ಕೆ ಜೆ ಜಾರ್ಜ್

ಭಾರತದ ರಾಜಕಾರಣಿ

ಕೇಳಚಂದ್ರ ಜೋಸೆಫ್ ಜಾರ್ಜ್ ಅವರು  ೨೦೧೮ ರಿಂದ ಎಚ್.ಡಿ.ಕುಮಾರಸ್ವಾಮಿ ಅವರ ಸಚಿವ ಸಂಪುಟದಲ್ಲಿ ಬೃಹತ್ ಮತ್ತು ಮಧ್ಯಮ ಗಾತ್ರದ ಉದ್ಯಮದ ಸಚಿವರಾಗಿದ್ದಾರೆ. ಅವರು ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನೆ, ಕರ್ನಾಟಕ ಗೃಹ ಸಚಿವ, ವೀರೇಂದ್ರ ಪಾಟೀಲ್ ಸರಕಾರದಲ್ಲಿ ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಎಸ್.ಬಂಗಾರಪ್ಪ ಸರ್ಕಾರದಲ್ಲಿ  ವಸತಿ ಮತ್ತು ನಗರಾಭಿವೃದ್ಧಿ ಮುಂತಾದ ಖಾತೆಗಳ ಸಚಿವರಾಗಿದ್ದರು.

ಬಾಲ್ಯ ಮತ್ತು ಕುಟುಂಬ

ಬದಲಾಯಿಸಿ

ನನಾಯ ಸಿರಿಯನ್ ಜಾಕೋಬೈಟ್ ಕ್ರಿಶ್ಚಿಯನ್ ಜಾತಿಯ ಜೋಸೆಫ್ ಕೇಳಚಂದ್ರ ಚಾಕೋ ಮತ್ತು  ಮರಿಯಮ್ಮ ದಂಪತಿಗಳಿಗೆ ಜನಿಸಿದ ಜಾರ್ಜ್, ತಮ್ಮ ಬಾಲ್ಯವನ್ನು ಕೊಡಗಿನಲ್ಲಿ ಕಳೆದರು.
 ತಮ್ಮ ರಾಜಕೀಯ ಜೀವನವನ್ನು ಗೋಣಿಕೊಪ್ಪಲು ಪಟ್ಟಣದಿಂದ ಶುರು ಮಾಡಿದ ಜಾರ್ಜ್‌ ಸುಜಾ ರನ್ನು ವರಿಸಿದರು. ರಾಣಾ ಜಾರ್ಜ್ ಮತ್ತು ರೆನಿತಾ ಜಾರ್ಜ್ ಇವರ ಮಕ್ಕಳು.

ರಾಜಕೀಯ ಬದುಕು

ಬದಲಾಯಿಸಿ
  1. ೧೯೬೮ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ,
  2. ೧೯೬೯ರಲ್ಲಿ ಗೋಣಿಕೊಪ್ಪಲು ಪಟ್ಟಣದ ಯುವ ಕಾಂಗ್ರೆಸ್ ಅಧ್ಯಕ್ಷ ಹುದ್ದೆ.
  3. ೧೯೭೧-೭೨ರಲ್ಲಿ ವಿರಾಜಪೇಟೆ ತಾಲೂಕ್ ಯುವ ಕಾಂಗ್ರೆಸ್ ಅಧ್ಯಕ್ಷ ಹುದ್ದೆ
  4. ೧೯೭೫-೭೮ ಕರ್ನಾಟಕ ಯುವಕಾಂಗ್ರೆಸ್ ಖಜಾಂಚಿ
  5. ೧೯೮೨-೮೫ ಕರ್ನಾಟಕ ಯುವ ಕಾಂಗ್ರೆಸ್ ಕಾರ್ಯದರ್ಶಿ
  6. ೧೯೮೫-೮೯ ಬೆಂಗಳೂರಿನ ಭಾರತಿನಗರ ವಿಧಾನಸಭಾ ಕ್ಷೇತ್ರದ ಶಾಸಕ
  7. ೧೯೮೯-೯೪ ಬೆಂಗಳೂರಿನ ಭಾರತಿನಗರ ವಿಧಾನಸಭಾ ಕ್ಷೇತ್ರದ ಶಾಸಕ
  8. ೧೯೮೯-೯೧ ಸಾರಿಗೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ರಾಜ್ಯ ಸಚಿವ
  9. ೧೯೯೧-೯೩ ವಸತಿ ಮತ್ತು ನಗರ ಅಭಿವೃದ್ಧಿ ಖಾತೆಯ ಸಂಪುಟ ಸಚಿವ
  10. ೨೦೧೩ ರಿಂದ ಸರ್ವಞ್ಣಾ ನಗರ ವಿಧಾನಸಭಾ ಕ್ಷೇತ್ರದ ಶಾಸಕ
  11. ೨೦೧೩ ಮೇ ೨೦೧೩- ಅಕ್ಟೋಬರ್ ೨೦೧೫ ಕರ್ನಾಟಕ ಸರ್ಕಾರದ ಗೃಹಖಾತೆಯ ಸಂಪುಟ ಸಚಿವ
  12. ಅಕ್ಟೊಬರ್ ೨೦೧೫ - ೧೮ ಬೆಂಗಳೂರು ನಗರ ಅಭಿವೃದ್ಧಿ ಖಾತೆಯ ಸಚಿವ
  13. ಜೂನ್ ೨೦೧೮ ರಿಂದ  ಬೃಹತ್ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಖಾತೆಯ ಸಚಿವ, ಕರ್ನಾಟಕ ಸರಕಾರ.



