ಕೆಚ್ಚಲು
ಕೆಚ್ಚಲು ದನಗಳ ಹೈನು ತಳಿಗಳು ಮತ್ತು ಹೆಣ್ಣು ಚತುಷ್ಪಾದ ಸಸ್ತನಿಗಳು, ವಿಶೇಷವಾಗಿ ಕುರಿಗಳು, ಆಡುಗಳು ಮತ್ತು ಜಿಂಕೆಯಂತಹ ರೋಮಂಥಕಗಳ ಸ್ತನಗ್ರಂಥಿಗಳಿಂದ ರೂಪಗೊಂಡ ಒಂದು ಅಂಗ.[೧] ಇದು ಪ್ರೈಮೇಟ್‌ಗಳಲ್ಲಿನ ಮೊಲೆಗೆ ಸಮಾನವಾಗಿದೆ. ಕೆಚ್ಚಲು ಪ್ರಾಣಿಯ ಕೆಳಭಾಗದಲ್ಲಿ ಜೋತುಬಿದ್ದಿರುವ ಒಂದು ಮಾಂಸದ ಕೂಡಣೆಯಾಗಿದೆ, ಮತ್ತು ಚಾಚಿಕೊಂಡಿರುವ ಮೊಲೆತೊಟ್ಟುಗಳಿರುವ ಸ್ತನಗ್ರಂಥಿಗಳ ಜೋಡಿಗಳನ್ನು ಹೊಂದಿರುತ್ತದೆ. ದನಗಳಲ್ಲಿ ಸಾಮಾನ್ಯವಾಗಿ ಎರಡು ಜೋಡಿಗಳಿರುತ್ತವೆ, ಆಡು, ಕುರಿ ಮತ್ತು ಜಿಂಕೆಗಳಲ್ಲಿ ಒಂದು ಜೋಡಿಯಿರುತ್ತದೆ, ಮತ್ತು ಹಂದಿಗಳಂತಹ ಕೆಲವು ಪ್ರಾಣಿಗಳಲ್ಲಿ ಅನೇಕ ಜೋಡಿಗಳಿರುತ್ತವೆ. ಕೆಚ್ಚಲುಗಳಿರುವ ಪ್ರಾಣಿಗಳಲ್ಲಿ, ಸ್ತನಗ್ರಂಥಿಗಳು ತೊಡೆಸಂದಿನ ಹತ್ತಿರ ದುಗ್ಧ ರೇಖೆಯ ಮೇಲೆ ಬೆಳೆಯುತ್ತವೆ. ಆಕಳುಗಳಲ್ಲಿ ಕೆಚ್ಚಲಿನ ಆರೈಕೆ ಮತ್ತು ಸ್ವಚ್ಛತೆಯು ಹಾಲು ಕರೆಯುವಿಕೆಯಲ್ಲಿ ಮುಖ್ಯವಾಗಿದೆ. ಇದು ತಡೆರಹಿತ ಹಾಗೂ ಕಲುಷಿತವಲ್ಲದ ಕ್ಷೀರೋತ್ಪಾದನೆಯಲ್ಲಿ ನೆರವಾಗುತ್ತದೆ, ಮತ್ತು ಕೆಚ್ಚಲಿನ ಉರಿಯೂತವನ್ನು ತಡೆಯುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Rowen D. Frandson; W. Lee Wilke; Anna Dee Fails (1 April 2013), Anatomy and Physiology of Farm Animals, John Wiley & Sons, pp. 449–451, ISBN 978-1-118-68601-0