ಕೊಡಿಗೆಹಳ್ಳಿ ಶಿಲಾಶಾಸನ

ಇದು ಬೆಂಗಳೂರಿನ ಕೊಡಿಗೆಹಳ್ಳಿ ಪ್ರದೇಶದಲ್ಲಿರುವ ಒಂದು ಶಿಲಾಶಾಸನ. ಇದು ಸ್ಥಾಪಿತವಾದ ಕಾಲ ಕ್ರಿ.ಶ.೧೪೩೧ನೇ ಇಸವಿ. ಈ ಶಾಸನ ಕಲ್ಲಿನ ಗಾತ್ರ 4'6"X3'. ಶಾಸನವು ಹಳೆಗನ್ನಡ ಭಾಷೆಯಲ್ಲಿ ಮತ್ತು ಲಿಪಿಯಲ್ಲಿ ಬರೆಯಲ್ಪಟ್ಟಿದೆ. ಇದು ವಿಜಯನಗರ ಸಾಮ್ರಾಜ್ಯದ ರಾಜ ದೇವರಾಯನ ಆಳ್ವಿಕೆಯ ಕಾಲದ್ದಾಗಿದೆ. ಪ್ರಸ್ತುತ ವಿರೂಪಾಕ್ಷಪುರದ ಆಂಜನೇಯ ಗುಡಿ ಬಳಿ ರಸ್ತೆ ಬದಿಯಲ್ಲಿ ಇದೆ.[೧]. ಇದರಲ್ಲಿ ವಿರೂಪಾಕ್ಷಪುರ ಗ್ರಾಮವನ್ನು ಶಿವನಸಮುದ್ರ (ಈಗಿನ ಹೆಸರಘಟ್ಟ) ಊರಿನಲ್ಲಿರುವ ಸೋಮೇಶ್ವರ ದೇವಾಲಯಕ್ಕೆ ಕೊಡುಗೆ ಕೊಟ್ಟುದಾಗಿ ಬರೆಯಲಾಗಿದೆ.[೨]

ಕೊಡಿಗೆಹಳ್ಳಿ ಕಲ್ಬರಹ
ಶಾಸನಕಲ್ಲಿರುವ ಜಾಗದ ನೋಟ


ಶಾಸನ ಪಠ್ಯ ಬದಲಾಯಿಸಿ

ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN127 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[೩]


ಅದೇ ಹೋಬಳಿ ಕೊಡಿಗೆಹಳ್ಳಿ ಗ್ರಾಮಕ್ಕೆ ವಾಯುವ್ಯ ಆಂಜನೇಯ ದೇವಾಲಯಕ್ಕೆ ಪಶ್ಚಿಮ ನೆಟ್ಟಿರುವ ಕಲ್ಲು.

ಪ್ರಮಾಣ 4’6” x 3’

ಶ್ರೀಗಣಾಧಿಪತಿಯೇ ನಮಃ ನಮಸ್ತುಂಗಶಿರಶ್ಚುಂಬಿಚಂದ್ರ
ಚಾಮರಚಾರವೇತೈ ಲೋಕ್ಯನಗರಾರಂಭಮೂಲ
ಸ್ತಂಭಾ ಯಶಂಭವೇ ಸ್ವಸ್ತಿಶ್ರೀ ವಿಜಯಾಭ್ಯುದಯ ಶಕ ವರುಷ 1353ನೆಯ
ಸಂದವರ್ತಮಾನವಿರೋಧಿಕ್ರುತುಸಂವತ್ಸರದಭಾದ್ರಪದ
ಸುಂಗುಲುಶ್ರೀಮನ್ಮಹಾರಾಜರಾಜಪರಮೇಶ್ವರಶ್ರೀವೀರ
ವಿಜೆಯಭೂಪತಿರಾಯಮಹಾರಾಯರಕುಮಾರರುದೇವರಾಯಮ
ಹಾರಾಯರುವಿಜಯನಗರಿಯಸಿಂಹಾಸನದಲುಸಂಕಸಂಕ
ತಾವುನೋದದಿಂಡ ಪ್ರಿತಿವೀರಾಜ್ಯಂಗೆಯಿಉತಯಿದಲ್ಲಿಅದೇವರಾ
ಯಮಹಾರಾಯರಸಮುಕದನಿರೂಪದಿಂದಸಕನಸಮುದ್ರ
ದವೊಳಗಣಊರಮುಂದಣಸೋಮೇದೇವರನಯಿವೇದ್ಯೆಅಂ
ಗರಂಗಭೋಗಕ್ಕೆ ಶ್ರೀಮಂಮಹಾಪ್ರಧಾನಮಂಗಪ್ಪ ದಂಣಾಯ
ಕರಮಕ್ಕಳು ಪ್ರಥಾವರಾಯರುಕೊಟ್ಟ ಧರ್ಮಸಾಸನಶ್ರೀಸೋವೆಯ
ದೇವರನಯಿವೇದ್ಯಂಗರಂಗಭೋಗಕ್ಕೆಮಾಡಿದಕಟ್ಟಳೆನಂ
ಮೆನಾಯಕತನಕೆಕೊಟ್ಟ ಶಿವನಸಮುದ್ರದಕೆಳಗೆಸಲು
ವಯೆಲಹಂಕನಾಡಲ್ಲಿತರಣಿಯಪ್ಪನಬಾಗಿಯೊಳಗಣದೇವಸ
ಮುದ್ರದಗ್ರಾಮದಕಾಲುವಳಿವಿರುಪಾಕ್ಷಪುರಗ್ರಾಮಕಂ
ಪ್ರಾಕುಗುತ್ತಿಗೆಯಪ್ರಮಾಣಕಾಣಿಕೆಸಹಹುಟ್ಟುವಳಿಗ
ಗ್ರಾಮಕ್ಕೆ ಅಂದಿನಾದಾಯಪೂರ್ವಆದಯಕ್ಕಾಗಿ
ಟ್ಟ ಕೊಟ್ಟ ದುಗ ಉಭಯಂವರಹಗ ವರಹಯಿತ್ಸತ್ತು
ಹೊಂನಿನಗ್ರಾಮವಾಗಿಯಿರಲಾಗಿಅಗ್ರಾಮೆವೆನುವಿಜಿಯದೇ
ವರಾಯಪುರವೆಂಬಗ್ರಾಮವನುಮಾಡಿ ಅದೇವರಾಯಪು
ರಯೆಂಬಗ್ರಾಮೆವನುದೇವಸಮುದ್ರದಹಿರಿಯಕೆ_ಯರೆ
ಳಗೆಬೀಜವರಿಯಗದ್ದೆ ಬೀಜವರಿಗದ್ದೆಅಯಿ
ಗಂಡುಗವನುಶ್ರಾವಣಬ 30 ಸೂರಿಯವರಾಗಪುಣ್ಯಕಾ
ಲದಲುಅದೇವರಾಯಮಹಾರಾಯರಿಗೆಆಯುರಾರೋಗ್ಯ
ಯಿಸ್ಯರಿಯವೃದ್ಧಿಅಹಂತಾಗಿಶ್ರೀಪರಮೇಶ್ವರಪ್ರೀತಿಯಾಗಿ

(ಹಿಂಭಾಗ)
ಧಾರೆನೆಯದುಕೊಟ್ಟವಾಗಿಅದೇಸಮುದ್ರದ
ಕಾಲುವಳಿವಿರುಪಾಕ್ಷವುರವಾದವಿಜಯದೇವರಾ
ಯಪುರವೆಂಬಗ್ರಾಮದರೇಕೆಗ20ವರಹಯಿಪ್ಪ
ತ್ತುಹೊಂನಿನಗ್ರಾಮವನುದೇವಸಮುದ್ರದಹಿರಿಯಕೆ__
ಯಲಿಗದ್ದೆ ಅಯಿಗಂಡುಗಗದೆಯಲುಮಾಡಿಕೊಂ
ಡುತೋಟತುಡಿಕೆಮುಂತಾಗಿಆಗಾಮಿಯಾಗಿಮಾ
ಡಿಕೊಂಬಂತಾಉಆಗ್ರಾಮಕ್ಕೆ ಸಲುವನಿಧಿನಿಕ್ಷೇಪ
ಜಲಪಾಸಾಣಅಕ್ಷೀಣಿಅಗಾಮಿಸಿದ್ಧಸಾಧ್ಯಷ್ಟ
ಭೋಗತೇಜಸ್ವಾಮ್ಯಮುಂತಾಗಿಯೇನುಳ್ಳ ಸರ್ವಸ್ವಾಮ್ಯವನು
ಅಗುಮಾಡಿಕೊಂಡುಅಸೋಮೆಯಿದೇವರನಯಿವೇದ್ಯ
ಅಂಗರಂಗಭೋಗಕ್ಕೆ ನಡೆಸುವಕಟ್ಟಳೆಯರಡುಹೊ
ತ್ತಿನನಯಿವೇಧ್ಯಪಾತಭೋಗಕೆಪಾತ್ರದಜನೂನಟ್ಟ
ವನಜನಮೆದ್ದಳೆಕಾ_ನಜನಸಿತಾರನಜನ
ಉಪಾಂಗದಜನ ಕಸಂಸಾಲೆಜನ ಅಂತುಜನಏಳು
ಆನಯೇಳ ಅಲುಯೆರಡುಹೊತ್ತುಅಂಗರಂಗಭೋಗ
ವನುನಡೆಸಿಅವಿರುಪಾಕ್ಷವುರವೆಂಬದೇವರಾಯಪುರ
ವಾದಗ್ರಾ ಮದೇವಸಮುದ್ರದಕೆರೆಯಕೆಳಗಣಗದ್ದೆಯ
ಆಗುಮಾಡಿಕೊಂಡು ಆ ಚಂದ್ರಾಕ್ರ್ಕಸ್ಥಾಯಿಯಾಗಿಸು
ಖದಿಂಭೋಗಿಸುವೆದು ಧಾನಪಾಲನಯೋರ್ಮಧ್ಯೆದಾನಾತ್ಸ್ರೇ
ಯೋನುಪಾಲನಂ ದಾನಾತ್ಸ್ಯರ್ಗಮವಾವ್ನೋತಿಪಾಲನಾದ
ಚ್ಯುತಂಪದಂ ಸ್ವದತತಾದ್ವಿಗುಣಂಪುಣ್ಯಂಪರದತ್ತಾಯ
ಪಾಲನಂದರದತ್ತಾಪಹಾರೇಣಸ್ವದತ್ತಂನಿಷ್ಟಲಂಭವೇತ್
ಮಂಗಳಮಹಶ್ರೀಮತುಪ್ರಥಾವರಾಯರಬರಹ

