ರಹಸ್ಯನೌಕೆ ಇಲ್ಲಿಗೆ ಪುನರ್ನಿರ್ದೆಶಿಸುತ್ತದೆ. ೧೯೧೭ರ ಚಲನಚಿತ್ರ ಧಾರಾವಾಹಿ, ದಿ ಮಿಸ್ಟರಿ ಶಿಪ್ ನ್ನು ನೋಡಿ .

ಕ್ಯೂ-ಹಡಗುಗಳು , ಕ್ಯೂ-ದೋಣಿಗಳು , ಬಲೆಗೆ ಕೆಡವುವ ಹಡಗುಗಳು , ವಿಶೇಷ ಸೇವಾ ಹಡಗುಗಳು ಅಥವಾ ರಹಸ್ಯನೌಕೆ ಗಳೆಂಬ ಹೆಸರಿನಿಂದಲೂ ಪರಿಚಿತವಾಗಿವೆ, ಇವು ಭಾರಿ ಶಸ್ತ್ರಸಜ್ಜಿತ ಸರಕು ತುಂಬಿದ ಹಡಗುಗಳಾಗಿದ್ದು ಜೊತೆಗೆ ರಹಸ್ಯವಾದ ಶಸ್ತ್ರಸಮೂಹವನ್ನು ಹೊಂದಿರುತ್ತವೆ, ಮೇಲ್ಮೈ ಆಕ್ರಮಣಗಳನ್ನು ಮಾಡುವ ಸಲುವಾಗಿ ಜಲಾಂತರ್ಗಾಮಿ ನೌಕೆಗಳನ್ನು ಆಕರ್ಷಿಸುವ ಮಾದರಿ ವಿನ್ಯಾಸಗೊಂಡಿರುತ್ತವೆ. ಇದು ಕ್ಯೂ-ಹಡಗುಗಳಿಗೆ ಗುಂಡನ್ನು ಹಾರಿಸಿ, ಅವುಗಳನ್ನು ಮುಳುಗಿಸಲು ಅವಕಾಶವನ್ನು ಮಾಡಿಕೊಡುತ್ತದೆ. ಪ್ರತಿಯೊಂದು ಕ್ಯೂ-ಹಡಗು ಕುರಿಯ ವೇಷದಲ್ಲಿರುವ ತೋಳದ ಮಾದರಿ ಮೂಲ ವಿಶಿಷ್ಟ ಲಕ್ಷಣವನ್ನು ಹೊಂದಿರುತ್ತದೆ.

ಇದನ್ನು ಬ್ರಿಟಿಶ್ ರಾಯಲ್ ನೇವಿಯು ಮೊದಲನೇ ವಿಶ್ವ ಸಮರದ ಅವಧಿಯಲ್ಲಿ ಬಳಕೆ ಮಾಡಿತ್ತು ಹಾಗೂ RN ಹಾಗೂ ಅಮೇರಿಕ ಸಂಯುಕ್ತ ಸಂಸ್ಥಾನದ ನೌಕಾದಳವು ಎರಡನೇ ವಿಶ್ವ ಸಮರದ ಅವಧಿಯಲ್ಲಿ, ಜರ್ಮನ್ ಜಲಾಂತರ್ಗಾಮಿ-ದೋಣಿಗಳು ಹಾಗೂ ಜಪಾನೀಸ್ ಜಲಾಂತರ್ಗಾಮಿ ನೌಕೆಗಳ ವಿರುದ್ಧ ಪ್ರತಿಕ್ರಮವಾಗಿ ಬಳಕೆ ಮಾಡಿತ್ತು.

ಮೊದಲ ವಿಶ್ವ ಸಮರ

ಬದಲಾಯಿಸಿ
 
ಬ್ರಿಟಿಶ್ ಕ್ಯೂ-ಹಡಗು HMS ತಮಾರಿಸ್ಕ್

ಫಸ್ಟ್ ಬ್ಯಾಟಲ್ ಆಫ್ ದಿ ಅಟ್ಲಾಂಟಿಕ್ ನ ನಂತರ, ೧೯೧೫ರ ಸುಮಾರಿಗೆ ಬ್ರಿಟನ್, ತನ್ನ ನೌಕಾಪಥಗಳನ್ನು ಅಡಗಿಸುತ್ತಿದ್ದ ಜಲಾಂತರ್ಗಾಮಿ-ದೋಣಿಗಳ ವಿರುದ್ಧ ಪ್ರತಿಕ್ರಮವನ್ನು ತೆಗೆದುಕೊಳ್ಳುವ ಅಂತಿಮ ಪ್ರಯತ್ನದಲ್ಲಿತ್ತು. ಈ ಹಿಂದೆ ಪರಿಣಾಮಕಾರಿಯೆಂದು ದೃಢಪಟ್ಟಿದ್ದ ಬೆಂಗಾವಲು ದಳಗಳನ್ನು(ಹಾಗೂ ಇದು ಎರಡನೇ ವಿಶ್ವ ಸಮರದ ಅವಧಿಯಲ್ಲೂ ಪರಿಣಾಮಕಾರಿ ಎಂದು ದೃಢಪಟ್ಟಿತ್ತು) ಸಂಪನ್ಮೂಲ-ಅಭಾವವೆಂದು ನೌಕಾಶಾಖೆ ಹಾಗೂ ಸ್ವತಂತ್ರ ಕ್ಯಾಪ್ಟನ್ ಗಳು ತಿರಸ್ಕರಿಸಿದ್ದರು. ಆ ಅವಧಿಯ ನೀರಡಿಯ ಸಿಡಿಗುಂಡುಗಳು ತುಲನಾತ್ಮಕವಾಗಿ ಪುರಾತನವಾಗಿತ್ತು, ಹಾಗೂ ಬಹುತೇಕವಾಗಿ ಜಲಾಂತರ್ಗಾಮಿಯನ್ನು ಮುಳುಗಿಸುವ ಏಕೈಕ ಅವಕಾಶವೆಂದರೆ ಬಂದೂಕು ಹಾರಿಸುವುದು ಅಥವಾ ಮೇಲ್ಮೈನಲ್ಲಿರುವಾಗ ಸಮರನೌಕೆಯ ಮೂತಿಯಿಂದ ತಿವಿಯುವುದು. ಜಲಾಂತರ್ಗಾಮಿ-ದೋಣಿಯನ್ನು ಮೇಲ್ಮೈಗೆ ಆಕರ್ಷಿಸುವುದೇ ಸಮಸ್ಯೆಯಾಗಿತ್ತು.

