ಕೇರಳ ಶಾಸನ ಸಭೆ

(ಕೇರಳ ವಿಧಾನಸಭೆ ಇಂದ ಪುನರ್ನಿರ್ದೇಶಿತ)

ಶಾಸಕಾಂಗ

ಬದಲಾಯಿಸಿ
  • ಕೇರಳ ಶಾಸನ ಸಭೆಯನ್ನು , 'ನಿಯಮಸಭಾ' (ಜನಪ್ರಿಯ ಹೆಸರು) ಎಂದು ಕರೆಯಲಾಗುತ್ತದೆ (ಮಲಯಾಳಂ: നിയമസഭ,) ಭಾರತದ ಕೇರಳ ರಾಜ್ಯದ ನಿಯಮಸಭಾ (ಎಂದರೆ ಕಾನೂನು ರೂಪಿಸವ ಸಭೆ), 29 ರಾಜ್ಯಗಳ ವಿಧಾನಸಭೆಗಳಲ್ಲಿ ಒಂದು ಕಾನೂನು ರೂಪಿಸುವ ಅಂಗವಾಗಿದೆ. ವಿಧಾನಸಭೆಯು 140 ಚುನಾಯಿತ ಪ್ರತಿನಿಧಿಗಳನ್ನು ಮತ್ತು ಆಂಗ್ಲೊ-ಇಂಡಿಯನ್ ಸಮುದಾಯದಿಂದ ಒಬ್ಬರು ನಾಮನಿರ್ದೇಶಿತ ಸದಸ್ಯರನ್ನು ಒಳಗೊಂಡಿದೆ. ಪ್ರತಿ ಚುನಾಯಿತ ಸದಸ್ಯನು ಕೇರಳದ ರಾಜ್ಯದ 140 ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವನ್ನು ಪ್ರತಿನಿಧಿಸುತ್ತಾನೆ. ಅವನನ್ನು ವಿಧಾನಸಭಾ ಸದಸ್ಯ (MLA) ಎಂದು ಕರೆಯಲಾಗುತ್ತದೆ.[]

