ಕ್ಯಾಲ್ಸಿಯಂ ಕಾರ್ಬೋನೇಟ್

ಕ್ಯಾಲ್ಸಿಯಂ ಕಾರ್ಬೋನೇಟ್ ಒಂದು ರಾಸಾಯನಿಕ. ಇದರ ಸೂತ್ರ CaCO3. ಇದು ಮೂರು ಮುಖ್ಯ ಅಂಶಗಳು ರೂಪುಗೊಂಡಿದೆ-ಇಂಗಾಲ, ಆಮ್ಲಜನಕ ಮತ್ತು ಕ್ಯಾಲ್ಸಿಯಂ .ಇದು ಬಂಡೆಗಳಲ್ಲಿ ಕಂಡುಬರುವ ಸಾಮಾನ್ಯ ಪದಾರ್ಥ. ಇವು ಮುತ್ತುಗಳು, ಕಲ್ಲಿದ್ದಲು ಚೆಂಡುಗಳು, ಮೊಟ್ಟೆಚಿಪ್ಪುಗಳು, ಸಮುದ್ರ ಜೀವಿಗಳ ಚಿಪ್ಪುಗಳು ಮತ್ತು ಬಸವನ ಹುಳುವಿನ ಚಿಪ್ಪುಗಳಲ್ಲಿ ಕಂಡು ಬರುವ ಮುಖ್ಯ ಅಂಶವಾಗಿದೆ. ಕ್ಯಾಲ್ಸಿಯಂ ಕಾರ್ಬೋನೇಟ್ ಕೃಷಿಗೆ ಉಪಯೋಗಿಸುವ ಸುಣ್ಣದ ಮುಖ್ಯ ಅಂಗ. ಇದನ್ನು ಸಾಮಾನ್ಯವಾಗಿ ಔಷಧೀಯವಾಗಿ ಕ್ಯಾಲ್ಸಿಯಂ ಪೂರಕ ಅಥವಾ ಒಂದು antacid ಎಂದು ಬಳಸಲಾಗುತ್ತದೆ. ಆದರೆ ಇದರ ಮಿತಿಮೀರಿದ ಬಳಕೆ ಅಪಾಯಕಾರಿ ಆಗಬಹುದು.

ತಯಾರಿಸುವ ರೀತಿ ಬದಲಾಯಿಸಿ

ಹೆಚ್ಚಾಗಿ ಕ್ಯಾಲ್ಸಿಯಂ ಕಾರ್ಬೋನೇಟ್ ಅನ್ನು ಗಣಿಗಾರಿಕೆ ಮೂಲಕ ತೆಗೆಯಲಾಗುವುದು. ಶುದ್ಧ ಕ್ಯಾಲ್ಸಿಯಂ ಕಾರ್ಬೋನೇಟ್ ಅನ್ನು ( ಉದಾ: ಆಹಾರ ಅಥವಾ ಔಷಧೀಯ ಬಳಕೆಗೆ ) ಶುದ್ಧ ಗಣಿಯಿಂದ (ಸಾಮಾನ್ಯವಾಗಿ ಅಮೃತಶಿಲೆ ) ತಯಾರಿಸಬಹುದು . ಪರ್ಯಾಯವಾಗಿ, ಕ್ಯಾಲ್ಸಿಯಂ ಕಾರ್ಬೋನೇಟ್ ಅನ್ನು ಕ್ಯಾಲ್ಸಿಯಂ ಆಕ್ಸೈಡ್‍ನಿಂದ ತಯಾರಿಸಲಾಗುತ್ತದೆ. ಕ್ಯಾಲ್ಸಿಯಂ ಆಕ್ಸೈಡ್‍ಗೆ ನೀರು ಸೇರಿಸಿದಾಗ ಅದು ಕ್ಯಾಲ್ಷಿಯಂ ಹೈಡ್ರಾಕ್ಸೈಡ್ ಆಗುತ್ತದೆ. ಕಾರ್ಬನ್ ಡೈಆಕ್ಸೈಡ್ ಅನ್ನು ಇದರಲ್ಲಿ ಹಾಯಿಸಿದಾಗ ಕ್ಯಾಲ್ಸಿಯಂ ಕಾರ್ಬೋನೇಟ್ ರೂಪುಗೊಳ್ಳುತ್ತದೆ.

ಕಂಡು ಬರುವ ಮೂಲಗಳು ಬದಲಾಯಿಸಿ

ಭೂವೈಜ್ಞಾನಿಕ ಮೂಲಗಳು ಬದಲಾಯಿಸಿ

ಕ್ಯಾಲ್ಸೈಟ್, ಅರಗೊನೈಟ್ ಮತ್ತು ವ್ಯಾಟರೈಟ್ ಶುದ್ಧ ಕ್ಯಾಲ್ಸಿಯಂ ಕಾರ್ಬೋನೇಟ್ ಖನಿಜಗಳು ಕೈಗಾರಿಕೆಗಳಲ್ಲಿ ಕ್ಯಾಲ್ಸಿಯಂ ಕಾರ್ಬೋನೇಟ್‍ಗಾಗಿ ಸೀಮೆಸುಣ್ಣ, ಅಮೃತಶಿಲೆ ಮತ್ತು ಸುಣ್ಣಗಲ್ಲು ಉಪಯೋಗಿಸುತ್ತಾರೆ.

ಜೈವಿಕ ಮೂಲಗಳು ಬದಲಾಯಿಸಿ