಸ್ ತಂತ್ರದ ಬಗ್ಗೆ ಸ೦ಶೋದನೆತಯಲ್ಲಿ ನಿರತರಾದವರನ್ನು ಕ್ರಯೋನಿಸಿಸ್ಟ್ಸ್ ಎನ್ನುವರು.ಹಲವಾರು ಸಂಸ್ಥೆಗಳು ಇದರ ಬಗ್ಗೆ ಸಂಶೋಧನೆ ಮಾಡುತ್ತಿದ್ದಾರೆ. ಸಾವು ಒಂದು ಕ್ರಿಯೆ ಹೊರೆತು ಪ್ರಕ್ರಿಯೆಯಲ್ಲ ಎನ್ನುವ ನಂಬಿಕೆಯಿಂದ ಕ್ರಯೋನಿಕ್ಸ್ ಅಲ್ಲಿ ಹಲವಾರು ಪ್ರಯೋಗಗಳು ನಡೆಯುತ್ತಿವೆ. ಪ್ರಸ್ತುತ ವೈಜ್ಞಾನಿಕ ತಂತ್ರಗಳು ಮೃತ ಶರೀರಗಳ ಸಂರಕ್ಷಣೆಗೆ ಸೀಮಿತವಾಗಿದ್ದು, ಅವುಗಳ ಪುನಶ್ಚೇತನ ಈವರೆಗೂ ಸಾಧ್ಯವಗಿಲ್ಲ. ಪುನರುಜ್ಜಿವಿತಗೊಳಿಸುವ ಪ್ರಕ್ರಿಯೆ ಸಾಮಾನ್ಯವಾದದಲ್ಲ. ಸಂರಕ್ಷಣೆ ಪ್ರಕ್ರಿಯೆಯಲ್ಲಿ ಉಷ್ಣ ಒತ್ತಡ, ರಾಸಾಯನಿಕ ವಿಷತ್ವ ಆಮ್ಲಜನಕದ ಕೊರತೆ ಸೇರಿದಂತೆ ದೇಹಕ್ಕೆ ಕೆಲವು ಬದಲಾಯಿಸಲಾಗದ ಹಾನಿಗಳು ಉಂಟಾಗಬಹುದು ಅಲ್ಲದೆ ಪುನರುಜ್ಜಿವಿತಗೊಳಿಸಿದರೂ ಅಂಗಾಂಗಗಳು ಹೇಗೆ ಕಾರ್ಯ ನಿರ್ವಹಿಸುತ್ತದೆ, ಮೆದುಳಿನ ಚಟುವಟಿಕೆ ತಾತ್ಕಾಲಿಕವಾಗಿ ನಿಲ್ಲಿಸುವುದರಿಂದ ಆಗುವ ಪರಿಣಾಮಗಳೇನು ಎನ್ನುವುದು ಊಹಿಸಲೂ ಸಾಧ್ಯವಿಲ್ಲ.ಅಂಗಾಂಶ ಪುನರುತ್ಪಾದನೆ ಬೇಕಾಗಬಹುದು. ಸಾಮಾನ್ಯವಾಗಿ ಜೈವಿಕ ಇಂಜಿನಿಯರಿಂಗ್,ಆಣ್ವಿಕ ನ್ಯಾನೊತಂತ್ರಜ್ಞಾನದ ಮೂಲಕ ಪುನರುಜ್ಜಿವಿತಗೊಳಿಸುವತ್ತ ನೋಡುತ್ತಿದ್ದಾರೆ.[]

ಕ್ರಯೋನಿಕ್ಸ್ ವಿರುದ್ಧವಾಗಿ ಹಲವಾರು ನೈತಿಕ ಸಮಸ್ಯೆಗಳು ಸುತ್ತಿಕೊಂಡಿವೆ.ಆದರೂ ಮತ್ತೆ ಜೀವಕ್ಕೆ ಬರುವ ಆಸೆಯಿಂದ ಈಗಾಗಲೇ ಹಲವಾರು ಗಣ್ಯ ವ್ಯಕ್ತಿಗಳು ಕ್ರಯೋನಿಕ್ಸ್ ಮೂಲಕ ತಮ್ಮ್ಮ ದೇಹವನ್ನು ಸಂರಕ್ಷಣೆಗೆ ಒಳಪಡಿಸಿದ್ದಾರೆ. ಕಾಮಿಕ್ ಪುಸ್ತಕಗಳು, ಚಿತ್ರಗಳು, ಸಾಹಿತ್ಯ, ಮತ್ತು ದೂರದರ್ಶನದಲ್ಲಿ ಕ್ರಯೋನಿಕ್ಸ್ ಸಂಭಂಧಿತ ಕಥೆಗಳು ಹೆಚುತ್ತಿವೆ.[]

ಉಲ್ಲೇಖಗಳು

ಬದಲಾಯಿಸಿ
  1. http://www.benbest.com/cryonics/Scientific_Justification.pdf]
  2. https://www.researchgate.net/publication/260930585_ACS_Surgery_Principles_and_Practice_critical_care
  3. https://www.theguardian.com/education/2002/jul/14/medicalscience.science