ಕೆ. ಎನ್. ಗೋವಿಂದಾಚಾರ್ಯ
ಕೊಡಿಪಾಕಂ ನೀಲಮೇಘಾಚಾರ್ಯ ಗೋವಿಂದಾಚಾರ್ಯ (ಜನನ 2 ಮೇ 1943) ಭಾರತ ವಿಕಾಸ ಸಂಗಮ್, ಎಟ್ರನಲ್ ಹಿಂದು ಫ಼ೌಂಡೇಶನ್ ಮತ್ತು ರಾಷ್ಟ್ರೀಯ ಸ್ವಾಭಿಮಾನ್ ಆಂದೋಲನ, ಔಪಚಾರಿಕವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರು. ಪರಿಸರ ಕಾರ್ಯಕರ್ತ, ಸಾಮಾಜಿಕ ಕಾರ್ಯಕರ್ತ, ರಾಜಕೀಯ ಕಾರ್ಯಕರ್ತ ಮತ್ತು ಚಿಂತಕ . ಅವರು ಭಾರತೀಯ ಜನತಾ ಪಕ್ಷದೊಂದಿಗೆ ಸಂಬಂಧ ಹೊಂದಿದ್ದರು. ಈಗ ಅವರು ಬಾ.ಜ.ಪ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಪಕ್ಷದ ಕಟು ಟೀಕಾಕಾರರಾಗಿದ್ದಾರೆ. [೧]
K. N. Govindacharya | |
---|---|
K. N. Govindacharya | |
ವೈಯಕ್ತಿಕ ಮಾಹಿತಿ | |
ಜನನ | Tirupati, Andhra Pradesh India | ೨ ಮೇ ೧೯೪೩
ರಾಜಕೀಯ ಪಕ್ಷ | Independent |
ಇತರೆ ರಾಜಕೀಯ ಸಂಲಗ್ನತೆಗಳು |
Bhartiya Janata Party |
ಸಂಗಾತಿ(ಗಳು) | None |
ಅಭ್ಯಸಿಸಿದ ವಿದ್ಯಾಪೀಠ | Banaras Hindu University |
ವೃತ್ತಿ | Social and political activist |
ರಾಜಕೀಯ ವೃತ್ತಿಜೀವನ
ಬದಲಾಯಿಸಿಕೆಎನ್ ಗೋವಿಂದಾಚಾರ್ಯ ಅವರು 1988 ರಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರಾದರು ಮತ್ತು 2000 ರವರೆಗೆ ಅವರು ಅದರ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. [೨] 2000 ಇಸವಿಯಲ್ಲಿ ಅವರ "ಅಡ್ವಾಣಿ ಯವರೇ ಎಲ್ಲಾ ನಿರ್ಧರಗಳನ್ನು ತಗೆದುಕೊಳ್ಳುತ್ತಾರೆ ಹಾಗಗಿ ಪ್ರಧಾನಿ ವಾಜಪೇಯಿ ಸರ್ಕಾರದ ಮುಖವಾಡ ಮಾತ್ರ" ಈ ಹೇಳಿಕೆಯಿಂದಾಗಿ ಅವರು ಬಿಜೆಪಿ ತೊರೆಯಬೇಕಾಯಿತು [೩]. ಆದರೆ ಅವರು ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟಿಕರಣ ಕೊಟ್ಟರು [೪], ಆದರೆ ಈ ಸ್ಪಷ್ಟೀಕರಣದಿಂದ ಪ್ರಭಾವಿತರಾಗದ ವಾಜಪೇಯಿ, ಈ ಹೇಳಿಕೆ ಅಧಿಕೃತವಾಗಿದ್ದರೂ ಅಥವಾ ಇಲ್ಲದಿದ್ದರೂ ಪಕ್ಷದ ಇಮೇಜ್‌ಗೆ ಹಾನಿಯಾಗಿದೆ ಎಂದು ಭಾವಿಸಿದರು. [೫]