ಇದಕ್ಕಿದ್ದ ಒಂದೇ ಉಪಾಯವೆಂದರೆ ಕ್ಯೂ-ಹಡಗಿನ ರಚನೆ, ಇದು ಯುದ್ಧದಲ್ಲಿ ಅತ್ಯಂತ ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುವ ಗೋಪ್ಯತೆಗಳಲ್ಲಿ ಒಂದಾಗಿದೆ. ಅವುಗಳ ಸಂಕೇತನಾಮಗಳು ಹಡಗುಗಳ ನಿರ್ಗಮನ ಬಂದರು, ಐರ್ಲ್ಯಾಂಡ್ ನ ಕ್ವೀನ್ಸ್ಟೌನ್ ಗೆ ಸೂಚಿತವಾಗುತ್ತವೆ.[] ಇವುಗಳನ್ನು ಜರ್ಮನ್ನರು ಯು-ಬೂಟ್-ಫಾಲ್ಲೆ ("U-ದೋಣಿ ಬಲೆ") ಎಂದು ಕರೆದರು. ಒಂದು ಕ್ಯೂ-ಹಡಗು ಸುಲಭವಾಗಿ ಬಲೆಗೆ ಬೀಳಬಹುದೆಂದು ಕಂಡುಬಂದರೂ ಸಹ, ವಾಸ್ತವವಾಗಿ ತನ್ನಲ್ಲಿ ರಹಸ್ಯವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತದೆ. ಒಂದು ಮಾದರಿಯಾದ ಕ್ಯೂ-ಹಡಗು, ಜಲಾಂತರ್ಗಾಮಿ ನೌಕೆಯು ಕಾರ್ಯಾಚರಣೆಯನ್ನು ನಡೆಸುತ್ತದೆಂದು ವರದಿಯಾದಾಗ ಆ ಪ್ರದೇಶದಲ್ಲಿ ಏಕೈಕವಾಗಿ ಸಂಚರಿಸುವ ಒಂದು ಅಲೆಮಾರಿ ಆವಿ ನೌಕೆಯನ್ನು ಹೋಲುತ್ತದೆ. ಜಲಾಂತರ್ಗಾಮಿ ದೋಣಿಯ ಹಡಗುಗಟ್ಟೆಯ ಮೇಲಿರುವ ಬಂದೂಕು ಯೋಗ್ಯ ಗುರಿಯೆಂದು ಕಂಡುಬಂದಾಗ, ಒಂದು ಕ್ಯೂ-ಹಡಗು, ಜಲಾಂತರ್ಗಾಮಿ ದೋಣಿಯ ನೌಕಾನಾಯಕನಿಗೆ (ಕ್ಯಾಪ್ಟನ್) ತನ್ನಲ್ಲಿರುವ ಸೀಮಿತ ಸಂಖ್ಯೆಯ ನೌಕಾ ಸ್ಫೋಟಕಗಳನ್ನು ಬಳಸುವ ಬದಲಾಗಿ ಸಮುದ್ರದ ಮೇಲ್ಮೈಗೆ ಬಂದು ಆಕ್ರಮಿಸಲು ಉತ್ತೇಜಿಸಬಹುದು. ಕ್ಯೂ-ಹಡಗುಗಳ ಸರಕುಗಳೆಂದರೆ ಹಗುರವಾದ ಮರ(ತೆಪ್ಪ ಅಥವಾ ಬೆಣೆ) ಅಥವಾ ಮರದ ಸಣ್ಣ ಪೆಟ್ಟಿಗೆಗಳು, ಹಾಗು ಇವುಗಳ ಮೇಲೆ ನೌಕಾ ಸ್ಫೋಟಕಗಳನ್ನು ಇರಿಸಿದರೂ ಸಹ ಇದು ತೇಲಿ ಹೋಗುತ್ತದೆ, ಇದು ಜಲಾಂತರ್ಗಾಮಿ ದೋಣಿಯು ಮೇಲಕ್ಕೆ ಬರಲು ಹಾಗು ಹಡಗುಗಟ್ಟೆಯ ಮೇಲಿನ ಬಂದಕನ್ನು ಮುಳುಗಿಸಲು ಸಹಾಯಕವಾಗುತ್ತದೆ. ನಾವಿಕ ತಂಡವು "ಹಡಗನ್ನು ಬಿಟ್ಟುಬಿಡುವಂತೆಯೂ" ಸಹ ನಟಿಸಬಹುದು. ಒಂದೊಮ್ಮೆ ಜಲಾಂತರ್ಗಾಮಿ ದೋಣಿಗಳು ಇದಕ್ಕೆ ಗುರಿಯಾದಾಗ, ಕ್ಯೂ-ಹಡಗುಗಳ ವೇದಿಕೆಗಳು ಹಡಗುಗಟ್ಟೆಯ ಮೇಲಿರುವ ಬಂದಕುಗಳನ್ನು ವ್ಯಕ್ತವಾಗಲು ಪತನಗೊಳ್ಳುತ್ತವೆ, ಇದು ತಕ್ಷಣವೇ ಬಂದೂಕನ್ನು ಹಾರಿಸಬಹುದು. ಇದೆ ಸಮಯದಲ್ಲಿ, ವೈಟ್ ಎನ್ಸೈನ್ ನನ್ನು(ರಾಯಲ್ ನೇವಿಯ ಪತಾಕೆ) ಹಾರಿಸಲಾಗುತ್ತದೆ. ಅತ್ಯಾಶ್ಚರ್ಯಕರ ಅಂಶದೊಂದಿಗೆ, ಜಲಾಂತರ್ಗಾಮಿ ದೋಣಿಯು ಹಠಾತ್ ಆಗಿ ನಾಶ ಮಾಡುತ್ತದೆ.

