ಎಲೆಕೋಸು

(ಕೋಸುಗಡ್ಡೆ ಇಂದ ಪುನರ್ನಿರ್ದೇಶಿತ)

ಎಲೆಕೋಸು ಬ್ರಾಸಿಕೇಸೀ (ಅಥವಾ ಕ್ರೂಸಿಫರೇ) ಕುಟುಂಬದ ಬ್ರಾಸೀಕಾ ಆಲರೇಸಿಯಾ ಲಿನ್ ಜಾತಿಯ (ಕ್ಯಾಪಿಟೇಟಾ ಗುಂಪು) ಒಂದು ಜನಪ್ರಿಯ ಕೃಷಿ ಪ್ರಭೇದ, ಮತ್ತು ಒಂದು ಹಸಿರು ಎಲೆ ತರಕಾರಿಯಾಗಿ ಬಳಸಲ್ಪಡುತ್ತದೆ. ಅದು ಒಂದು ಚಿಕ್ಕ ಕಾಂಡದ ಮೇಲೆ, ಸಾಮಾನ್ಯವಾಗಿ ಹಸಿರು ಆದರೆ ಕೆಲವು ಪ್ರಭೇದಗಳಲ್ಲಿ ಕೆಂಪು ಅಥವಾ ನೇರಳೆ ಬಣ್ಣದ, ಎಳೆಯಿದ್ದಾಗ ವಿಶಿಷ್ಟವಾಗಿ ಒತ್ತಾಗಿರುವ, ಗೋಳಾಕಾರದ ಗುಚ್ಛವಾಗಿ ಕಾಣುವ, ಎಲೆರಾಶಿಯಿಂದ ಆವೃತವಾಗಿ ವಿಶಿಷ್ಟವಾಗಿರುವ ಒಂದು ಎಲೆಎಲೆಯಾದ, ದ್ವೈವಾರ್ಷಿಕ, ದ್ವಿದಳ ಹೂಬಿಡುವ ಸಸ್ಯ. ಎಲೆಕೋಸಿನ ಎಲೆಗಳು ಹಲವುವೇಳೆ ಬ್ಲೂಮ್ ಎಂದು ಕರೆಯಲಾಗುವ ಒಂದು ಮೃದು, ಪುಡಿಪುಡಿಯಾದ, ಮೇಣದಂತಹ ಲೇಪವನ್ನು ತೋರುತ್ತವೆ.

