ಕೊರೋನಾವೈರಸ್ ಪಾರ್ಟಿ
ಕೊರೋನಾವೈರಸ್ ಪಾರ್ಟಿ (Corona-Party) ಮೇಲ್ನೋಟಕ್ಕೆ COVID-೧೯ ಅನ್ನು ಪಡೆಯಲು ಒಂದು ಒಗ್ಗೂಡುವಿಕೆಯಾಗಿದೆ. ಆದರೆ ಕೆಲವೊಮ್ಮೆ ಭಾಗವಹಿಸುವವರು ವೈಯಕ್ತಿಕವಾಗಿ ಅಥವಾ ಸಮುದಾಯಕ್ಕೆ ಆಗುವ ದುಷ್ಪರಿಣಾಮಗಳ ಬಗ್ಗೆ ಚಿಂತಿಸುವುದಿಲ್ಲ ಎಂಬ ಆಧಾರದ ಮೇಲೆ ನಡೆಸಲಾಗುತ್ತದೆ. ಈ ವಿದ್ಯಮಾನವನ್ನು ಜರ್ಮನಿ, ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್‌ಡಂನಲ್ಲಿ ಗುರುತಿಸಲಾಗಿದೆ.[೨] ನೆದರ್ಲ್ಯಾಂಡ್ಸ್ ದೇಶದಲ್ಲಿ ಇಂತಹ ಕೂಟಗಳನ್ನು ಸ್ಪಷ್ಟವಾಗಿ ನಿಷೇಧಿಸಲಾಗಿದೆ.[೩]
ಉದಾಹರಣೆಗಳು
ಬದಲಾಯಿಸಿಕೆಂಟುಕಿಯಲ್ಲಿ ಇಂತಹ ಪಾರ್ಟಿಯಲ್ಲಿ ಭಾಗವಹಿಸಿದವರೊಬ್ಬರು ವೈರಸ್‌ಗೆ ಧನಾತ್ಮಕತೆ ಹೊಂದಿರುವುದನ್ನು ದೃಢಪಡಿಸಲಾಗಿದೆ.[೪]
ಕೊರೋನಾವೈರಸ್ ವಿಷಯದ ಕೂಟಗಳಂತಹ ಇತರ ಕೂಟಗಳನ್ನು ಸಹ ಅವಿವೇಕದ ಕೂಟ ಎಂದು ಖಂಡಿಸಲಾಗಿದೆ.[೧]
ಹೊಸ ನಿಯಮಗಳು ಜಾರಿಗೆ ಬರುವ ಮೊದಲು ಅನೇಕ ಜನರು ಸಂಜೆ ಈ ಕೊರೋನಾವೈರಸ್ ಪಾರ್ಟಿಯನ್ನು ಆಚರಿಸಿದ್ದಾರೆ ಎಂದು ಬೆಲ್ಜಿಯಂ ಪತ್ರಿಕೆ ಹೆಟ್ ಲಾಟ್ಸ್ಟೆ ನ್ಯೂಸ್ (Belgian newspaper Het Laatste nieuws) ೧೫ ಮಾರ್ಚ್ ೨೦೨೦ ರಂದು ವರದಿ ಮಾಡಿದೆ. ಕೊನೆಯ ಘಳಿಗೆಯಲ್ಲಿ ಹೆಚ್ಚಿನ ಸಂಖ್ಯೆಯ 'ಕೊರೋನಾ-ಪಾರ್ಟಿ'ಗಳನ್ನು ಆಯೋಜಿಸಲಾಗಿದೆ.[೫]
ಮಾರ್ಚ್ ೧೯, ೨೦೨೦ ರಂದು ಜರ್ಮನ್ ರಾಜ್ಯವಾದ ಬಾಡೆನ್-ವುರ್ಟೆಂಬರ್ಗ್‌ನಲ್ಲಿ ಹಲವಾರು ಕೊರೋನಾ-ಪಾರ್ಟಿಗಳನ್ನು ನಿಲ್ಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಭಾಗವಹಿಸಿದವರು ೧೫ ವರ್ಷದಿಂದ ಇಪ್ಪತ್ತರ ಮಧ್ಯದ ವಯಸ್ಸಿನವರು. ಯುವಕರು ಶಾಲೆಯ ಅಂಗಳದಲ್ಲಿ, ಬಾರ್ಬೆಕ್ಯೂ ತಾಣಗಳಲ್ಲಿ ಮತ್ತು ಉದ್ಯಾನವನಗಳಲ್ಲಿ ಭೇಟಿಯಾದರು. ತಮ್ಮ ಮಕ್ಕಳ ಮೇಲೆ ನಿಗಾ ವಹಿಸುವಂತೆ ಪೋಷಕರನ್ನು ಪೊಲೀಸ್ ಮುಖ್ಯಸ್ಥರು ಕೇಳಿಕೊಂಡರು.[೬]
ಆಸ್ಟ್ರಿಯನ್ ಬ್ರಾಡ್‌ಕಾಸ್ಟರ್ ಒಆರ್‌ಎಫ್ ಪ್ರಕಾರ, ನಾಲ್ಕು ಪುರುಷರು ೨೦೨೦ ರ ಮಾರ್ಚ್ ೨೧, ಶನಿವಾರದಂದು ಹೆಲಿಜೆನ್‌ಕ್ರೂಜ್ ಆಮ್ ವಾಸೆನ್‌ನ ಕ್ಲಬ್ ಹೌಸ್‌ನಲ್ಲಿ ಭೇಟಿಯಾದರು. ಪುರುಷರಲ್ಲಿ ಒಬ್ಬರು ಸ್ಟೈರಿಯಾದ ರಾಜ್ಯ ಸಂಸತ್ತಿನ ಸದಸ್ಯರಾದ ಗೆರ್ಹಾರ್ಡ್ ಹಿರ್ಷ್ಮನ್ (FPÖ). ಇತರೆ ಪಕ್ಷಗಳು ಅವರ ನಡವಳಿಕೆಯನ್ನು ಖಂಡಿಸಿದವು.[೭]
