ಕೋನೇರು ಹಂಪಿ

(ಕೋನೆರು ಹಂಪಿ ಇಂದ ಪುನರ್ನಿರ್ದೇಶಿತ)

ಕೋನೇರು ಹಂಪಿ ಒಬ್ಬ ಚದುರಂಗ ಆಟಗಾರ್ತಿ. ಅವರು ೩೧ ಮಾರ್ಚ್ ೧೯೮೭ ರಂದು ಆಂಧ್ರ ಪ್ರದೇಶದ ಗುಡಿವಾಡದಲ್ಲಿ ಜನಿಸಿದರು.[] . ಆಕೆ ಅಕ್ಟೋಬರ್ ೨೦೦೭ರಲ್ಲಿ ಭಾರತದ ಚೆಸ್ ಗ್ರಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದರು. ಆಕೆ ೨೬೦೦ ಎಲೊ ರ್‍ಯಾಂಕಿಂಗ್ ಪಡೆದು ಜುಡಿತ್ ಪೊಲ್ಗಾರ್ ನಂತರ ಇಷ್ಟು ಅಂಕ ಪಡೆದ ದ್ವಿತೀಯ ಮಹಿಳಾ ಚೆಸ್ ಆಟಗಾರ್ತಿ ಆದರು.[][]

ಕೋನೇರು ಹಂಪಿ

ಕೋನೇರು ಹಂಪಿಯವರು ೨೦೦೨ರಲ್ಲಿ ಅತಿ ಕಿರಿಯ ವಯಸ್ಸಿನ ಮಹಿಳಾ ಗ್ರಾಂಡ್‍ಮಾಸ್ಟರ್ (ಏಕೈಕ ಮಹಿಳಳಾ ಗ್ರಾಂಡ್‍ಮಾಸ್ಟರ್) ಆದರು. ಆಗ ಆಕೆಯ ವಯಸ್ಸು ೧೫ವರ್ಷ, ೧ ತಿಂಗಳು, ೨೭ ದಿನಗಳಾಗಿತ್ತು,  ಇದಕ್ಕೆ ಮೊದಲು ಈ ದಾಖಲೆ ಜುಡಿತ್ ಪೊಲ್ಗಾರ್ ಅವರ ಹೆಸರಿನಲ್ಲಿತ್ತು.[]. ಹೌವ್ ಯಿಫಾನ್ ಅವರು ಈ ದಾಖಲೆಯನ್ನು ೨೦೦೮ರಲ್ಲಿ ಮುರಿದರು.

ವೈಯಕ್ತಿಕ ಜೀವನ

ಬದಲಾಯಿಸಿ

ಅವರ ಪೋಷಕರು ಕೋನೇರು ಅಶೋಕ್ ಮತ್ತು ಶ್ರೀಮತಿ ಲತಾ ಅಶೋಕ್. ಚಾಂಪಿಯನ್ ಎಂಬ ಅರ್ಥ ಬರುವಂತೆ ಆಕೆಗೆ ಹಂಪಿ ಎಂದು ಹೆಸರಿಡಲಾಯಿತು. ಇದು ರಶಿಯನ್ ಹೆಸರಿಗೆ ನಿಕಟವಾಗಿ ಹೋಲುವ ಹೆಸರು.[][]

  • ಆಗಸ್ಟ್ ೨೦೧೪ರಲ್ಲಿ ಅವರ ಮದುವೆಯಾಯಿತು. ಪತಿಯ ಹೆಸರು ದಾಸರಿ ಅನ್ವೆಶ್.[] ಪ್ರಸ್ತುತ ONGC ಲಿಮಿಟೆಡ್ನಲ್ಲಿ ಕೆಲಸ ಮಾಡುತ್ತಿದ್ದಾರೆ.[]

ಸಾಧನೆಗಳು

ಬದಲಾಯಿಸಿ

ಕೋನೇರು ಹಂಪಿಯವರು ಭಾಗವಹಿಸಿದ FIDE ಮಹಿಳಾ ಗ್ರಾಂಡ್ ಫ್ರೀ ೨೦೦೯-೨೦೧೧ ರಲ್ಲಿ  ಅಂತಿಮವಾಗಿ ಎರಡನೇ ಸ್ಥಾನವನ್ನು ಪಡೆದು ವಿಶ್ವ ಮಹಿಳಾ ಚೆಸ್ ಚಾಂಪಿಯನ್ಷಿಪ್ ೨೦೧೧ರಲ್ಲಿ ಆಡುವ ಅರ್ಹತೆ ಪಡೆದರು.[][೧೦] ಅದರಲ್ಲಿ ಹೌವ್ ಯಿಫಾನ್ ಜಯ ಸಾಧಿಸಿದರು. ಹಂಪಿಯವರು ದ್ವಿತೀಯ ಸ್ಥಾನ ಪಡೆದರು.