ಇತಿಹಾಸ

ಬದಲಾಯಿಸಿ
  • ಕೇರಳ ರಾಜಾಳ್ವಿಕೆಯಲ್ಲಿದ್ದ ವಿಧಾನಸಭೆಯ ವಿಕಾಸ 1888 ರಲ್ಲಿ ತಿರುವಾಂಕೂರಿನ ಒಂದು ಲೆಜಿಸ್ಲೇಟಿವ್ ಕೌನ್ಸಿಲ್ ರಚನೆಯಿಂದ ಆರಂಭವಾಗುವುದು. ಭಾರತದ ಉಪ ಖಂಡದಲ್ಲಿ ಭಾರತ ಬ್ರಿಟಿಷ್ ಅಧೀನ ವಾಗುವಮೊದಲೇ ಸ್ಥಳೀಯ ಶಾಸನ ಸಭೆ ಆರಂಭವಾಗುತ್ತು. . ತಿರುವಾಂಕೂರಿನ ಲೆಜಿಸ್ಲೇಟಿವ್ ಕೌನ್ಸಿಲ್ ನಂತರದ ವರ್ಷಗಳಲ್ಲಿ ಅನೇಕ ಬದಲಾವಣೆಗಳನ್ನು ಹೊಂದಿತು.. ಈ ಮಧ್ಯೆ ಶಾಸನಸಭೆಯಲ್ಲಿ ಜನರ ಭಾಗವಹಿಸುವಿಕೆಯನ್ನು ವ್ಯಾಪಕವಾಗಿ ತರಲು ಪ್ರಯತ್ನಿಸಿದರು. ಎಲ್ಲಾ ಪ್ರಯತ್ನಗಳು ಅಂತಿಮವಾಗಿ ಒಂದಕ್ಕಿಂತ ಪ್ರಾತಿನಿಧಿಕ ಸಂಸ್ಥೆ ಅವುಗಳೆಂದರೆ “ಶ್ರೀ ತಿರುವಾಂಕೂರಿನ ಮೂಲಮ್ ಜನಪ್ರಿಯ ಪ್ರತಿನಿಧಿ ಸಭೆ”ಯ ಉದಯಕ್ಕೆ ಕಾರಣವಾಯಿತು.
  • ಈ ಅಸೆಂಬ್ಲಿ, ಭೂಮಾಲೀಕರು, ಹಾಗೂ ವರ್ತಕರನ್ನು ಪ್ರತಿನಿಧಿಗಳನ್ನಾಗಿ ಹೊಂದಿತ್ತು. ಇದು ಜನರು ಸರಕಾರಕ್ಕೆ ತಮ್ಮ ಅವಶ್ಯಕತೆಗಳನ್ನು ತಿಳಿಸುವ ಅವಕಾಶ ನೀಡುವ ಗುರಿಯನ್ನು ಹೊಂದಿತ್ತು ಸರ್ಕಾರದ ಉತ್ತಮ ನೀತಿ ಮತ್ತು ಕ್ರಮಗಳನ್ನು ಜನರಿಗೆ ತಿಳಿಯುವಂತೆ ಮಾಡಲು ಆದರಿಂದ ಸರ್ಕಾರದ ಬಗೆಗೆ ಸಂಭವನೀಯ ತಪ್ಪು ಭಾವನೆಯನ್ನು ನಿವಾರಿಸವ ಉದ್ದೇಶ ಹೊಂದಿತ್ತು. . ಆ ಜನಪ್ರಿಯ ಅಸೆಂಬ್ಲಿ ದೇಶದ ಪ್ರತಿನಿಧಿಗಳನ್ನು ಒಳಗೊಂಡಿದ್ದು 1904 ಅಕ್ಟೋಬರ್ 1 ರಂದು ಇದು ಅಂತಿಮವಾಗಿ ಜನಪ್ರತಿನಿಧಿಗಳ ಸಭೆಯಾಗಿ ಮಾರ್ಪಟ್ಟಿತು.
  • ರಾಜಕೀಯ ಜಾಗೃತಿ ಮತ್ತು ಜನರ ಚಳವಳಿಯಿಂದಾಗಿ ಅಧಿಕಾರಿಗಳು ಜನರ ಪ್ರತಿನಿಧಿಗಳನ್ನು ಒಳಗೊಂಡ ಜನಪ್ರಿಯ ಅಸೆಂಬ್ಲಿ ರಚನೆಗೆ ಕಾಋಣವಾಯಿತು.. ಈ ಬಗ್ಗೆ 1 ಮೇ 1905 ರಂದು, ಒಂದು ಸನ್ನದನ್ನು ಹೊರಡಿಸಲಾಯಿತು. ಅದರಲ್ಲಿ 100 ಜನ ಅಸೆಂಬ್ಲಿ ಸದಸ್ಯರಲ್ಲಿ 77 ಚುನಾಯಿತರು ಮತ್ತು 23 ಜನ ಸದಸ್ಯರು 1 ವರ್ಷದ ಅವಧಿಗೆ, ನಾಮಕರಣ ಮಾಡುವುದು ಎಂಬ ನಿಯಮ ಮಾಡಲಾಯಿತು. ಆದರೆ ನಿಯಮಗಳ ಅಡಿಯಲ್ಲಿ ಚುನಾಯಿತ ಸದಸ್ಯರ ಸಂಖ್ಯ ಕಡಿಮೆ ಇತ್ತು. ಮತದಾನದ ಹಕ್ಕನ್ನು, 50 ರೂ.