ಕೋಸಳ್ಳಿ ಜಲಪಾತ
ಕೋಸಳ್ಳಿ ಜಲಪಾತವು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಿಂದ ಸುಮಾರು ೧೧ ಕಿ.ಮೀ ದೂರದಲ್ಲಿದೆ. ಬೈಂದೂರಿನಿಂದ ಶಿರೂರು ಮಾರ್ಗವಾಗಿ ಸುಮಾರು ೭ ರಿಂದ ೮ ಕಿ.ಮೀ ದೂರವಿರುವ ತೂದಳ್ಳಿಗೆ ಬಂದು ಅಲ್ಲಿಂದ ಸುಮಾರು ೩ ಕಿ.ಮೀ ಕಾಡುಮಾರ್ಗದಲ್ಲಿ ನಡೆದು ಹೋದರೆ ಸಿಗುವುದೇ ಕೋಸಳ್ಳಿ ಜಲಪಾತ. ಕೋಸಳ್ಳಿ ಜಲಪಾತವು ೩-೫ ಹಂತಗಳಾಗಿ ಧುಮುಕುತ್ತದೆ.
- ದೂರ: ಬೆಂಗಳೂರಿನಿಂದ ಸುಮಾರು ೪೮೦ ಕಿ.ಮೀ. ಮಂಗಳೂರಿನಿಂದ ೧೩೦ ಕಿ.ಮೀ
- ಮಾರ್ಗ: ಮಂಗಳೂರು - ಗೋವಾ ರಾಷ್ಟ್ರೀಯ ಹೆದ್ದಾರಿ ೧೭
- ಸಮೀಪದ ಪ್ರಮುಖ ಆಕರ್ಷಣೆಗಳು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ (೨೭ ಕಿ.ಮೀ*), ಮುರ್ಡೇಶ್ವರ (೩೦ ಕಿ.ಮೀ*), ಉಡುಪಿ ಶ್ರೀ ಕೃಷ್ಣ ದೇವಸ್ಥಾನ (೬೭ ಕಿ.ಮೀ*), ಮರವಂತೆ ಕಡಲ ತೀರ (೧೮ ಕಿ.ಮೀ*), (*ಬೈಂದೂರಿನಿಂದ ಇರುವ ದೂರ)