ಕ್ರಕ್ಸ್ ದಕ್ಷಿಣಾಕಾಶದ ಒಂದು ಹೆಸರಾಂತ ನಕ್ಷತ್ರಪುಂಜ. ತ್ರಿಶಂಕು ಎಂಬುದು ಇದರ ಪರ್ಯಾಯನಾಮ.

Deep exposure of Crux, Coalsack Nebula, and IC 2944
Stacked 2 minute exposure of Crux.

ವ್ಯಾಪ್ತಿ

ಬದಲಾಯಿಸಿ

ಇದರ ವ್ಯಾಪ್ತಿ ವಿಷುವದಂಶ 11 ಗಂ. 55ಮಿ.-12ಗಂ.55ಮಿ. ಮತ್ತು ಘಂಟಾವೃತ್ತಾಂಶ 550 ದ.-640 ದ.ಕ್ರಕ್ಸ್ ಪುಂಜದ ಆಕಾರ ತಲೆಕೆಳಗಾದ ಶಿಲುಬೆಯಂತೆ. ಈ ಕಾರಣದಿಂದ ಇದಕ್ಕೆ ದಕ್ಷಿಣದ ಶಿಲುಬೆ (ಸದರ್ನ್ ಕ್ರಾಸ್) ಎಂಬ ಹೆಸರು ಸಹ ರೂಢಿಯಲ್ಲಿದೆ. ಉತ್ತರಾಕಾಶದ ಲಘು ಸಪ್ತರ್ಷಿಗೆ ಇದು ಸಂವಾದಿ ಎಂಬುದು ಕೆಲವರ ಮತ. ಇದರಲ್ಲಿನ ನಾಲ್ಕು ಪ್ರಮುಖ ನಕ್ಷತ್ರಗಳ ಪೈಕಿ ಶಿಲುಬೆಯ ಬುಡದಲ್ಲಿರುವುದು α-ಕ್ರೂಸಿಸ್; ಇದಕ್ಕೆ ಆಕ್ರಕ್ಸ್ ಎಂಬ ಮತ್ತೊಂದು ಹೆಸರೂ ಉಂಟು. ಈ ನಕ್ಷತ್ರದ ಸಹಾಯದಿಂದ ದಿಕ್ಕಿನ ನಿರ್ದೇಶನವನ್ನು ನಾವಿಕರು ಪಡೆಯುತ್ತಿದ್ದರು. ಹೀಗಾಗಿ ಇದನ್ನು ನಾವಿಕನಕ್ಷತ್ರವೆಂದೂ (ನ್ಯಾವಿಗೇಷನಲ್ ಸ್ಪಾರ್) ಕರೆಯುವುದಿದೆ. ಶಿಲುಬೆಯ ಶಿರೋಭಾಗದಲ್ಲಿರುವ ನಕ್ಷತ್ರ ( ಗ್ಯಾಕ್ರಕ್ಸ್. ಈ ಎರಡೂ ನಕ್ಷತ್ರಗಳನ್ನು ಸೇರಿಸುವ ಸರಳರೇಖೆ ಹೆಚ್ಚು ಕಡಿಮೆ ಖಗೋಳೀಯ ದಕ್ಷಿಣಧ್ರುವದ ದಿಕ್ಕನ್ನು ನಿರ್ದೇಶಿಸುತ್ತದೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