2019 ರಲ್ಲಿ, ಅವರು ಭಾರತೀಯ ನಾಗರಿಕರ ಗೌಪ್ಯತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಫೇಸ್‌ಬುಕ್, ವಾಟ್ಸಾಪ್ ಮತ್ತು ಎನ್‌ಎಸ್‌ಒ ಗ್ರೂಪ್ ವಿರುದ್ಧ ಎಫ್‌ಐಆರ್ ಮತ್ತು ಎನ್‌ಐಎ ತನಿಖೆಯನ್ನು ದಾಖಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. [೬] [೭] ಆದರೆ ಸಿಜೆಐ ಶರದ್ ಅರವಿಂದ್ ಬೋಬ್ಡೆ ಅವರು ಅರ್ಜಿಯಲ್ಲಿ ತಪ್ಪುಗಳನ್ನು ಉಲ್ಲೇಖಿಸಿದ ನಂತರ ಅವರು ತಮ್ಮ ಅರ್ಜಿಯನ್ನು ಹಿಂತೆಗೆದುಕೊಂಡರು [೮]. 2021 ರಲ್ಲಿ, ಪೆಗಾಸಸ್ (ಸ್ಪೈವೇರ್) ವಿರುದ್ಧ ನ್ಯಾಯಾಲಯದಲ್ಲಿ ಮೇಲ್ವಿಚಾರಣೆಯ ತನಿಖೆಯನ್ನು ಕೋರಿ ತನ್ನ 2019 ರ ಅರ್ಜಿಯನ್ನು ಪುನರ್ ಪರಿಶಿಲಿಸಲು ಮತ್ತೊಮ್ಮೆ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದರು. [೯] [೧೦]
ವಿಶ್ರಾಂತಿ ರಜೆ ಮತ್ತು ನಂತರದ ಬೆಳವಣಿಗೆ
ಬದಲಾಯಿಸಿಭಾರತೀಯ ರಾಜಕೀಯ ಮತ್ತು ಕಾರ್ಪೊರೇಟ್ ವಲಯದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರದ ನಿದರ್ಶನಗಳು ಮತ್ತು 5 ಜೂನ್ 2011 ರಂದು ರಾಮ್‌ದೇವ್ ಅವರ ಅನುಯಾಯಿಗಳ ಮೇಲೆ ಪೋಲೀಸರ ದಬ್ಬಾಳಿಕೆಯಿಂದ ವಿಚಲಿತರಾದರು[೧೧]. ಮಾಜಿ ಪತ್ರಕರ್ತರು, ವಿದ್ಯಾರ್ಥಿ ಕಾರ್ಯಕರ್ತರು, ಮಕ್ಕಳ ಹಕ್ಕುಗಳ ಕಾರ್ಯಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರ ಗುಂಪೂಂದು ಜೂನ್ 25 ರಂದು ದೇಶದಾದ್ಯಂತ 50 ಸಣ್ಣ ಮತ್ತು ದೊಡ್ಡ ರಾಜಕೀಯ ಸಂಘಟನೆಗಳ ಮಹಾಮೈತ್ರಿಕೂಟವುನ್ನು ರಚಿಸಲು ಒತ್ತಾಯಿಸಿದರು. ಆ ವರ್ಷ ತುರ್ತು ಪರಿಸ್ಥಿತಿಯ ಘೋಷಣೆ ಮತ್ತು ಹೇರಿಕೆಯ ದಿನವನ್ನು ನೆನಪಿಸುತ್ತದೆ. ಹೀಗೆ ಸ್ಥಾಪಿಸಿದ ಸೇವ್ ಡೆಮಾಕ್ರಸಿ ಫ್ರಂಟ್ (SDF) ಎಂದು ಕರೆಯಲ್ಪಡುವ ಹೊಸ ಮೈತ್ರಿಕೂಟದ ಅಧ್ಯಕ್ಷರಾಗಿ ಆಯ್ಕೆಯಾದರು. [೧೨] [೧೩].
