ಕ್ಯಾನ್ ಚಲನಚಿತ್ರೋತ್ಸವ
ಕ್ಯಾನ್ ಚಲನಚಿತ್ರೋತ್ಸವ ಅಥವಾ ಫೆಸ್ಟಿವಲ್ ಇಂಟರ್‌ನ್ಯಾಷನಲ್ ಡು ಫಿಲ್ಮ್ ಡೆ ಕ್ಯಾನ್( ಫ್ರೆಂಚ್: Festival International du Film de Cannes) ವಿಶ್ವದ ಅತ್ಯಂತ ಪ್ರತಿಷ್ಠಿತ ಚಲನಚಿತ್ರೋತ್ಸವ ಎಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಫ್ರಾನ್ಸ್ ದೇಶದ ದಕ್ಷಿಣ ಭಾಗದಲ್ಲಿರುವ ಪ್ರವಾಸಿ ತಾಣ ನಗರವಾದ ಕ್ಯಾನ್‌ನಲ್ಲಿ ಪ್ರತಿ ವರ್ಷ ಮೇ ತಿಂಗಳಲ್ಲಿ ಈ ಚಲನಚಿತ್ರೋತ್ಸವ ಜರಗುತ್ತದೆ. ಸೆಪ್ಟೆಂಬರ್ ೨೦ ೧೯೪೬ರಿಂದ ಅಕ್ಟೋಬರ್ ೫ ೧೯೪೬ರವರೆಗೆ ಈ ಮೊದಲನೆ ಕ್ಯಾನ್ ಚಲನಚಿತ್ರೋತ್ಸವ ಆಯೋಜಿಸಲ್ಪಟ್ಟಿತ್ತು. ಈ ಚಿತ್ರೋತ್ಸವದಲ್ಲಿ ಪ್ರದಾನ ಮಾಡುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯೆಂದರೆ ಚಲನಚಿತ್ರೋತ್ಸವದ ಶ್ರೇಷ್ಟ ಚಿತ್ರಕ್ಕಾಗಿ ನೀಡುವ ಪಾಮ್ ಡಿ'ಓರ್(ಬಂಗಾರದ ತಾಳೆಗರಿ). ಹಲವು ರಾಷ್ಟ್ರಗಳ ಚಲನಚಿತ್ರ ಕಲಾವಿದರನ್ನೊಳಗೊಂಡ ಆಯ್ಕೆ ಸಮಿತಿ, ಪಾಮ್ ಡಿ'ಓರ್ ಪ್ರಶಸ್ತಿಯಲ್ಲದೆ ಇನ್ನೂ ಹಲವು ಪ್ರಶಸ್ತಿಗಳ ವಿಜೇತರನ್ನು ಗುರುತಿಸುತ್ತದೆ. ಅಪಾರ ಜನಪ್ರಿಯಗಳಿಸಿರುವ ಈ ಚಲನಚಿತ್ರೋತ್ಸವಕ್ಕೆ ಸಿನಿಮಾ ತಾರೆಯರು, ನಿರ್ದೇಶಕರು,ನಿರ್ಮಾಪಕರು ದಂಡು ದಂಡಾಗಿ ಬರುತ್ತಾರೆ. ಈ ಚಲನಚಿತ್ರೋತ್ಸವ, ನಿರ್ಮಾಪಕರಿಗೆ ತಮ್ಮ ಚಿತ್ರಗಳನ್ನು ಅಂತರಾಷ್ಟ್ರೀಯ ವಿತರಕರಿಗೆ ಮಾರಲು ಅವಕಾಶ ಮಾಡಿಕೊಡುತ್ತದೆ.
ಪ್ರಶಸ್ತಿಗಳು
ಬದಲಾಯಿಸಿ- ಪಾಮ್ ಡಿ'ಓರ್ (Palme d'Or)
ಕಥಾ ಚಿತ್ರ
ಬದಲಾಯಿಸಿ- ಗ್ರ್ಯಾಂಡ್ ಪ್ರೀ (Grand Prix)
- ಪ್ರೀ ಡಿ ಲ ಮಿಸ್ ಎನ್ ಸೀನ್(Prix de la mise en scène)
- ಪ್ರೀ ಡು ಜ್ಯೂರಿ (Prix du Jury)
- Prix du scénario
- Prix d'interprétation féminine du Festival de Cannes
- Prix d'interprétation masculine du Festival de Cannes
- Prix un certain regard
ಸಣ್ಣ ಚಿತ್ರಗಳು
ಬದಲಾಯಿಸಿ- Palme d'Or du Festival de Cannes - court métrage
- Prix du Jury - court métrage
ಬಾಹ್ಯ ಸಂಪರ್ಕ ಕೊಂಡಿಗಳು
ಬದಲಾಯಿಸಿಕ್ಯಾನ್ ಚಲನಚಿತ್ರೋತ್ಸದ ಅಧಿಕೃತ ತಾಣ Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ.