ಕೆ.ಎಸ್.ರಾಮಕೃಷ್ಣಮೂರ್ತಿ
ಕೆ.ಎಸ್.ರಾಮಕೃಷ್ಣಮೂರ್ತಿಯವರು ಅರಸಿಕೆರೆ ತಾಲೂಕಿನ ಕುರಿವೆಂಕ ಗ್ರಾಮದಲ್ಲಿ ಜನಿಸಿದರು.
ಕಿಡಿ ಪಿ.ಶೇಷಪ್ಪ ಹಾಗೂ ಅ.ನ.ಕೃಷ್ಣರಾಯ ಅವರಿಗೆ ಆಪ್ತರಾಗಿದ್ದ ಕೆ.ಎಸ್.ರಾಮಕೃಷ್ಣಮೂರ್ತಿ ಅವರು ಪ್ರಜಾವಾಣಿ ಪತ್ರಿಕೆಯ ಆರಂಭದ ದಿನಗಳಲ್ಲಿ ಟಿ.ಎಸ್.ರಾಮಚಂದ್ರರಾವ್ ಅವರ ಜತೆಗೂಡಿದವರು. ಮದ್ರಾಸ್‌ನಲ್ಲಿದ್ದ ಅಮೆರಿಕನ್ ದೂತವಾಸದ ಕನ್ನಡ ಪ್ರಕಟಣೆಗಳ (ಅಮೆರಿಕನ್ ರಿಪೋರ್ಟರ್) ಸಂಪಾದಕತ್ವ ವಹಿಸಿದ್ದ ರಾಮಕೃಷ್ಣಮೂರ್ತಿ, ಕನ್ನಡ ಪ್ರಭ ಪತ್ರಿಕೆ ಆರಂಭವಾದಾಗ ಸಹ ಸಂಪಾದಕರಾಗಿ ಸೇರ್ಪಡೆಯಾದರು. ಆ ಪತ್ರಿಕೆಯ ಮೊದಲ ಸಂಪಾದಕರಾಗಿದ್ದ ಎನ್.ಎಸ್.ಸೀತಾರಾಮ ಶಾಸ್ತ್ರಿಯವರ ಹಠಾತ್ ನಿರ್ಗಮನದಿಂದ ತೆರವಾದ ಸ್ಥಾನವನ್ನು ತುಂಬಿದ ರಾಮಕೃಷ್ಣಮೂರ್ತಿ, ಕನ್ನಡಪ್ರಭ ಪತ್ರಿಕೆಗೆ ಸಾಂಸ್ಕೃತಿಕ ಮೆರಗನ್ನು ನೀಡಿದರು. ಅವರು ಸಂಪಾದಕರಾಗಿದ್ದ ಕಾಲದಲ್ಲಿ ಅನಕೃ (`ಬರಹಗಾರನ ಬದುಕು', ಮಾಸ್ತಿ, ಡಿವಿಜಿ ತಮ್ಮ ಸ್ಮೃತಿ ಚಿತ್ರಗಳನ್ನು ಕನ್ನಡಪ್ರಭಕ್ಕೆ ಬರೆದುಕೊಟ್ಟಿದ್ದರು. ಕಾದಂಬರಿಗಳನ್ನು ಧಾರಾವಾಹಿಯಾಗಿ ದಿನಪತ್ರಿಕೆಗಳಲ್ಲಿ ಪ್ರಕಟಿಸುವ ಹೊಸ ಯೋಜನೆಯನ್ನು ಇವರು ಆರಂಭಿಸಿದರು. ರಾಮಕೃಷ್ಣಮೂರ್ತಿ ಬರೆಯುತ್ತಿದ್ದ `ಜ್ಞಾನಪ್ರಭ' ನಿತ್ಯ ಅಂಕಣದಲ್ಲಿ ವಿಜ್ಞಾನದ ಕುತೂಹಲಕರ ಸಂಗತಿಗಳು ಪ್ರಸ್ತಾಪವಾಗುತ್ತಿದ್ದವು.
ಸಾಹಿತ್ಯ
ಬದಲಾಯಿಸಿಇವರ ಕೆಲವು ಸಾಹಿತ್ಯ ಕೃತಿಗಳು ಇಂತಿವೆ:
- ಪ್ರತಿಮೆ
- ತೀರದ ಸಾಲ (ಕಾದಂಬರಿ)
- ಅದ್ಭುತ ಸಾಧನೆಗಳು
- ಪೀಟರ್ ಜಂಗರ್
- ಶಬ್ದ