ಕ್ಯಾಥೋಡ್ ಕಿರಣಗಳು

ನಿರ್ವಾತ ಕೊಳವೆಗಳಲ್ಲಿ ವೀಕ್ಷಿಸಿದ ಎಲೆಕ್ಟ್ರಾನ್ಗಳ ಸ್ಟ್ರೀಮ್

ಕ್ಯಾಥೋಡ್ ಕಿರಣಗಳು(cathode rays) (ಎಲೆಕ್ಟ್ರಾನ್ ತೊಲೆ ಅಥವಾ ಇ-ತೊಲೆ) ಅಂದರೆ ಎಲೆಕ್ಟ್ರಾನ್‌ಗಳ ಪ್ರವಾಹ ಎಂದು ಹೇಳಬಹುದು ಅದು ನಿರ್ವಾತ ಟ್ಯಬ್‌ನಲ್ಲಿ ಕಣುತ್ತೆವೆ. ಈಗ ಒಂದು ಗಾಜುಇನ ಟ್ಯೂಬ್ ನಲ್ಲಿ ಎರಡು ವಿದ್ಯುದ್ವಾರಗಳು(electrodes) ಇಟ್ಟು, ಅದಕ್ಕೆ ವೋಲ್ಟೇಜ್ ಅನ್ವಯಿಕ ಮಾಡಿದರೆ ಋಣಾತ್ಮಕ ವಿದ್ಯುದ್ವಾರ(anode) ಎದುರೆ ಇರುವ ಗಾಜಿನ ಮೇಲೆ ಒಂದು ಹೊಳಪನ್ನು ನೋಡಬಹುದು. ಏಕೆಂದರೆ, ಉತ್ಯರ್ಜಿಸುವ ಎಲೆಕ್ಟ್ರಾನ್‌ಗಳು ಕ್ಯಾಥೋಡ್ ಗೆ ೯೦ ಡಿಗ್ರೀ ಗೆ ಹೋಗುತ್ತವೆ(ವಿದ್ಯುದ್ವಾರ ವೋಲ್ಟೇಜ್ ಋಣಾತ್ಮಕ ಟರ್ಮಿನಲ್ ಸಂಪರ್ಕ ಮಾಡಬೇಕು).ಅದು ಗಾಜಿನ ಮೇಲೆ ಬಿಳುವದರಿಂದ ನಾವು ಹೊಳಪನ್ನು ನೋಡಬಹುದು.

ಕ್ಯಾಥೋಡ್ ಕಿರಣಗಳನ್ನು ಮೊದಲು ವೀಕ್ಷಿಸಿದವರು, ೧೮೬೯ರಲ್ಲಿ ಜರ್ಮನ್ ಭೌತಶಾಸ್ತ್ರಜ್ಞ ಜೋಹಾನ್ ಹಿಟ್ಟರ್ಫ್[].೧೮೭೬ ರಲ್ಲಿ ಈಗನ್ ಗೋಲ್ಡ್ಸ್ಟೀನ್[] ಮೊದಲು ಕ್ಯಾಥೋಡ್ ಕಿರಣಗಳು ಎಂದು ಕರೆದರು.ಎಲೆಕ್ಟ್ರಾನ್ಗಳು ಮೊದಲು ಕ್ಯಾಥೋಡ್ ಕಿರಣಗಳು ಮತದಾರ ಹಾಗಿ ಕಂಡುಹಿಡಿದರು. ೧೮೯೭ ರಲ್ಲಿ ಗ್ರೇಟ್ ಬ್ರಿಟನ್‌ ಭೌತಶಾಸ್ತ್ರಜ್ಞ ಜೆ.ಜೆ ಥಾಮ್ಸನ್[] ಅವರು ಕ್ಯಾಥೋಡ್ ಕಿರಣಗಳಲ್ಲಿ ಗೊತ್ತಿಲ್ಲದ ಋಣಾತ್ಮಕ ಕಣಗಳು ಕೂಡಿವೆ ಎಂದು ಹೇಳಿದರು.ಇದರಿಂದ ಅವರು ಎಲೆಕ್ಟ್ರಾನ್ ಗಳನ್ನು ಕಂಡುಹಿಡಿದರು .