ಅರ್ಥವಿವರಣೆ ಬದಲಾಯಿಸಿ

Obeisance to Ganadhapati, Obeisance to Sambhu & c. Be it well. (On the date specified), when the maharaya raja-paramesvara vira-vijaya-bhupati-Raya-maharaya’s son Deva-Raya mahariya, on the throne of Vijayanagara, was ruling the kingdom of the world in piece and wisdom :-by the personal order of that Deva-Raya-maharaya,- for the offerings and decorations of (the god) Some-deva in front of the town in Sakana-samudra, -the great minister Mangappa-dannayakas son Pratapa-Raya granted a dharma-sasana as follows :- for the offerings and decorations of the god Some have we granted the Virupakshapura village, whose rental is 20 honnu,- hamlet of Devasamudra in the Yelahanka-nad, belonging to and under Sivanasamudra granted for our office of Nayaka, - making it Vijayadevarayapura, and with that Devarayapura, land (specified) under the old tank of Devasamudra,- at the time of the eclipse of the sun,- in order that long life, health and increase of wealth may be to Deva-Raya-maharaya, and from love to Paramesvara. Details of the rental, of the ceremonies to be performed, and of the seven persons to be employed to minister to the god. Usual final verses.

ವಿಶೇಷತೆ ಬದಲಾಯಿಸಿ

ಇದು ೧೫ನೇ ಶತಮಾನದಲ್ಲಿ ಗ್ರಹಣದ ದಿನದಂದು ಮಾಡಿದ ದಾನದ ಬಗ್ಗೆ ಉಲ್ಲೇಖಿಸಲಾಗಿದ್ದು ಗ್ರಹಣದ ದಿನಾಂಕವು ಉಲ್ಲೇಖಿಸಲ್ಪಟ್ಟಿದೆ. ಇದರಿಂದ ಇದು ಖಗೋಳಶಾಸ್ತ್ರದ ಲೆಕ್ಕಾಚಾರಗಳಲ್ಲೂ ಮಹತ್ವದ್ದಾಗಿದೆ. ಇದರಲ್ಲಿ ಶಿವನಸಮುದ್ರ, ವಿರೂಪಾಕ್ಷಪುರ, ದೇವಸಮುದ್ರ ಎಂಬ ಊರಿನ ಹೆಸರುಗಳು ಉಲ್ಲೇಖಿತವಾಗಿದ್ದು ಆ ಊರುಗಳ ಇತಿಹಾಸದ ಮುಖ್ಯದಾಖಲೆಯಾಗಿದೆ.[೪]

ಆಕರಗಳು/ಉಲ್ಲೇಖಗಳು ಬದಲಾಯಿಸಿ

  1. City losing memories etched in stone, The New Indian Express, 17th January 2018
  2. Kannada Inscriptions of Bangalore – Tracing History One Stone At A Time MAY 28, 2018 BY MADUR
  3. Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.{{cite book}}: CS1 maint: unrecognized language (link)
  4. Bengaluru buzzed even in 750 AD! DECCAN CHRONICLE, DARSHANA RAMDEV Published Sep 23, 2017

ಹೊರಸಂಪರ್ಕಕೊಂಡಿಗಳು ಬದಲಾಯಿಸಿ