ಕೆ. ಎಸ್. ನಾರಾಯಣಾಚಾರ್ಯ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಕೆ. ಎಸ್. ನಾರಾಯಣಾಚಾರ್ಯ[೩೦ ಅಕ್ಟೋಬರ್ ೧೯೩೩ - ೨೬ ನವೆಂಬರ್ ೨೦೨೧] ಇವರು ಕನ್ನಡದ ಭಾರತೀಯ ಸಂಸ್ಕೃತಿಯ ಲೇಖಕರು, ಪ್ರಚಾರಕರು ಮತ್ತು ಪ್ರವಚನಕಾರರು. ಇವರು ಕನಕಪುರದ ವೈದಿಕ ಶ್ರೀ ವೈಷ್ಣವ ಕುಟುಂಬದಲ್ಲಿ ಜನಿಸಿದರು. ಬೇಂದ್ರೆಯವರಿಂದ ಪ್ರೇರಣೆಗೊಳಗಾಗಿ ಇವರು ಪ್ರವಚನಗಳಿಂದ ಲೇಖನದೆಡೆಗೂ ಮುಖ ಮಾಡಿದರು.
ಶಿಕ್ಷಣ
ಬದಲಾಯಿಸಿಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ(೧೯೫೪), ಬಿ.ಎ(ಆನರ್ಸ್)(೧೯೫೭), ಎಂ.ಎ(ಇಂಗ್ಲಿಷ್)(೧೯೫೮) ಪದವಿಗಳು. "ಡಬ್ಲು. ಬಿ. ಯೇಟ್ಸ್ ಮತ್ತು ಟಿ. ಎಸ್. ಎಲಿಯೇಟ್ ರ ಕಾವ್ಯ್ದ ಮೇಲೆ ಭಾರತೀಯ ತತ್ವಶಾಸ್ತ್ರ ಪ್ರಭಾವ" ಇವರ ಪಿ.ಎಚ್.ಡಿ ಪ್ರಬಂಧ(೧೯೫೯-೬೧).
ಶೈಕ್ಷಣಿಕ ಸೇವೆ
ಬದಲಾಯಿಸಿಪುಸ್ತಕಗಳು
ಬದಲಾಯಿಸಿ- ವೇದ ಸಂಸ್ಕೃತಿಯ ಪರಿಚಯ(೧೦ ಸಂಪುಟ)
- ಶ್ರೀ ರಾಮಾವತಾರ ಸಂಪೂರ್ಣವಾದಾಗ
- ಶ್ರೀ ರಾಮಾಯಣ ಪಾತ್ರ ಪ್ರಪಂಚ
- ಶ್ರೀ ಮಹಾಭಾರತ ಪಾತ್ರ ಪ್ರಪಂಚ
- ಆ ಹದಿನೆಂಟು ದಿನಗಳು
- ರಾಜಸೂಯದ ರಾಜಕೀಯ
- ರಾಜಸೂಯ ತಂದ ಅನರ್ಥ
- ಶ್ರೀ ಕೃಷ್ಣಾವತಾರ (೨ ಸಂ.)
- ಅಗಸ್ತ್ಯ
- ದಶಾವತಾರ
- ಮಹಾಮಾತೆ ಕುನ್ತೀ ಕಂದೆರೆದಾಗ
- ನಳ ದಮಯಂತಿ
- ಆಚಾರ್ಯ ಚಾಣಕ್ಯ
- ರಾಮಾಯಣ ಸಂಪೂರ್ಣವಾದಾಗ
- ಶ್ರೀ ರಾಮಾಯಣಸಾಹಸ್ರೀ (೫ಭಾಗ)
- ಶ್ರೀ ರಾಮಾಯಣದ ಮಹಾ ಪ್ರಸಂಗಗಳು
- ಶ್ರೀ ಕೃಷ್ಣ ಮತ್ತು ಮಹಾಭಾರತ ಯುದ್ದ
- ಭಾರತೀಯ ಇತಿಹಾಸ ಪುರಾಣಗಳು
- ಭಾರತ, ಇಸ್ಲಾಂ ಮತ್ತು ಗಾಂಧಿ
- ಸಮಾಜ ಮತ್ತು ಆಧ್ಯಾತ್ಮೀಕರಣ
- ಶ್ರೀ ಮಹಾಭಾರತ ಕಾಲ ನಿರ್ಣಯ
- ರಾಷ್ಟ್ರೀಯ ಚಿಂತನೆಗಳು ಮತ್ತು ಪರಾಮರ್ಶೆಗಳು -೧
- ರಾಷ್ಟ್ರೀಯ ಚಿಂತನೆಗಳು ಮತ್ತು ಪರಾಮರ್ಶೆಗಳು-೨
- ರಾಷ್ಟ್ರೀಯ ಚಿಂತನೆಗಳು ಮತ್ತು ಪರಾಮರ್ಶೆಗಳು-೩
- ರಾಷ್ಟ್ರಾವಲೋಕನ
- ವನದಲ್ಲಿ ಪಾಂಡವರು
- ವಾಲ್ಮೀಕಿ ಯಾರು?
