ಕ್ಯಾಥರೀನ್ ಮರಿಯಾ ಫ್ಯಾನ್‌ಶಾವೆ

ಕ್ಯಾಥರೀನ್ ಮರಿಯಾ ಫ್ಯಾನ್‌ಶಾವೆ (೧೭೬೫-೧೮೩೪) ಒಬ್ಬ ಇಂಗ್ಲಿಷ್ ಕವಯಿತ್ರಿ. ಅವಳ ಕೆಲಸವನ್ನು ವಾಲ್ಟರ್ ಸ್ಕಾಟ್ ಪ್ರಶಂಸಿಸಿದ್ದರು. ಅವಳು ಮಾತ್ರವಲ್ಲದೆ ಅವಳ ಸಹೋದರಿಯರು ಸಹ ಕಲಾವಿದರಾಗಿದ್ದರು.[೧]

ಕ್ಯಾಥರೀನ್ ಮರಿಯಾ ಫ್ಯಾನ್‌ಶಾವೆ

ಜೀವನಚರಿತ್ರೆ

ಬದಲಾಯಿಸಿ

ಕ್ಯಾಥರೀನ್ ಮಾರಿಯಾ ಫ್ಯಾನ್‌ಶಾವೆ ೧೭೬೫ ರಲ್ಲಿ ಸರ್ರೆಯ ಚಿಪ್‌ಸ್ಟೆಡ್‌ನಲ್ಲಿರುವ ಶಾಬ್ಡೆನ್‌ನಲ್ಲಿ ಜನಿಸಿದರು. ಅವರು ಸರ್ರೆ ಸ್ಕ್ವೈರ್‌ನ ಜಾನ್ ಫ್ಯಾನ್‌ಶಾವ್ (೧೭೩೮-೧೮೧೬) ಮತ್ತು ಅವರ ಪತ್ನಿ ಪೆನೆಲೋಪ್ (ಡ್ರೆಡ್ಜ್) ಅವರ ಮಗಳು.[೨] ಫ್ಯಾನ್‌ಶಾವೆಯ ತಂದೆ ಮೂರನೇ ಕಿಂಗ್ ಜಾರ್ಜ್‌ರ ಮನೆಯಲ್ಲಿ ಒಂದು ಹುದ್ದೆಯನ್ನು ಹೊಂದಿದ್ದರು.

೧೮೧೬ ರಲ್ಲಿ ತಂದೆಯ ಮರಣದ ನಂತರ, ಫ್ಯಾನ್‌ಶಾವೆ ಮತ್ತು ಅವಳ ಇಬ್ಬರು ಸಹೋದರಿಯರು ಉತ್ತರಾಧಿಕಾರಿಗಳಾಗಿದ್ದರು. ಅವರು ೧೫ ಬರ್ಕ್ಲಿ ಸ್ಕ್ವೇರ್, ಲಂಡನ್, ಮತ್ತು ಮಿಡ್ಹರ್ಸ್ಟ್ ಹೌಸ್, ರಿಚ್ಮಂಡ್, ಸರ್ರೆಯಲ್ಲಿ ವಾಸಿಸುತ್ತಿದ್ದರು. ನಂತರ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಇಟಲಿಗೆ ಭೇಟಿ ನೀಡಿದರು.

೧೮೩೪ ರ ಏಪ್ರಿಲ್ ೧೭ ರಂದು ದೀರ್ಘಕಾಲದ ಅನಾರೋಗ್ಯದ ನಂತರ, ಸರ್ರೆಯಲ್ಲಿನ ಪುಟ್ನಿ ಹೀತ್‌ನಲ್ಲಿ ಫ್ಯಾನ್‌ಶಾವೆ ನಿಧನಳಾದಳು.[೨][೧]