ಗೆ ಕಡಿಮೆ ಇಲ್ಲದೆ ವಾರ್ಷಿಕ ಪಾವತಿ ಭೂಕಂದಾಯ ಕೊಡುವವರು, ಅಥವಾ ಅವರ ನಿವ್ವಳ ಆದಾಯ 2000 ರೂ ಗೂ ಕಡಿಮೆ ಇಲ್ಲದ ವ್ಯಕ್ತಿಗಳಿಗೆ ನೀಡಲಾಯಿತು. ಅಥವಾ ಅವರ. ಮತ್ತು,ಮಾನ್ಯತೆ ಪಡೆದ ವಿಶ್ವವಿದ್ಯಾಲಯದ 10 ವರ್ಷಗಳ ಕಡಿಮೆ ಇಲ್ಲದಿರುವ ಅವಧಿಯ ಪದವೀಧರರು, ಮತ್ತು ತಾಲ್ಲೂಕಿನಲ್ಲಿ ತಮ್ಮ ನಿವಾಸ ಹೊಂದಿರುವವರಿಗೆ ನೀಡಲಾತಿತು. . ಜನಪ್ರಿಯ ಚುನಾಯಿತ ವಿಧಾನಸಭೆಯ ಸದಸ್ಯತ್ವ ವರ್ಷ ವರ್ಷ ಹೆಚ್ಚಾಯಿತು ಮತ್ತು 1921 ರಲ್ಲಿ ಅಂತಿಮವಾಗಿ ಚುನಾಯಿತ ಪ್ರತಿನಿಧಿಗಳು ಬಹುಮತ ಹೊಂದಿದರು. ಆಗ ಇದ್ದ 50 ಸದಸ್ಯರುಗಳಲ್ಲಿ 28 ಜನ ಆಯ್ಕೆಯಾಗಿದ್ದರು ಮತ್ತು ಉಳಿದ 22 ಜನ ನಾಮನಿರ್ದೇಶನ ಹೊಂದಿದವರಾಗಿದ್ದರು.
  • ಕೊಚ್ಚಿನ್ (ರಾಜರ ಆಳ್ವಿಕೆಯ) ಸಂಸ್ಥಾನದಲ್ಲಿ 30 ಚುನಾಯಿತ ಮತ್ತು 15 ನಾಮ ನಿರ್ದೇಶಿತ ಪ್ರತಿನಿಧಿಗಳ, ಒಂದು ಶಾಸನ ಸಭೆ (1925) ರೂಪಿಸಿದರು. 1920 ರಲ್ಲಿ ಬ್ರಿಟಿಷ್ ಆಳ್ವಿಕೆಯ ಮದ್ರಾಸ್ ಪ್ರಾಂತ್ಯದ ಮಲಬಾರ್ ಜಿಲ್ಲೆಯ ಪ್ರತಿನಿಧಿಗಳು ಮದ್ರಾಸ್ ವಿಧಾನಸಭೆಯಲ್ಲಿ ಇದ್ದರು.
  • ಭಾರತದ ಸ್ವಾತಂತ್ರ್ಯದ ನಂತರ 1949 ರಲ್ಲಿ ತಿರುವಾಂಕೂರ್ ಮತ್ತು ಕೊಚ್ಚಿನ್’ ವಿಲೀನಗೊಳಿಸಿ ಮೊದಲ ಶಾಸನ ಸಭೆ ರಚಿಸಲಾಯಿತು. ಅದನ್ನು ತಿರುವಾಂಕೂರ್ -ಕೊಚ್ಚಿನ್ ವಿಧಾನಸಭೆ ಎಂದುಕರೆಯಲಾಯಿತು. . . ತಿರುವಾಂಕೂರ್ ಮತ್ತು ಕೊಚ್ಚಿನ್ನಿಂದ, , ತಿರುವಾಂಕೂರ್ ಕೊಚ್ಚಿನ್ ಯ ತಿರುವಾಂಕೂರ್ ಮತ್ತು ಕೊಚ್ಚಿನ್’ನ ವಿಧಾಯಕ ಘಟಕಗಳಲ್ಲಿ 178 ವಿಧಾನಸಭೆಯ (ಸದಸ್ಯರು) ಪ್ರತಿನಿಧಿಗಳಿದ್ದರು. ಮಲಬಾರ್ ಪ್ರದೇಶದ ಪ್ರತಿನಿಧಿಗಳು ಮದ್ರಾಸ್ ವಿಧಾನಸಭೆಯಲ್ಲಿದ್ದರು.

