ಕೇನೆಯ ಪುಂಡಿ
ಕೇನೆಯ ಪುಂಡಿ[೧] ಆಟಿಯ ಅಮಾವಾಸ್ಯೆಯ ದಿನದಂದು ತುಳುನಾಡುನಲ್ಲಿ ಮಾಡುವ ಒಂದು ವಿಶೇಷವಾದ ತಿನಿಸು. ಆಟಿಯ ಅಮಾವಾಸ್ಯೆ ತುಳುವರಿಗೆ ವಿಶೇಷವಾದ ದಿನ. ಆ ದಿವಸ ಬೆಳ್ಳಂ ಬೆಳಗ್ಗೆ ಹಾಲೆ ಮರದ ಕೆತ್ತೆಯ ಮದ್ದು ಕುಡಿದರೆ, ಮಧ್ಯಾನ ಆಟಿಯ ಅಗೆಲು ಬಡಿಸುತ್ತಾರೆ. ಸಂಜೆ ಕೇನೆಯ ಪುಂಡಿ ಮಾಡಿ ಅದನ್ನು ಕುಟ್ಟಿ ಅಟ್ಟದಲ್ಲಿ ಎಡೆ ಬಡಿಸುವ ಕ್ರಮವೊಂದು ಕೂಡಾ ಇದೆ. ಕೆಲವು ಕಡೆಗಳಲ್ಲಿ ಅಮಾವಾಸ್ಯೆ ಕಳೆದ ಬಳಿಕ ಆಟಿಯ ತಿಂಗಳು ಮುಗಿಯುವ ಒಳಗೆ ಒಂದು ದಿನ ಕೇನೆಯ ಪುಂಡಿ ಮಾಡಿ ಬಡಿಸುತ್ತಾರೆ.
ಕುತ್ತಿ ಅಟ್ಟದಲ್ಲಿ (ಅಡುಗೆಮನೆಯ ಹೊಗೆ ಹೋಗುವ ಮೇಲಿನ ಅಟ್ಟ) ಕೇನೆಯ ಪುಂಡಿ ಮಾಡಿ ಇಡುವ ಕ್ರಮ ಬೋಳೂರು ಗರಡಿಯ ಮನೆಯಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಅಕ್ಕಿ, ಧಾನ್ಯದ ಮುಡಿ ಕಾದಿಡುವ ಕುಟ್ಟಿ ಅಟ್ಟದಲ್ಲಿ ಕೇನೆಯ ಪುಂಡಿ ಮಾಡಿ ಇಟ್ಟರೆ, ಅಕ್ಕಿಯ ಮುಡಿ, ಸಿರಿ ಸಂಪತ್ತು ಮೊಗೆದಷ್ಟು ಬರುತ್ತದೆ ಎಂಬುದು ಹಿರಿಯರ ನಂಬಿಕೆ. ಇದರಲ್ಲಿ ಮನುಷ್ಯನ ಆರೋಗ್ಯ ಕಾಯುವ ಕಾಳಜಿ ಕೂಡಾ ಇದೆ.
ಇತರ ಹೆಸರು | ಗುಡ್ಡೆಯ ಕೇನೆಯ ಪುಂಡಿ |
---|---|
ಬಗೆ | ತಿನಿಸು |
ಮೂಲ | ಭಾರತ |
ಪ್ರದೇಶ ಅಥವಾ ರಾಜ್ಯ | ಮಂಗಳೂರು, ಉಡುಪಿ |
ಮುಖ್ಯ ಸಲಕರಣೆ | ಕೇನೆಯ ಕಂಡೆ |
ನಂಬಿಕೆ
ಬದಲಾಯಿಸಿಕುತ್ತಿ ಅಟ್ಟದಲ್ಲಿ (ಅಡುಗೆಮನೆಯ ಹೊಗೆ ಹೋಗುವ ಮೇಲಿನ ಅಟ್ಟ) ಕೇನೆಯ ಪುಂಡಿ ಮಾಡಿ ಇಡುವ ಕ್ರಮ ಇದೆ. ಅಕ್ಕಿ, ಧಾನ್ಯದ ಮುಡಿ ಕಾಯುತ ಇರುವ ಕುಟ್ಟಿಅಟ್ಟದಲ್ಲಿ ಕೇನೆಯ ಪುಂಡಿ ಮಾಡಿ ಇಟ್ಟರೆ ಅಕ್ಕಿಯ ಮುಡಿ, ಸಿರಿ ಸಂಪತ್ತು ಮೊಗೆದಷ್ಟೂ ಬರುತ್ತದೆ ಎಂದು ಹಿರಿಯರ ನಂಬಿಗೆ. ಇದರಲ್ಲಿ ಮನುಷ್ಯನ ಆರೋಗ್ಯ ಕಾಯುವ ಕಾಳಜಿ ಕೂಡಾ ಇದೆ.[೨]
