ಕೋಲಾರದ ಚಿನ್ನದ ಗಣಿಯ(ಕೆಜಿಎಫ್) ಕಣದ ಪ್ರಯೋಗಗಳು

ಕೋಲಾರದ ಚಿನ್ನದ ಗಣಿ (KGF), ಇದು ಭಾರತದ ಪ್ರಮುಖ ಗಣಿರಾಜ್ಯಗಳಲ್ಲಿ ಒಂದಾದ ಕರ್ನಾಟಕಕೋಲಾರ ಜಿಲ್ಲೆಯಲ್ಲಿರುವ ಹೆಸರುವಾಸಿ ಚಿನ್ನದ ಗಣಿಗಳಲ್ಲಿ ಒಂದಾಗಿದೆ. ೧೯೬೦ ರಲ್ಲಿ ಇಲ್ಲಿ ನ್ಯೂಟ್ರಿನೊ ಕಣದ ಪ್ರಯೋಗಗಳು ಪ್ರಾರಂಭಗೊಂಡವು. ೧೯೯೨ರ ನಂತರದಲ್ಲಿ ಈ ಗಣಿಯ ಪ್ರಯೋಗಗಳು ಸ್ಥಗಿತಗೊಂಡವು.[೧]

ಕೆಜಿಎಫ್‌ನಲ್ಲಿರುವ ಚಾಂಪಿಯನ್ ರೀಫ್ಸ್ ಗಣಿ ಶಾಫ್ಟ್ನ ಚಿತ್ರ

ಆರಂಭಿಕ ಪ್ರಯೋಗಗಳು ಬದಲಾಯಿಸಿ

ಆರಂಭಿಕ ಪ್ರಯೋಗಗಳಾದ ಕಾಸ್ಮಿಕ್ ರೇ ಮ್ಯೂಯಾನ್‌ಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ [೨] ಕೆಜಿಎಫ್‌ ಅನ್ನು ಆಯ್ಕೆ ಮಾಡಲಾಗಿದೆ. ಏಕೆಂದರೆ ಈ ಗಣಿಗಳ ಆಳವು ಸಮುದ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವ [[ಅಯಸ್ಕಾಂತ|ಕಾಂತೀಯ] ರೋಹಿತ ಮಾಪಕಗಳಿಗಿಂತ ಉತ್ತಮ ಪರಿಸರದಲ್ಲಿ ಮ್ಯೂಯಾನ್‌ಗಳನ್ನು ಅಧ್ಯಯನ ಮಾಡಲು ಅವಕಾಶ ಮಾಡಿಕೊಟ್ಟಿತು. ಶಕ್ತಿಯ ರೋಹಿತ ಮತ್ತು ಮ್ಯೂಯಾನ್‌ಗಳ ಕೋನೀಯ ವಿತರಣೆಗಳನ್ನು ಹೆಚ್ಚಿನ ಶಕ್ತಿಗಳಲ್ಲಿಯೂ ಅಧ್ಯಯನ ಮಾಡಲು ಕೆಜಿಎಫ್ ನ ಸಹವಿಜ್ಞಾನಿಗಳಿಗೆ ಅವಕಾಶ ಮಾಡಿಕೊಟ್ಟಿತು. [೨] ಈ ಗಣಿಗಳಲ್ಲಿ ಕೋಲಾರ ಬಂಡೆಗಳು ಹೇರಳವಾಗಿದ್ದು, ಅದರ ಸಾಂದ್ರತೆ ಮತ್ತು ರಾಸಾಯನಿಕ ಸಂಯೋಜನೆಗೆ ಸಂಬಂಧಿಸಿದಂತೆ ವಿಶೇಷ ಗುಣಲಕ್ಷಣಗಳು (ಸಾಮಾನ್ಯ ಶಿಲೆಗಿಂತ ಭಿನ್ನವಾಗಿದೆ) ಪ್ರಯೋಗಗಳಲ್ಲಿ ಉಪಯುಕ್ತ ಪ್ರಯೋಜನವಾಗಿದೆ. ೧೯೫೦ ರ ದಶಕದಲ್ಲಿ ಬಿವಿ ಶ್ರೀಕಂಠನ್ [೨] ರವರು ಆಳದೊಂದಿಗೆ ಮ್ಯೂಯಾನ್ ಫ್ಲಕ್ಸ್‌ಗಳ ವ್ಯತ್ಯಾಸಗಳನ್ನು ಒಳಗೊಂಡಿರುವ ಮೊದಲ ಪ್ರಯೋಗಗಳನ್ನು (ಒಂದು ನಿರ್ದಿಷ್ಟ ಮಾಧ್ಯಮದ ಮೂಲಕ ಹಾದುಹೋಗುವ ಮ್ಯೂಯಾನ್‌ಗಳ ಮಾಪನ) ನಡೆಸಿದರು. ಇವುಗಳನ್ನು ೧೯೬೧ ರಲ್ಲಿ ಎಸ್. ಮಿಯಾಕೆ, ವಿ ಎಸ್ ನರಸಿಂಹಂ, ಪಿ ವಿ ರಮಣಮೂರ್ತಿ - ಈ ಮೂವರುಗಳು TIFR ನಿಂದ ಪ್ರಾಯೋಜಿಸಲ್ಪಟ್ಟ ಕೆಲವು ಪ್ರಯೋಗಗಳನ್ನು ನಡೆಸಿದರು. ೧೯೮೪ರ ಸಮಯದಲ್ಲಿ, TIFRನ ನಬಾ ಕುಮಾರ್ ಮೊಂಡಲ್ ಮತ್ತು ಜಪಾನ್ ನ ಒಸಾಕಾ ನಗರದ ವಿಶ್ವವಿದ್ಯಾಲಯದ ಪ್ರೊ. ಇಟೊರವರು ಪ್ರೋಟಾನ್ ಕೊಳೆಯುವಿಕೆಯ ಮೇಲೆ ಪ್ರಾಯೋಗಿಕ ಅಧ್ಯಯನಗಳನ್ನು ನಡೆಸಿದರು. ಮತ್ತು ಪರೋಕ್ಷವಾಗಿ ಮ್ಯೂಯಾನ್‌ಗಳ ಚದುರುವಿಕೆಯನ್ನು ಗಮನಿಸಿದರು. ಈ ಸಂದರ್ಭದಲ್ಲಿ ಮುರಳಿರವರು ಬಾಲಸುಬ್ರಮಣ್ಯಂ ಮೊಂಡಲ್ ಮತ್ತು ಇಟೊ ಅವರಿಗೆ ಸಂಶೋಧನಾ ಸಹಾಯಕರಾಗಿ ಸಹಾಯ ಮಾಡಿದರು.