ಪ್ರಶಸ್ತಿ, ಬಿರುದುಗಳು
ಬದಲಾಯಿಸಿ- 'ವಿದ್ವನ್ಮಣಿ', 'ವೇದಭೂಷಣ', 'ವಾಲ್ಮೀಕಿ ಹೃದಯಜ್ಞ', 'ರಾಮಾಯಣಾಚಾರ್ಯ', 'ಮಹಾಭಾರತಾಚಾರ್ಯ' ಮೊದಲಾದ ಬಿರುದುಗಳು ವಿವಿಧ ಮಠಾಧೀಶರಿಂದ.
- ಗಮಕರತ್ನಾಕರ(ಗಮಕ ಸಮ್ಮೇಳನಾಧ್ಯಕ್ಷರಾಗಿ, ಸರಕಾರದಿಂದ).
- ವೇದ ಸಂಸ್ಕೃತಿ ಮಾಲೆಗೆ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಬಹುಮಾನ(೧೯೭೩).
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೨೦೦೮)
ಸಧ್ಯದ ಕೈಂಕರ್ಯ
ಬದಲಾಯಿಸಿಸಮಗ್ರ ರಾಮಾಯಣ, ಮಹಾಭಾರತ, ಭಾಗವತಗಳ ಕಾದಂಬರೀಕರಣ. ದೇಶಾದ್ಯಂತ ರಾಮಾಯಣ, ಭಾರತ, ಗೀತೆ, ಭಾಗವತ, ಆಳ್ವಾರುಗಳ ಮೊದಲಾದ ಸಾಹಿತ್ಯ ಕುರಿತು ಕನ್ನಡ, ತಮಿಳು, ಆಂಗ್ಲಗಳಲ್ಲಿ ಪ್ರವಚನ. ಭಾರತೀಯ ಸಂಸ್ಕೃತಿ ಪ್ರಸಾರ, ಸಂಶೋಧನೆ.
ನಿಧನ
ಬದಲಾಯಿಸಿ೨೬ ನವೆಂಬರ್ ೨೦೨೧ ರ ಬೆಳಗಿನ ಜಾವ ೨ ಗಂಟೆಗೆ ಬೆಂಗಳೂರಿನಲ್ಲಿ ನಿಧನರಾದರು.[೧][೨]
ಉಲ್ಲೇಖಗಳು
ಬದಲಾಯಿಸಿ- ↑ ಲೇಖಕ, ಹಿರಿಯ ವಿದ್ವಾಂಸ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಇನ್ನಿಲ್ಲ, ವಿಜಯ ಕರ್ನಾಟಕ, ೨೬ ನವೆಂಬರ್ ೨೦೨೧
- ↑ ಖ್ಯಾತ ವಿದ್ವಾಂಸ ಡಾ. ಕೆ.ಎಸ್. ನಾರಾಯಣಾಚಾರ್ಯ ನಿಧನ; ಸಿಎಂ ಬೊಮ್ಮಾಯಿ ಸಂತಾಪ, ಒನ್ ಇಂಡಿಯಾ ಕನ್ನಡ, ೨೬ ನವೆಂಬರ್ ೨೦೨೧
ಹೊರಕೊಂಡಿಗಳು
ಬದಲಾಯಿಸಿ- ಕೆ.ಎಸ್. ನಾರಾಯಣಾಚಾರ್ಯ, 'ಕಣಜ' ಮಾಹಿತಿಕೋಶ
- ಸಂಸ್ಕೃತಿ ಸಂಪನ್ನ ನಾರಾಯಣಾಚಾರ್ಯ, ರವೀಂದ್ರ ಭಟ್ಟ, ಪ್ರಜಾವಾಣಿ, 09/30/2012