ಕೇನೆಯ ಕಂಡೆ ಅಥವಾ ಖಂಡವನ್ನು ಅಗೆದು ತೆಗೆಯುವ ಕ್ರಮ
ಬದಲಾಯಿಸಿಆಟಿ ಅಮಾವಾಸ್ಯೆಯ ದಿವಸ[೩] ಬೆಳ್ಳಂ ಬೆಳಿಗ್ಗೆಯೇ ಎದ್ದು, ಗುಡ್ಡದಲ್ಲಿ ಬೆಳೆಯುವ, ಸುವರ್ಣ ಗೆಡ್ಡೆಯ ಜಾತೀಯದೇ ಆದ ಕೇನೆಯ ಕಂಡೆಯನ್ನು ಕತ್ತಿಯ ಮೊನೆ ತಾಗದ ಹಾಗೆ ಅಗೆದು ತೆಗೆಯಬೇಕು. ಮುಗುಳಿ ಅಥವಾ ಬೆಸ (1, 3,5 ಹಾಗೆ) ಸಂಖ್ಯೆ ಯ ಕೇನೆಯ ಕಾಂಡವನ್ನು ತರಬೇಕು ಅನ್ನುವ ನಂಬಿಕೆಯೂ ಇದೆ. ತಂದ ಕಾಂಡದ ಸಿಪ್ಪೆಯನ್ನು ತೆಗೆದು, ಚೆನ್ನಾಗಿ ನೀರಲ್ಲಿ ತೊಳೆಯಬೇಕು. ತೊಳೆಯುವಾಗ ಮೈ ಕೈ ಸ್ವಲ್ಪ ತುರಿಸಬಹುದು.
ಗುಡ್ಡದಲ್ಲಿ ಕೇನೆ
ಬದಲಾಯಿಸಿಈ ಕೇನೆ ಹೆಚ್ಚಾಗಿ ಇರುವುದೇ ಗುಡ್ಡಗಳಲ್ಲಿ. ನೀರು ಇರುವಲ್ಲಿ ಹೆಚ್ಚಾಗಿ ಆಗುವುದಿಲ್ಲ. ಕಲ್ಲಿನ ಎಡೆಯಲ್ಲಿ ಅಥವಾ ಮಣ್ಣಿನಲ್ಲಿ ಸಿಗುತ್ತದೆ. ಹೆಚ್ಚಾಗಿ ಮಣ್ಣಿಗೆ ತರಗೆಲೆಗಳು ಸಿಕ್ಕದರೆ ಹುಲುಸಾಗಿ ಕೇನೆಯು ಬೆಳೆಯುವುದು ಮತ್ತು ಅದರ ಖಂಡಗಳು ದೊಡ್ಡದಾಗುವುದು. ಬೇಸಿಗೆ ಕಾಲದಲ್ಲಿ ಇದರ ಗಿಢವು ಬಾಡಿ ಇರುವುದು ಮಳೆ ಬಂದಾಗ ಚೆನ್ನಾಗಿ ಬೆಳೆದು ಎರಡು ತಿಂಗಳ ಒಳಗೆ ಅದರ ಖಂಡಗಳು ದೊಡ್ಡ ದೊಡ್ಡವಾಗಿ ಬೆಳೆಯುವುದು. ಮೇ ತಿಂಗಳಿನಲ್ಲಿ ಚೆನ್ನಾಗಿ ಮಳೆ ಬಂದರೆ ಖಂಡದಿಂದ ಮೊಳಕೆಗಳು ಬರಲು ಸಹಾಯಕಾರಿ ಅಗಿರುವುದು. ಜೂನೆ ನ ನಂತರ ಹೇಗೋ ಮಳೆ ಬರುತ್ತದೆ. ಮಳೆ ಬಂದರೆ ಗಿಡ ಚೆನ್ನಾಗಿ ಬೆಳೆಯುವುದು.
