ಕೆ. ಜಿ. ಬಾಲಕೃಷ್ಣನ್
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ {{{ವ್ಯಾಕರಣ, ಶೈಲಿ, ಒಗ್ಗಟ್ಟು, ಸಂಯೋಜನೆ ಧ್ವನಿ ಅಥವಾ ಕಾಗುಣಿತ}}}. (April 21,2015) |
ಕೊನಕುಪ್ಪಕಾಟಿಲ್ ಗೋಪಿನಾಥನ್ ಬಾಲಕೃಷ್ಣನ್ (ಮಲಯಾಳಂ:കൊനകുപ്പക്കാട്ടില് ഗോപിനാഥന് ബാലകൃഷ്ണന്, ಜನನ. ೧೨ ಮೇ ೧೯೪೫) ಭಾರತದ ಮೂವತ್ತೇಳನೆಯ ಮುಖ್ಯ ನ್ಯಾಯಧೀಶರಾಗಿದ್ದರು. ಕೆ. ಜಿ. ಬಾಲಕೃಷ್ಣನ್ ಎಂದೇ ಪರಿಚಿತರು.
Konakuppakatil Gopinathan Balakrishnan | |
---|---|
Justice K. G. Balakrishnan | |
ಅಧಿಕಾರ ಅವಧಿ January 14, 2007 – 12 May 2010 | |
Appointed by | ಎ.ಪಿ.ಜೆ. ಅಬ್ದುಲ್ ಕಲಾಂ |
ಪೂರ್ವಾಧಿಕಾರಿ | Y. K. Sabharwal |
ಉತ್ತರಾಧಿಕಾರಿ | Sarosh Homi Kapadia |
ವೈಯಕ್ತಿಕ ಮಾಹಿತಿ | |
ಸಂಗಾತಿ(ಗಳು) | ಶ್ರೀಮತಿ ನಿರ್ಮಲಾ ಬಾಲಕೃಷ್ಣನ್ |
ಆರಂಭಿಕ ಜೀವನ
ಬದಲಾಯಿಸಿಕೆ. ಜಿ. ಬಾಲಕೃಷ್ಣನ್ ಅವರು ಪುಲಯ ದಲಿತ ಕುಟುಂಬದಲ್ಲಿ ತಿರುವಾಂಕೂರ್ನ ವೈಕೊಮ್ ಬಳಿಯ ಥಲಯೊಪರಂಬುನಲ್ಲಿ ಜನಿಸಿದರು.
ಶಿಕ್ಷಣ
ಬದಲಾಯಿಸಿಅವರ ತಂದೆಯವರು ವೈಕೊಮ್ ಮುನ್ಸಿಫ್ ಕೋರ್ಟ್‌ನಲ್ಲಿ ಕ್ಲರ್ಕ್ ಆಗಿದ್ದರು ಅವರ ಪ್ರಾಥಮಿಕ ಶಿಕ್ಷಣವನ್ನು ಥಲಯೊಪರಾಂಬುನಲ್ಲಿ ಮುಗಿಸಿ, ವೈಕೊಮ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಂದಿನ ವ್ಯಾಸಂಗ ಮಾಡಿದರು. ಆನಂತರ, ಎರ್ನಾಕುಲಂನ ಮಹಾರಾಜಾ ಕಾಲೇಜಿನಲ್ಲಿ ಬಿ.ಎಸ್‌ಸಿ ಪದವಿ ಮತ್ತು ಸರ್ಕಾರಿ ಕಾನೂನು ಕಾಲೇಜು, ಎರ್ನಾಕುಲಂನಲ್ಲಿ ಬಿ.ಎಲ್. ಪದವಿಯನ್ನು ೧೯೭೧ ರಲ್ಲಿ ಪಡೆದುಕೊಂಡರು ಮತ್ತು ವೈಕೊಮ್‌ನ ಮುನ್ಸಿಫ್ ನ್ಯಾಯಾಲಯದಲ್ಲಿ ತಮ್ಮ ಉದ್ಯೋಗ ಪ್ರಾರಂಭಿಸಿದರು.