ರೊಮ್ಯಾಂಟಿಕ್ ಸ್ಕೂಲ್‌ನ ನಂತರ ಫ್ಯಾನ್‌ಶಾವೆ ಬುದ್ಧಿವಂತ ಸಾಂದರ್ಭಿಕ ಪದ್ಯಗಳನ್ನು ಬರೆದಳು.[೩] ಆಕೆಯ ಕೆಲವು ಕವಿತೆಗಳನ್ನು ೧೮೨೩ ಮತ್ತು ೧೮೫೯ ರಲ್ಲಿ ಜೋನ್ನಾ ಬೈಲ್ಲಿ ಮತ್ತು ಮೇರಿ ರಸೆಲ್ ಮಿಟ್‌ಫೋರ್ಡ್‌ರಿಂದ ಪ್ರಕಟಣೆಗಳಲ್ಲಿ ಮುದ್ರಿಸಲಾಯಿತು.[೧] ನಂತರ ೧೮೬೫ ಮತ್ತು ೧೮೭೬ ರಲ್ಲಿ ಒಟ್ಟಿಗೆ ಮುದ್ರಿಸಲಾಯಿತು. ಮಿಟ್‌ಫೋರ್ಡ್ ಅವಳನ್ನು "ಲೇಖಕಿಯಾಗಿ, ಷೇಕ್ಸ್‌ಪಿಯರ್‌ನ ಓದುಗಳಾಗಿ ಮತ್ತು ವಿನ್ಯಾಸಕಿಯಾಗಿ ಅವಳ ಪ್ರತಿಯೊಂದು ಶೈಲಿಯೂ ಪ್ರಶಂಸನೀಯ" ಎಂದು ಬಣ್ಣಿಸಿದರು.[೨] ಆಕೆಯ ಕವಿತೆಗಳಲ್ಲಿ "ಅವಳು ಒಪ್ಪದ ರಾಜಕೀಯ ಧ್ವನಿಗಳನ್ನು ಅನುಕರಿಸುವಳು". ಆಕೆ ಇಟ್ಟುಕೊಂಡಿದ್ದ ಡೈರಿ ಪತ್ತೆಯಾಗಿಲ್ಲ. ಫ್ಯಾನ್‌ಶಾವೆಯ ಅತ್ಯುತ್ತಮ ನಿರ್ಮಾಣವು ಪ್ರಸಿದ್ಧವಾದ "ರಿಡಲ್ ಆನ್ ದಿ ಲೆಟರ್ ಎಚ್".[೪] ಇದು "'ಟ್ವಾಸ್ ವಿಸ್ಪರ್‌ಡ್ ಇನ್ ಹೆವನ್" ಮತ್ತು 'ಟ್ವಾಸ್ ಮ್ಟರ್‌ಡ್ ಇನ್ ಹೆಲ್'" ಎಂದು ಪ್ರಾರಂಭವಾಗುತ್ತದೆ.[೧] ಆಕೆಯ "ಫ್ರಾಗ್ಮೆಂಟ್ ಇನ್ ಇಮಿಟೇಶನ್ ಆಫ್ ವರ್ಡ್ಸ್‌ವರ್ತ್" ಆಕ್ಸ್‌ಫರ್ಡ್ ಬುಕ್ ಆಫ್ ಪ್ಯಾರಡೀಸ್‌ನಲ್ಲಿ ಕಾಣಿಸಿಕೊಳ್ಳುತ್ತದೆ (ಜಾನ್ ಗ್ರಾಸ್ ಸಂಪಾದಿಸಿದ್ದಾರೆ).[೨]

ವಾಲ್ಟರ್ ಸ್ಕಾಟ್ ಅವಳ ಕವನವನ್ನು "ಸಾಕಷ್ಟು ಸುಂದರ" ಎಂದು ಮೆಚ್ಚಿಕೊಂಡಿದ್ದಾರೆ. ಕ್ಯಾಥರೀನ್ ಮತ್ತು ಆಕೆಯ ಸಹೋದರಿಯರು ಮೆಮೊಯಿರ್ಸ್ ಆಫ್ ಆನ್, ಲೇಡಿ ಫ್ಯಾನ್‌ಶಾವೆ (೧೬೨೫-೧೬೮೦) ನ ಮೊದಲ ಪ್ರಕಾಶಕರು ಎಂದು ಅವರು ಹೇಳಿದರು. ಇದು ೧೬೭೨ ರವರೆಗಿನ ಅವರ ಜೀವನವನ್ನು ಒಳಗೊಂಡಿದೆ ಮತ್ತು ೧೬೭೬ ರಲ್ಲಿ ಪೂರ್ಣಗೊಂಡಿತು. ಇವು ೧೮೨೯ ರಲ್ಲಿ ಕಾಣಿಸಿಕೊಂಡವು.

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ ೧.೩ W. P. Courtney, revised by Rebecca Mills: "Fanshawe, Catherine Maria". Oxford Dictionary of National Biography (Oxford, UK: OUP, 2004) Retrieved 4 September 2018.
  2. ೨.೦ ೨.೧ ೨.೨ ೨.೩ Virginia Blain, Patricia Clements and Isobel Grundy: The Feminist Companion to Literature in English. Women Writers from the Middle Ages to the Present (London: Batsford, 1990), p. 356.
  3.   One or more of the preceding sentences incorporates text from a publication now in the public domainCousin, John William (1910). "Fanshawe, Catherine Maria". A Short Biographical Dictionary of English Literature. London: J. M. Dent & Sons – via Wikisource. {{citation}}: Invalid |ref=harv (help)
  4. Jarndyce Booksellers' catalogue Women Writers 1795–1927 Part I: A–F (London, Summer 2017).