ಕೆ. ಎಂ. ಸೀತಾರಾಮಯ್ಯ

ಕೆ.ಎಂ.ಸೀತಾರಾಮಯ್ಯನವರ ಪೂರ್ತಿ ಹೆಸರು,ಕೆಂಪಸಾಗರ ಮೈಲಾರಯ್ಯ ಸೀತಾರಾಮಯ್ಯನವರೆಂದು [] ಗ್ರೀಕ್‌ ಸಾಹಿತ್ಯದ ಹಲವಾರು ಕೃತಿಗಳನ್ನು ಕನ್ನಡಕ್ಕೆ ತರುವಲ್ಲಿ ಬಹಳ ಶ್ರಮಿಸಿದ್ದಾರೆ. ಅವರು,ಯೂರೋಪಿನ ಸಾಹಿತ್ಯವನ್ನು ವಿಶ್ವವಿದ್ಯಾಲಯದ ಮಟ್ಟದಲ್ಲಿ ವ್ಯಾಸಂಗಮಾಡುವ ವಿದ್ಯಾರ್ಥಿಗಳಿಗೆ ಗ್ರೀಕ್‌ನ ಮಹಾಕವಿ ಹೋಮರನ ಮಹಾಕಾವ್ಯಗಳಾದ ‘ಇಲಿಯಡ್‌’ ಮತ್ತು ‘ಒಡಿಸ್ಸಿ’ಗಳನ್ನು ಕನ್ನಡ ಭಾಷೆಗೆ ತರ್ಜುಮೆ ಮಾಡಿದ್ದಾರೆ. ಮುಂದೆ ಈ ದಿಶೆಯಲ್ಲಿ ವ್ಯಾಸಂಗಮಾಡುವ ವಿದ್ಯಾರ್ಥಿಗಳಿವೆ ಈಗ ಅವು ಆಧಾರ ಗ್ರಂಥಗಳೆಂದು ಪರಿಗಣಿಸಲ್ಪಟ್ಟಿವೆ.

ಜನನ, ವಿದ್ಯಾಭ್ಯಾಸ

ಬದಲಾಯಿಸಿ

ಸೀತಾರಾಮಯ್ಯನವರು, ಜನಿಸಿದ್ದು, ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕೆಂಪಸಾಗರದಲ್ಲಿ, ೧೯೨೯ ರ ಅಕ್ಟೋಬರ್ ೧೦ ರಂದು. ತಂದೆ ಕೆ. ಮೈಲಾರಯ್ಯ, ತಾಯಿ ವೆಂಕಟಲಕ್ಷ್ಮಮ್ಮ. ಅವರ ಪ್ರಾರಂಭಿಕ ಶಿಕ್ಷಣ ಅರಸೀಕೆರೆಯಲ್ಲಿ ನಡೆಯಿತು. ನಂತರ,ಇಂಟರ್ ಮೀಡಿಯೆಟ್‌ ಶಿಕ್ಷಣವನ್ನು ಹಾಸನದಲ್ಲಿ ಮುಂದುವರೆಸಿದರು. ಮೈಸೂರು ಮಹಾರಾಜ ಕಾಲೇಜಿನಿಂದ ಪಡೆದ ಬಿ.ಎ. ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಡನೆ ಪಡೆದ ಎಂ.ಎ.ಪದವಿ. ಮುಂದೆ ಅವರು ಅಧ್ಯಾಪಕರಾಗಿ, ರೀಡರಾಗಿ, ಪ್ರಿನ್ಸಿಪಾಲರಾಗಿ ಮೈಸೂರು ಮಹಾರಾಜಕಾಲೇಜು, ಮಂಡ್ಯ, ಹಾಸನ, ಮಡಿಕೇರಿ, ಶಿವಮೊಗ್ಗ, ಕೋಲಾರ, ಆನೇಕಲ್‌, ಬೆಂಗಳೂರು ಮುಂತಾದೆಡೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚುಕಾಲ ಶಿಕ್ಷಣ ರಂಗದಲ್ಲಿ ದುಡಿದು, ೧೯೮೮ರಲ್ಲಿ ನಿವೃತ್ತರಾದರು.

ಸಾಹಿತ್ಯ ಕ್ಷೇತ್ರದಲ್ಲಿ

ಬದಲಾಯಿಸಿ

ಕಥೆಗಾರರಾಗಿ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿ ಬರೆದ ಕಥಾ ಸಂಕಲನಗಳು:

  1. ‘ಸಪ್ತಸ್ವರ’
  2. ‘ಮಾನಸಪೂಜೆ’

ಕಾದಂಬರಿಗಳು

ಬದಲಾಯಿಸಿ
  1. ‘ರಾಜರಹಸ್ಯ’
  2. ‘ಸಂನ್ಯಾಸಿ’.