ಕ್ಯಾಥೋಡ್ ರೇ ಟ್ಯೂಬ್ಸ್[], ಎಲೆಕ್ಟ್ರಾನ್ ತೊಲೆ ಉಪಯೋಗಿಸಿ,ವಿದ್ಯುತ್ ಪ್ರವಾಹ ಅಥವಾ ಕಾಂತ ಕ್ಷೇತ್ರವನ್ನು ಉಪಯೋಗಿಸಿ ಅದನ್ನು ತಿರುಗಿಸಿ ಕಿರುತೆರೆ ಮೇಲೆ ಚಿತ್ರಗಳನ್ನು ಸೃಷ್ಟಿಸಬಹುದು.

ಸೈಕ್ಲೋಟ್ರೋನಲ್ಲಿ ಕ್ಯಾಥೋಡ್ ಕಿರಣಗಳನ್ನು ಉಪಯೂಗಿಸಿದ್ದಾರೆ

ವಿವರಣೆ

ಬದಲಾಯಿಸಿ

ಋಣಾತ್ಮಕ ವಿದ್ಯುದ್ವಾರ ಅಥವಾ ಕ್ಯಾಥೋಡ್, ನಿರ್ವಾತ ಟ್ಯೂಬ್ ನಲ್ಲಿ ಉತ್ಸರ್ಜನ ಆಗುವ ಕಿರಣಗಳು, ಅದಕ್ಕೆ ಕ್ಯಾಥೋಡ್ ರೇ ಎಂದು ಹೆಸರು ಬಂದಿದ್ದೆ. ಎಲೆಕ್ಟ್ರಾನ್ ಗಳು ನಿರ್ವಾತ ಟ್ಯೂಬ್ ಗೆ ಬರವುದಕ್ಕೆ, ಕ್ಯಾಥೋಡ್ ಪರಮಾಣದಿಂದ ಬೇರ್ಪಡಿಸಲಾಗುತ್ತದೆ. ಮೊದಲು ಕೊಲ್ಡ್ ಕ್ಯಾಥೋಡ್ ನಿರ್ವಾತ ಟ್ಯೂಬ್‌ನ್ನು ಕೊರ್ಕ್ ಟ್ಯೂಬ್ ಎಂದು ಕರೆಯುತ್ತಿದರು, ಇದನ್ನು ಆನೋಡ್ ಮತ್ತು ಕ್ಯಾಥೋಡ್ ಮಧ್ಯ ಹೆಚ್ಚಿನ ವಿದ್ಯೂತ್ ಸಾಮರ್ಥ್ಯವನ್ನು ಉಪಯೋಗಿಸಿ ಉಳಿಕೆಅನಿಲವನ್ನು(residual gas) ಅಯಾನೀಕರಿ ಮಾಡುವುದು, ಅಯಾನುಗಳನ್ನು ವಿದ್ಯೂತ್ ಕ್ಷೇತ್ರದಿಂದ, ಕ್ಯಾಥೋಡ್ ಜೊತೆ ಘರ್ಷಣೆಯಾಗಿ ಎಲೆಕ್ಟ್ರಾನ್‌ಗಳು ಬಿಡುಗಡೆ ಆಗುತ್ತವೆ.ಆಧುನಿಕ ನಿರ್ವಾತ ಟ್ಯೂಬ್‌ನಲ್ಲಿ ಉಷ್ಣಾಯಾನಿಕ ಸೂಸಿಕೆ(thermionic emission),ಕ್ಯಾಥೋಡ್ ತೆಳುವಾದ ತಂತನ್ನು ಪ್ರತ್ಯೇಕ ವಿದ್ಯೂತ್ ಪ್ರವಾಹದಿಂದ ಬಿಸಿ, ಹಾಗೆ ತಂತು(filament) ಬಿಸಿ ಆದ ಮೇಲೆ ತಂತಿನ ಮುಖದಿಂದ ಎಲೆಕ್ಟ್ರಾನ್‌ಗಳನ್ನು ಹೊರಗೆ ಬರುತ್ತವೆ.