ಕ್ಯೂ-ಹಡಗು ೨೩ ಜೂನ್ ೧೯೧೫ರಲ್ಲಿ ಮೊದಲ ಬಾರಿಗೆ ಜಯಗಳಿಸಿತು, ಇದು ತರನಾಕಿ ಎಂಬ ಬಲೆಗೆ ಕೆಡವುವ ಹಡಗಿನ ಸಹಯೋಗದೊಂದಿಗೆ HMS C೨೪ ಜಲಾಂತರ್ಗಾಮಿ ನೌಕೆಯು U-೪೦ ಯನ್ನು ಐಮೌತ್ ನಲ್ಲಿ ಮುಳುಗಿಸಿತು, ಇದನ್ನು ಲೆಫ್ಟಿನೆಂಟ್ ಫ್ರೆಡ್ರಿಕ್ ಹೆನ್ರಿ ಟೈಲರ್ CBE DSC RNರ ಅಧೀನದಲ್ಲಿತ್ತು. ಯಾವುದೇ ಸಹಕಾರ ಪಡೆಯದ ಕ್ಯೂ-ಹಡಗು ೨೪ ಜುಲೈ ೧೯೧೫ರಲ್ಲಿ ಜಯಗಳಿಸಿತು, ಈ ಸಮಯದಲ್ಲಿ ರಾಜಕುಮಾರ ಚಾರ್ಲ್ಸ್ , ಲೆಫ್ಟಿನೆಂಟ್ ಮಾರ್ಕ್-ವಾರ್ಡ್ಲಾ DSOರ ನಿಯಂತ್ರಣದಲ್ಲಿ U-೩೬ ಯನ್ನು ಮುಳುಗಿಸಿದರು. ರಾಜಕುಮಾರ ಚಾರ್ಲ್ಸ್ ರ ಪೌರ ನಾವಿಕ ದಳಕ್ಕೆ ನಗದನ್ನು ನೀಡಿ ಗೌರವಿಸಲಾಯಿತು. ಅದರ ಮರು ತಿಂಗಳ, HM ಆರ್ಮ್ಡ್ ಸ್ಮ್ಯಾಕ್ ಇನ್ವರ್ಲ್ಯೋನ್ ಎಂದು ಮರುನಾಮಕರಣಗೊಂಡ ಇನ್ನೂ ಸಣ್ಣದಾದ ಮೀನುಗಾರಿಕೆ ಎಳೆಬಲೆ ದೋಣಿಯು ಯಶಸ್ವಿಯಾಗಿ UB-4ಯನ್ನು ಗ್ರೇಟ್ ಯಾರ್ಮೌತ್ ಸಮೀಪದಲ್ಲಿ ನಾಶಪಡಿಸಲಾಯಿತು ಇನ್ವರ್ಲ್ಯೋನ್ , ಒಂದು ಸಣ್ಣ ೩ ಪೌನ್ಡರ್ (೪೭ mm) ಬಂದೂಕನ್ನು ಅಳವಡಿಸಲಾಗಿದ್ದಂತಹ ಬಲರಹಿತ ಹಡಗಾಗಿತ್ತು. ಬ್ರಿಟಿಶ್ ನೌಕಾದಳವು ೩ ಪೌನ್ಡರ್ ನಿಂದ ೯ ಬಾರಿ ತೀರ ಸಮೀಪದಿಂದ U-೪ ಗೆ ಗುಂಡನ್ನು ಹಾರಿಸಿತು, ಉಳಿದಿದ್ದ ಜರ್ಮನ್ ಜಲಾಂತರ್ಗಾಮಿಯನ್ನು ಉಳಿಸಲು ಇನ್ವರ್ಲ್ಯೋನ್ ನ ಕ್ಯಾಪ್ಟನ್ ಮಾಡಿದ ಪ್ರಯತ್ನದ ಹೊರತಾಗಿಯೂ ಹಡಗು ತನ್ನ ಎಲ್ಲ ಭಾಗಗಳನ್ನು ಕಳೆದುಕೊಂಡಿತು.

ಆಗಸ್ಟ್ ೧೯, ೧೯೧೫ರಲ್ಲಿ HMS ಬರಲೊಂಗ್ ನ ಲೆಫ್ಟಿನೆಂಟ್ ಗಾಡ್ಫ್ರೆ ಹರ್ಬರ್ಟ್ RN U-೨೭ ನ್ನು ಮುಳುಗಿಸಿದರು, ಇದು ಸಮೀಪದಲ್ಲೇ ಇದ್ದ ವ್ಯಾಪಾರಿ ಹಡಗನ್ನು ಆಕ್ರಮಿಸಲು ತಯಾರಿ ನಡೆಸಿತ್ತು. ಸುಮಾರು ಒಂದು ಡಜನ್ ನಷ್ಟು ನಾವಿಕರು ಇದರಿಂದ ಪಾರಾಗಿ, ವ್ಯಾಪಾರಿ ಹಡಗಿನೆಡೆಗೆ ಈಜಿದರು. ಹರ್ಬರ್ಟ್, ಇವರುಗಳು ಹಡಗಿನ ಸರಕಿಳಿಸುವ ಕೊಂಡಿಯಿಂದ ನುಸುಳಬಹುದೆಂದು ಆಪಾದಿಸಿ, ಉಳಿದವರನ್ನು ನೀರಿನಲ್ಲೇ ಗುಂಡಿಕ್ಕೆ ಕೊಲ್ಲಬೇಕೆಂದು ಆದೇಶ ನೀಡಿದರು ಹಾಗು ಈಜಿ ಹಡಗಿನೆಡೆ ಕ್ರಮಿಸುತ್ತಿದ್ದ ಎಲ್ಲರನ್ನು ಕೊಲ್ಲಲು ಬೋರ್ಡಿಂಗ್ ನಲ್ಲಿರುವ ವ್ಯಕ್ತಿಯನ್ನು ಕಳುಹಿಸಿದರು. ಇದು "ಬರಲೊಂಗ್ ಘಟನೆ" ಎಂದು ಪರಿಚಿತವಾಗಿದೆ.

HMS ಫ್ಯಾರನ್ಬರೋ (Q-೫), SM U-೬೮ನ್ನು ೨೨ ಮಾರ್ಚ್ ೧೯೧೬ರಲ್ಲಿ ಮುಳುಗಿಸಿತು. ಅದರ ಕಮ್ಯಾಂಡರ್, ಗಾರ್ಡನ್ ಕ್ಯಾಂಪ್ಬೆಲ್ ಗೆ VC ಪದವಿ ನೀಡಿ ಗೌರವಿಸಲಾಯಿತು.

 
HMS ಅಧ್ಯಕ್ಷ ಥೇಮ್ಸ್ ನಲ್ಲಿ.