ಗೋವಿಂದಾಚಾರ್ಯರ ಸಾರಥ್ಯದಲ್ಲಿ, ಭಾರತ ವಿಕಾಸ ಸಂಗಮದ ಮೂರನೇ ರಾಷ್ಟ್ರೀಯ ಸಮಾವೇಶವು ಕರ್ನಾಟಕದ ಕಲ್ಬುರ್ಗಿಯಲ್ಲಿ (ಗುಲ್ಬರ್ಗಾ) 23 ಡಿಸೆಂಬರ್ 2010 ರಿಂದ 1 ಜನವರಿ 2011 ರವರೆಗೆ ನಡೆಯಿತು [೧೪]
ಕೆ.ಎನ್.ಗೋವಿಂದಾಚಾರ್ಯ ಅವರು ಸನಾತನ ಹಿಂದೂ ಪ್ರತಿಷ್ಠಾನದ ಮುಖ್ಯ ಪೋಷಕರಾಗಿದ್ದು, ಸಮಾಜದ ಒಳಿತಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರು ಜೆಪಿ ಆಂದೋಲನ, ರಾಮ ಜನ್ಮ ಭೂಮಿ ಆಂದೋಲನ, ಭಾರತೀಯ ಸಂಸ್ಕೃತಿ ಉತ್ಸವ, ಸ್ವದೇಶಿ ಜಾಗರಣ ಮಂಚ್ ಮುಂತಾದ ಸಾಮಾಜಿಕ ಚಳುವಳಿಗಳೊಂದಿಗೆ ತಮ್ಮನ್ನು ತೊಡಗಿಸಿಕೂಂಡರು. ಗೋವಿಂದಾಚಾರ್ಯ ಅವರು ಪರಿಸರ ಕೇಂದ್ರಿತ ಅಭಿವೃದ್ಧಿಯ ಮೇಲೆ ಮಾಡಿದ ಕೆಲಸಗಳಿಗೆ ಮತ್ತು ತಮ್ಮ ಕ್ರಿಯಾಶೀಲತೆಗೆ ಹೆಸರುವಾಸಿಯಾಗಿದ್ದಾರೆ. ಅವರು ಶಾಶ್ವತ ದೇವಾಲಯ, ಸನಾತನ ಭಾವ ಜಾಗೃತಿ, ITIHASA ಮತ್ತು ಶಾಶ್ವತ ಭಾರತಮ್‌ನಂತಹ ಹಲವಾರು ಸಾಮಾಜಿಕ ಜಾಗೃತಿ ಉಪಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. [೧೫]
ಹಿಮಾಚಲ ಸ್ವಾಭಿಮಾನ್ ಪಕ್ಷ
ಬದಲಾಯಿಸಿಹಿಮಾಚಲ ಸ್ವಾಭಿಮಾನ್ ಪಕ್ಷವು ಭಾರತದ ಹಿಮಾಚಲ ಪ್ರದೇಶದ ಒಂದು ರಾಜಕೀಯ ಪಕ್ಷವಾಗಿದೆ . 10 ಆಗಸ್ಟ್ 2011 ರಂದು ಬಿಜೆಪಿಯ ಮಾಜಿ ಸಿದ್ಧಾಂತವಾದಿ ಗೋವಿಂದಾಚಾರ್ಯರಿಂದ ಪಕ್ಷವನ್ನು ಸ್ಥಾಪಿಸಲಾಯಿತು [೧೬] [೧೭] ಹಿಮಾಚಲ ರಾಜ್ಯದ ನೌಕರರ ಚಳವಳಿಗಳ ಮಾಜಿ ನಾಯಕ ಸುಭಾಷ್ ಶರ್ಮಾ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. [೧೭] [೧೮]
2012 ರ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ಪೂರ್ವದಲ್ಲಿ, ಭಾರತೀಯ ಚುನಾವಣಾ ಆಯೋಗವು ಇವರ ಪಕ್ಷಕ್ಕೆ ಚುನಾವಣಾ ಚಿಹ್ನೆಯಾಗಿ 'ದೂರದರ್ಶನ' ದ ಗುರುತನ್ನು ಕೊಡಲಾಯಿತು . [೧೯] ಚುನಾವಣೆಗೆ ಸ್ಪರ್ಧಿಸಲು ತೃತೀಯ ರಂಗ ದ ಮೈತ್ರಿ ಒಕ್ಕೂಟದ ರಚನೆಯ ಚರ್ಚೆಯಲ್ಲಿ ಈ ಪಕ್ಷವು ಭಾಗವಹಿಸಿತು. [೨೦] 2012ರ ವಿಧಾನಸಭಾ ಚುನಾವಣೆಯಲ್ಲಿ ಹಿಮಾಚಲ ಸ್ವಾಭಿಮಾನ್ ಪಕ್ಷ 16 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ ಯಾರೂ ಗೆಲ್ಲಲಿಲ್ಲ. ರಾಜ್ಯದಲ್ಲಿ ಅವರು ಒಟ್ಟು 6,571 ಮತಗಳನ್ನು (ರಾಜ್ಯದಲ್ಲಿ 0.19% ಮತಗಳನ್ನು) ಪಡೆಯಲಷ್ಟೇ ಶಕ್ತರಾದರು [೨೧].
