ಚಿನ್ನದ ಗಣಿಗಾರಿಕೆ

ಆಸ್ಟ್ರೇಲಿಯಾದ ಒಂದು ಚಿನ್ನದ ಗಣಿ

ಚಿನ್ನದ ಗಣಿಗಾರಿಕೆ ಬದಲಾಯಿಸಿ

ಚಿನ್ನದ ಗಣಿಗಾರಿಕೆ ನೆಲದಿಂದ ಚಿನ್ನ ಅಥವಾ ಚಿನ್ನದ ಅದಿರುಗಳ ಗಣಿಗಾರಿಕೆಯ ಪ್ರಕ್ರಿಯೆ. ಚಿನ್ನವನ್ನು ಭೂಮಿಯಿಂದ ಹೊರತೆಗೆಯಬಹುದು ಇದರಲ್ಲಿ ಹಲವಾರು ತಂತ್ರಗಳು ಮತ್ತು ಪ್ರಕ್ರಿಯೆಗಳು ಇವೆ.

ಇತಿಹಾಸ ಬದಲಾಯಿಸಿ

ಮಾನವರು ಮೊದಲು ಚಿನ್ನದ ಗಣಿಗಾರಿಕೆಯನ್ನು ಪ್ರಾರಂಭಿಸಿದ ನಿಖರವಾದ ದಿನಾಂಕವನ್ನು ತಿಳಿಯಲು ಅಸಾಧ್ಯ, ಆದರೆ ಕೆಲವು ಪರಿಚಿತ ಪುರಾತನ ಚಿನ್ನದ ಕಲಾಕೃತಿಗಳು ಬಲ್ಗೇರಿಯದ ವರ್ನ ಗೋರಿಸ್ಥಾನದಲ್ಲಿ ಕಂಡುಬಂದವು. ಗೋರಿಸ್ಥಾನದ ಗೋರಿಗಳು ೪೭೦೦ ಮತ್ತು ೪೨೦೦ BC ನಡುವೆ ನಿರ್ಮಾಣಗೊಂಡಿದ್ದವು, ಇದು ಚಿನ್ನದ ಗಣಿಗಾರಿಕೆಯು ಕನಿಷ್ಠ ೭೦೦೦ ವರ್ಷ ಹಳೆಯದು ಎಂದು ಸೂಚಿಸುತ್ತದೆ. ಬಂಗಾರಪೇಟೆ ತಾಲ್ಲೂಕಿನ, ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಕೋಲಾರ ಗೋಲ್ಡ್ ಫೀಲ್ಡ್ಸ್ ಪ್ರದೇಶದಲ್ಲಿ, ಚಿನ್ನವನ್ನು ಮೊದಲು ಸಣ್ಣ ಹೊಂಡ ಅಗೆಯುವ ಮೂಲಕ ಕ್ರಿ.ಶ. 2 ನೇ ಮತ್ತು ೩ ನೇ ಶತಮಾನದಲ್ಲಿ ಗಣಿಯಿಂದ ತೆಗೆಯಲಾಯಿತು. (ಹರಪ್ಪ ಮತ್ತು ಮೊಹೆಂಜೊದಾರೊವಿನಲ್ಲಿ ಕಂಡುಬಂದ ಚಿನ್ನದ ವಸ್ತುಗಳ ಕಲ್ಮಶ ವಿಶ್ಲೇಷಣೆಯ ಮೂಲಕ ಇವು ಕೋಲಾರದ್ದು ಎಂದು ಪತ್ತೆ ಹಚ್ಚಲಾಗಿದೆ - ಕಲ್ಮಶಗಳು ೧೧ % ಬೆಳ್ಳಿ ಸಾಂದ್ರಣ ಹೊಂದಿವೆ). ಕೋಲಾರ ಚಿನ್ನದ ಗಣಿಯಲ್ಲಿ ಚಾಂಪಿಯನ್ ರೀಫ್‍ ಅನ್ನು ಕ್ರಿ.ಶ. ಐದನೇ ಶತಮಾನದ ಗುಪ್ತ ಸಾಮ್ರಾಜ್ಯದ ಅವಧಿಯಲ್ಲಿ ೫೦ ಮೀಟರ್ ಆಳದವರೆಗೆ ಅಗೆಯಲಾಯಿತು. ಕ್ರಿ.ಶ. ೯ ಮತ್ತು ೧೦ ನೇ ಶತಮಾನದ ಚೋಳ ಅವಧಿಯಲ್ಲಿ ಕಾರ್ಯಾಚರಣೆಯ ಪ್ರಮಾಣ ಹೆಚ್ಚಾಯಿತು. ದಕ್ಷಿಣ ಭಾರತದ ಹನ್ನೊಂದನೇ ಶತಮಾನದ ರಾಜರುಗಳಿಂದ, ೧೩೩೬ ರಿಂದ ೧೫೬೦ ವರೆಗೆ ವಿಜಯನಗರ ಸಾಮ್ರಾಜ್ಯದಿಂದ, ಹಾಗೂ ನಂತರದಲ್ಲಿ ಟಿಪ್ಪು ಸುಲ್ತಾನನಿಂದ, ಮೈಸೂರು ರಾಜ್ಯದ ರಾಜನಿಂದ, ಮತ್ತು ಬ್ರಿಟಿಷರಿಂದ ಲೋಹದ ಗಣಿಗಾರಿಕೆ ಮುಂದುವರೆಯಿತು. ಇಲ್ಲಿಯವರೆಗೆ ಕರ್ನಾಟಕದಲ್ಲಿ ಒಟ್ಟು ಚಿನ್ನದ ಉತ್ಪಾದನೆ ೧೦೦೦ ಟನ್ ಎಂದು ಅಂದಾಜಿಸಲಾಗಿದೆ. ೧೯ನೇ ಶತಮಾನದಲ್ಲಿ, ವಿಶ್ವದ ಸುತ್ತ ೧೮೪೯ರ ಕ್ಯಾಲಿಫೋರ್ನಿಯಾ ಗೋಲ್ಡ್ ರಶ್, ವಿಕ್ಟೋರಿಯನ್ ಗೋಲ್ಡ್ ರಶ್, ಮತ್ತು ಕ್ಲಾಂಡೈಕ್ ಗೋಲ್ಡ್ ರಶ್‍ನಂತಹ ಚಿನ್ನದ ಮುನ್ನುಗುವಿಕೆಗಳು ಗಣಿಗಾರರ ದೊಡ್ಡ ವಲಸೆಗಳಿಗೆ ಕಾರಣವಾದವು. ಚಿನ್ನದ ಸಂಶೋಧನೆ ಎರಡನೆಯ ಬೋರ್ ಯುದ್ಧ ಮತ್ತು ಅಂತಿಮವಾಗಿ ದಕ್ಷಿಣ ಆಫ್ರಿಕಾ ಸ್ಥಾಪನೆಗೆ ಕಾರಣವಾಯಿತು.