ವೃತ್ತಿಜೀವನ
ಬದಲಾಯಿಸಿ- ವಕೀಲರಾಗಿ ಅವರು ಎರ್ನಾಕುಲಂ ನ್ಯಾಯಾಲಯದಲ್ಲಿ ಕ್ರಿಮಿನಲ್ ಹಾಗೂ ಸಿವಿಲ್ ಮೊಕದ್ದಮೆಗಳಲ್ಲಿ ವಾದ ಮಾಡಿದರು.
- ೧೯೮೫ : ಕೇರಳ ಹೈಕೋರ್ಟ್‌ನ ನ್ಯಾಯಾದೀಶರಾಗಿ ನೇಮಕ.
- ೧೯೯೭ : ಗುಜರಾತ್ ಹೈಕೋರ್ಟ್‌ಗೆ ವರ್ಗ.
- ೧೯೯೮ : ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಾದೀಶರಾಗಿ ನೇಮಕ.
- ೧೯೯೯ : ಮದ್ರಾಸ್‌ನ ಹೈಕೋರ್ಟ್ ಆಫ್ ಜುಡಿಶಿಯೇಚರ್‌ನಲ್ಲಿ ಮುಖ್ಯನ್ಯಾಯಾಧೀಶ ಮತ್ತು ಎರಡು ತಿಂಗಳು ಗುಜರಾತ್‌ನ ರಾಜ್ಯಪಾಲ[೧]
- ೨೦೦೦ :ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾದರು.[೨]
- ಮೇ ೨೦೧೦ : ನಿವೃತ್ತಿ
- ಜೂನ್ ೨೦೧೦ ರಿಂದ ನ್ಯಾಷನಲ್ ಹ್ಯೂಮನ್ ರೈಟ್ಸ್ ಕಮಿಷನ್ನ ಅಧ್ಯಕ್ಷ.[೩]
ಕುಟುಂಬ ಜೀವನ
ಬದಲಾಯಿಸಿಕೆ. ಜಿ. ಬಾಲಕೃಷ್ಣನ್ ಅವರು ನಿರ್ಮಲಾ ಎಂಬುವವರನ್ನು ವಿವಾಹವಾದರು ಹಾಗೂ ಇವರಿಗೆ ಇಬ್ಬರು ಪುತ್ರಿಯರಿದ್ದಾರೆ ಅವರು ಕೆ.ಜಿ.ಸೋನಿ ಮತ್ತು ರಾಣಿ.[೪]
ತೀರ್ಪುಗಳು
ಬದಲಾಯಿಸಿ- ಸಾರ್ವಜನಿಕರ ಮೇಲೆ ಬಂದ್‌ಗಳಂತಹ ಚಟುವಟಿಕೆಗಳನ್ನು ನಡೆಸುವ ರಾಜಕೀಯ ಪಕ್ಷಗಳನ್ನು ಬಹಿಷ್ಕರಿಸಲು ಚುನಾವಣಾ ಆಯೋಗಕ್ಕೆ ಸೂಚಿಸಿದರು.
- ವಿಚಾರಣೆಗಳಲ್ಲಿ ನಾರ್ಕೋಅನಾಲಿಸಿಸ್ನ ನಿಷೇಧ.[೫]
- ಶಾಲೆಗಳಲ್ಲಿ ಮಧ್ಯಾಹ್ನದ ಊಟ ಕಡ್ಡಾಯ ಮಾಡಿದರು.