ತಿರುವನಂತಪುರಂನಲ್ಲಿ ಕೇರಳ ಶಾಸನಸಭೆ

ಬದಲಾಯಿಸಿ
ಭಾಷಾವಾರು ಪ್ರಾಂತ ರಚನೆ,
  • ಕೇರಳ ಶಾಸನ ಸಭೆಯು 1956 ರಲ್ಲಿ ಭಾಷಾವಾರು ಆಧಾರದ ಮೇಲೆ ಕೇರಳದರಾಜ್ಯ ರಚನೆಯಾಯಿತು. ಅದರಲ್ಲಿ ತಿರುವಾಂಕೂರು,ಕೊಚ್ಚಿನ್ ಮತ್ತು ಮಲಬಾರ್ ಪ್ರದೇಶಗಳನ್ನು ವಿಲೀನಗೊಳಿಸಲಾಯಿತು. ಕೇರಳ ರಾಜ್ಯದ ಮೊದಲ ಸಾರ್ವತ್ರಿಕ ಚುನಾವಣೆ ಫೆಬ್ರವರಿ-ಮಾರ್ಚ್ 1957 ರಲ್ಲಿ ನಡೆಯಿತು. ಮೊದಲ ವಿಧಾನ ಸಭೆ 5 ಏಪ್ರಿಲ್, 1957 ರಂದು ನಿರ್ಮಿಸಲ್ಪಟ್ಟಿತು. ಕೇರಳ ಶಾಸನಸಭೆಯು ನಾಮನಿರ್ದೇಶಿತ ಸದಸ್ಯರನ್ನು ಸೇರಿಸಿ 127 ಸದಸ್ಯರನ್ನು ಹೊಂದಿತ್ತು. ತರುವಾಯ ಮಲಪ್ಪುರಂ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ರಚನೆಯ ನಂತರ, ಸದಸ್ಯರ ಸ್ಥಾನಗಳ ಸಂಖ್ಯೆ 140 ಕ್ಕೆ ಏರಿತು. 2010 ರಲ್ಲಿ ಪ್ರಸ್ತುತ ಸೀಮಾ ನಿರ್ಣಯ ಸಮಿತಿ ಒಟ್ಟು 140 ಸದಸ್ಯರ ಸ್ಥಾನಕ್ಕೇ ನಿಗದಿಪಡಿಸಿತು.[]

ಕೇರಳ ಶಾಸನ ಸಭೆಯು ಚುನಾವಣಾ 1957

ಬದಲಾಯಿಸಿ
  • ರಾಜ್ಯ ಪುನಸ್ಸಂಘಟನೆ ಕಾಯಿದೆ ನಂತರ, 1956 ರಲ್ಲಿ ಅಸೆಂಬ್ಲಿ ಚುನಾವಣಾ ಕ್ಷೇತ್ರಗಳನ್ನು 106 ರಿಂದ 117 ಸ್ಥಾನಗಳಿಗೆ ನಂತರ, 1957 ರಲ್ಲಿ 126 ಸ್ಥಾನಗಳಿಗೆ ಹೆಚ್ಚಿಸಲಾಯಿತು.
  • ಭಾರತದ ಚುನಾವಣಾ ಆಯೋಗ, 28 ಫೆಬ್ರವರಿ -11 ಮಾರ್ಚ್ 1957 ಹೊಸದಾಗಿ ರಚನೆಗೊಂಡ ರಾಜ್ಯದ ಚುನಾವಣೆಗಳನ್ನು ನಡೆಸಿತು. ಚುನಾವಣೆಯಲ್ಲಿ 126 ಸ್ಥಾನಗಳನ್ನು (114 ಚುನಾವಣಾ ಕ್ಷೇತ್ರಗಳಲ್ಲಿ) ಇದರಲ್ಲಿ 12 ಎರಡು ಸದಸ್ಯ ಕ್ಷೇತ್ರಗಳಲ್ಲಿ ಸೇರಿದಂತೆ ನಡೆದವು-( 11 ಮತ್ತು ಒಂದು ಪರಿಶಿಷ್ಟ ಜಾತಿ ಮತ್ತು ಕಾಯ್ದಿರಿಸಲಾಗಿತ್ತು) ಇದರಲ್ಲಿ 406 ಅಭ್ಯರ್ಥಿಗಳು ಇದ್ದರು. ಮತದಾನ 65,49% ಆಗಿತ್ತು. ಭಾರತ ಕಮ್ಯುನಿಸ್ಟ್ ಪಕ್ಷವು ಐದು ಸ್ವತಂತ್ರರ ಬೆಂಬಲದೊಂದಿಗೆ ಸರ್ಕಾರವನ್ನು ರಚಿಸಿತು. 5 ಏಪ್ರಿಲ್ 1957 ರಂದು ಇ. ಎಮ್.ಎಸ್. ನಂಬೂದಿರಿಪಾದ್ ಕೇರಳದ ಮತ್ತು ದೇಶದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾದರು. (ಪಿಎಸ್ಪಿ ಮೊದಲು ಆದರೂ ಅದು ಟ್ರಾವಂಕೂರು ಕೊಚಿನ್ ರಾಜ್ಯದ ಆಳ್ವಿಕೆ). ಆದರೆ 1959 ರಲ್ಲಿ ಕೇಂದ್ರ ಸರ್ಕಾರ ವಿಮೋಚನೆಯ ಹೋರಾಟದ ಕಾರಣ ಸರ್ಕಾರವನ್ನು ವಜಾ ಮಾಡಿತು
  • ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 124ಸ್ಪರ್ದೆ; 43ಗೆಲವು
  • ಭಾರತದ ಕಮ್ಯುನಿಸ್ಟ್ ಪಕ್ಷ: 101 ಸ್ಪರ್ದೆ; 60 ಗೆಲವು
  • ಪ್ರಜಾ ಸಮಾಜವಾದಿ ಪಕ್ಷ 65ಸ್ಪರ್ದೆ; 9 ಗೆಲವು
  • ಸ್ವತಂತ್ರ 86ಸ್ಪರ್ದೆ; 14 ಗೆಲವು