ಎಲೆಕ್ಟ್ರಾನ್‌ಗಳು ಋಣಾತ್ಮಕ ಹೊಣೆ ಅದುದರಿಂದ ಕ್ಯಾಥೋಡ್ ಹಿಮ್ಮೆಟ್ಟಿಸುತ್ತದೆ ಮತ್ತು ಆನೋಡ್ ಆಕರ್ಷಿಸುತ್ತದೆ. ಅವು ನೇರ ಸಾಲಿನಲ್ಲಿ ಪ್ರಾಯಣಿಸುತ್ತದೆ. ವಿದ್ಯುದ್ವಾರಗಳ ನಡುವೆ ವೋಲ್ಟೇಜ್ ಸರಬರಾಜು ಮಾಡಿದರೆ ಕಡಿಮೆ ಸಮೂಹ ಕಣಗಳು ಹೆಚ್ಚಿನ ವೇಗ ಆಗುತ್ತವೆ. ಕ್ಯಾಥೋಡ್ ಕಿರಣಗಳು ಕಣ್ಣಿಗೆ ಕಾಣವಿದಿಲ್ಲ ಅದನ್ನು ಕಂಡುಹಿಡಿದದ್ದು ಹೇಗೆಂದರೆ ಅವು ನಿರ್ವಾತ ಟ್ಯೂಬಿನ ಒಂದು ಕಡೆಯ ಗಾಜಿಗೆ ಬಿದ್ದಾಗ , ಗಾಜಿನ ಪರಮಾಣಗಳನ್ನು ಉತ್ತೇಜಿಸುತ್ತವೆ ಅವು ಒಳೆಯುತ್ತವೆ,ಅದನ್ನು ಪ್ರತಿದೀಪ್ತಿ ಎಂದು ಕರೆಯುತ್ತಾರೆ.

ಸಂಷೋಧಕರು ಕಂಡುಹಿಡಿದು ಯಾವುದಾದರು ವಸ್ತುಗಳನ್ನು ಅದರ ಮುಂದೆ ಇಡುವುದಾದರೆ ಅದರ ನೆರಳು ಪ್ರಜ್ವಲಿಸುವ ಕೋಡೆಯ ಮಏ ವಿದುದ್ದನ್ನು ನೋಡಿ ಅವರು ಯಾವುದೋ ಕ್ಯಾಥೋಡ್ ಇಂದ ಬರುವ ನೇರ ಕಿರಣಗಳಿಂದ ಎಂದು ಹೇಳಿದ್ದಾರೆ. ಎಲೆಕ್ಟ್ರಾನ್‌ಗಳು ಆನೋಡ್ ತಂತಿಯಿಂದ ಪ್ರಾಯಣಿಸಿ ಕ್ಯಾಥೋಡ್‌ಗೆ ಸೇರುತ್ತವೆ.

 
ಕ್ರೂಕ್ರ ಟ್ಯೂಬ್

ಎಲೆಕ್ಟ್ರಾನ್ ತೊಲೆ ತಂತಿಯ ಲೋಹದ ಪರದೆಯಲ್ಲಿ(grid) ಬರುವ ಪ್ರವಾಹವನ್ನು ಲೋಹದ ತಂತಿಯನ್ನು ಉಪಯೋಗಿಸಿ ಕಡಿಮೆ ವೋಲ್ಟೇಜ್ ಮಾಡಬಹುದು. ಲೋಹದ ತಂತಿಗಳಿಂದ ಸೃಷ್ಟಿಯಾಗುವ ವಿದ್ಯುತ್ ಕ್ಷೇತ್ರ ಎಲೆಕ್ಟ್ರಾನ್‌ಗಳನ್ನು ಆನೋಡ್ ಸೇರಾಲಾಗದೆ ದಾರಿ ತಪಿಸುತ್ತವೆ ಕಡಿಮೆ ವೋಲ್ಟೇಜ್‌ಯನ್ನು ಗ್ರೀಡ್ ಸರಬರಾಜು ಮಾಡಿ ಆನೋಡಿನ ಹೆಚ್ಚಿನ ವೋಲ್ಟೇಜ್‌ಯನ್ನು ನಿಯಂತ್ರಿಸಬಹುದು. ಈ ತತ್ವವನ್ನೇ ನಿರ್ವತ ಟ್ಯೂಬಿನಲ್ಲಿ ವಿದ್ಯುತ್ ಸಂಕೆತಗಳನ್ನು ವರ್ಧಿಸಲು೯(amplify) ಮಾಡುವುದಕ್ಕೆ ಉಪಯೋಗಿಸುತ್ತಾರೆ. ಅತಿ ವೇಗವಾಗಿ ಹೋಗುವ ಕ್ಯಾಥೋಡ್ ತೊಲೆಗಳನ್ನು, ಹಚ್ಚಿನ ಲೋಹದ ತಂತಿಗಳನ್ನು ಉಪಯೋಗಿಸಿ ವಿದ್ಯೂತ ಕ್ಷೇತ್ರವನ್ನು ಸೃಷ್ಟಿಸಬಹುದು. ಇದನ್ನು"ಕ್ಯಾಥೋಡ್ ರೇ ಟ್ಯೂಬ್ಸ್" ಎಂದು ಕರೆವುತ್ತಾರೆ,ಕಂಪ್ಯೂಟರ್ ಮಾನಿಫರ್ ಮತ್ತು ಎಲೆಕ್ಟ್ರಾನ್ ಸೂಕ್ಷ್ಮ ದರ್ಶಕನಲ್ಲಿ ಉಪಯೋಗಿಸುತ್ತಾರೆ.