ಸಾರ್ವಜನಿಕ ನಿಲುವುಗಳು
ಬದಲಾಯಿಸಿ- ಜುಡಿಶಿಯರಿ ಅಂಡ್ ರೈಟ್ ಟು ಇನ್ಫಾರ್ಮೇಷನ್; ರೈಟ್ ಟು ಪ್ರೈವೆಸಿ
ನ್ಯಾಯಮೂರ್ತಿ ಬಾಲಕೃಷ್ಣನ್ ಅವರು ರೈಟ್ ಟು ಇನ್ಫಾರ್ಮೇಶನ್ ಆಕ್ಟ್‌ನ ನಿಯಮಗಳ ವ್ಯಾಪ್ತಿಯಿಂದ ಭಾರತದ ಮುಖ್ಯ ನ್ಯಾಯಾಧೀಶರ ಕಛೇರಿಯನ್ನು ಹೊರತರಲು ಪ್ರಯತ್ನಿಸಿದರು.[೬] ಸಿಜೆಐ ಕಛೇರಿಯನ್ನು ಆರ್‌ಟಿಐ ಆಕ್ಟ್ ಜವಾಬ್ಧಾರಿಯಡಿ ತರುವಂತಹ ತೀರ್ಪನ್ನು ದೆಹಲಿ ಹೈಕೋರ್ಟ್ ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಎದುರಿನಲ್ಲಿ ಮೇಲ್ಮನವಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೆ ಆದೇಶ ನೀಡಿದರು.[೭] ರೈಟ್ ಟು ಪ್ರೈವೆಸಿಯಲ್ಲಿ ಆರ್‌ಟಿಐ ಆಕ್ಟ್‌ನ ತಿದ್ದುಪಡಿ ಮಾಡುವ ಸಲುವಾಗಿ ಅವರು ಮಾತನಾಡಿದರು.[೮]
- ಅತ್ಯಾಚಾರಕ್ಕೆ ಒಳಗಾದವರ ಸ್ವಾತಂತ್ರ್ಯ
ಭಾರತದ ಮುಖ್ಯ ನ್ಯಾಯಾದೀಶರಾದ ಕೆ.ಜಿ.ಬಾಲಕೃಷ್ಣನ್ ಅವರು ಅತ್ಯಾಚಾರಕ್ಕೆ ಒಳಗಾದವರು ಬಲವಂತಕ್ಕಾಗಿ ಏನೂ ಮಾಡಬೇಕಿಲ್ಲ, ದೋಷಿಯನ್ನು ಮದುವೆಯಾಗುವುದು ಅಥವಾ ಮಗುವಿಗೆ ಜನ್ಮ ನೀಡುವುದು ಇದೆಲ್ಲವೂ ಅವರ ಇಷ್ಟದಂತೆ ಮಾಡುವ ಸ್ವಾತಂತ್ರ್ಯ ಸಿಗಬೇಕೆಂದು ಹೇಳಿದರು.[೯] ವಕೀಲರು ಹಾಗೂ ಮಹಿಳಾ ಹಕ್ಕು ಹೋರಾಟಗಾರರು ಕೆಲವು ಮೀಸಲಾತಿಗಳನ್ನು ಕೋರಿದರು.[೧೦]
- ಹೇಳಿಕೆ ನೀಡುವ ಸ್ವಾತಂತ್ರ್ಯ
ನ್ಯಾಯಮೂರ್ತಿ ಬಾಲಕೃಷ್ಣನ್ ಅವರು ಇಂಟರ್‌ನೆಟ್‌ನಲ್ಲಿ ಅಶ್ಲೀಲಕರ ಚಿತ್ರಗಳು ಹಾಗೂ ಪದಗಳನ್ನು ಪ್ರಕಟಪಡಿಸುವ ವೆಬ್‌ಸೈಟ್‌ಗಳನ್ನು ತಡೆಯಬೇಕೆಂದು ಹೇಳಿದರು.[೧೧] ವೆಬ್‌ನಲ್ಲಿ ಯಾವುದೇ ರಾಜಕೀಯ ಪಕ್ಷಗಳ ಬಗ್ಗೆ ವಿರೋಧವ್ಯಕ್ತಪಡಿಸಿ ನಿಲುವುಗಳನ್ನು ಹೇಳುವುದನ್ನು ತೆಗೆದು ಹಾಕಬೇಕೆಂದು ಕೂಡಾ ತೀರ್ಪನ್ನು ನೀಡಿದ್ದರು.[೧೨]