ಕೆ.ಜೆ.ಜಾರ್ಜ್ ಅವರು  ೨೦೧೩ ರ ವಿಧಾನಸಭಾ ಚುನಾವಣೆಯಲ್ಲಿ ಸರ್ವಜ್ಞ ನಗರ ಕ್ಷೇತ್ರದಿಂದ ಸ್ಪರ್ದಿಸಿ ೬೯,೬೭೩ ಮತಗಳ ಅಂತರದಲ್ಲಿ ಸಮೀಪ ಸ್ಪರ್ದಿ ಬಿಜೆಪಿಯ ಪದ್ಮನಾಭ ರೆಡ್ಡಿಯ  ವಿರುದ್ಧ ಗೆದ್ದರು. ಅವರ ಅಧಿಕಾರಾವಧಿಯಲ್ಲಿ ಬೆಂಗಳೂರಿನ ರಾಜಕೀಯ ಕಾರ್ಯ ಸಮಿತಿಯು (B PAC) ಪಬ್ಲಿಕ್ ಡೊಮೈನ್ನಲ್ಲಿ ಲಭ್ಯವಿರುವ ಡೇಟಾಗಳನ್ನು ಬಳಸಿ ಬೆಂಗಳೂರಿನ ಶಾಸಕರ ಪೈಕಿ ಅತ್ಯುತ್ತಮ ರೇಟಿಂಗ್ ಅನ್ನು ನೀಡಿತು. (ಅಸ್ಸೆಂಬ್ಳಿಯಲ್ಲಿ ಹಾಜರಾತಿ, ಪ್ರಮುಖ ಪ್ರಶ್ನೆಗಳು, ಪ್ರಮುಖವಲ್ಲದ ಪ್ರಶ್ನೆಗಳು, ಎಂಎಲ್ಎಎಲ್ಎಡಿ ನಿಧಿ ಬಳಕೆ, ಗ್ರಹಿಕೆ ಸಮೀಕ್ಷೆ, ಶೈಕ್ಷಣಿಕ ಅರ್ಹತೆ, ಅಪರಾಧ ದಾಖಲೆ ಮತ್ತು ಸಾಮಾಜಿಕ ಮಾಧ್ಯಮ ಇತ್ಯಾದಿ.)

ಕೆ.ಜೆ.ಜಾರ್ಜ್ ಅವರು ೨೦೧೮ ರ ವಿಧಾನಸಭಾ ಚುನಾವಣೆಯಲ್ಲಿ ೫೩,೦೦೦ ಮತಗಳ ಅಂತರದಲ್ಲಿ ಸರ್ವಜ್ಞ ನಗರ ಕ್ಷೇತ್ರದಿಂದ ಸಮೀಪ ಸ್ಪರ್ಧಿ ಭಾರತೀಯ ಜನತಾ ಪಾರ್ಟಿಯ ಎಂ.ಎನ್. ರೆಡ್ಡಿಯ ವಿರುದ್ಧ ಗೆದ್ದರು.

ಹೊರಗಿನ ಸಂಪರ್ಕಗಳು

ಬದಲಾಯಿಸಿ