 
ಪ್ರತಿದೀಪ್ತಿಯನ್ನು ನೋಡಬಹುದು


ಇತಿಹಾಸ

ಬದಲಾಯಿಸಿ

೧೮೩೮ ರಲ್ಲಿ ಮೈಕೆಲ್ ಫ್ಯಾರಡೆ[](ವಿದ್ಯುತ್ ಜನಕ) ವಿದ್ಯೂತ್‌ಯನ್ನು ಅನಿಲ ತುಂಬಿದ ಗಾಜಿನ ಟ್ಯೂಬ್ ಮೂಲಕ ಕಳುಹಿಸಿದರು, ಅವರು ಅಲ್ಲಿ ಒಂದು ವಿಚಿತ್ರವಾದ ಬೆಳಕಿನ ಚಾಪವನ್ನು ನೋಡಿದರು, ಅದು ಕ್ಯಾಥೋಡ್‌ಯಿಂದ ಸುರುವಾಗಿ, ಆನೋಡ್ ಹತ್ತಿರ ನಿಲ್ಲುತ್ತದೆ.

ಕ್ರೂಕ್ಸ ಟ್ಯೂಬ್

ಬದಲಾಯಿಸಿ

೧೮೭೦ರಲ್ಲಿ ವಿಲಿಯಮ್ ಕ್ರೂಕ್ಸ್, ಒಂದು ಟ್ಯೂಬ್‌ಯನ್ನು ಹೆಚ್ಚಿನ ಒತಡುಯಲ್ಲಿ ಕೆಲಸ ಬರುತ್ತದೆ ಎಂದು ಸೃಷ್ಟಿಸಿದರು[]. ಮೊದಲು ಕ್ಯಾಥೋಡ್ ಮುಂದೆ ಕಪ್ಪು ಜಾಗವನ್ನು ಗಮನಿಸಿದ್ದವರು ಫ್ಯಾರಡೆ ಇದನ್ನು "ಫ್ಯಾರಡೆ ಡಾರ್ಕ್ ಸ್ಪೆಸ್", ಅಥವಾ "ಕ್ಯಾಥೋಡ್ ಡಾರ್ಕ್ ಸ್ಪೇಸ್", "ಕ್ರೂಕ್ಸ ಡಾರ್ಕ್ ಸ್ಪೇಸ್" ಎಂದು ಕರೆಯಲಾಗುತ್ತದೆ.

 
ಕ್ರೂಕ್ರ ಟ್ಯೂಬ್

ಕ್ರೂಕ್ಸ ನೋಡಿದ್ದು ಏನೆಂದರೆ ಇನ್ನು ಅನಾಲಿಯನ್ನು ಆ ಟ್ಯೂಬ್‌ನಲ್ಲಿ ಕಳುಹಿಸಿದ್ದರೆ ಅಲ್ಲಿ ಕ್ಯಾಥೋಡ್‌ಯಿಂದ ಆನೋಡ್ ಹತ್ತಿರಕ್ಕೆ ಆ ಕಪ್ಪು ಜಾಗ ಅವರಿಸುತ್ತದೆ. ಆದರೆ ಆನೋಡ್ ಕಡೆ ಇರುವ ಗಾಜಿನ ಮುಖ ಓಳೆಯೂವುದು ಸುರುವಾಗುವುದ್ದನ್ನು ಅವರು ನೋಡಿದರು. ಆ ಕಿರಣಗಳು ಆನೋಡ್ ಕಡೆಗೆ ಹೊಗುವ ಸಮಾಯಕ್ಕೆ ಅವು ಎಷ್ಟು ವೇಗದಿಂದ ಹೊಗುತ್ತವೆ ಎಂದರೆ ಆನೋಡ್ ಅವನ್ನು ಅಕರ್ಷಿಸಿದರು ಅದು ಆನೋಡ್ ದಾಟ್ಟಿ ಅದರ ಹಿಂದೆನ ಗಾಜಿನ ಪರಾಮಾಣ ಜೊತೆ ಕೂಡಿ ಅದು ಒಳೆಯುವುದ್ದಕ್ಕೆ ಸುರುವಾಗುತ್ತದೆ. ಆ ಮೇಲೆ ಸಂಶೋದಕರು ಅದರ ಮುಂದೆ ಜೀನ್ಕ್ ಸಲ್ಫೈಡ್(zinc sulphide) ಕ್ಯಾಥೋಡ್ ಕಿರಣಗಳು ಎಂದು ಕರೆದರು.