ವಿಧಾನಗಳು ಬದಲಾಯಿಸಿ

ಪ್ಲೇಸರ್ ಗಣಿಗಾರಿಕೆ ಬದಲಾಯಿಸಿ

ಪ್ಲೇಸರ್ ಗಣಿಗಾರಿಕೆಯು ಪ್ಲೇಸರ್ ನಿಕ್ಷೇಪದಲ್ಲಿ ಸಂಗ್ರಹವಾದ ಚಿನ್ನವನ್ನು ಪಡೆಯುವ ವಿಧಾನವಾಗಿದೆ. ಪ್ಲೇಸರ್ ನಿಕ್ಷೇಪಗಳು ತುಲನಾತ್ಮಕವಾಗಿ ಸಡಿಲ ವಸ್ತುವಿನಿಂದ ಕೂಡಿರುತ್ತವೆ, ಹಾಗಾಗಿ ಸುರಂಗ ತೋಡುವುದು ಕಷ್ಟ, ಮತ್ತು ಬಹುತೇಕ ಹೊರತೆಗೆಯುವ ವಿಧಾನಗಳು ನೀರಿನ ಬಳಕೆ ಅಥವಾ ಹೂಳೆತ್ತುವಿಕೆಯನ್ನು ಒಳಗೊಂಡಿರುತ್ತದೆ.