- ಕಾಸರಗೋಡಿನಲ್ಲಿ ಎಂಡೋಸಲ್ಫಾನ್ ಬಳಕೆ
ಸುಯೊ ಮೊಟು ದೂರಿನಂತೆ ಎನ್‌ಎಚ್‌ಆರ್‌ಸಿ ಅಧ್ಯಕ್ಷರಾಗಿ ಕಾಸರಗೋಡಿಗೆ ಭೇಟಿ ನೀಡಿದರು, ಆರೋಗ್ಯಕ್ಕೆ ಅತಿಯಾದ ಹಾನಿಕಾರಕ ಎಂಡೋಸಲ್ಫಾನ್ ಬಳಸಿದ್ದು ಮಾನವ ಹಕ್ಕುಗಳ ದುರುಪಯೋಗ ಮಾಡಿದಂತೆ ಎಂದು ಅವರು ಅಭಿಪ್ರಾಯ ಪಟ್ಟರು ನಂತರ ಇದಕ್ಕೆ ತುತ್ತಾದವರಿಗೆ ಒಂದು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸುವಂತೆ ಸೂಚಿಸಿದರು.[೧೩]
ಉಲ್ಲೇಖಗಳು
ಬದಲಾಯಿಸಿ- "ವಕೀಲರು ಹಾಗೂ ನ್ಯಾಯದೀಶರುಗಳಿಬ್ಬರಿಗೂ ಸಮಾಜದ ಕಡೆಗೆ ಸಮನಾದ ಜವಾಬ್ದಾರಿ ಇದೆ. ಆದ್ದರಿಂದ ಇಬ್ಬರಿಗೂ ಜನರ ಕಡೆಯಿಂದ ಸಮನಾದ ಗೌರವಕ್ಕೆ ಪಾತ್ರರು."
- "ರಾಜಕೀಯ ಪಕ್ಷಗಳ ಬಲವಂತವಾದ ಮುಷ್ಕರಗಳು ಜನಸಾಮಾನ್ಯರ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಮುಷ್ಕರಗಳಿಂದ ರೋಗಿಗಳು, ಪ್ರಯಾಣಿಕರು ಹಾಗೂ ಮಕ್ಕಳು ಹೇಗೆ ತೊಂದರೆಗೀಡಾಗುತ್ತಾರೆಂಬುದನ್ನು ನೀವು ನೋಡಬಹುದು."
- "ತನಿಖೆ ಹಾಗೂ ಆಪಾದನೆಯ ವಿರುದ್ಧ ದಾವೆ ಹೂಡುವ ವಕೀಲರು ಸಾಕ್ಷಿಗಳಿಗೆ ಭಯಪಡಿಸಬಾರದು. ಒಬ್ಬ ನ್ಯಾಯಾದೀಶನು ಜಾಗರೂಕತೆಯಿಂದ ಕೂಡಿದ ಹಾಗೂ ಜವಾಬ್ದಾರಿಯುತನಾಗಿರಬೇಕು." [೧೪]
- "ಎಲ್ಲಾ ವ್ಯಕ್ತಿಗಳ ಒಳಿತನ್ನು ಒರೆಹಚ್ಚುವಿಕೆಯು ಸರಿಯಾದದ್ದು, ಜನರ ಅಪರಾಧಗಳು ಎಷ್ಟೇ ಹೇಯವಾಗಿದ್ದರೂ ಸಹ, ಅದು ಹಿಂಸಾಚಾರ ಹಾಗೂ ಹಗೆತನ ಸಾಧಿಸುವವರ ವಿರುದ್ಧ ನೀತಿಬದ್ಧವಾಗಿರಬೇಕು." [೧೫]