ಜೆ.ಜೆ.ಥಾಮ್ಸನ್

ಬದಲಾಯಿಸಿ

ಜೆ.ಜೆ.ಥಾಮ್ಸನ್ ಕ್ಯಾಥೋಡ್ ರೇ ಟ್ಯೂಬ್‌ಯನ್ನು ಅಧ್ಯಯನವನ್ನು ಮಾಡಿ ಅವರು ಕ್ಯಾಥೋಡ್ ಕಿರಣಗಳು ಯಾವು ಕ್ಯಾಥೋಡ್‌ಯಿಂದ ಬರುತ್ತದೆ ಅದರಲ್ಲಿ ಋಣಾತ್ಮಕ ಕಣಗಳು ಇದೆ ಎಂದು ಹೇಳಿದ್ದರೆ. ಎಕೆಂದರೆ ಕ್ಯಾಥೋಡ್‌ಯಿಂದ ಬರುವ ಕಿರಣಗಳು ಋಣಾತ್ಮಕ ಆವೇಶವು ಹಿಮ್ಮೆಟ್ಟಿಸುತ್ತದೆ ಆದರೆ ಧನಾತ್ಮಕ ಚರ್ಜ್ ಅಕರ್ಷಿಸುತ್ತದೆ. ಅವನ್ನು ಕ್ಯಾಥೋಡ್ ಕಿರಣಗಳಲ್ಲಿ ಇರುವ ಕಣಗಳನ್ನು ಸೂಪರ್ ಸಣ್ಣ ತುಣುಕುಗಳು, ಎಲೆಕ್ಟ್ರಾನ್ ಎಂದು ಕರೆದನು. ತನ್ನ ಪ್ರಯೋಗಗಳ ಮೂಲಕ ಡಾಲ್ಟನ್ ಪರಮಾಣು ಸಿದ್ಧಾಂತ ತಪ್ಪೆಂದು ರುಜೂಮಾಡಿದರು. ಡಾಲ್ಟನ್ ಪರಮಾಣವೆ ಎಲ್ಲಕ್ಕಿಂತ ಸಣ್ಣ ಕಣಗಳೆಂದು ಹೇಳಿದ್ದರು. ಆದರೆ ಅದು ತಪ್ಪೆಂದು ಜೆ.ಜೆ.ಥಾಮ್ಸನ್ ಅವರು ಹೇಳಿದ್ದರು.