ಲೆಫ್ಟಿನೆಂಟ್-ಕಮ್ಯಾಂಡರ್ ವಿಲ್ಲಿಯಮ್ ಎಡ್ವರ್ಡ್ ಸ್ಯಾಂಡರ್ಸ್ VC, DSO, ನ್ಯೂಜಿಲೆಂಡ್ ಗೆ ಸೇರಿದ ಒಬ್ಬ HMS Prize ಗೆ ವಿಕ್ಟೋರಿಯಾ ಕ್ರಾಸ್ ನೀಡಿ ಗೌರವಿಸಲಾಯಿತು, ಇವರು ೩೦ ಏಪ್ರಿಲ್ ೧೯೧೭ರಲ್ಲಿ U-93ರೊಂದಿಗೆ ಕಾರ್ಯಾಚರಣೆ ನಡೆಸಿದರು, ಇದು ತೀವ್ರತರವಾದ ಹಾನಿಗೊಳಪಟ್ಟಿತು. ತಮ್ಮ ಹಡಗು ಭಾರಿ ಗುಂಡಿನ ದಾಳಿಯನ್ನು ಎದುರಿಸುವವರೆಗೂ ಸ್ಯಾಂಡರ್ಸ್ ಬಹಳ ಹೊತ್ತು ಕಾದರು, ನಂತರ ೮೦ ಗಜದಷ್ಟು ಅಂತರಕ್ಕೆ ಜಲಾಂತರ್ಗಾಮಿಯು ಬಂದಾಗ, ಅವರು ವೈಟ್ ಎನ್ಸೈನ್ ಗೆ ನಿಶಾನೆಯನ್ನು ತೋರಿದರು ಹಾಗು ಪ್ರೈಸ್ ಬಂದೂಕನ್ನು ಹಾರಿಸಿತು. ಜಲಾಂತರ್ಗಾಮಿಯು ಮುಳುಗುವಂತೆ ಕಂಡುಬಂದಿತು ಹಾಗು ಇವರಿಗೆ ಜಯ ದೊರೆಯಿತು. ಆದಾಗ್ಯೂ, ತೀವ್ರತರವಾಗಿ ಹಾನಿಗೊಳಪಟ್ಟಿದ್ದ ಜಲಾಂತರ್ಗಾಮಿಯು ಬಂದರಿಗೆ ಹಿಂದಿರುಗಲು ಹರಸಾಹಸ ಪಡಬೇಕಾಯಿತು. U-೯೩ ನಲ್ಲಿ ಜೀವಂತವಾಗಿ ಬದುಕುಳಿದವರು ನಿಖರವಾಗಿ ವಿವರಿಸುವಂತೆ ತಮ್ಮ ಹಡಗಿನೊಂದಿಗೆ, ಸ್ಯಾಂಡರ್ಸ್ ಹಾಗು ಅವರ ನೌಕಾಪಡೆಯು, ೧೪ ಆಗಸ್ಟ್ ೧೯೧೭ರಲ್ಲಿ U-43ರ ಮೇಲೆ ಅನಿರೀಕ್ಷಿತ ದಾಳಿ ನಡೆಸುವ ಪ್ರಯತ್ನದಲ್ಲಿ ಮರಣವನ್ನಪ್ಪಿದರು.

ಒಟ್ಟಾರೆ ೧೫೦ ಕದನಗಳಲ್ಲಿ, ಬ್ರಿಟಿಶ್ ಕ್ಯೂ-ಹಡಗುಗಳು ೧೪ ಜಲಾಂತರ್ಗಾಮಿ-ದೋಣಿಗಳನ್ನು ನಾಶಪಡಿಸುವುದರ ಜೊತೆಗೆ ೬೦ ದೋಣಿಗಳಿಗೆ ಹಾನಿಯನ್ನು ಉಂಟುಮಾಡಿತು, ಇದರಲ್ಲಿ ೨೦೦ ಕ್ಯೂ-ಹಡಗುಗಳಲ್ಲಿ ೨೭ ಹಡಗುಗಳು ನಾಶವಾದವು. ಮುಳುಗಿದ ೧೦%ಜಲಾಂತರ್ಗಾಮಿ ಹಡಗುಗಳಿಗೆ ಕ್ಯೂ-ಹಡಗುಗಳು ಕಾರಣವಾಗಿತ್ತು, ಪರಿಣಾಮಕಾರಿತ್ವದಲ್ಲಿ ಸಾಮಾನ್ಯ ಸಿಡಿಗುಂಡು ಕ್ಷೇತ್ರಗಳ ಬಳಕೆಗಿಂತ ಬಹಳ ಕಡಿಮೆ ಶ್ರೇಣಿಯಲ್ಲಿತ್ತು.

ಸಾಮ್ರಾಜ್ಯಶಾಹಿ ಜರ್ಮನ್ ನೌಕಾದಳವು, ಮಹಾಯುದ್ಧದ ಸಮಯದಲ್ಲಿ ಬಾಲ್ಟಿಕ್ ಸಮುದ್ರಕ್ಕೆ ಆರು ಕ್ಯೂ-ದೋಣಿಗಳನ್ನು ಹಾಂಡೆಲ್ಸ್ ಸ್ಚುಟ್ಜ್ಫ್ಲೋಟಿಲ್ಲೆ ಗೆ ನಿಯೋಜಿಸಿತು. ಶತ್ರುವಿನ ಜಲಾಂತರ್ಗಾಮಿಯನ್ನು ನಾಶಪಡಿಸುವಲ್ಲಿ ಎರಡೂ ಸಹ ವಿಫಲವಾದವು ಪ್ರಸಿದ್ಧ ಮೋವೆ ಹಾಗು ವೂಲ್ಫ್ ವ್ಯಾಪಾರಿ ಹಡಗುಗಳ ಮೇಲೆ ನಡೆಸಲಾಗುವ ಸೈನಿಕ ದಾಳಿ ಹಡಗುಗಳಾಗಿದ್ದವು.

ಅಸ್ತಿತ್ವದಲ್ಲಿರುವ ಕ್ಯೂ-ಹಡಗಿನ ಒಂದು ಉದಾಹರಣೆಯೆಂದರೆ HMS ಸಾಕ್ಸಿಫ್ರೆಜ್, ೧೯೧೮ರಲ್ಲಿ ಪೂರ್ಣಗೊಂಡ ಇದು ಅಂಚುಸ ತಂಡದ ಫ್ಲವರ್ ಕ್ಲಾಸ್ ಸ್ಲೂಪ್ ಆಗಿತ್ತು. ಇದನ್ನು ೧೯೨೨ರಲ್ಲಿ HMS ಪ್ರೆಸಿಡೆಂಟ್ ಎಂದು ಮರುನಾಮಕರಣ ಮಾಡಲಾಯಿತು ಹಾಗು ೧೯೮೮ರವರೆಗೆ ಲಂಡನ್ ಡಿವಿಷನ್ RNR ಡ್ರಿಲ್ ಹಡಗಾಗಿ ಕಾರ್ಯ ನಿರ್ವಹಿಸಿತು.