ನ್ಯೂಟ್ರಿನೊ ಹುಡುಕಾಡುವಿಕೆ ಬದಲಾಯಿಸಿ

೧೯೬೪ರಲ್ಲಿ ನ್ಯೂಟ್ರಿನೊ ಸಂಬಂಧಿತ ಪ್ರಯೋಗಗಳನ್ನು ಕೆಜಿಎಫ್‌ನಲ್ಲಿ ಪ್ರಾರಂಭಿಸಲಾಯಿತು. ಕಾಸ್ಮಿಕ್ ಕಿರಣಗಳು ಹೆಚ್ಚಿನ ಶಕ್ತಿಯ ಪಿಯಾನ್‌ಗಳು ಮತ್ತು ಮ್ಯೂಯಾನ್‌ಗಳನ್ನು ಒಳಗೊಂಡಿರುತ್ತವೆ ಹಾಗೂ ಭೂಮಿಯ ವಾತಾವರಣದಲ್ಲಿ ಶತಕೋಟಿ ನ್ಯೂಟ್ರಿನೊಗಳನ್ನು ಉತ್ಪಾದಿಸುತ್ತದೆ ಎಂಬ ತಿಳಿವಳಿಕೆಯೊಂದಿಗೆ ನ್ಯೂಟ್ರಿನೊಗಳನ್ನು ಪತ್ತೆಹಚ್ಚುವುದು ಈ ಪ್ರಯೋಗಗಳ ಮುಖ್ಯವಾದ ಗುರಿಯಾಗಿತ್ತು. ಈ ಪ್ರಯೋಗಗಳನ್ನು TIFR, ಡರ್ಹಾಮ್ ವಿಶ್ವವಿದ್ಯಾಲಯ ಮತ್ತು ಒಸಾಕಾ ವಿಶ್ವವಿದ್ಯಾಲಯದ (ಬಾಂಬೆ-ಒಸಾಕಾ-ಡರ್ಹಾಮ್ ಸಹಯೋಗ) ಗುಂಪುಗಳು ಸಿಂಟಿಲೇಷನ್ ಕೌಂಟರ್‌ಗಳೊಂದಿಗೆ ಮೂಲ ಪ್ರಚೋದಕ ಮತ್ತು ಟ್ರ್ಯಾಕಿಂಗ್ ಡಿಟೆಕ್ಟರ್‌ಗಳಿಗಾಗಿ ನಿಯಾನ್ ಫ್ಲ್ಯಾಶ್ ಟ್ಯೂಬ್‌ಗಳನ್ನು (NFT) ಬಳಸಿ ನಡೆಸಿವೆ. ಇದಕ್ಕೆ ೨.೩ ಕಿ.ಮೀ. ಆಳದಲ್ಲಿ ಏಳು ಡಿಟೆಕ್ಟರ್‌ಗಳನ್ನು ನಿಯೋಜಿಸಲಾಗಿದೆ. ೧೯೬೫ ರ ಸಮಯದಲ್ಲಿ ಹೀತ್‌ಕೋಟ್ ಶಾಫ್ಟ್ ಮತ್ತು ಚಾಂಪಿಯನ್ ರೀಫ್ಸ್ ಗಣಿಗಳಲ್ಲಿ ಕಿ.ಮೀ.ಗಟ್ಟಲೇ ಕಬ್ಬಿಣದ ಕ್ಯಾಲೋರಿಮೀಟರ್ ಗಳನ್ನು ಬಳಸಿಕೊಂಡು ಪ್ರಯೋಗವು ಮೊದಲ ವಾಯುಮಂಡಲದ ನ್ಯೂಟ್ರಿನೊಗಳನ್ನು ಕಂಡುಹಿಡಿದಿದೆ. ಇದೇ ರೀತಿಯ ಆವಿಷ್ಕಾರವು ದಕ್ಷಿಣ ಆಫ್ರಿಕಾದ ಈಸ್ಟ್ ರಾಂಡ್ ಪ್ರಾಪ್ರಿಟರಿ ಮೈನ್ಸ್ (ಇಆರ್‌ಪಿಎಂ ಪ್ರಯೋಗ) ನಲ್ಲಿ ನಡೆಯಿತು. [೩] ೧೯೬೫ ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಈ ಪ್ರಯೋಗವು ಪ್ರಾರಂಭವಾಗಿ ೩೨೦೦ ಮೀಟರ್ ಭೂಗರ್ಭದಲ್ಲಿ ನಡೆಯಿತು ಮತ್ತು ಇದು ಕೇಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಇರ್ವಿನ್ ಮತ್ತು ವಿಟ್ವಾಟರ್ಸ್ರ್ಯಾಂಡ್ ವಿಶ್ವವಿದ್ಯಾಲಯದ ಗುಂಪುಗಳಿಂದ ನಿರ್ವಹಿಸಲ್ಪಟ್ಟಿತು. ಫ್ರೆಡೆರಿಕ್ ರೀನ್ಸ್ರವರು ಈ ಪ್ರಯತ್ನದ ನೇತೃತ್ವ ವಹಿಸಿದ್ದರು. ಇದರಲ್ಲಿ ಬಳಸಿದ ಲಿಕ್ವಿಡ್ ಸಿಂಟಿಲೇಟರ್ ಡಿಟೆಕ್ಟರ್ ಅನ್ನು ಕೇಸ್-ವಿಟ್ವಾಟರ್‌ಸ್ರ್ಯಾಂಡ್-ಇರ್ವಿನ್ ಅಥವಾ ಸಿಡಬ್ಲ್ಯೂಐ ಡಿಟೆಕ್ಟರ್ ಎಂದು ಕರೆಯಲಾಯಿತು.