- "ಭಾರತದಲ್ಲಿ ವಿವಿಧ ರೀತಿಯ ಅಪರಾಧಗಳು ಹೆಚ್ಚುತ್ತಿವೆ. ಸಾವು ಜನರ ಮೇಲೆ ಹಾಗೂ ಅವರ ಕಾರ್ಯಚಟುವಟಿಕೆಯ ಮೇಲೆ ಪರಿಣಾಮ ಬೀರುವುದು. ನೀವು ವಿಶ್ಲೇಷಿಸಿ ನೋಡಿದರೆ [ವಿಷಯಗಳನ್ನು], ಸಾವಿನ ಶಿಕ್ಷೆ ಪಡೆದವರಲ್ಲಿ ಬಹಳಷ್ಟು ಜನರು ಅದಕ್ಕೆ ನಿಜವಾಗಿಯೂ ಅರ್ಹರಾಗಿರುತ್ತಾರೆ [ಅವರ ಮೇಲೆ]." [೧೬]
ವಿವಾದಗಳು
ಬದಲಾಯಿಸಿ- ಟೆಲಿಕಾಂ ಮಂತ್ರಿ ಎ. ರಾಜಾ ಅವರ ಹಗರಣಗಳನ್ನು ಮುಚ್ಚಿಡುವಂತೆ ನಿರೂಪಿಸಿದ್ದಕ್ಕೆ ಕೆ.ಜಿ.ಬಾಲಕೃಷ್ಣನ್ ಅವರ ವಿರುದ್ಧ ಜಸ್ಟೀಸ್ ಎಚ್. ಎಲ್. ಗೋಖಲೆ ಅವರು ಆಪಾದನೆ ಮಾಡಿದರು.[೧೭]
- ಅಳಿಯ ಹಾಗೂ ಭಾರತೀಯ ಯುವ ಕಾಂಗ್ರೆಸ್ ಮುಖಂಡರಾದ ಪಿ.ವಿ.ಶ್ರೀನಿಜನ್, ನಾಲ್ಕು ವರ್ಷಗಳ ಹಿಂದೆ ಯಾವುದೇ ಆಸ್ತಿಯನ್ನು ಹೊಂದಿಲ್ಲದೆ ಇದ್ದು, ಈಗ ಲಕ್ಷಾಂತರ ರೂಗಳ ಆಸ್ತಿಯನ್ನು ಹೊಂದಿದ್ದಾರೆ. ಏಷ್ಯಾನೆಟ್ ವಾರ್ತಾ ಚಾನಲ್ ವರದಿಯ ಪ್ರಕಾರ, ೨೦೦೬ ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವಾಗ ಅವರು ಯಾವುದೇ ಆಸ್ತಿಗಳಿಲ್ಲ ಎಂಬುದಾಗಿ ಹೇಳಿಕೊಂಡಿದ್ದರು. ಎರ್ನಾಕುಲಂನ ಜಾರಕಲ್ ಕ್ಷೇತ್ರದಿಂದ ಹಿಂದುಳಿದ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿದ್ದ ಅವರು ಸೋಲನ್ನನುಭವಿಸಿದರು. ಶ್ರೀನಿಜನ್ ಅವರು ಯುವ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದರು.[೧೮]
