ಕೆ.ಎಸ್.ನಾರಾಯಣಸ್ವಾಮಿ

ಕೆ.ಎಸ್.ನಾರಾಯಣಸ್ವಾಮಿ ಇವರು ೧೯೨೯ ಮಾರ್ಚ ೨ರಂದು ಅರಸೀಕೆರೆಯಲ್ಲಿ ಜನಿಸಿದರು. ಇವರ ತಾಯಿ ಶಂಕರಮ್ಮ; ತಂದೆ ಸೀತಾರಾಮಯ್ಯ.


ಪತ್ರಿಕೋದ್ಯಮ ಬದಲಾಯಿಸಿ

ಹಂಗರಿಯ ಬುಡಾಪೆಸ್ಟ ನಗರದಲ್ಲಿ ಪತ್ರಿಕೋದ್ಯಮದಲ್ಲಿ ವಿಶೇಷ ತರಬೇತಿ ಪಡೆದು ಬಂದ ಇವರು ೧೯೬೭ರ ವರೆಗೆ ಪ್ರಜಾವಾಣಿಯಲ್ಲಿ ಸೇವೆ ಸಲ್ಲಿಸಿದರು. ಆನಂತರ ಕನ್ನಡ ಪ್ರಭ ಪತ್ರಿಕೆಯಲ್ಲಿ ಸೇರಿದರು. ಅಲ್ಲದೆ ‘ನಾಂದಿ’, ‘ಸಾಹಿತ್ಯವಾಹಿನಿ’ ಚಲನಚಿತ್ರ ಪತ್ರಿಕೆಗಳ ಸಂಪಾದಕ ಮಂಡಲಿಯಲ್ಲಿ ಸೇವೆ ಸಲ್ಲಿಸಿದ್ದಾರೆ.


ಸಾಹಿತ್ಯ ಬದಲಾಯಿಸಿ

  • ಕರುಣಾಳು ಬಾ ಬೆಳಕೆ (ಕಾದಂಬರಿ)
  • ನಾಗೇಶರಾಯರು (ಜೀವನ ಚರಿತ್ರೆ)
  • ಮಂಜು ಹೂವಿನ ಮದುವಣಿಗ (ಹಂಗೇರಿಯನ್ ಕಥೆಗಳ ಅನುವಾದ)


ಇತರ ಬದಲಾಯಿಸಿ

  • ಇವರು ನಿರ್ಮಿಸಿದ ನಾಂದಿ ಚಲನಚಿತ್ರಕ್ಕೆ ಕರ್ನಾಟಕ ಸರಕಾರದ ಪ್ರಶಸ್ತಿ ಲಭಿಸಿದೆ.
  • ಇವರು ‘ಕರ್ನಾಟಕ ಚಲನಚಿತ್ರ ಪತ್ರಕಾರರ ಪರಿಷತ್’ ಇದರ ಸ್ಥಾಪಕ ಅಧ್ಯಕ್ಷರಾಗಿದ್ದರು.
  • ಇವರು ‘ಆದರ್ಶ ಫಿಲ್ಮ್ ಇನ್ಸ್ಟಿಟ್ಯೂಟಿನಲ್ಲಿ ಉಪನ್ಯಾಸಕರಾಗಿದ್ದರು.
  • ಇವರು ಕರ್ನಾಟಕ ಡಾಕ್ಯುಮೆಂಟರಿ ಅವಾರ್ಡ ಕಮಿಟಿಯಲ್ಲಿ ಜ್ಯೂರಿ ಆಗಿದ್ದರು.