ಕೆಜಿಎಫ್ ಗುಂಪು ರೀನ್ಸ್ CWI ಗಿಂತ ಎರಡು ತಿಂಗಳ ನಂತರ ನ್ಯೂಟ್ರಿನೊ ಅಭ್ಯರ್ಥಿಗಳನ್ನು ಪತ್ತೆಹಚ್ಚಿದರು. ಇವರು ಎರಡು ವಾರಗಳ ಮೊದಲು ತಮ್ಮ ಸಂಶೋಧನೆಗಳನ್ನು ಪ್ರಕಟಿಸಿದ ಕಾರಣ ವಾತಾವರಣದ ನ್ಯೂಟ್ರಿನೊಗಳ ಮೊದಲ ಆವಿಷ್ಕಾರಕ್ಕೆ ಅವರಿಗೆ ಔಪಚಾರಿಕ ಆದ್ಯತೆಯನ್ನು ನೀಡಲಾಯಿತು. [೪]

ಕೋಲಾರದ ಘಟನೆಗಳು ಬದಲಾಯಿಸಿ

ಕೋಲಾರ ಘಟನೆಗಳು ಎಂದು ಕರೆಯಲ್ಪಡುವ ಕೆಲವು ಪ್ರಾಯೋಗಿಕ ಅವಲೋಕನಗಳನ್ನು ಇನ್ನೂ ವಿವರಿಸಬೇಕಾಗಿದೆ. ಅವರು ದೀರ್ಘಾವಧಿಯ (10-9 ಸೆಕೆಂಡುಗಳು) ಹೊಂದಿರುವ ಬೃಹತ್ (>3 GeV) ಕಣಗಳ ಅಸ್ತಿತ್ವವನ್ನು ಸೂಚಿಸುತ್ತಾರೆ. ಈ ಬೃಹತ್ ಕಣಗಳು ೨-೩ ಕಣಗಳಾಗಿ ಕೊಳೆಯುವುದನ್ನು ಸಹ ಕಾಣಬಹುದು. [೫] ಅವು ನ್ಯೂಟ್ರಿನೊ ಸಂವಹನ ಅಥವಾ ಡಾರ್ಕ್ ಮ್ಯಾಟರ್ ಕೊಳೆಯುವಿಕೆಯ ಪರಿಣಾಮವನ್ನು ಪ್ರತಿಪಾದಿಸಲಾಗಿದೆ. [೬]  

ಉಲ್ಲೇಖಗಳು ಬದಲಾಯಿಸಿ

  1. N. K. Mondal (2004). "Status of India-based Neutrino Observatory (INO)" (PDF). Proceedings of the Indian National Science Academy. 70 (1): 71–77.
  2. ೨.೦ ೨.೧ ೨.೨ V. S. Narasimhan (2004). "Perspective of Experimental Neutrino Physics in India" (PDF). Proceedings of the Indian National Science Academy. 70 (1): 11–25.
  3. T. K. Gaisser (2005). "Atmospheric Neutrino Fluxes". Physica Scripta. T121: 51–56. arXiv:astro-ph/0502380. Bibcode:2005PhST..121...51G. doi:10.1088/0031-8949/2005/T121/007.
  4. Spiering, C. (2012). "Towards High-Energy Neutrino Astronomy". European Physical Journal H. 37 (3): 515–565. arXiv:1207.4952. Bibcode:2012EPJH...37..515S. doi:10.1140/epjh/e2012-30014-2.
  5. S. L. Glashow; H. van Dam; P. H. Frampton (1982). Third Workshop on Grand Unification, University of North Carolina, Chapel Hill. Birkhäuser Verlag. ISBN 978-3-7643-3105-4.
  6. M. V. N. Murthy; G. Rajasekaran (2014). "Anomalous Kolar events revisited: Dark Matter?". Pramana. 82 (3): 609. arXiv:1305.2715. Bibcode:2014Prama..82..609M. doi:10.1007/s12043-014-0718-5.