- ಭಾರತದ ಮಾಜಿ ಮುಖ್ಯ ನ್ಯಾಯಾದೀಶ ಜೆ. ಎಸ್. ವರ್ಮಾ, ಮಾಜಿ ಅಪೆಕ್ಸ್ ಕೋರ್ಟ್ ನ್ಯಾಯಾದೀಶ ವಿ. ಆರ್. ಕೃಷ್ಣ ಅಯ್ಯರ್, ಕಾನೂನು ತಜ್ಞ ಫಲಿ ಎಸ್. ನಾರಿಮನ್, ಎನ್‌ಎಚ್‌ಆರ್‌ಸಿಯ ಮಾಜಿ ಸದಸ್ಯ ಸುದರ್ಶನ್ ಅಗರ್ವಾಲ್ ಹಾಗೂ ಪ್ರಮುಖ ಚಳುವಳಿಕಾರ ವಕೀಲ ಪ್ರಶಾಂತ್ ಭೂಷಣ್ ಇವರೆಲ್ಲರೂ ನ್ಯಾಯಮೂರ್ತಿ ಬಾಲಕೃಷ್ಣನ್ ಅವರು ನ್ಯಾಷನಲ್ ಹ್ಯೂಮನ್ ರೈಟ್ಸ್ ಕಮಿಷನ್‌ನ ಅಧ್ಯಕ್ಷತೆಯಿಂದ ಕೆಳಗಿಳಿಯುವಂತೆ ಕೇಳಿಕೊಂಡರು.[೧೯]
- ನ್ಯಾಯಮೂರ್ತಿ ಬಾಲಕೃಷ್ಣನ್ ಅವರ ಕುಟುಂಬದ ಎಲ್ಲಾ ಸದಸ್ಯರ ಆದಾಯ ಮೂಲ ಹಾಗೂ ಆಸ್ತಿಗಳ ವಿವರಗಳನ್ನು ಸಂಗ್ರಹಿಸಿ ಅವು ಕಾನೂನಿಗೆ ವಿರುದ್ಧವಾಗಿವೆಯೆಂದು ದೋಷಾರೋಪಣೆ ಮಾಡಿ ಅದರ ಪ್ರತಿಯನ್ನು ವಿಜಿಲೆನ್ಸ್ ಹಾಗೂ ಆಂಟಿ ಕರಪ್ಷನ್ ಬ್ಯೂರೋಗೆ ಸಲ್ಲಿಸಲಾಯಿತು.[೨೦]
ಉಲ್ಲೇಖ
ಬದಲಾಯಿಸಿ- ↑ "ಕೇಂದ್ರವು ಗುಜರಾತ್ ರಾಜ್ಯಪಾಲರನ್ನು ರಾಜಸ್ಥಾನ್‌ಗೆ ವರ್ಗಾಯಿಸಿದೆ ಎಂಬುದರಿಂದ ಪ್ರಶ್ನೆಗಳು ಉದ್ಭವಿಸಿವೆ Archived 2007-09-29 ವೇಬ್ಯಾಕ್ ಮೆಷಿನ್ ನಲ್ಲಿ.." ಇಂಡಿಯನ್ ಎಕ್ಸ್‌ಪ್ರೆಸ್. 14 ಜನವರಿ 1999.
- ↑ ಗೌರವಾನ್ವಿತ ನ್ಯಾಯಾದೀಶ ಮಿ. ಕೆ. ಜಿ. ಬಾಲಕೃಷ್ಣನ್
- ↑ ಎನ್‌ಎಚ್‌ಆರ್‌ಸಿ ಛೇರ್ಮನ್ ಬಾಲಕೃಷ್ಣನ್
- ↑ http://in.news.yahoo.com/another-son--in--law-of-ex-cji-k--g--balakrishnan-in-the-dock-20110104.html
- ↑ ಮೊಮೆಂಟ್ ಆಫ್ ಟ್ರೂತ್
- ↑ ಸಿಜೆಐಸ್ ಆಫೀಸ್ ಕಮ್ಸ್ ವಿತಿನ್ ಆರ್‌ಟಿಐ ಆಕ್ಟ್: ದೆಹಲಿ ಎಚ್‌ಸಿ Archived 2010-01-17 ವೇಬ್ಯಾಕ್ ಮೆಷಿನ್ ನಲ್ಲಿ.. news.outlookindia.com. 2010-02-21ರಂದು ಪರಿಷ್ಕರಿಸಲಾಗಿದೆ..