ಎರಡನೇ ವಿಶ್ವ ಸಮರ

ಬದಲಾಯಿಸಿ
 
USS ಅನಕಾಪದ ನೌಕಾ ಕೆಳದರ್ಜೆ ಅಧಿಕಾರಿ ಹಾಗು ಸರಬರಾಜು ಕಾರ್ಯಕರ್ತರು, ವ್ಯಾಪಾರಿ ಹಡಗುಗಳನ್ನು ಅನುಕರಿಸಲು ಕ್ಯೂ-ಹಡಗಿನ ಮಾದರಿಯಾದ ಅನೌಪಚಾರಿಕ ಉಡುಪನ್ನು ಧರಿಸಿರುವುದು.
 
USS ಅನಕಾಪದ ಮೇಲೆ ಲಂಗರಿನಿಂದ ಮರೆಯಾದ 3" ಗನ್ ಗಳ ಕೀಲುಳ್ಳ ನಿಯಂತ್ರಕ ಕವಾಟದ ಹಿಂಭಾಗ.
 
USS ಕ್ಯಾರೊಲಿನ್ ಅಥವಾ USS ಅಟಿಕ್ AK-101

ಉತ್ತರ ಅಟ್ಲಾಂಟಿಕ್ ನಲ್ಲಿ ಕಾರ್ಯ ನಿರ್ವಹಿಸಲು ೧೯೩೯ರ ಸೆಪ್ಟೆಂಬರ್ ಹಾಗು ಅಕ್ಟೋಬರ್ ನಲ್ಲಿ ರಾಯಲ್ ನೇವಿಯು ಒಂಬತ್ತು ಕ್ಯೂ-ಹಡಗುಗಳನ್ನು ನಿಯೋಜಿಸಿತು:[]

  • ೬೧೦-ಟನ್ HMS ಚಾಟ್ಸ್ಗ್ರೋವ್ (X೮೫) ಮಾಜಿ-ರಾಯಲ್ ನೇವಿ PC-೭೪ ನಿರ್ಮಾಣ ೧೯೧೮
  • ೫,೦೭೨-ಟನ್ HMS ಮೌಂಡರ್ (X೨೮) ಮಾಜಿ-ಕಿಂಗ್ ಗೃಫ್ಫೈಡ್ ನಿರ್ಮಾಣ೧೯೧೯
  • ೪,೪೪೩-ಟನ್ HMS ಪ್ರುನೆಲ್ಲ (X೦೨) ಮಾಜಿ-ಕೇಪ್ ಹೋವೆ ನಿರ್ಮಾಣ ೧೯೩೦
  • ೫,೧೧೯-ಟನ್ HMS ಲ್ಯಾಂಬ್ರಿಡ್ಜ್ (X೧೫) ಮಾಜಿ-ಬೋಟ್ಲೆಯ ನಿರ್ಮಾಣ ೧೯೧೭
  • ೪,೭೦೨-ಟನ್ HMS ಎಡ್ಜ್ ಹಿಲ್ (X೩೯) ಮಾಜಿ-ವಿಲ್ಲಮೆಟ್ಟೆ ವ್ಯಾಲಿ ನಿರ್ಮಾಣ ೧೯೨೮
  • ೫,೯೪೫-ಟನ್ HMS ಬೃಟಸ್ (X೯೬) ಮಾಜಿ-ಸಿಟಿ ಆಫ್ ಡರ್ಬನ್ ನಿರ್ಮಾಣ ೧೯೨೧
  • ೪,೩೯೮-ಟನ್ HMS ಸೈಪ್ರಸ್ (X೪೪) ಮಾಜಿ-ಕೇಪ್ ಸಬೆಲ್ ನಿರ್ಮಾಣ ೧೯೩೬
  • ೧,೦೩೦-ಟನ್ HMS ಲೂಯೆ (X೬೩) ಮಾಜಿ-ಬ್ಯೂಟಿ ನಿರ್ಮಾಣ೧೯೨೪
  • ೧,೦೯೦-ಟನ್ HMS ಆಂಟೋನಿಯೆ (X೭೨) ಮಾಜಿ-ಒರ್ಚಿ ನಿರ್ಮಾಣ ೧೯೩೦

ಪ್ರುನೆಲ್ಲ ಹಾಗು ಎಡ್ಜ್ ಹಿಲ್ ಗಳು ನೌಕಾ ಸ್ಫೋಟಕಗಳಾಗಿರುವುದರ ಜೊತೆಗೆ ಜಲಾಂತರ್ಗಾಮಿ-ದೋಣಿಯ ಯಾವುದೇ ಲಕ್ಷ್ಯಕವಿಲ್ಲದೆ ೨೧ ಹಾಗು ೨೯ ಜೂನ್ ೧೯೪೦ರಲ್ಲಿ ಮುಳುಗಡೆಯಾಯಿತು. ಉಳಿದ ದೋಣಿಗಳು ಯಾವುದೇ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸದೆ ಮಾರ್ಚ್ ೧೯೪೧ರಲ್ಲಿ ಕಾರ್ಯಯೋಜನೆಯನ್ನು ಮುಂದುವರೆಸಿದವು.[]

ಕಡೆಯ ರಾಯಲ್ ನೇವಿ ಕ್ಯೂ-ಹಡಗು, ೨,೪೫೬-ಟನ್ HMS ಫಿಡೆಲಿಟಿ (D೫೭)ಯನ್ನು ಸೆಪ್ಟೆಂಬರ್ ೧೯೪೦ರಲ್ಲಿ ನೌಕಾ ಸ್ಫೋಟಕ ರಕ್ಷಕ ಬಲೆಯನ್ನು, ನಾಲ್ಕು ೪-ಇಂಚಿನ(೧೦-ಸೆಂ.) ಗನ್ ಗಳು, ನಾಲ್ಕು ನೌಕಾ ಸ್ಫೋಟಕ ಟ್ಯೂಬ್ ಗಳು, ಎರಡು OS೨U ಕಿಂಗ್ಫಿಷರ್ ಚಪ್ಪಟೆ ತಳದ ದೋಣಿಗಳು, ಹಾಗು ಮೋಟಾರ್ ಟಾರ್ಪೆಡೊ ದೋಣಿ ೧೦೫ಯನ್ನು ಕೊಂಡೊಯ್ಯಲು ಮಾರ್ಪಡಿಸಲಾಯಿತು. ಫಿಡೆಲಿಟಿ , ಫ್ರೆಚ್ ನೌಕಾದಳದೊಂದಿಗೆ ಪ್ರಯಾಣ ಬೆಳೆಸಿತು, ಹಾಗು ಕಾನ್ವೊಯ್ ON-೧೫೪ಕ್ಕಾಗಿ ನಡೆದ ಯುದ್ಧ ಅವಧಿಯಲ್ಲಿ ೩೦ ಡಿಸೆಂಬರ್ ೧೯೪೨ರಲ್ಲಿ U-೪೩೫ ಮುಳುಗಡೆಗೊಳಗಾಯಿತು.[]