ಕ್ಯಾಥೋಡ್ ಕಿರಣಗಳ ಗುಣಗಳು

ಬದಲಾಯಿಸಿ
  1. ಕ್ಯಾಥೋಡ್ ಕಿರಣಗಳು ಯಾವಾಗಲು ನೇರ ಸಾಲಿನಲ್ಲೆ ಪ್ರಾಯಾಣಿಸುತ್ತವೆ. ಆದಕ್ಕೆ ದಾರಿನಲ್ಲಿ ಇರುವ ವಸ್ತುಗಳನ್ನು ನೆರಳನ್ನು ಬೀರಿಸುತ್ತವೆ. ಕ್ಯಾಥೋಡ್ ಕಿರಣಗಳು ಪ್ರಯಾಣಿಸುವ ದಾರಿಯನ್ನು ಆನೋಡ್ ಸ್ಥಾನ ಪರಿಣಾಮ ಮಾಡುವುದಿಲ್ಲ.
  2. ಕ್ಯಾಥೋಡ್ ಕಿರಣಗಳು ವಸ್ತು ಕಣಗಳ ಒಳಗೊಂಡಿರುತ್ತವೆ, ಆ ಶಕ್ತಿ ಯನ್ನು ಕಣಗಳ ಸಾಮೂಹಿಕ ಮತ್ತು ವೇಗೆದಿಂದ ಬರುತ್ತದೆ.[]
  3. ಕ್ಯಾಥೋಡ್ ಕಿರಣಗಳು ಋಣಾತ್ಮಕ ಆವೇಶದ(negative charge) ಹೊಂದಿರುತ್ತವೆ. ವಿದ್ಯೂತ್ ಕ್ಷೇತ್ರವನ್ನು ಅನ್ವಯಿಕ ಮಾಡಿದರೆ, ಆವು ಧನಾತ್ಮಕ ಪ್ಲೇಟ್ (anode) ಕಡೆಗೆ ತಿರುಗಿಸಬಹುದು. ನಮ್ಮಗೆ ಗೊತ್ತಿದೆ ಧನಾತ್ಮಕ ಚಾರ್ಜ್‌ಯನ್ನು ಹೊಂದಿದ್ದ ವಸ್ತುಗಳು ಯಾವಾಗಲು ಋಣಾತ್ಮಕ ಚಾರ್ಜ್‌ಯನ್ನು ಹೊಂದಿದ್ದ ವಸ್ತುಗಳನ್ನು ಆಕರ್ಷಿಸುತ್ತವೆ. ಆಗೆ ಆನೋಡ್, ಕ್ಯಾಥೋಡ್ ಕಿರಣಗಳನ್ನು ಆಕರ್ಷಿಸುತ್ತವೆ. ಅವು ಋಣಾತ್ಮಕ ಕಣಗಳಿಂದ ಹೊಂದಿವೆ ಕ್ಯಾಥೋಡ್ ಕಿರಣಗಳು ಬಲವಾದ ಕಾಂತ ಷೇತ್ರದಿಂದ ತಿರುಗಿಸಬಹುದು.
  4. ಕ್ಯಾಥೋಡ್ ಕಿರಣಗಳು ಯಾವುದೆ ವಸ್ತು ಮೇಲೆ ಬಿದ್ದರೆ ಅದನ್ನು ಬೀಸಿ ಮಾಡುತ್ತದೆ. ಕ್ಯಾಥೋಡ್ ಕಿರಣಗಳು ಚಲನ ಶಕ್ತಿಯನ್ನು ಹೊಂದಿವೆ. ಈ ಕಣಗಳು ಯಾವಾಗ ವಸ್ತು ಮೇಲೆ ಬೀಳುತ್ತವೆ ಆವಾಗ ಅದರ ಚಲನ ಶಕ್ತಿಯನ್ನು ವರ್ಗಾವಣೆ ಮಾಡುತ್ತವೆ. ಇದು ಆ ವಸ್ತುವಿನ ಉಷ್ಣಾಂಶ್ ಹೆಚ್ಚು ಮಾಡುತ್ತವೆ.
  5. ಕ್ಯಾಥೋಡ್ ಕಿರಣಗಳಿಂದ ಗಾಜಿನ ಮುಖ ಮೇಲೆ ಹಸಿರು ಪ್ರತಿದೀಪ್ತಿ ನೋಡಬಹುದು, ಯಾವ ಗಾಜಿನ ಮುಖ ಮೇಲೆ ಕ್ಯಾಥೋಡ್ ಕಿರಣಗಳು ಬಿದ್ದರೆ ಅ ಅಷ್ಟೇ ಬಣ್ಣದ ಹೊಳಪನ್ನು ನೋಡಬಹುದು.
  6. ಕ್ಯಾಥೋಡ್ ಕಿರಣಗಳು ತಳುವಾದ ಲೋಹದ ಹಾಳೆಗಳನ್ನು ದಾಟಿ ಹೊಗಬಹುದು.
  7. ಕ್ಯಾಥೋಡ್ ಕಿರಣಗಳು ಯಾವಾ ಅನಿಲದಿಂದ ಹೋಗಿತ್ತವೆ ಅದನ್ನು ಅಯಾನೀಕರಿಸಿ ಹೊಗುತ್ತವೆ.
  8. ಕ್ಯಾಥೋಡ್ ಕಿರಣಗಳು ಸರಿಸಮಾನವಾಗಿ ಬೆಳಕಿನ ವೇಗಕ್ಕೆ ಪ್ರಾಯಾಣಿಸುತ್ತವೆ.