- ↑ ಆರ್‌ಟಿಐ ಕೆಳಗೆ ಸಿಜೆಐ ತೆಗೆದುಕೊಂಡ ನಿರ್ಣಯಗಳನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ
- ↑ ಗೌಪ್ಯತೆಯನ್ನು ಖಚಿತಪಡಿಸಲು ಆರ್‌ಟಿಐ ಆಕ್ಟ್ ಬದಲಾವಣೆಗಳನ್ನು ಮಾಡಬೇಕಾಗಿದೆ: ಬಾಲಕೃಷ್ಣನ್
- ↑ ದಿ ಹಿಂದೂ : ವಾರ್ತೆಗಳು / ರಾಷ್ಟ್ರೀಯ : ಅತ್ಯಾಚಾರಕ್ಕೆ ಒಳಗಾದವರ ವೈಯಕ್ತಿಕ ಜೀವನವನ್ನು ಗೌರವಿಸಿ , ಎಂದು ಜಿ. ಬಾಲಕೃಷ್ಣನ್ ಅವರು ಹೇಳಿದ್ದಾರೆ Archived 2010-08-11 ವೇಬ್ಯಾಕ್ ಮೆಷಿನ್ ನಲ್ಲಿ.. Beta.thehindu.com (2010-03-08). 2010-02-21ರಂದು ಪರಿಷ್ಕರಿಸಲಾಗಿದೆ..
- ↑ ವುಮೆನ್ ಬ್ಲಾಸ್ಟ್ ಬಾಲಕೃಷ್ಣನ್ ರಿಮಾರ್ಕ್ಸ್ ಆನ್ ರೇಪ್ ವಿಕ್ಟಿಮ್ಸ್: ಲೇಟೆಸ್ಟ್ ಹೆಡ್‌ಲೈನ್ಸ್ : ಇಂಡಿಯಾ ಟುಡೇ. Indiatoday.intoday.in (2010-03-09). 2010-02-21ರಂದು ಪರಿಷ್ಕರಿಸಲಾಗಿದೆ..
- ↑ ಸಿಜೆಐ ವಾಂಟ್ಸ್ ಬ್ಯಾನ್ ಆನ್ ವೆಬ್‌ಸೈಟ್ಸ್ ಡಿಸ್‌ಪ್ಲೇಯಿಂಗ್ ಪೋರ್ನ್ Archived 2010-02-06 ವೇಬ್ಯಾಕ್ ಮೆಷಿನ್ ನಲ್ಲಿ.. ಎಕ್ಸ್‌ಪ್ರೆಸ್ ಇಂಡಿಯಾ. 2010-02-21ರಂದು ಪರಿಷ್ಕರಿಸಲಾಗಿದೆ..
- ↑ ಬ್ಲಾಗರ್ಸ್ ಕ್ಯಾನ್ ಬಿ ನೈಲ್ಡ್ ಫಾರ್ ವ್ಯೂವ್ಸ್ – ದಿ ಟೈಮ್ಸ್ ಆಫ್ ಇಂಡಿಯಾ. Timesofindia.indiatimes.com (2009-02-24). 2010-02-21ರಂದು ಪರಿಷ್ಕರಿಸಲಾಗಿದೆ..