[][]

ಪ್ರಸ್ತುತದ ವಿಧಾನಸಭೆ

ಬದಲಾಯಿಸಿ
  • ಪ್ರಸ್ತುತ ಶಾಸಕಾಂಗವು ಕೇರಳದ ರಚನೆಯಾದಾಗಿನಿಂದ, 13 ನೆಯ ವಿಧಾನಸಭೆಯಾಗಿದ್ದು. ಸ್ಪೀಕರ್’ ಶ್ರೀ ಜಿ.ಕಾರ್ತಿಕೇಯನ್'ರವರು ರ( 7 ಮಾರ್ಚ್ 2015 ರಂದು ಅವರ ಸಾವಿನ ಕಾರಣ ಖಾಲಿ ಇದೆ). ಡೆಪ್ಯುಟಿ ಸ್ಪೀಕರ್ ಶ್ರೀ ಎನ್ ಶಕ್ತಾನ್ ರವರು. ವಿಧಾನಸಭೆಯ ನಾಯಕರು ಉಮ್ಮನ್ ಚಾಂಡಿ,- ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖಂಡರಾಗಿದ್ದಾರೆ. ವಿ.ಎಸ್.ಅಚ್ಯುತಾನಂದನ್ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಮುಂದಿನ ಕೇರಳ ವಿಧಾನಸಭಾ ಚುನಾವಣೆ 2016 ಮೇ 16ರಂದು ನೆಡೆಯುವುದು.[]

ನಿಯಮಸಭಾ ಸಂಕೀರ್ಣ

ಬದಲಾಯಿಸಿ

ವಿಧಾನಸಭೆಯನ್ನು ನಿಯಮಸಭಾ ಎಂದು ಕರೆಯಲಾಗುತ್ತದೆ ಮತ್ತು ಅದು ಹೊಸ ಶಾಸಕಾಂಗ ಸಂಕೀರ್ಣ ದಲ್ಲಿ ವ್ಯವಹರಿಸುವುದು. ಈ 5 ಅಂತಸ್ತಿನ ಸಂಕೀರ್ಣ ಭಾರತದ ಅತಿದೊಡ್ಡ ಸಂಕೀರ್ಣಗಳಲ್ಲಿ ಒಂದು. ಸೆಂಟ್ರಲ್ ಹಾಲ್ ಅಲಂಕಾರಿಕ ತೇಗ ಮತ್ತು ಬೀಟೆಯ ಹಲಗೆ ಜೋಡಣೆಯನ್ನು ಹೊಂದಿರುವ ಅತ್ಯಂತ ಸೊಗಸಾದ ಮತ್ತು ಭವ್ಯ ಪ್ರಾಂಗಣ ಹೊಂದಿದೆ. 1997 ರಲ್ಲಿ ಹೊಸ ಸಂಕೀರ್ಣವನ್ನು ಸಿದ್ಧಪಡಿಸಿದ ನಂತರ, ಹಳೆಯ ಅಸೆಂಬ್ಲಿ ಕಟ್ಟಡವನ್ನು ಶಾಸಕಾಂಗ ಮ್ಯೂಸಿಯಂ ಆಗಿ ಪರಿವರ್ತಿಸಲಾಯಿತು. ಮೊದಲು ರಾಜ್ಯ ಸಚಿವಾಲಯ ಆ ಸಂಕೀರ್ಣದಲ್ಲಿ ನೆಲೆಗೊಂಡಿತ್ತು.[]

