ಕೆ.ಗುಡಿ ಆನೆ ಶಿಬಿರ

ಕೆ.ಗುಡಿ ಆನೆ ಶಿಬಿರ ಚಾಮರಾಜನಗರ ವನ್ಯಜೀವಿ ವಿಭಾಗದಲ್ಲಿದೆ.

ಗಜೇಂದ್ರ

ಬದಲಾಯಿಸಿ

ಈಗ ೫೫ ವರ್ಷ. ೨.೮೦ ಮೀಟರ್ ಎತ್ತರವಿದ್ದಾನೆ. ಈತನನ್ನು ೧೯೮೭ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಅರಿವಳಿಕೆ ಔಷಧಿ ನೀಡುವ ಮೂಲಕ ಸೆರೆಹಿಡಿಯಲಾಗಿತ್ತು. ಮಹಾರಾಜರ ಅರಮನೆಯ ಪೂಜೆಯ ವಿಧಿ ವಿಧಾನಗಳಲ್ಲಿ ಭಾಗವಹಿಸುವ ಪಟ್ಟದ ಆನೆಯಾಗಿ ಕಾರ್ಯನಿರ್ವಹಿಸುತ್ತಿರುವ ಗಜೇಂದ್ರನಿಗೆ ೧೪ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡ ಅನುಭವವಿದೆ

ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ೧೯೭೭ರಲ್ಲಿ ಕವಿತಾಳನ್ನು ಖೆಡ್ಡದಲ್ಲಿ ಸೆರೆಹಿಡಿಯಲಾಗಿದ್ದು, ಈಕೆಗೆ ಈಗ ೬೯ ವರ್ಷ. ಸುಮಾರು ೨.೩೫ ಮೀಟರ್ ಎತ್ತರವಿರುವ ಕವಿತಾ, ೫ ಬಾರಿ ಮೈಸೂರು ದಸರಾದಲ್ಲಿ ಪಾಲ್ಗೊಂಡ ಅನುಭವವಿದೆ.

ಶ್ರೀರಾಮ

ಬದಲಾಯಿಸಿ

ಇದರ ಅಂದಾಜು ವಯಸ್ಸು ೫೩. ಎತ್ತರ ೨.೬೫ ಮೀಟರ್. ೧೯೬೯ರಲ್ಲಿ ಕೊಡಗು ಜಿಲ್ಲೆಯ ತಿತಿಮತಿ ಅರಣ್ಯ ಪ್ರದೇಶದಲ್ಲಿ ಖೆಡ್ಡಾ ಮೂಲಕ ಸೆರೆ ಹಿಡಿಯಲಾಗಿತ್ತು. ವರಲಕ್ಷ್ಮಿ ಕಳೆದ ೧೩ ವರ್ಷಗಳಿಂದ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದು, ಪಟ್ಟದ ಆನೆಯ ಜೊತೆ ಅರಮನೆಯಲ್ಲಿ ಪೂಜಾ ಕಾರ್ಯದಲ್ಲಿ ಭಾಗವಹಿಸುತ್ತಿದೆ.

ಗಜಪಡೆಗಳಿಗೆಲ್ಲಾ ಹಿರಿಯಜ್ಜಿಯಾಗಿರುವ ಕಾಂತಿಗೆ ಈಗ ೭೧ ವರ್ಷ. ೨.೧೦ ಮೀಟರ್ ಎತ್ತರ. ೧೯೬೮ರಲ್ಲಿ ಕಾಕನಕೋಟೆ ಅರಣ್ಯದಲ್ಲಿ ಖೆಡ್ಡಾದಲ್ಲಿ ಸೆರೆಹಿಡಿಯಲಾಯಿತು. ಇದುವರೆಗೆ ೧೬ ಬಾರಿ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದೆ

ಇವನ್ನೂ ನೋಡಿ

ಬದಲಾಯಿಸಿ