ಹೂಳೆತ್ತುವಿಕೆ ಬದಲಾಯಿಸಿ

ಈ ವಿಧಾನವನ್ನು ಹೆಚ್ಚಾಗಿ ಆಧುನಿಕ ವಿಧಾನಗಳಿಂದ ಬದಲಾಯಿಸಿಲಾಗಿದೆಯಾದರೂ, ಸ್ವಲ್ಪ ಹೂಳೆತ್ತುವಿಕೆಯನ್ನು ಸಣ್ಣ ಪ್ರಮಾಣದ ಗಣಿಗಾರರು ಹೀರಿಕೆ ಹೂಳೆತ್ತು ಯಂತ್ರಗಳನ್ನು ಬಳಸಿ ಮಾಡುತ್ತಾರೆ. ಇವು ನೀರಿನ ಮೇಲೆ ತೇಲುತ್ತವೆ ಮತ್ತು ಸಾಮಾನ್ಯವಾಗಿ ಒಂದು ಅಥವಾ ಎರಡು ಜನರು ಕಾರ್ಯನಿರ್ವಹಿಸುವ ಸಣ್ಣ ಯಂತ್ರಗಳಾಗಿವೆ. ಒಂದು ಹೀರಿಕೆ ಹೂಳೆತ್ತು ಯಂತ್ರವು ಚಪ್ಪಟೆ ದೋಣಿಗಳನ್ನು ಆಧರಿಸಿದ ತೂಬು ಪೆಟ್ಟಿಗೆಯನ್ನು ಹೊಂದಿರುತ್ತದೆ ಮತ್ತು ಇದು ನೀರಿನ ಕೆಳಗೆ ಕೆಲಸಮಾಡುವ ಗಣಿಗಾರನಿಂದ ನಿಯಂತ್ರಿಸಲ್ಪಡುವ ಒಂದು ಹೀರಿಕೆ ಮೆದುಗೊಳವೆಗೆ ಬಂಧಿಸಲಾಗಿರುತ್ತದೆ.

ಅಮೇರಿಕದ ಅನೇಕ ಚಿನ್ನದ ಹೂಳೆತ್ತುವ ಪ್ರದೇಶಗಳಲ್ಲಿ, ಹೂಳೆತ್ತುವವರು ಮತ್ತು ಮೀನುಗಳ ಮೊಟ್ಟೆಯಿಡುವ ಸಮಯದ ನಡುವೆ ಘರ್ಷಣೆ ತಪ್ಪಿಸಲು ರಾಜ್ಯ ಹೂಳೆತ್ತು ಪರವಾನಗಿಗಳು ಋತುಯೋಗ್ಯ ಸಮಯಾವಧಿ ಮತ್ತು ಪ್ರದೇಶವನ್ನು ನಿರ್ದಿಷ್ಟವಾಗಿ ಹೇಳುತ್ತವೆ. ಮೊಂಟಾನಾದಂತಹ ಕೆಲವು ರಾಜ್ಯಗಳಲ್ಲಿ, ಅಮೇರಿಕಾದ ಕಾರ್ಪ್ಸ್ ಆಫ್ ಇಂಜಿನಿಯರ್ಸ್, ಮೊಂಟಾನಾ ಪರಿಸರ ಗುಣಮಟ್ಟ ಇಲಾಖೆ ಮತ್ತು ಸ್ಥಳೀಯ ಕೌಂಟಿ ನೀರಿನ ಗುಣಮಟ್ಟ ಮಂಡಳಿಗಳಿಂದ ಪರವಾನಿಗೆಗಳು ಸೇರಿದಂತೆ, ವಿಸ್ತೃತ ಪರವಾನಗಿ ವಿಧಾನದ ಅಗತ್ಯವಿರುತ್ತದೆ.

ಓಲಾಡುವ ಪೆಟ್ಟಿಗೆ ಬದಲಾಯಿಸಿ

ತೊಟ್ಟಿಲು ಎಂದೂ ಕರೆಯಲ್ಪಡುವ ಇದು, ತೂಬು ಪೆಟ್ಟಿಗೆ ರೀತಿಯಲ್ಲೇ ಚಿನ್ನವನ್ನು ಸಿಕ್ಕಿಸಲು ಎತ್ತರದ ಗೋಡೆಗಳುಳ್ಳ ಪೆಟ್ಟಿಗೆಯಲ್ಲಿ ಸ್ಥಿತವಾದ ರಿಫ಼ಲ್‍ಗಳನ್ನು ಬಳಸುತ್ತದೆ. ಓಲಾಡುವ ಪೆಟ್ಟಿಗೆಯು ತೂಬು ಪೆಟ್ಟಿಗೆಗಿಂತ ಕಡಿಮೆ ನೀರನ್ನು ಬಳಸುತ್ತದೆ ಮತ್ತು ಹೀಗಾಗಿ ಕಡಿಮೆ ನೀರಿನ ಪ್ರದೇಶಗಳಿಗೆ ಸೂಕ್ತವಾಗಿದೆ. ತೂಗುವಿಕೆಯು ಪ್ಲೇಸರ್ ವಸ್ತುವಿನಲ್ಲಿನ ಚಿನ್ನದ ಗುರುತ್ವ ಬೇರ್ಪಡಿಕೆಗೆ ಅಗತ್ಯವಾದ ಜಲ ಚಲನೆಯನ್ನು ನೀಡುತ್ತದೆ.

