ಕೇಸರಿ ಕಿತ್ತಳೆಯಂಥ ಬಣ್ಣವಾಗಿದೆ, ಮತ್ತು ಒಂದು ಸಂಬಾರ ಪದಾರ್ಥವಾದ ಕೇಸರಿಯನ್ನು ಪಡೆಯುವ ಕೇಸರಿ ಗಿಡದ ಎಳೆಯ ತುದಿಯ ಬಣ್ಣವನ್ನು ಹೋಲುತ್ತದೆ. ಹಿಂದೂ ಧರ್ಮದಲ್ಲಿ, ಇದನ್ನು ಅತ್ಯಂತ ಮುಖ್ಯ ಬಣ್ಣವೆಂದು ಪರಿಗಣಿಸಲಾಗಿದೆ. ಹಿಂದಿಯಲ್ಲಿ ಇದಕ್ಕೆ ಭಗವಾ ಬಣ್ಣ ಎಂದು ಕರೆಯಲಾಗುತ್ತದೆ. ಈ ಬಣ್ಣವು ಬೌದ್ಧ ಧರ್ಮದಲ್ಲಿ ಸ್ವಲ್ಪ ಮಹತ್ವವನ್ನು ಹೊಂದಿದೆ, ಈ ಬಣ್ಣದ ಉಡುಪುಗಳನ್ನು ಥೇರವಾದ ಸಂಪ್ರದಾಯದ ಭಿಕ್ಕುಗಳು ಧರಿಸುತ್ತಾರೆ. ಭಾರತದಲ್ಲಿ, ಇದು ಒಂದು ಪ್ರಮುಖ ಸಾಂಕೇತಿಕ ಬಣ್ಣವೂ ಆಗಿದೆ. ೧೯೪೭ರಲ್ಲಿ, ದೇಶವು ಸ್ವಾತಂತ್ರ್ಯವನ್ನು ಪಡೆದ ನಂತರ, ಕೇಸರಿಯನ್ನು ಭಾರತದ ಬಾವುಟದ ಮೂರು ಬಣ್ಣಗಳಲ್ಲಿ ಒಂದು ಬಣ್ಣವಾಗಿ ಆಯ್ಕೆಮಾಡಲಾಯಿತು. ಭಾರತದ ಬಾವುಟದಲ್ಲಿ ಮೂರು ಪಟ್ಟಿಗಳು ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ್ದಾಗಿವೆ. ಕೇಸರಿ ಪಟ್ಟಿಯು ಧೈರ್ಯ ಮತ್ತು ತ್ಯಾಗವನ್ನು ಪ್ರತಿನಿಧಿಸುತ್ತದೆ.[೧]

ಬೌದ್ಧ ಭಿಕ್ಕುವಿನ ಉಡುಪು ಕೇಸರಿ ಬಣ್ಣದ್ದಾಗಿದೆ

ಉಲ್ಲೇಖಗಳುಸಂಪಾದಿಸಿ

  1. "Flag of India". Encyclopædia Britannica. Encyclopædia Britannica Online. 2009. Retrieved 2 July 2009.