ವಿಧಾನಸಭಾ ಚುನಾವಣೆ 2006

ಬದಲಾಯಿಸಿ

ಕೇರಳದ 140 ಕ್ಷೇತ್ರಗಳಲ್ಲಿ ಮೊದಲ ಹಂತದ 59 ಕ್ಷೇತ್ರಗಳಿಗೆ ಏಪ್ರಿಲ್ 22, 2006 ರಂದು ಮತದಾನ ನಡೆಯಿತು. ಎರಡನೆಯ ಹಂತದ 66 ಕ್ಷೇತ್ರಗಳಿಗೆ ಏಪ್ರಿಲ್ 29, 2006 ರಂದು ನಡೆಯಿತು. ಉಳಿದ ಕೊನೆಯ ಹಂತದ 15 ಕ್ಷೇತ್ರಗಳಿಗೆ ಮೇ 3, 2006 ಮತದಾನ ನಡೆಯಿತು. ಎಣಿಕೆಯನ್ನು 2006 ರ ಮೇ 11 ರಂದು ನಡೆಸಲಾಯಿತು.

ಫಲಿತಾಂಶಗಳು ಚುನಾವಣೆ 2011

ಬದಲಾಯಿಸಿ
ಯುಡಿಎಫ್ (UDF) ವಿರುದ್ಧ ಎಲ್ಡಿಎಫ್(LDF) ಫಲಿತಾಂಶಗಳು
  • ಚುನಾವಣಾ ಸ್ಥಾನಿಕ ಎಲ್.ಡಿ.ಎಫ್ 68 ಸ್ಥಾನಗಳನ್ನು ಪಡೆದರೆ, ಯುಡಿಎಫ್ ಸಮ್ಮಿಶ್ರ ಒಕ್ಕೂಟ 72 ಸ್ಥಾನಗಳಲ್ಲಿ ವಿಜೇತ ವಾಯಿತು. ಇದು 140 ವಿಧಾನಸಭಾ ಸ್ಥಾನಗಳ ಪೈಕಿ ಒಂದು ದುರ್ಬಲ/ತೆಳು ಗೆಲುವು. ಯುಡಿಎಫ್ ಪ್ರಮುಖ ಮತ್ತಷ್ಟು ಉಪಚುನಾವಣೆ ನಂತರದ ನೆಯ್ಯತ್ತಿಂಕರ ಕ್ಷೇತ್ರದ ಸ್ಥಾನಿಕ ಶಾಸಕ ಆರ್ ಸೆಲ್ವರಾಜ್ ಯುಡಿಎಫ್'ಗೆ ಸೇರಲು ಎಲ್ಡಿಎಫ್'ಗೆ ರಾಜಿನಾಮೆ ನೀಡಿ ಮರು ಆಯ್ಕೆ ಪಡೆದರು; ಈ ಮೂಲಕ ಯುಡಿಎಫ್' 73 ಕ್ಕೆ ಬಲ ವಿಸ್ತರಿಸಿತು.
  • ಯುಡಿಎಫ್ ನಾಯಕ ಕಾಂಗ್ರೆಸ್'ನ ಉಮ್ಮನ್ ಚಾಂಡಿ ಅವರು ತನ್ನ ಇತರ ಆರು ಮಂತ್ರಿಗಳ ಜೊತೆ ಮೇ 18, 2011 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಇತರ ಹದಿಮೂರು ಸಚಿವರನ್ನು ತಮ್ಮ ಸಚಿವ ಸಂಪುಟಕ್ಕೆ ಸೇರಿಸಿಕೊಂಡರು.

ಫಲಿತಾಂಶಗಳು: ಸಾರಾಂಶ

ಬದಲಾಯಿಸಿ
ಯು.ಡಿಎಫ್ ಎಲ್'ಡಿ'ಎಫ್ ಎನ'ಡಿ.ಎ. ಇತರೆ
72 68 0 0

ಫಲಿತಾಂಶಗಳು ಚುನಾವಣೆ 2016

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
  1. http://www.niyamasabha.org/-[ಶಾಶ್ವತವಾಗಿ ಮಡಿದ ಕೊಂಡಿ]
  2. http://klaproceedings.niyamasabha.org/
  3. "Statistical Report on General Election, 1957 : To the Legislative Assembly of Kerala" (PDF). Election Commission of India. Retrieved 2014-10-14.
  4. "History of Kerala Legislature". kerala.gov.in. Retrieved 8 April 2014.
  5. http://indianexpress.com/article/india/india-news-india/tamil-nadu-kerala-west-bengal-assam-polls-in-april-may/
  6. http://www.niyamasabha.org/