ಗಟ್ಟಿ ಬಂಡೆ ಗಣಿಗಾರಿಕೆ ಬದಲಾಯಿಸಿ

ಗಟ್ಟಿ ಬಂಡೆ ಗಣಿಗಾರಿಕೆಯು ಸಡಿಲ ಗೋಡಿನಲ್ಲಿನ ತುಣುಕುಗಳ ಬದಲು, ಬಂಡೆಯಿಂದ ಆವೃತವಾದ ಚಿನ್ನವನ್ನು ಹೊರತೆಗೆಯುತ್ತದೆ, ಮತ್ತು ವಿಶ್ವದ ಚಿನ್ನದ ಬಹುತೇಕ ಭಾಗವನ್ನು ಉತ್ಪಾದಿಸುತ್ತದೆ. ಕೆಲವೊಮ್ಮೆ ತೆರೆದ ಗುಂಡಿ ಗಣಿಗಾರಿಕೆಯನ್ನು ಬಳಸಲಾಗುತ್ತದೆ, ಉದಾಹರಣೆಗೆ ಕೇಂದ್ರ ಅಲಾಸ್ಕಾದಲ್ಲಿನ ಫೋರ್ಟ್ ನಾಕ್ಸ್ ಗಣಿಯಲ್ಲಿ. ಬ್ಯಾರಿಕ್ ಗೋಲ್ಡ್ ಕಾರ್ಪೊರೇಷನ್ ಈಶಾನ್ಯ ನೆವಾಡಾದಲ್ಲಿನ ತನ್ನ ಗೋಲ್ಡ್‌ಸ್ಟ್ರೈಕ್ ಗಣಿ ಆಸ್ತಿಯಲ್ಲಿ ಸ್ಥಿತವಾದ, ಉತ್ತರ ಅಮೆರಿಕದ ಅತಿದೊಡ್ಡ ತೆರೆದ ಗುಂಡಿ ಚಿನ್ನದ ಗಣಿಗಳ ಪೈಕಿ ಒಂದನ್ನು ಹೊಂದಿದೆ.

ಉಪಉತ್ಪನ್ನ ಚಿನ್ನದ ಗಣಿಗಾರಿಕೆ ಬದಲಾಯಿಸಿ

ಚಿನ್ನವನ್ನು ಅದು ಪ್ರಮುಖ ಉತ್ಪನ್ನವಿರದಲ್ಲಿಯೂ ಅಗೆದು ಉತ್ಪಾದಿಸಲಾಗುತ್ತದೆ. ಉತಾಹ್‍ನಲ್ಲಿನ ಬಿಂಘಮ್ ಕಣಿವೆ ಗಣಿಯಂತಹ ದೊಡ್ಡ ತಾಮ್ರದ ಗಣಿಗಳು, ಹಲವುವೇಳೆ ತಾಮ್ರದ ಜೊತೆಗೆ ಚಿನ್ನ ಮತ್ತು ಇತರ ಲೋಹಗಳನ್ನು ಗಣನೀಯ ಪ್ರಮಾಣದಲ್ಲಿ ಪಡೆಯುತ್ತವೆ. ಡೆನ್ವರ್, ಕೊಲೊರಾಡೋ ಸುತ್ತ ಇರುವಂತಹ ಕೆಲವು ಮರಳು ಮತ್ತು ಜಲ್ಲಿ ಗುಂಡಿಗಳು, ತಮ್ಮ ತೊಳೆಯುವ ಕಾರ್ಯಾಚರಣೆಗಳಲ್ಲಿ ಚಿನ್ನದ ಸಣ್ಣ ಪ್ರಮಾಣವನ್ನು ಪಡೆಯಬಹುದು. ವಿಶ್ವದ ಅತಿ ಹೆಚ್ಚು ಉತ್ಪಾದನೆಯ ಚಿನ್ನದ ಗಣಿಯಾದ, ಇಂಡೋನೇಷ್ಯಾದ ಪಪುವಾದಲ್ಲಿನ, ಗ್ರಾಸ್‍ಬರ್ಗ್ ಗಣಿ ಪ್ರಾಥಮಿಕವಾಗಿ ಒಂದು ತಾಮ್ರದ ಗಣಿಯಾಗಿದೆ.