ಕ್ಯಾಥೋಡ್ ಕಿರಣಗಳ ಉಪಯೋಗಗಳು

ಬದಲಾಯಿಸಿ
  1. ಮೊದಲು ಇದರಿಂದ ಉಪಯೋಗವನ್ನು ಕಂಡು ಹಿಡಿದವರು ಕಾರ್ಲ್ ಫರ್ಡಿನಂಡ್ ಬ್ರಾನ್.ಅವರು ಮೊದಲು ಕಾರ್ಲ್ ಫರ್ಡಿನಂಡ್ ಬ್ರಾನ್ ಆಸಿಲ್ಲೋಸ್ಕೋಪ್ ಎಂದು ಕಂಡುಹಿಡಿದರು.ಇದರಲ್ಲಿ ಕ್ಯಾಥೋಡ್ ಕಿರಣಗಳನ್ನು ಸಣ್ಣ ರಂಧ್ರದಿಂದ ಕಳಿಸಿ ರಾಸಾಯನಿಕವಾಗಿ ಚಿಕಿತ್ಸೆಗೊಂಡ ಪರದೆಯ ಮೇಲೆ ಒಂದು ಚುಕ್ಕೆಯಂತೆ ಬಿಳುವ ಹಾಗೆ ಮಾಡುತ್ತಾರೆ.ಆ ಚುಕ್ಕೆ ಯನ್ನು ಪರಿಕ್ಷಿಸಿ ಅದರ ಮೇಲೆ ಬಿಳುವ ಒಳಬರುವ ಸಿಗ್ನಲ್ ಏರಿಳಿತ ಕಂಡುಹಿಡಬಹುದು.ಆಸಿಲ್ಲೋಸ್ಕೋಪ್ ಪರೆಯನ್ನು ನೋಡುವವರಿಗೆ ಅದನ್ನು ನೊಡಬಹುದು[].
     
    ಕ್ಯಾಥೋಡ್ ರೇ ಆಸಿಲ್ಲೋಸ್ಕೋಪ್
  2. ನಾವು ದಿನ ನೊಡುವ ದೂರದರ್ಶನ ಕ್ಯಾಥೋಡ್ ಕಿರಣಗಳಿಂದ ಬರುವುದು.ಕ್ಯಾಥೋಡ್ ರೇ ಟ್ಯೂಬ್‌ ಇಂದ ಕಿರುತೆರೆ ಮೇಲೆ ಚಿತ್ರವನ್ನು ಸೃಷ್ಟಿಸಬಹುದು.
  3. ಈಗ ಬರುವ ಎಲೆಕ್ಟ್ರಾನ್ ಸೂಕ್ಷ್ಮದರ್ಶಕ ದಲ್ಲಿ ಕ್ಯಾಥೋಡ್ ಕಿರಣಗಳನ್ನು ಉಪಯೋಗಿಸಿ ಚಿತ್ರವನ್ನು ದೊಡ್ಡದಾಗಿ ಮಾಡಬಹುದು.


ಉಲ್ಲೇಖಗಳು

ಬದಲಾಯಿಸಿ
  1. "ಜೋಹಾನ್ ಹಿಟ್ಟರ್ಫ್".
  2. "ಈಗನ್ ಗೋಲ್ಡ್ಸ್ಟೀನ್".
  3. "ಜೆ.ಜೆ ಥಾಮ್ಸನ್".
  4. "ಕ್ಯಾಥೋಡ್ ರೇ ಟ್ಯೂಬ್ಸ್ ಉಪಯೋಗ". {{cite web}}: horizontal tab character in |title= at position 22 (help)[ಶಾಶ್ವತವಾಗಿ ಮಡಿದ ಕೊಂಡಿ]
  5. "ಮೈಕೆಲ್ ಫ್ಯಾರಡೆ ಪುಸ್ತಕ". Archived from the original on 2021-01-22. Retrieved 2016-01-09.
  6. "ಕ್ರೂಕ್ಸ ಟ್ಯೂಬ್". Archived from the original on 2016-01-04. Retrieved 2016-01-09.
  7. "ಕ್ಯಾಥೋಡ್ ಕಿರಣಗಳ ಗುಣಗಳು". Archived from the original on 2015-06-02. Retrieved 2016-01-09.
  8. "ಕ್ಯಾಥೋಡ್ ರೇ ಆಸಿಲ್ಲೋಸ್ಕೋಪ್".