ಜನವರಿ ೧೨, ೧೯೪೨ರ ಹೊತ್ತಿಗೆ, ಬ್ರಿಟಿಶ್ ನೌಕಾಧಿಪತ್ಯ ಕಚೇರಿಯ ಇಂಟೆಲಿಜೆನ್ಸ್ ತಂಡವು, "ಉತ್ತರ ಅಮೆರಿಕನ್ ಕರಾವಳಿಗೆ ನ್ಯೂಯಾರ್ಕ್ ನಿಂದ ಕೇಪ್ ರೇಸ್" ವರೆಗಿನ ಜಲಾಂತರ್ಗಾಮಿ ದೋಣಿಗಳು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದನ್ನು ಗಮನಿಸಿತು ಹಾಗು ಈ ಮಾಹಿತಿಯನ್ನು ಅಮೆರಿಕ ಸಂಯುಕ್ತ ಸಂಸ್ಥಾನದ ನೌಕಾದಳಕ್ಕೆ ರವಾನಿಸಿತು. ಆ ದಿನ, ಕಪಿಟನ್ಲೆಯುಟ್ನಂಟ್ ರೆಯಿಂಹಾರ್ದ್ ಹಾರ್ಡೆಗೆನ್ ರ ನೇತೃತ್ವದಲ್ಲಿ U-೧೨೩ ನೌಕಾ ಸ್ಫೋಟಕಗಳಿಂದ ಭಾರಿತವಾಗಿತ್ತು ಹಾಗು ಬ್ರಿಟಿಶ್ ಆವಿ ಹಡಗು ಸೈಕ್ಲೋಪ್ಸ್ ನ್ನು ಮುಳುಗಡೆ ಮಾಡಿತು, ಇದು ಪೌಕೆನ್ ಸ್ಚ್ಲಾಗ್ ನ್ನು ವಿಧ್ಯುಕ್ತವಾಗಿ ಆರಂಭ ಮಾಡಿತು (ಅಕ್ಷರಶಃ, "ನಗಾರಿಯನ್ನು ಬಾರಿಸುವುದು" ಹಾಗು ಕೆಲವೊಂದು ಬಾರಿ ಇಂಗ್ಲಿಷ್ ನಲ್ಲಿ "ಆಪರೇಶನ್ ಡ್ರಂಬೀಟ್" ಎಂದು ಕರೆಸಿಕೊಳ್ಳುತ್ತದೆ). ಜಲಾಂತರ್ಗಾಮಿ ದೋಣಿಯ ಕಮ್ಯಾಂಡರ್ ಗಳು ಕರಾವಳಿಯುದ್ದಕ್ಕೂ ಹೆಚ್ಚು ಬಳಕೆಯಲ್ಲಿದ್ದ ಶಾಂತಿಕಾಲದ ಪರಿಸ್ಥಿತಿಗಳನ್ನು ಪತ್ತೆಮಾಡಿದರು: ಪಟ್ಟಣಗಳು ಹಾಗು ನಗರಗಳು ಅಂಧೀಕರಣಗೊಂಡಿರಲಿಲ್ಲ ಹಾಗು ಸಮುದ್ರಯಾನದ ತೇಲುವೆಗಳು ಬೆಳಕನ್ನು ಚೆಲ್ಲುತ್ತಿದ್ದವು; ನೌಕಾ ಸಮೂಹವು ಸಾಮಾನ್ಯವಾಗಿ ತಮ್ಮ ದಿನಚರಿಗಳನ್ನು ಅನುಸರಿಸುತ್ತಿದ್ದವು ಹಾಗು "ಸಾಧಾರಣ ದೀಪಗಳೊಂದಿಗೆ" ಪ್ರಯಾಣಿಸುತ್ತಿದ್ದವು. ಪೌಕೆನ್ ಸ್ಚ್ಲಾಗ್ ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಅದಕ್ಕೆ ತಿಳಿಯದ ಮಾದರಿ ಸೆರೆಹಿಡಿಯಿತು.

ಶೀಘ್ರದಲ್ಲಿ ನಷ್ಟಗಳು ಏರಿಕೆಯಾದವು. ಜನವರಿ ೨೦, ೧೯೪೨ರಲ್ಲಿ, ಯುನೈಟೆಡ್ ಸ್ಟೇಟ್ಸ್ ಫ್ಲೀಟ್(ಕೋಮಿಂಚ್) ನ ಕಮ್ಯಾಂಡರ್ ಇನ್ ಚೀಫ್, ಈಸ್ಟರ್ನ್ ಸೀ ಫ್ರಾಂಟಿಯರ್(CESF)ನ ಕಮ್ಯಾಂಡರ್ ಗೆ ಸಂಕೇತವನ್ನು ಕಳುಹಿಸಿದರು, ಇದರಂತೆ ಜಲಾಂತರ್ಗಾಮಿ ವಿರೋಧಿ ಕ್ರಮವಾಗಿ "ಕ್ವೀನ್" ಹಡಗುಗಳು ಕಾರ್ಯಪ್ರವೃತ್ತರಾಗಲು ಹಾಗು ಸಜ್ಜುಗೊಳ್ಳಲು ತಕ್ಷಣವೇ ಪರಿಗಣಿಸಬೇಕೆಂದು ಕೋರಿಕೆಯಿತ್ತು. ಇದರ ಪರಿಣಾಮವೇ "ಪ್ರಾಜೆಕ್ಟ್ LQ."