- ↑ ಎನ್‌ಎಚ್‌ಆರ್‌ಸಿ ಚೇರ್ ಪರ್ಸನ್ ಅವರಿಂದ ಎಂಡೋಸಲ್ಫಾನ್-ತಾಗಿದ ಪ್ರದೇಶಗಳ ಭೇಟಿ Archived 2012-11-08 ವೇಬ್ಯಾಕ್ ಮೆಷಿನ್ ನಲ್ಲಿ.ಎನ್‌ಎಚ್‌ಆರ್‌ಸಿ ಮೂಟ್ಸ್ ಸೂಪರ್-ಸ್ಪೆಷಾಲಿಟಿ ಹಾಸ್ಪಿಟಲ್ ಫಾರ್ ಎಂಡೋಸಲ್ಫಾನ್ ವಿಕ್ಟಿಮ್ಸ್ Archived 2012-10-22 ವೇಬ್ಯಾಕ್ ಮೆಷಿನ್ ನಲ್ಲಿ. ವೀಡಿಯೋ ಕವರೇಜ್ ಎನ್‌ಎಚ್‌ಆರ್‌ಸಿಯ ರೆಕಮೆಂಡೇಶನ್ಸ್ ಆನ್ ಎಂಡೋಸಲ್ಫಾನ್, 31 ಡಿಸೆಂಬರ್. 2010 Archived 2011-03-02 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "ಸಿಜೆಐ ಪಾಯಿಂಟ್ಸ್ ಟು ಇಗ್ನೋರೆನ್ಸ್ ಆಫ್ ಜಡ್ಜಸ್" (PDF). Archived from the original (PDF) on 2011-07-26. Retrieved 2011-02-20.
- ↑ ಕೆ. ಜಿ. ಬಾಲಕೃಷ್ಣನ್: ಟೆರ್ರರಿಸಂ, ರೂಲ್ ಆಫ್ ಲಾ, ಅಂಡ್ ಹ್ಯೂಮನ್ ರೈಟ್ಸ್ Archived 2008-12-20 ವೇಬ್ಯಾಕ್ ಮೆಷಿನ್ ನಲ್ಲಿ., ದಿ ಹಿಂದೂ, 16 ಡಿಸೆಂಬರ್ 2008.
- ↑ ಡೆತ್ ಪೆನಾಲ್ಟಿ ಹ್ಯಾಸ್ ಡಿಟರೆಂಟ್ ಎಫೆಕ್ಟ್: ಎನ್‌ಎಚ್‌ಆರ್‌ಸಿ ಚೇರ್‌ಪರ್ಸನ್, ದಿ ಹಿಂದೂ, 2 ಆಗಸ್ಟ್. 2010
- ↑ −1.19%
- ↑ [೧]
- ↑ "ಆರ್ಕೈವ್ ನಕಲು". Archived from the original on 2011-01-12. Retrieved 2011-02-20.
- ↑ [೨]
ಹೆಚ್ಚಿನ ಓದಿಗಾಗಿ
ಬದಲಾಯಿಸಿ- ಗೌರವ ನ್ಯಾಯಮೂರ್ತಿ ಮಿ.ಕೆ.ಜಿ.ಬಾಲಕೃಷ್ಣನ್ ಅವರು ಮುಖ್ಯ ನ್ಯಾಯಮೂರ್ತಿಯಾಗಿರುವ ಮುಖ್ಯ ಪುಟ
- ಅಂದಲಿಬ್ ಅಖ್ತರ್: ರೈಸಿಂಗ್ ಫ್ರಂ ಡೌನ್ ಅಂಡರ್, ಮೀನ್ಟೈಮ್, ಏಪ್ರಿಲ್ 2001
- ವಿ. ವೆಂಕಟೇಶನ್: ಜುಡಿಶಿಯರಿ ಅಂಡ್ ಸೋಶಿಯಲ್ ಜಸ್ಟೀಸ್ Archived 2007-10-25 ವೇಬ್ಯಾಕ್ ಮೆಷಿನ್ ನಲ್ಲಿ., ಫ್ರಂಟ್ಲೈನ್, ಅಕ್ಟೋಬರ್. 2000.
- ವಿ. ವೆಂಕಟೇಶನ್: ಸಿಜೆಐಯೊಂದಿಗೆ ಸಂದರ್ಶನ Archived 2009-01-29 ವೇಬ್ಯಾಕ್ ಮೆಷಿನ್ ನಲ್ಲಿ., ದಿ ಹಿಂದೂ, 10 ಜನವರಿ. 2009.