ಕೆಂಪು ಚಿಟವ
From Keoladeo National Park, ರಾಜಸ್ಠಾನ, ಭಾರತ.
Conservation status
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
ಸಿ. ಕೊರೋಮ್ಯಾಂಡಲಿಕಸ್
Binomial name
ಕರ್ಸೋರಿಯಸ್ ಕೊರೋಮ್ಯಾಂಡಲಿಕಸ್
(Gmelin, 1789)

ಕೆಂಪು ಚಿಟವ ಇದು ಮುಖ್ಯವಾಗಿ ಭಾರತೀಯ ಉಪಖಂಡದಲ್ಲಿ ಕಂಡು ಬರುವ ಪಕ್ಷಿ. ಗಂಗಾ ಮತ್ತು ಸಿಂಧೂ ನದಿಯ ಬಯಲು ಪ್ರದೇಶ,ದಕ್ಶಿಣದ ಪ್ರಸ್ಥಭೂಮಿಯ ಕೆಲವೆಡೆ ಹೆಚ್ಚಾಗಿ ಕಂಡು ಬರುವ ನೆಲಪಕ್ಷಿ.

ಲಕ್ಷಣಗಳು

ಬದಲಾಯಿಸಿ

ಇದು ಗೌಜುಗಕ್ಕಿಂತ ಚಿಕ್ಕದಾದ ಬೂದು -ಕಂದು ಪಕ್ಷಿ. ನೆತ್ತಿ ಕಡು ಕಂದು.ಬಿಳಿ ಹುಬ್ಬು.ಕಣ್ಣಿನ ಕೆಳಗೆ ಇಳಿ ಬಿಟ್ಟ ಕಪ್ಪು ಪಟ್ಟಿ. ಕತ್ತಿನ ಹಿಂಭಾಗ,ಬೆನ್ನು,ರೆಕ್ಕೆ,ಬಾಲ ಕಡು ಬೂದು ಬಣ್ಣದ್ದಾಗಿರುತ್ತದೆ.ಗದ್ದ,ಕತ್ತಿನ ಮುಂಭಾಗ ಹಾಗೂ ಎದೆ ಕೆಂಪು ಮಿಶ್ರಿತ ಕಂದು. ಕೊಕ್ಕು ಮತ್ತು ಕಾಲುಗಳು ಬೂದು ಬಣ್ಣವಿರುತ್ತದೆ.

ವೈಜ್ಞಾನಿಕ ಹೆಸರು

ಬದಲಾಯಿಸಿ

ಇದು ಗ್ಲ್ಲಾರಿಯೋಲಿಡೇ ಕುಟುಂಬಕ್ಕೆ ಸೇರಿದ್ದು, ಕರ್ಸೋರಿಯಸ್ ಕೋರೊಮ್ಯಾಂಡಲಿಕಸ್ 'ಎಂದು ವೈಜ್ಞಾನಿಕ ಹೆಸರು. ಇದನ್ನು ಸಂಸ್ಕೃತದಲ್ಲಿ ಶ್ವೇತಚರಣ ಎಂದು ಕರೆಯುತ್ತಾರೆ.

ಇದು ಒಂದು ನೆಲ ಪಕ್ಷಿ. ಹೆಚ್ಚಾಗಿ ಬಂಜರು ಭೂಮಿಗಳಲ್ಲಿ, ಬಯಲು ಪ್ರದೇಶಗಳಲ್ಲಿ ಒಂಟಿಯಾಗಿ ಕಂಡು ಬರುತ್ತದೆ.ಹೆಚ್ಚಾಗಿ ಮೌನಿ.

ಸಂತಾನೋತ್ಪತ್ತಿ

ಬದಲಾಯಿಸಿ

ಹೆಚ್ಚಾಗಿ ಮಾರ್ಚ್ -ಆಗಸ್ಟ್ ತಿಂಗಳಿನಲ್ಲಿ. ಕಪ್ಪು ಚುಕ್ಕಿ ಗಳಿರುವ ೨-೩ ಮೊಟ್ಟೆ ಗಳನ್ನು ಇಡುತ್ತದೆ. ನೆಲವನ್ನು ಕೆದರಿ ಗೂಡು ಕಟ್ಟುತ್ತದೆ. ಕೀಟಗಳು ಆಹಾರ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
  1. BirdLife International (2008). Cursorius coromandelicus. In: IUCN 2008. IUCN Red List of Threatened Species. Retrieved 12 May 2006.

೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್