ಚಿನ್ನದ ಸಂಸ್ಕರಣೆ ಬದಲಾಯಿಸಿ

ಪ್ಲೇಸರ್ ಗಣಿಗಳಲ್ಲಿ, ಚಿನ್ನವನ್ನು ಗುರುತ್ವ ಬೇರ್ಪಡಿಕೆ ಮೂಲಕ ಪಡೆಯಲಾಗುತ್ತದೆ. ಗಟ್ಟಿ ಬಂಡೆ ಗಣಿಗಾರಿಕೆಗೆ ಇತರ ವಿಧಾನಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.

ಸೈನೈಡ್ ಪ್ರಕ್ರಿಯೆ ಬದಲಾಯಿಸಿ

ಚಿನ್ನದ ಸೈನೈಡ್ ಹೊರತೆಗೆಯುವಿಕೆಯನ್ನು ಉತ್ಕೃಷ್ಟ ಚಿನ್ನ ಹೊಂದಿರುವ ಬಂಡೆಗಳು ಕಂಡುಬರುವ ಪ್ರದೇಶಗಳಲ್ಲಿ ಬಳಸಬಹುದು. ಸೋಡಿಯಂ ಸೈನೈಡ್ ದ್ರಾವಣವನ್ನು ಚಿನ್ನ ಅಥವಾ ಬೆಳ್ಳಿಯನ್ನು ಹೊಂದಿದೆಯೆಂದು ಸಾಬೀತಾದ ಚೆನ್ನಾಗಿ ರುಬ್ಬಿದ ಬಂಡೆಯೊಂದಿಗೆ ಬೆರೆಸಿ, ನಂತರ ರುಬ್ಬಿದ ಬಂಡೆಯಿಂದ ಚಿನ್ನದ ಸೈನೈಡ್ ಅಥವಾ ಬೆಳ್ಳಿ ಸೈನೈಡ್ ದ್ರಾವಣವಾಗಿ ಬೇರ್ಪಡಿಸಲಾಗುತ್ತದೆ. ಬೆಳ್ಳಿ ಮತ್ತು ಚಿನ್ನದ ಲೋಹಗಳು ಮತ್ತು ಶೇಷಾತ್ಮಕ ಸತುವನ್ನು ತಳಕ್ಕಿಳಿಸಲು ಸತುವನ್ನು ಸೇರಿಸಲಾಗುತ್ತದೆ. ಸತುವನ್ನು ಗಂಧಕಾಮ್ಲ ಬಳಸಿ ತೆಗೆದುಹಾಕಲಾಗುತ್ತದೆ, ಮತ್ತು ಇದರಿಂದ ಬೆಳ್ಳಿ ಅಥವಾ ಚಿನ್ನದ ರಾಡಿ ಉಳಿದುಕೊಳ್ಳುತ್ತದೆ, ಇದನ್ನು ಸಾಮಾನ್ಯವಾಗಿ ಗಟ್ಟಿಗಳಾಗಿ ಕರಗಿಸಿ ನಂತರ ೯೯೯೯೯೯% ಶುದ್ಧ ಲೋಹಗಳಾಗಿಸುವುದಕ್ಕೆ ಅಂತಿಮ ಸಂಸ್ಕರಣೆಗಾಗಿ ಲೋಹ ಸಂಸ್ಕರಣಾಗಾರಕ್ಕೆ ಸಾಗಿಸಲಾಗುತ್ತದೆ.