ಅವರು ಚೀನಾದ ಚೆಂಗ್ಡುವಿನಲ್ಲಿ ೨೦೧೫ರಲ್ಲಿ ನಡೆದ ವಿಶ್ವ ಮಹಿಳಾ ಚೆಸ್ ಚಾಂಪಿಯನ್‍ಶಿಪ್‍ನಲ್ಲಿ ವೈಯಕ್ತಿಕ ಕಂಚಿನ ಪದಕ ಪಡೆದರು. ಅದರಲ್ಲಿ ಭಾರತೀಯ ತಂಡ ನಾಲ್ಕನೇ ಸ್ಥಾನ ಪಡೆಯಿತು.[೧೧]

ಪ್ರಶಸ್ತಿ ಮತ್ತು ಸಾಧನೆ

ಬದಲಾಯಿಸಿ
ಕ್ರಮ ಸಂಖ್ಯೆ ಪ್ರಶಸ್ತಿಯ ಹೆಸರು ಪಡೆದ ವರ್ಷ ನಡೆದ ಸ್ಥಳ
ವಿಶ್ವ ಯುವ ಚೆಸ್ ಚಾಂಪಿಯನ್ಷಿಪ್(ಅಂಡರ್-10 ಬಾಲಕಿಯರ ವಿಭಾಗ) ೧೯೯೭
ವಿಶ್ವ ಯುವ ಚೆಸ್ ಚಾಂಪಿಯನ್ಷಿಪ್ (ಅಂಡರ್-12 ಹುಡುಗಿಯರು) ೧೯೯೮
ವಿಶ್ವ ಯುವ ಚೆಸ್ ಚಾಂಪಿಯನ್ಷಿಪ್(ಅಂಡರ್-14 ಹುಡುಗಿಯರು) ೨೦೦೦
ಏಷ್ಯನ್ ಯೂತ್ ಚೆಸ್ ಚಾಂಪಿಯನ್ಷಿಪ್[೧೨] ೧೯೯೯ ಅಹಮದಾಬಾದ್
ವಿಶ್ವ ಜೂನಿಯರ್ ಗರ್ಲ್ಸ್ ಚಾಂಪಿಯನ್ಷಿಪ್[೧೩] ೨೦೦೧
ವಿಶ್ವ ಜೂನಿಯರ್ ಚಾಂಪಿಯನ್ಷಿಪ್[೧೪] ೨೦೦೪
10ನೇ ಏಷ್ಯನ್ ಮಹಿಳಾ ವೈಯಕ್ತಿಕ ಚಾಂಪಿಯನ್ಷಿಪ್ ಮತ್ತು ಭಾರತೀಯ ಮಹಿಳೆಯರ ಚಾಂಪಿಯನ್ಶಿಪ್[೧೫][೧೬] ೨೦೦೦, ೨೦೦೨, ೨೦೦೩
ಬ್ರಿಟಿಷ್ ಮಹಿಳೆಯರ ಚಾಂಪಿಯನ್ಶಿಪ್ ೨೦೦, ೨೦೦೨, ೨೦೦೩
ಉತ್ತರ ಯೂರಲ್ ಕಪ್ನಲ್ಲಿ ಗೆಲುವು[೧೭] ೨೦೦೫
೧೦ ಮುಂಬೈ ಮೇಯರ್ ಕಪ್[೧೮] ೨೦೧೦ ಮುಂಬೈ
೧೧ ಪದ್ಮಶ್ರೀಪ್ರಶಸ್ತಿ[೧೯]. ೨೦೧೩
೧೨ ಅರ್ಜುನ ಪ್ರಶಸ್ತಿ ೨೦೦೭

ರಾಯಭಾರಿ

ಬದಲಾಯಿಸಿ
  • ಸ್ವಚ್ಛ ಭಾರತ ಆಂದೋಲನದ ಬ್ರ್ಯಾಂಡ್‌ ರಾಯಭಾರಿ

ಉಲ್ಲೇಖ

ಬದಲಾಯಿಸಿ
  1. https://chess24.com/en/read/players/humpy-koneru
  2. "Anand crosses 2800 and leads the October 2007 FIDE ratings". Chess News. Retrieved 17 February 2015.
  3. FIDE: Koneru's rating progress chart FIDE
  4. "Humpy beats Judit Polgar by three months". Chess News. Retrieved 17 February 2015.
  5. "Humpy beats Judit Polgar by three months". 31 May 2002.
  6. "Humpy's moves". The Tribune. Chandigarh, India. 8 April 2006.
  7. J. R. Shridharan. "Humpy enters wedlock with Anvesh". The Hindu. Retrieved 17 February 2015.
  8. "Humpy joins ONGC". The Hindu. Retrieved 23 January 2016.
  9. "Women GP – Nalchik – Women GP – Nalchik". Nalchik2010.fide.com. Retrieved 1 December 2014.
  10. "Humpy pulls it off – wins Doha GM and qualifies | Chess News". Chessbase.com. Retrieved 1 December 2014.
  11. "World Women Chess: Harika wins silver, bronze for Humpy". The Hindu. PTI. Retrieved 29 April 2015.
  12. https://www.rediff.com/sports/2001/aug/30humpy.htm
  13. Goa 2002 – 20° Campeonato Mundial Juvenil Feminino BrasilBase
  14. Cochin 2004 – 43° Campeonato Mundial Juvenil BrasilBase
  15. 10th Asian Women's Individual Chess Championship FIDE
  16. Crowther, Mark (17 November 2003). "TWIC 471: Indian Women's National A Championships". The Week in Chess. Retrieved 15 September 2015.
  17. "North Urals Cup: Humpy wins, Xu Yuhua second". ChessBase. 15 July 2005. Retrieved 20 April 2016.
  18. Zaveri, Praful (15 May 2009). "Areshchenko triumphs in Mayor's Cup – Jai Ho Mumbai!!". ChessBase. Retrieved 10 May 2010.
  19. "ಆರ್ಕೈವ್ ನಕಲು" (PDF). Archived from the original (PDF) on 2015-10-15. Retrieved 2014-11-15.

ಬಾಹ್ಯ ಕೊಂಡಿ

ಬದಲಾಯಿಸಿ