ಗ್ರೀಕ್ ಮತ್ತು ರೋಮನ್ ಭಾಷೆಗಳ ಅಧ್ಯಯನ

ಬದಲಾಯಿಸಿ

ನಂತರ ಸೀತಾರಾಮಯ್ಯನವರು ಮಾಡಿದ ಅಧ್ಯಯನ, ಗ್ರೀಕ್‌ ಹಾಗೂ ರೋಮನ್‌ ಮೈಥಾಲಜಿಗಳ ಬಗ್ಗೆ, ಗ್ರೀಕ್‌ನ ಮಹಾಕವಿ ಹೋಮರನ ಮಹಾಕಾವ್ಯಗಳಾದ ‘ಇಲಿಯಡ್‌’ ಮತ್ತು ‘ಒಡಿಸ್ಸಿ’ಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಗ್ರೀಕ್‌ ಸಾಹಿತ್ಯದ ಬಗ್ಗೆ ಇವರು ರಚಿಸಿರುವ ಇತರ ಕೃತಿಗಳೆಂದರೆ :

  1. ಗ್ರೀಕರ ಪುರಾಣ ಕಥೆಗಳು,
  2. ಗ್ರೀಕ್‌ವೀರರು,[]
  3. ಗ್ರೀಕ್‌ ದೇವತೆಗಳು,
  4.  ಟ್ರೋಜನ್‌ ಮಹಾಯುದ್ಧ,[]
  5. ‘ಗ್ರೀಕ್‌ ಮಿಥಕಗಳು. ಈ ಗ್ರಂಥದಲ್ಲಿ ವಿಜ್ಞಾನ, ಚರಿತ್ರೆ–ಭೂಗೋಳ, ಗ್ರೀಕರ ತಾತ್ವಿಕ ಚಿಂತನೆಗಳು ಹಾಗೂ ಗ್ರೀಕರ ವಿಶ್ವದ ಇತರ ದೇಶಗಳೊಂದಿಗಿನ ವಾಣಿಜ್ಯ ವ್ಯವಹಾರ ಸಂಬಂಧಗಳು, ಸಾಮಾಜಿಕ–ರಾಜಕೀಯ ಜನಜೀವನ, ಮುಂತಾದವುಗಳ ಚಿತ್ರಣಗಳಿಂದ ಕೂಡಿದೆ.
  6. ‘ಈ ನಿಯಡ್‌’ ಲ್ಯಾಟಿನ್‌ ಮಹಾಕವಿ ವರ್ಜಿಲನ ವಿರಚಿತ.

ಸೀತಾರಾಮಯ್ಯನವರ ಮತ್ತಿತರ ಕೃತಿಗಳು

ಬದಲಾಯಿಸಿ
  1. ಜನಪ್ರಿಯ ಸರ್ವಜ್ಞನ ವಚನಗಳ ಸಂಗ್ರಹ
  2. ಅಮೆರಿಕ ಪ್ರವಾಸಾನುಭವದ ಕೃತಿ
  3.  ‘ಅಪೂರ್ವ’, ‘ಗ್ರೀಕರ ಪುರಾಣಕಥೆಗಳು’

ಪ್ರಶಸ್ತಿಗಳು

ಬದಲಾಯಿಸಿ
  • ದೇವರಾಜ ಬಹದ್ದೂರ್ ಸಾಹಿತ್ಯ ಪ್ರಶಸ್ತಿ,
  • ಪ್ರವಾಸ ಸಾಹಿತ್ಯವಾದ ‘ಅಪೂರ್ವ’ ಕೃತಿಗೆ ಗೊರೂರು ಸಾಹಿತ್ಯ ಪ್ರಶಸ್ತಿ,
  • ಈನಿಯಡ್‌ ಮಹಾಕಾವ್ಯದ ಅನುವಾದದ ಕೃತಿಗೆ ಕರ್ನಾಟಕ ಅನುವಾದ ಸಾಹಿತ್ಯ ಅಕಾಡಮಿ ಪ್ರಶಸ್ತಿ,
  • ಕುಮಾರ ವಾಲ್ಮೀಕಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ.

ಉಲ್ಲೇಖಗಳು

ಬದಲಾಯಿಸಿ
  1. 'ಕಣಜ'-ಅಂತರಜಾಲ ಕನ್ನಡ ಜ್ಞಾನಕೋಶ
  2. Introduction to western Literature, ಎಮ್. ಸೀತಾರಾಮಯ್ಯ ವಿರಚಿತ, 3,5/12, ವೀಡಿಯೋಗಳು
  3. ಮಹಾಕವಿ ಹೋಮರನ ಇಲಿಯಡ್,ಟ್ರೋಜನ್ ಯುದ್ಧ, ಒಡಿಸ್ಸಿ, ನವಕರ್ನಾಟಕ ಪ್ರೈವೇಟ್ ಪಬ್ಲಿಕೇಶನ್ಸ್ Archived 2021-06-22 ವೇಬ್ಯಾಕ್ ಮೆಷಿನ್ ನಲ್ಲಿ.