೧೯೭೦ರ ದಶಕದಲ್ಲಿನ ಪ್ರಗತಿಗಳಿಂದ, ಲೀಚ್ ದ್ರಾವಣದಿಂದ ಚಿನ್ನ ಹೊರತೆಗೆಯಲು ಸಕ್ರಿಯ ಇಂಗಾಲವನ್ನು ಬಳಸಲಾಗುತ್ತಿದೆ. ಚಿನ್ನವು ಇಂಗಾಲದ ಸರಂಧ್ರ ಮಾತೃಕೆಯಿಂದ ಹೀರಲ್ಪಡುತ್ತದೆ. ಸಕ್ರಿಯ ಇಂಗಾಲ ಬಹಳ ಹೆಚ್ಚು ಮೇಲ್ಮೈ ವಿಸ್ತೀರ್ಣವನ್ನು ಹೊಂದಿರುತ್ತದೆ. ಚಿನ್ನವನ್ನು ಇಂಗಾಲದಿಂದ ಕಾಸ್ಟಿಕ್ ಸೋಡಾ ಮತ್ತು ಸೈನೈಡ್‍ನ ಪ್ರಬಲ ದ್ರಾವಣ ಬಳಸಿ ತೆಗೆಯಬಹುದು, ಈ ಪ್ರಕ್ರಿಯೆ ಪ್ರೋದ್ಧಾವನ ಎಂದು ಕರೆಯಲ್ಪಡುತ್ತದೆ. ಚಿನ್ನವನ್ನು ನಂತರ ಉಕ್ಕು ಉಣ್ಣೆ ಮೇಲೆ ಲೇಪಿಸಲಾಗುತ್ತದೆ.

ವ್ಯಾಪಾರ ಬದಲಾಯಿಸಿ

ಸಣ್ಣ ಕಾರ್ಯಾಚರಣೆಗಳಿಗೆ ಬದಲಾಯಿಸಿ

ಬಹುತೇಕ ಚಿನ್ನ ಪ್ರಮುಖ ಸಂಸ್ಥೆಗಳಿಂದ ಉತ್ಪಾದಿಸಲಾಗುತ್ತದೆ, ಆದರೆ ಸಾವಿರಾರು ಜನರು ಸಣ್ಣ, ಕುಶಲಕರ್ಮಿ ಕಾರ್ಯಾಚರಣೆಗಳಲ್ಲಿ ಸ್ವತಂತ್ರವಾಗಿ ಕೆಲಸಮಾಡುತ್ತಾರೆ, ಕೆಲವು ಸಂದರ್ಭಗಳಲ್ಲಿ ಅಕ್ರಮವಾಗಿ.

ಇಂತಹ ಸಾಹಸೋದ್ಯಮಗಳ ಹೆಚ್ಚಿನ ಅಪಾಯವನ್ನು ೧೨ ನವೆಂಬರ್ ೨೦೦೯ ರಂದು, ಘಾನಾದ ಅಶಾಂತಿ ಪ್ರದೇಶದ ಒಂದು ಅಕ್ರಮ ಗಣಿಯ ಪತನದಲ್ಲಿ ನೋಡಲಾಗಿದೆ, ಇದರಲ್ಲಿ ೧೮ ಕಾರ್ಮಿಕರು ೧೩ ಮಹಿಳೆಯರು ಸೇರಿದಂತೆ, ಕೊಲ್ಲಲ್ಪಟ್ಟರು. ಅನೇಕ ಮಹಿಳೆಯರು ಕೂಲಿಗಳಾಗಿ ಅಂತಹ ಗಣಿಗಳಲ್ಲಿ ಕೆಲಸಮಾಡುತ್ತಾರೆ. ಇದು ಘಾನಾದ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಗಣಿಗಾರಿಕೆ ದುರ್ಘಟನೆಯಾಗಿತ್ತು.

ಚಿನ್ನದ ಹೊರತೆಗೆಯುವಿಕೆಯನ್ನು ಗರಿಷ್ಠಗೊಳಿಸಲು, ಪಾದರಸವನ್ನು ಹಲವುವೇಳೆ ಲೋಹದ ಜೊತೆಗೆ ಒಂದಾಗಿಸಲು ಬಳಸಲಾಗುತ್ತದೆ. ಮಿಶ್ರಣದಿಂದ ಪಾದರಸವನ್ನು ಕುದಿಸಿ ತೆಗೆದು ಚಿನ್ನವನ್ನು ಉತ್ಪಾದಿಸಲಾಗುತ್ತದೆ. ಈ ಪ್ರಕ್ರಿಯೆ ಅಪಾಯಕಾರಿ ಏಕೆಂದರೆ ಪಾದರಸದ ಆವಿ ವಿಷಕಾರಿ.