ಪ್ರತಿಕ್ರಿಯೆಗಳು
ಬದಲಾಯಿಸಿಜರ್ಮನಿಯ ಪತ್ರಿಕೆ FAZನ ಪ್ರಕಾರ, ಕೆಲವು ಜನರು ತಾವು ಪಾರ್ಟಿ ಮಾಡುವುದನ್ನು ನಿಲ್ಲಿಸಲು ಬಯಸುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಸೋಂಕಿನ ಅಪಾಯದ ನಡುವೆಯೂ ಕೆಲವರು ಪಾರ್ಟಿ ಮಡುತ್ತಾರೆ. ಇತರರು ಈ ಸಾಧ್ಯತೆಯಿಂದಾಗಿ ಒಟ್ಟುಗೂಡುತ್ತಾರೆ. ಸೋಂಕು ಮತ್ತು ಅನಾರೋಗ್ಯದ ನಂತರ ಅವರು ರೋಗನಿರೋಧಕರಾಗುತ್ತಾರೆ ಮತ್ತು ನಂತರ ಅವರ ಸಾಮಾನ್ಯ ಜೀವನಕ್ಕೆ ಹಿಂತಿರುಗಬಹುದು ಎಂದು ಅವರು ನಂಬುತ್ತಾರೆ. ಖಾಸಗಿಯಾಗಿ ಸಂಘಟಿತವಾದ, "ಕೊರೋನಾಪಾರ್ಟಿಗಳು" ಎಂದು ಕರೆಯಲ್ಪಡುವ ಇವು ಈ ಯೋಜನೆಯ ಫಲಿತಾಂಶವಾಗಿದೆ.[೮]
ಇದನ್ನೂ ಸಹ ನೋಡಿ
ಬದಲಾಯಿಸಿ- ಪೋಕ್ಸ್ ಪಾರ್ಟಿ
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ "Friends throw 'coronavirus party' with face masks, 'Quarantini' drinks, Pandemic game". Retrieved 25 March 2020.
- ↑ "Police chief slams nightclub over coronavirus party post". 20 March 2020.
- ↑ Noodverordening van de voorzitter van de veiligheidsregio [...], page 7 (Article 2.1: 'Verboden samenkostem en evenementen) 26 March 2020, accessed 28 March 2002.
- ↑ "A group of young adults held a coronavirus party in Kentucky to defy orders to socially distance. Now one of them has coronavirus". Retrieved 25 March 2020.
- ↑ Het Laatste Nieuws: “Schaam je!”
- ↑ Badische Neueste Nachrichten: Polizei löst „Corona-Partys“ in Baden-Baden, Bühl und Durmersheim auf Archived 2020-03-21 ವೇಬ್ಯಾಕ್ ಮೆಷಿನ್ ನಲ್ಲಿ., 20 March 2020, last seen on 21 March 2020.
- ↑ FPÖ-Abgeordneter feierte „Corona-Party“ orf.at, 20 March 2020, last seen on 21 March 2020.
- ↑ FAZ.net: Feiern bis der Arzt kommt, 19 March 2020, last seen on 22 March 2020.