ಕೋಸಂಬರಿ
ಕೋಸಂಬರಿ ಬೇಳೆಕಾಳುಗಳಿಂದ ತಯಾರಿಸಲಾದ ಮತ್ತು ಸಾಸಿವೆಯ ಒಗ್ಗರಣೆ ಕೊಡಲಾದ ಒಂದು ಸ್ಯಾಲಡ್. ಕಡಲೆ ಬೇಳೆ ಮತ್ತು ಹೆಸರು ಬೇಳೆ ಸಾಮಾನ್ಯವಾಗಿ ಬಳಸಲಾದ ಬೇಳೆಕಾಳುಗಳು. ಈ ಸ್ಯಾಲಡ್‍ಗಳನ್ನು ಕೆಲವೊಮ್ಮೆ ಲಘು ಆಹಾರವಾಗಿ ತಿನ್ನಲಾಗುತ್ತದೆ, ಆದರೆ ಸಾಮಾನ್ಯವಾಗಿ ಉಡುಪಿ ಪಾಕಪದ್ಧತಿಯಲ್ಲಿ ಪೂರ್ಣ ವರಸೆಯ ಊಟದ ಭಾಗವಾಗಿ ತಿನ್ನಲಾಗುತ್ತದೆ.
ಮೂಲ | |
---|---|
ಪರ್ಯಾಯ ಹೆಸರು(ಗಳು) | ಕೋಶಂಬರಿ |
ವಿವರಗಳು | |
ನಮೂನೆ | ಸ್ಯಾಲಡ್ |
ಮುಖ್ಯ ಘಟಕಾಂಶ(ಗಳು) | ಬೇಳೆಕಾಳುಗಳು, ಸಾಸಿವೆ ಕಾಳುಗಳು |
ಬೇಕಾಗುವ ಸಾಮಾಗ್ರಿಗಳು
ಬದಲಾಯಿಸಿ- ಕ್ಯಾರೆಟ್ (ತುರಿದ ಕ್ಯಾರೆಟ್)
- ಹೆಸರು ಬೇಳೆ ( ೩ ಗಂಟೆ ಮುಂಚಿತವಾಗಿ ನೀರಿನಲ್ಲಿ ನೆನೆ ಹಾಕಿರಬೇಕು)
- ಸ್ವಲ್ಪ ತುರಿದ ತೆಂಗಿನಕಾಯಿ
- ಸ್ವಲ್ಪ ಕೊತ್ತಂಬರಿ ಸೊಪ್ಪು (ಕತ್ತರಿಸಿದ್ದು)
- ರುಚಿಗೆ ತಕ್ಕ ಉಪ್ಪು
ಒಗ್ಗರಣೆಗೆ
ಬದಲಾಯಿಸಿ- ಅಡುಗೆ ಎಣ್ಣೆ
- ಚಮಚ ಸಾಸಿವೆ
- ಇಂಗು
- ಕತ್ತರಿಸಿದ ಹಸಿಮೆಣಸಿನ ಕಾಯಿ
ತಯಾರಿಸುವ ವಿಧಾನ
ಬದಲಾಯಿಸಿ- ನೀರಿನಲ್ಲಿ ನೆನೆಹಾಕಿದ ಹೆಸರುಬೇಳೆಯನ್ನು ಅದರ ನೆನೆ ಹಾಕಿದ ವಾಸನೆ ಹೋಗುವವರೆಗೆ ಚೆನ್ನಾಗಿ ತೊಳೆಯಬೇಕು.
- ಅದಕ್ಕೆ ತುರಿದ ಕ್ಯಾರೆಟ್ ಮತ್ತು ಕೊಬ್ಬರಿ[೧]ಯನ್ನು ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಬೇಕು.
- ಈಗ ಬಾಣಲೆಯನ್ನು ಬಿಸಿ ಮಾಡಿ ಸಾಸಿವೆ ಹಾಕಿ ಅದು ಚಟಾಪಟಾ ಶಬ್ದ ಬರುವಾಗ ಹಸಿಮೆಣಸಿನ ಕಾಯಿ ಮತ್ತು ಚಿಟಿಕೆಯಷ್ಟು ಇಂಗು ಸೇರಿಸಿ ೧-೨ ನಿಮಿಷ ಬಿಸಿ ಮಾಡಿ, ಅದನ್ನು ಕೊತ್ತಂಬರಿ ಸೊಪ್ಪಿನ ಮಿಶ್ರಣದ ಜೊತೆ ಸೇರಿಸಿದರೆ , ಕೋಸಂಬರಿ ರೆಡಿ.
ಉಲ್ಲೇಖಗಳು
ಬದಲಾಯಿಸಿ- ↑ "ಹೆಸರು ಬೇಳೆ ಕ್ಯಾರೆಟ್ ಕೋಸಂಬರಿ". kannada.boldsky.com ,2 June 2017.