ಎಲೆಕೋಸು


ಎಲೆಕೋಸು ಮತ್ತು ಅದರ ಅಡ್ಡ ಕೊಯ್ತ

ಎಲೆಕೋಸು ಒಂದು ತರಕಾರಿಸಸ್ಯ (ಕ್ಯಾಬೇಜ್). ಇದು ಒಂದು ಜನಪ್ರಿಯ ತರಕಾರಿ, ಆಹಾರವನ್ನು ಸಂಗ್ರಹಿಸಿಕೊಂಡಿರುವ ಇದರ ಬಿಳಿಯ ಎಲೆಗಳು ಒಂದರ ಮೇಲೊಂದು ಕವುಚಿಕೊಂಡು ಗೆಡ್ಡೆಯ ರೂಪವನ್ನು ತಾಳಿರುತ್ತವೆ. ಈ ಗೆಡ್ಡೆಯೇ ಹುಳಿ, ಪಲ್ಯ ಇತ್ಯಾದಿ ಅಡಿಗೆಗಳಿಗೆ ಬಳಸುವ ತರಕಾರಿ. ವಿಶೇಷವಾಗಿ ಯುರೋಪ್ ಮತ್ತು ಏಷ್ಯ ಖಂಡಗಳ ತೀರ ಪ್ರದೇಶಗಳಲ್ಲಿ ಬಹು ಹಿಂದಿನಿಂದಲೂ ವ್ಯವಸಾಯದಲ್ಲಿದೆ. ಹಸಿಯ ಕೋಸಿನಲ್ಲಿ ಎ, ಬಿ ಮತ್ತು ಬಿ2 ಜೀವಾತು ಗಳಿವೆ. ಸಿ ಜೀವಾತುವಂತೂ ಅತಿ ಹೆಚ್ಚಾ ಗಿದೆ. ಕೋಸನ್ನು ಬೇಯಿಸಿದರೆ ಬಿ ಮತ್ತು ಬಿ2 ಅಂಶಗಳು ನಾಶವಾಗಿ ಎ ಮತ್ತು ಸಿ ಗಳು ಅತ್ಯಲ್ಪ ಪ್ರಮಾಣದಲ್ಲಿ ಉಳಿಯುತ್ತವೆ. ಆದ್ದರಿಂದ ಕೋಸನ್ನು ಹಸಿಯಾಗಿ ಅಥವಾ ಅರೆಬೇಯಿಸಿ ಉಪಯೋಗಿಸಬೇಕು. ಪಾಶ್ಚಾತ್ಯರಲ್ಲಿ ಬೇಯಿಸದೆ ತಿನ್ನುವ ಪದ್ದತಿ ಹೆಚ್ಚು. ಹೊರಭಾಗದ ಹಸಿರು ಎಲೆಗಳಲ್ಲಿ ಇರುವಷ್ಟು ಎ ಅಂಶ ಒಳಭಾಗದ ಎಲೆಗಳಲ್ಲಿ ಇಲ್ಲ. ಕೋಸು ಜಾತಿಯ ಗಿಡಗಳ ಬೆಳೆವಣಿಗೆಗೆ ಜೌಗು ಪ್ರದೇಶಕ್ಕಿಂತ ಮರಳು ಮಿಶ್ರವಾದ ಕೆಬ್ಬೆ ನೆಲ ಅಥವಾ ಗೋಡು ಮಣ್ಣಿನ ಭೂಮಿ ಉತ್ತಮ. ನೀರು ನಿಲ್ಲದೆ ಇಂಗಿ ಹೋಗುವ ಭೂಮಿಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಭೂಮಿಯನ್ನು ಒಂದು ಮೀನಷ್ಟು ಆಳವಾಗಿ ಅಗೆದು ಮಣ್ಣಿನ ಹೆಂಟೆಗಳನ್ನು ಪುಡಿಮಾಡಬೇಕು. ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರವನ್ನು 304.8 ಮೀ ಗಳಿಗೆ ಒಂದು ಗಾಡಿಯಂತೆ ಅಥವಾ ಎಕರೆಗೆ 10 ಕಿಗ್ರಾಂ ನಂತೆ ಹಾಕಿ ಭೂಮಿಯನ್ನು ಸಿದ್ಧಪಡಿಸಬೇಕು. ಒಟ್ಟಲು ಪಾತಿಗಳಲ್ಲಿ ಬೀಜವನ್ನು ತೆಳುವಾಗಿ ಬಿತ್ತಿ ಸಸಿಗಳು 0.3048 ಮೀ ಬೆಳೆದು ನಾಲ್ಕರಿಂದ ಆರು ಎಲೆಗಳು ಕಾಣಿಸಿಕೊಂಡ ಕೂಡಲೆ ಜಾಗರೂಕತೆಯಿಂದ ತೆಗೆದು, ಸಿದ್ಧಪಡಿಸಿದ ಭೂಮಿಯಲ್ಲಿ ನೆಡಬೇಕು. ಸಾಲಿನಿಂದ ಸಾಲಿಗೆ ಎರಡಡಿ ಅಂತರ ಬಿಟ್ಟು ಸಸಿಯಿಂದ ಸಸಿಗೆ ಒಂದೂವರೆ ಅಡಿ ಅಂತರದಲ್ಲಿ ಒಂದೊಂದಾಗಿ ನೆಡಬೇಕು. ಬೇಸಗೆಯಲ್ಲಿ ನಾಲ್ಕು ದಿನಗಳಿಗೊಮ್ಮೆ ನೀರನ್ನು ಹಾಕಬೇಕು. ಇದಕ್ಕೆ ಮೀನಿನ ಗೊಬ್ಬರವನ್ನು ಉಪಯೋಗಿಸುವುದು ಒಳ್ಳೆಯದು. ಅದರಿಂದ ಗೆಡ್ಡೆಗಳು ದೊಡ್ಡವಾಗಿಯೂ ರುಚಿಕರವಾಗಿಯೂ ಆಗುತ್ತವೆ. ಒಟ್ಟಲು ಪಾತಿಯಿಂದ ಎಳೆ ಸಸಿಗಳನ್ನು ಬದಲಾಯಿಸುವಾಗ ತಂಪಾದ ಸಂಜೆಯಲ್ಲಿ, ಬೇರು ಮತ್ತು ಸ್ವಲ್ಪ ಮಣ್ಣಿನ ಸಹಿತವಾಗಿ ಸಸಿಗಳನ್ನು ತೆಗೆದು ಹೊಸ ಪಾತಿಗಳಲ್ಲಿ ನೆಟ್ಟು ನೀರನ್ನು ಒದಗಿಸಬೇಕು. ಹಣ್ಣೆಲೆಗಳನ್ನು ಆಗಾಗ್ಗೆ ತೆಗೆಯಬೇಕು. ಆಗಾಗ್ಗೆ ಮಣ್ಣನ್ನು ಕೆದಕಿ ಕಳೆ ತೆಗೆಯಬೇಕು. ಮಳೆ ಬಂದಾಗ ಸಸಿಗಳಿಗೆ ಅಪಾಯವಾಗದಂತಿರಲು ಮಾಡಲು ಸಸಿಗಳನ್ನು ಬದುಗಳ ಮೇಲೆ ನೆಡುವುದು ಉತ್ತಮ. ಸಸಿಗಳು 30 ಸೆಂಮೀ ಎತ್ತರ ಬೆಳೆದಾಗ ಬುಡದ ಮಣ್ಣನ್ನು ಕೆದಕಿ, ಬುಡದ ಸುತ್ತಲೂ ಗೋಪುರದಂತೆ ಮಣ್ಣನ್ನು ಏರಿ ಹಾಕಬೇಕು. ಬಿತ್ತನೆ ಮಾಡಿದ ಮೂರರಿಂದ ಮೂರುವರೆ ತಿಂಗಳಲ್ಲಿ ಕೋಸುಗೆಡ್ಡೆಗಳು ಕೊಯ್ಲಿಗೆ ಸಿದ್ಧವಾಗುತ್ತವೆ. ಕೋಸಿನಲ್ಲಿ ಜಾಗ್ರತೆ ಫಲ ಬಿಡುವ ನಿಧಾನವಾಗಿ ಫಲಬಿಡುವ ಎಂಬ ಎರಡು ಬಗೆಗಳಿವೆ. ಸಕ್ಕರೆ ಎಲೆ ಎಂಬುದು ಮತ್ತೊಂದು ವಿಧದ ಕೋಸು. ಡ್ರಂಹೆಡ್ ಎಂಬ ಜಾತಿಯ ಕೋಸಿನ ಎಲೆಗಳು ಸಿಹಿಯಾಗಿರುತ್ತವೆ. ಕೆಂಪು ಕೋಸನ್ನು ಉಪ್ಪಿನಕಾಯಿಗೆ ಉಪಯೋಗಿಸುತ್ತಾರೆ. ಎಲೆಕೋಸಿಗೆ ಅನೇಕ ವಿಧವಾದ ಕೀಟಗಳು ಮುತ್ತುತ್ತವೆ. ರೆಕ್ಕೆ ಹುಳುಗಳೂ ಅವುಗಳ ಮರಿಗಳೂ ಕ್ಯಾಟರ್ಪಿಲ್ಲರ್ ಈ ಬೆಳೆಗೆ ಮಾರಕವಾಗಿ ಪರಿಣಮಿಸುತ್ತವೆ. ಮುಂಜಾನೆಯಲ್ಲಿ ಫಾಲಿಡಾಲ್ ಮುಂತಾದ ರಾಸಾಯನಿಕಗಳನ್ನು ಸಿಂಪಡಿಸುವುದರಿಂದ ಹುಳುಗಳ ಹಾವಳಿಯನ್ನು ತಡೆಯಬಹುದು (ನೋಡಿ- ಕೋಸು). (ಎನ್.ಆರ್.ವಿ.)