ಐದು ಹಡಗುಗಳನ್ನು ವಶಪಡಿಸಿಕೊಂಡು, ಅದನ್ನು ಪೋರ್ಟ್ಸ್ ಮೌತ್, ನ್ಯೂ ಹ್ಯಾಂಪ್ಶೈರ್ ನಲ್ಲಿ ಗೋಪ್ಯವಾಗಿ ಮಾರ್ಪಡಿಸಲಾಯಿತು:

  • ಬಾಸ್ಟನ್ ದೂಲ ಎಳೆಬಲೆ ದೋಣಿ MS ವೇವ್ , ಇದು USSಕಾಪ್ಟರ್ (PYC-೪೦) ಆಗುವ ಮುನ್ನ ಸಂಕ್ಷೇಪವಾಗಿ ಸಹಾಯಕ ಸಿಡಿಗುಂಡು ನಿವಾರಕ USS ಈಗಲ್ ಆಗಿ ಮಾರ್ಪಾಡಾಯಿತು,
  • SS ಎವೆಲಿನ್ ಹಾಗು ಕ್ಯಾರೊಲಿನ್ , ಒಂದೇ ಮಾದರಿಯ ಸರಕು ಸಾಗಣೆ ಹಡಗುಗಳು ಕ್ರಮವಾಗಿ USS ಅಸ್ಟೆರಿಯೋನ್ (AK-೧೦೦) ಹಾಗು USS ಅಟಿಕ್ (AK-೧೦೧)ಆಗಿ ಮಾರ್ಪಾಡಾದವು,
  • ಟ್ಯಾಂಕರ್ SS ಗಲ್ಫ್ ಡಾನ್ , USS ಬಿಗ್ ಹಾರ್ನ್ ಆಗಿ ಮಾರ್ಪಾಡಾಯಿತು, ಹಾಗು
  • ಕೂವೆಯುಳ್ಳ ಹಡಗು ಐರಿನ್ ಮಿರ್ಟಲ್ , USS ಐರಿನ್ ಫಾರ್ಸೈಟೆ (IX-೯೩) ಆಗಿ ಮಾರ್ಪಾಡಾಯಿತು.

ಎಲ್ಲ ಐದು ಹಡಗುಗಳ ಕಾರ್ಯಪ್ರವೃತ್ತಿಯು ಸಂಪೂರ್ಣವಾಗಿ ನಿಷ್ಪಲವಾಗಿತ್ತು ಹಾಗು ಬಹಳ ಕಡಿಮೆ ಅವಧಿಯದ್ದಾಗಿತ್ತು, ಜೊತೆಗೆ USS ಅಟಿಕ್ ತನ್ನ ಮೊದಲ ಯಾನದಲ್ಲೇ ಮುಳುಗಡೆಯಾಯಿತು;[] ಎಲ್ಲ ಕ್ಯೂ-ಹಡಗುಗಳ ಯಾನಗಳು ೧೯೪೩ರಲ್ಲಿ ಕೊನೆಗೊಂಡವು.

ಅಮೆರಿಕನ್ ಕ್ಯೂ-ಹಡಗುಗಳು ಪೆಸಿಫಿಕ್ ಸಾಗರದಲ್ಲೂ ಸಹ ಕಾರ್ಯನಿರ್ವಹಿಸುತ್ತವೆ. ಇದರಲ್ಲಿ ಒಂದೆಂದರೆ USS ಅನಕಾಪ (AG-೪೯), ಈ ಹಿಂದೆ ನಿರುಪಯುಕ್ತ ವಸ್ತುಗಳ ಸಾಗಣೆ ಮಾಡುತ್ತಿದ್ದ ಕೂಸ್ ಬೇ ಯನ್ನು "ಲವ್ ವಿಲ್ಲಿಯಮ್" ಯೋಜನೆಯಡಿಯಲ್ಲಿ ಕ್ಯೂ-ಹಡಗಾಗಿ ಮಾರ್ಪಡಿಸಲಾಯಿತು. ಅನಕಾಪ ಶತ್ರುವಿನ ಯಾವುದೇ ಜಲಾಂತರ್ಗಾಮಿಗಳ ಮೇಲೆ ದಾಳಿ ಮಾಡುವಲ್ಲಿ ಅಷ್ಟು ಯಶಸ್ವಿಯಾಗಲಿಲ್ಲ, ಆದಾಗ್ಯೂ ಇದು ತನ್ನ ಸುತ್ತಮುತ್ತಲಲ್ಲಿ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸದಿದ್ದಾಗ ನೀರಡಿಯ ಸಿಡಿಗುಂಡಿನೊಂದಿಗೆ ಎರಡು ಸ್ನೇಹಪರ ಜಲಾಂತರ್ಗಾಮಿಗಳಿಗೆ ನಷ್ಟವನ್ನು ಉಂಟುಮಾಡಿದ್ದಾಗಿ ನಂಬಲಾಗುತ್ತದೆ. ಅನಕಾಪ ವನ್ನು ಕ್ಯೂ-ಹಡಗಿನ ಕಾರ್ಯನಿರ್ವಹಣೆಯಿಂದ ೧೯೪೩ರಲ್ಲಿ ಹಿಂದಕ್ಕೆ ಕರೆಸಿಕೊಳ್ಳಲಾಯಿತು ಹಾಗು ಇದು WWIIನ ಹೊರಗೆ ದಕ್ಷಿಣ ಪೆಸಿಫಿಕ್ ಹಾಗು ಅಲೆಯುತಿಯನ್ ದ್ವೀಪಗಳಲ್ಲಿ ಶಸ್ತ್ರಾಸ್ತ್ರಗಳ ಸಾಗಣೆ ಮಾಡುತ್ತಿತ್ತು.

ಆಧುನಿಕ ಹಡಗುಗಳ್ಳರ ವಿರುದ್ಧ ಬಳಕೆ

ಬದಲಾಯಿಸಿ

ವ್ಯಾಪಾರಿ ಹಡಗುಗಳ ಮೇಲೆ ಸೊಮಾಲಿಯಾ ಕರಾವಳಿಯಲ್ಲಿ ಮೊದಲ ಬಾರಿಗೆ ಹಡಗುಗಳ್ಳರು ಆಕ್ರಮಣ ನಡೆಸಿದರು, ಇದನ್ನು ಬಂಧಮುಕ್ತಗೊಳಿಸಲು ಒಂದು ಕ್ಯೂ ಹಡಗನ್ನು ಬಳಸಿ ಅಪಹರಣವಾಗಿರುವ ಒಂದು ಶಸ್ತ್ರಸಜ್ಜಿತ ಹಡಗನ್ನು ಹಡಗುಗಳ್ಳರಿಂದ ವಶಪಡಿಸಿಕೊಳ್ಳಬಹುದೆಂದು ಕೆಲ ಭದ್ರತಾ ತಜ್ಞರು ಸಲಹೆಗಳನ್ನು ನೀಡಿದರು.[]