ಕೇನೆಯ ಕಂಡೆ/ ಖಂಡ ಬೇಕಾದರೆ ಜಾಗ್ರತೆಯಿಂದ ಕೊಕ್ಕೆಯಲ್ಲಿ ಅಗೆಯಬೇಕು. ಹಾಗೆಯೇ ಅಗೆದರೆ ಒಂದೊಂದು ಸಲ ಕಂಡೆಗಳು ಸಿಗುವುದಿಲ್ಲ.
ಕೇನೆಯ ಕಂಡೆಯನ್ನು ಬೇಯಿಸುವ ಕ್ರಮ
ಬದಲಾಯಿಸಿಕೇನೆಯ ಕಂಡೆಯೊಂದಿಗೆ ಅಮಟೆಯ ಸೊಪ್ಪು , ಮೂಂಡಿಯ ಸೊಪ್ಪು, ನೆಲ್ಲಿಕಾಯಿದ ಕೆತ್ತೆ, ತರೋಲಿಗೆಯ ಸೊಪ್ಪನ್ನು ದೊಡ್ಡ ಪಾತ್ರೆಯಲ್ಲಿ ಪದರ ಪದರದಲ್ಲಿ ಹಾಕಿ ಬೇಯಿಸಬೇಕು. ಹೀಗೆ ಮಾಡುವುದರಿಂದ ಅದರಲ್ಲಿರುವ ತುರಿಸುವ ಅಂಶಗಳೆಲ್ಲ ಹೋಗುತ್ತದೆ.[೪]
ಕೇನೆಯ ಪುಂಡಿ ಮಾಡುವ ವಿಧಾನ
ಬದಲಾಯಿಸಿನೆನೆಸಿಟ್ಟ ಅಕ್ಕಿಯನ್ನು ಪುಂಡಿಗೆ ರುಬ್ಬುವ ರೀತಿಯಲ್ಲಿ ರುಬ್ಬಿ ಇಡಬೇಕು. ಸ್ಡಲ್ಪ ಬಿಳಿ ಅಕ್ಕಿಯನ್ನೂ ಹಾಕಬಹುದು. ಈಗ ಬೇಯಿಸಿದ ಕೇನೆಯ ಕಂಡವನ್ನು ಸಣ್ಣ ಸಣ್ಣ ಮಾಡಿ ಗುದ್ದಬೇಕು. ರುಬ್ಬಿದ ವಸ್ತುವಿನೊಂದಿಗೆ ಗುದ್ದಿದ ಕೇನೆಯ ಕಂಡೆಯ ಪುಡಿಯನ್ನು ಒಟ್ಟು ಮಾಡಿ ಬೆರೆಸಬೇಕು. ಕೊನೆಗೆ ಸಾಮಾನ್ಯವಾಗಿ ಪುಂಡಿಯ ಹಾಗೆ ಸ್ವಲ್ಪ ದೊಡ್ಡ ದೊಡ್ಡ ಮಾಡಿ ದೊಡ್ಡ ಪಾತ್ರೆಯಲ್ಲಿ ಹಬೆಯಲ್ಲಿ ಬೇಯಿಸಬೇಕು. ಇಲ್ಲಿ ಕೂಡಾ ಬೆಸ ಸಂಖ್ಯೆಯಲ್ಲಿ ಪುಂಡಿ ಇರಬೇಕು. ಪುಂಡಿ ಬೆಂದ ಬಳಿಕ ಒಲೆಯಿಂದ ಕೆಳಗಿರಿಸಬೇಕು.[೫]
ಉಲ್ಲೇಖಗಳು
ಬದಲಾಯಿಸಿ- ↑ "ಕೇನೆಯ ಪುಂಡಿ". Retrieved 20 July 2022.
- ↑ "ಆಟಿಯ ಅಡುಗೆಯ ಪರಿಮಳ....... ಬಂದ ನೆಂಟರು ಹೊಟ್ಟೆ ನಿಲಿಕೆ ತಮ್ಮನೊ !". Vijay Karnataka. Retrieved 20 July 2022.
- ↑ "ಆಟಿ - ಎಗ್ಗೆ 2 ( ಆಚರಣೆ , ತೆನಸ್)". News Bhandara. 19 July 2020. Retrieved 20 July 2022.
- ↑ "Google". www.google.com. Retrieved 20 July 2022.
- ↑ "ಕೇನೆದ ಪುಂಡಿ ಆಟಿ ಸ್ಪೆಷಲ್". Retrieved 20 July 2022.