ಪೋಷಕಾಂಶಗಳು

ಬದಲಾಯಿಸಿ

೧೦೦ ಗ್ರಾಂ ಎಲೆಕೋಸಿನಲ್ಲಿರುವ ಪೋಷಕಾಂಶಗಳು

ಮೇದಸ್ಸು ೦.೧ ಗ್ರಾಂ
ಕಾರ್ಬೋಹೈಡ್ರೇಟ್ ಗ್ರಾಂ
ಮೆಗ್ನೀಶಿಯಂ %
ಸೋಡಿಯಂ ೧೮ ಮಿಲಿಗ್ರಾಂ
ಪೊಟ್ಯಾಶಿಯಂ ೧೭೦ ಮಿಲಿಗ್ರಾಂ
ಕಬ್ಬಿಣ %
ಕ್ಯಾಲೊರಿ ೨೫ ಗ್ರಾಂ
ನಾರಿನಾಂಶ ೨.೫ ಗ್ರಾಂ

ಆರೋಗ್ಯ ಉಪಯೋಗಗಳು

ಬದಲಾಯಿಸಿ

ಎಲೆ ಕೋಸಿನಲ್ಲಿ ಕಂಡು ಬರುವ ಪೌಷ್ಟಿಕ ಅಂಶಗಳನ್ನು ಒಮ್ಮೆ ಗಮನಿಸಿ ನೋಡುವು ದಾದರೆ ಪ್ರತಿಯೊಂದು ನಮ್ಮ ದೇಹಕ್ಕೆ ಅತ್ಯಂತ ಅಗತ್ಯವಾಗಿ ಬೇಕಾದ ಪೌಷ್ಟಿಕಾಂಶಗಳೇ ಆಗಿವೆ. ಎಲೆ ಕೋಸಿನಲ್ಲಿ ವಿಟಮಿನ್ ' ಕೆ ', ವಿಟಮಿನ್ ' ಬಿ6 ', ವಿಟಮಿನ್ ' ಸಿ ' ಜೊತೆಗೆ ವಿಟಮಿನ್ ' ಬಿ ' - ಕಾಂಪ್ಲೆಕ್ಸ್, ವಿಟಮಿನ್ ' ಬಿ1 ', ಮ್ಯಾಂಗನೀಸ್, ಪೊಟ್ಯಾಶಿಯಂ, ನಾರಿನ ಅಂಶ, ತಾಮ್ರದ ಅಂಶ ಕಂಡು ಬರುತ್ತವೆ. ಇದರ ಜೊತೆಗೆ ಮೆಗ್ನೀಷಿಯಂ, ಕ್ಯಾಲ್ಸಿಯಂ, ನಯಾಸಿನ್, ಪಾಸ್ಪರಸ್, ಸೆಲೆನಿಯಂ, ಪ್ಯಾಂಟೋಥೆನಿಕ್ ಆಸಿಡ್, ಪ್ರೋಟೀನ್ ಅಂಶ ಇರುವ ಕಾರಣ ಎಲೆ ಕೋಸು ನಮ್ಮ ಆರೋಗ್ಯಕ್ಕೆ ದಿನದ ಅಗತ್ಯತೆಗೆ ತಕ್ಕಂತೆ ಯಾವುದೇ ಪೌಷ್ಟಿಕಾಂಶಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳುತ್ತದೆ.[]

ಕಣ್ಣಿನ ಆರೋಗ್ಯಕ್ಕೆ ಎಲೆಕೋಸು ಉತ್ತಮ

ಬದಲಾಯಿಸಿ

ಎಲೆ ಕೋಸಿನಲ್ಲಿ ಕಂಡು ಬರುವ ಬೀಟಾ - ಕ್ಯಾರೋಟಿನ್ ಅಂಶ ಒಂದು ಬಲವಾದ ಆಂಟಿ - ಆಕ್ಸಿಡೆಂಟ್ ಅಂಶ ಎನಿಸಿದ್ದು, ಇದು ನಮ್ಮ ಕಣ್ಣಿನ ಆರೋಗ್ಯಕ್ಕೆ ಮನೆ ಮದ್ದು ಎಂದು ಹೇಳಬಹುದು. ವಯಸ್ಸಾಗುತ್ತಿದ್ದಂತೆ ಎದುರಾಗುವ ಕಣ್ಣಿನ ಪೊರೆ ಸಮಸ್ಯೆಯನ್ನು ಇದು ಸುಲಭವಾಗಿ ನಿವಾರಣೆ ಮಾಡುತ್ತದೆ. ಜೊತೆಗೆ ಬಹಳ ದಿನಗಳ ಕಾಲ ಕಣ್ಣಿನ ಪೊರೆಯ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುತ್ತದೆ. ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ಬೀಟಾ - ಕ್ಯಾರೋಟಿನ್ ಅಂಶ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ವಯಸ್ಸಾದ ವ್ಯಕ್ತಿಗಳು ತಮ್ಮ ಕಣ್ಣಿನ ದೃಷ್ಟಿಗೆ ಸಂಬಂಧ ಪಟ್ಟ ಹಲವು ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಪ್ರತಿ ದಿನ ನಿತ್ಯ ನಿಯಮಿತವಾಗಿ ಎಲೆಕೋಸಿನ ಅಡುಗೆಗಳನ್ನು ಸೇವಿಸುವುದು ಒಳ್ಳೆಯದು. ಇದು ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವ ವ್ಯಕ್ತಿಗಳಿಗೆ ಕೂಡ ಅನ್ವಯವಾಗುತ್ತದೆ. []

ಉಲ್ಲೇಖಗಳು

ಬದಲಾಯಿಸಿ
 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
  1. Kannada, TV9 (19 April 2024). "ವಾರಕ್ಕೊಮ್ಮೆ ಎಲೆಕೋಸು ತಿನ್ನುವುದರಿಂದ ಆಗುವ ಲಾಭಗಳು". TV9 Kannada. Retrieved 31 August 2024.{{cite news}}: CS1 maint: numeric names: authors list (link)
  2. "ಎಲೆಕೋಸಿನಲ್ಲಿವೆ ಒಂದರ ಮೇಲೊಂದು ಆರೋಗ್ಯ ಪ್ರಯೋಜನಗಳು!". Vijay Karnataka. Retrieved 31 August 2024.


"https://kn.wikipedia.org/w/index.php?title=ಎಲೆಕೋಸು&oldid=1249693" ಇಂದ ಪಡೆಯಲ್ಪಟ್ಟಿದೆ