ಸಂಬಂಧಿತ ಪದಗಳು

ಬದಲಾಯಿಸಿ

ಈ ಪದವನ್ನು ತರುವಾಯ(ಅಥವಾ "ಕ್ಯೂ-ಕಾರ್") ಸರಾಸರಿ ಮಟ್ಟಕ್ಕಿಂತ ಅಧಿಕ ಚಲಾವಣೆಯನ್ನು ನೀಡುತ್ತಿದ್ದ ಕಾರುಗಳ ವಿವರಣೆ ನೀಡಲು ಬಳಸಲಾಗುತ್ತಿತ್ತು (ಸಾಮಾನ್ಯವಾಗಿ ವ್ಯಾಪಕವಾಗಿ ಮಾರ್ಪಾಡಿನ ನಂತರ) ಆದರೆ ಒಂದು ಸಾಂಪ್ರದಾಯಿಕ, ಆಸಕ್ತಿರಹಿತ ಕೌಟುಂಬಿಕ ಸಾಗಣೆ ವಾಹನವೆನಿಸಿತ್ತು.

೧೯೭೦ರಲ್ಲಿ ರೊಡೆಷಿಯನ್ ದಂಗೆಯ ಅವಧಿಯಲ್ಲಿ ಸರ್ಕಾರಿ ಪಡೆಗಳು, ಹೊಂಚು ಹಾಕಿ ಕುಳಿತಿದ್ದ ಗೆರಿಲ್ಲಾಗಳನ್ನು ಆಕರ್ಷಿಸಲು ಭಾರಿ ಶಸ್ತ್ರಸಜ್ಜಿತ ವಾಹನವನ್ನು ನಾಗರಿಕ ಟ್ರಕ್ ಗಳಾಗಿ ಬಳಸಿದವು, ಇವುಗಳೂ ಸಹ "ಕ್ಯೂ-ಕಾರ್ ಗಳೆಂಬ" ಹೆಸರಿನಿಂದ ಕರೆಯಲ್ಪಡುತ್ತಿದ್ದವು

ಒಂದು ಕ್ಯೂ-ರೈಲು ಬಾಹ್ಯವಾಗಿ ಒಂದು ಸಾಧಾರಣ ರೈಲಾಗಿ ಕಂಡುಬಂದರೂ ಸಹ, ಇದು ರೈಲು ಮಾರ್ಗಗಳಲ್ಲಿ ಉಲ್ಲಂಘನೆ ಮೀರದಿರಲು ಹಾಗು ವಿಧ್ವಂಸಕತೆಯನ್ನು ತಡೆಯಲು ರೈಲ್ವೆ ಪೋಲೀಸರ ಮೇಲ್ವಿಚಾರಣೆಯಲ್ಲಿರುತ್ತದೆ.

ಇವನ್ನೂ ಗಮನಿಸಿ‌

ಬದಲಾಯಿಸಿ

  Media related to Q-ships at Wikimedia Commons

  • ವ್ಯಾಪಾರಿಗಳ ಮೇಲೆ ನಡೆಸಲಾಗುವ ಸೈನಿಕ ದಾಳಿ
  • ವಾಣಿಜ್ಯಕವಾಗಿ ನಡೆಸಲಾಗುವ ಸೈನಿಕ ದಾಳಿ
  • ಅಪರಿಮಿತ ಜಲಾಂತರ್ಗಾಮಿ ಸಮರ
  • ಟನ್ ಮಾನಗಳ ಯುದ್ಧ
  • ಹೇಗ್ ಸಂಪ್ರದಾಯಗಳು
  • ಈಸ್ಟ್ ಇಂಡಿಯಾಮನ್
  • ಶಸ್ತ್ರಸಜ್ಜಿತ ವ್ಯಾಪಾರಿಗಳು
  • CAM ಹಡಗು
  • ವ್ಯಾಪಾರಿ ವಿಮಾನ ವಾಹಕ

ಉಲ್ಲೇಖಗಳು‌‌

ಬದಲಾಯಿಸಿ
  1. ೧.೦ ೧.೧ ಬೆಯೆರ್, ಕೆನ್ನೆತ್ M.: ಕ್ಯೂ-ಷಿಪ್ಸ್ ವರ್ಸಸ್ ಯು-ಬೋಟ್ಸ್. ಅಮೇರಿಕ'ಸ್ ಸೀಕ್ರೆಟ್ ಪ್ರಾಜೆಕ್ಟ್ . ನೇವಲ್ ಇನ್ಸ್ಟಿಟ್ಯೂಟ್ ಪ್ರೆಸ್. ಅನ್ನಾಪೋಲಿಸ್, ಮೇರಿಲ್ಯಾಂಡ್, USA. ೧೯೯೯. ISBN ೧೫೫೭೫೦೦೦೪೪೪
  2. ೨.೦ ೨.೧ ಲೆನ್ಟನ್, H.T. ಹಾಗು ಕಾಲ್ಲೆಡ್ಗೆ, J.J.: ಬ್ರಿಟಿಶ್ ಅಂಡ್ ಡಾಮಿನಿಯನ್ ವಾರ್ಷಿಪ್ಸ್ ಆಫ್ ವರ್ಲ್ಡ್ ವಾರ್ II , ೧೯೬೮, ಪುಟ.೨೭೯
  3. ಮಾರ್ಡೆರ್, ಆರ್ಥರ್: "ದಿ ಇನ್ಫ್ಲುಯೆನ್ಸ್ ಆನ್ ದಿ ಸೀ ಪವರ್: ದಿ ರಾಯಲ್ ನೇವಿ ಅಂಡ್ ದಿ ಲೆಸನ್ಸ್ ಆಫ್ ೧೯೧೪-೧೯೧೮", ದಿ ಪೆಸಿಫಿಕ್ ಹಿಸ್ಟಾರಿಕಲ್ ರಿವ್ಯೂ , ಸಂಪುಟ. ೪೧, ಸಂಖ್ಯೆ. ೪. (ನವೆಂಬರ್., ೧೯೭೨), ಪುಟಗಳು. ೪೧೩-೪೪೩.[೧]
  4. "Use Q ships against pirates?". Safety at Sea International. Lloyd's Register. 9 April 2009. Retrieved 2009-04-11.


ಬಾಹ್ಯ ಕೊಂಡಿಗಳು‌‌

ಬದಲಾಯಿಸಿ