ಉಲ್ಲೇಖಗಳು
ಬದಲಾಯಿಸಿ- ↑ "Govindacharya Criticises Cong, BJP Over Corruption". news.outlookindia.com. Archived from the original on 22 September 2013. Retrieved 2012-12-25.
- ↑ "BJP General Secretary Govindacharya likely to be given additional responsibilities". India Today. 15 July 1992. Retrieved 2022-03-11.
- ↑ Mohua Chatterjee (9 June 2012). "Narendra Modi's bete noire, Sanjay Joshi stripped of party role". The Times of India. Retrieved 2012-12-25.
- ↑ "I never called Vajpayee mask of govt: Govindacharya". Rediff.com. 23 January 2002. Retrieved 2012-12-25.
- ↑ "India Today Magazine Issue – Dated April 15, 2019". IndiaToday.in. Retrieved 8 April 2019.
- ↑ "Govindacharya moves top court against WhatsApp". The Indian Express. 2019-11-05. Retrieved 2022-03-11.
- ↑ "WhatsApp snooping: Activist Govindacharya withdraws plea from Supreme Court". The New Indian Express. Retrieved 2022-03-11.
- ↑ Sircar, Sushovan (2019-12-02). "Pegasus Spying Row: Ex-RSS Leader Withdraws Petition Seeking Probe". TheQuint. Retrieved 2022-03-11.
- ↑ Correspondent, Legal (2021-08-15). "Pegasus case: Govindacharya asks Supreme Court to revive his 2019 petition". The Hindu. ISSN 0971-751X. Retrieved 2022-03-11.
- ↑ "Pegasus snooping a form of cyber-terrorism, says ex-RSS ideologue Govindacharya, moves SC". ThePrint. 2021-08-17. Retrieved 2022-03-11.
- ↑ "Midnight police swoop on Baba Ramdev ends protest". The Times of India. Times News Network. 5 June 2011. Archived from the original on 31 December 2012. Retrieved 2012-12-25.
- ↑ "Govindacharya floats new platform ahead of Lok Sabha polls". Zee News. 2013-07-21. Retrieved 2022-03-11.
- ↑ "Politics has become a form of business, says Govindacharya". Hindustan Times. 2013-08-19. Retrieved 2022-03-11.
- ↑ Special Correspondent (28 December 2010). "NATIONAL / KARNATAKA : Rural economy needs to be stronger: Karandlaje". The Hindu. Retrieved 2012-12-25.
- ↑ "Eternal Hindu Foundation". eternalhindu.org. Archived from the original on 2019-02-03. Retrieved 2018-02-22.
- ↑ "Govindacharya launches a new party in Himachal". The Times of India. Retrieved 19 February 2020.
- ↑ ೧೭.೦ ೧೭.೧ Himvani. Govindacharya launches Himachal Swabhiman Party
- ↑ The Indian Express. EC gives common symbol to candidates of 2 unrecognised parties
- ↑ Hill Post. Telephone to be Himachal Lokhit Party poll symbol
- ↑ The Tribune. Third front begins to take shape
- ↑ Election Commission of India.