ಡಾ. ಕೃಷ್ಣಾನಂದ ಕಾಮತ್ (೧೯೩೪ - ೨೦೦೨) ಖ್ಯಾತ ಸಾಹಿತಿ ಹಾಗೂ ವಿಜ್ಞಾನಿ. ಕನ್ನಡದಲ್ಲಿ ಅನೇಕ ವೈಜ್ಞಾನಿಕ ಮತ್ತು ಇತರ ಕೃತಿಗಳನ್ನು ರಚಿಸಿದ್ದಾರೆ.

ಪರಿಚಯ, ಶಿಕ್ಷಣ, ವೃತ್ತಿಜೀವನ

ಬದಲಾಯಿಸಿ
  • ಕಾಮತರು ಮೂಲತಃ ಉತ್ತರಕನ್ನಡ ಜಿಲ್ಲೆಹೊನ್ನಾವರದವರು. ಜನನ ೧೯೩೪ ಇಸವಿ, ಸೆಪ್ಟೆಂಬರ್ ೨೯. ತಂದೆ ಲಕ್ಷ್ಮಣ ವಾಸುದೇವ ಕಾಮತ್, ತಾಯಿ ರಮಾಬಾಯಿ.
  • ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೀಟ ವಿಜ್ಞಾನದಲ್ಲಿ ಎಂಎಸ್ಸಿ ಪದವಿ, ಅಮೇರಿಕಾದ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (೧೯೬೫, ವಿಷಯ: ಪರಿಸರ ಮತ್ತು ಅರಣ್ಯ ವಿಜ್ಞಾನ)
  • ರಾಜಸ್ಥಾನಉದಯಪುರ ವಿಶ್ವವಿದ್ಯಾಲಯ್ದ ಜಾಬ್ನೇರ ಕೃಷಿ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಸೇವೆ.
  • ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಕಾಮನ್ ವೆಲ್ತ್ ಇನ್‌ಸ್ಟಿಟ್ಯೂಟ್ ಆಫ್ ಬಯಾಲಜಿಕಲ್ ಕಂಟ್ರೋಲ್ ಸಂಸ್ಥೆಯಲ್ಲಿ ಶಾಖೆಯ ಮೇಲ್ವಿಚಾರಕರಾಗಿ ಎರಡು ವರ್ಷ ಸೇವೆ.
  • ೧೯೭೧ ರಿಂದ ನೌಕರಿಗೆ ರಾಜೀನಾಮೆ ನೀಡಿ ವೈಜ್ಞಾನಿಕ ಛಾಯಾಚಿತ್ರಗ್ರಾಹಕರಾಗಿ ಸ್ವತಂತ್ರ ಜೀವನ.

ಕೃಷ್ಣಾನಂದ ಕಾಮತರು ಪ್ರವಾಸಕಥನ, ವಿಜ್ಞಾನ, ಜನಾಂಗೀಯ ಅಧ್ಯಯನ, ಕಲೆ, ಪರಿಸರ ಮೊದಲಾದ ವಿಷಯಗಳ ಬಗ್ಗೆ ಪುಸ್ತಕಗಳನ್ನೂ, ನೂರಾರು ಲೇಖನಗಳನ್ನೂ ಪ್ರಕಟಿಸಿದ್ದಾರೆ. ಕೃಷ್ಣಾನಂದ ಕಾಮತರ ಪತ್ನಿ ಶ್ರೀಮತಿ ಜ್ಯೋತ್ಸ್ನಾ ಕಾಮತ್ ಸಂಶೋಧಕಿ ಹಾಗು ಲೇಖಕಿ.[]

ಕೃತಿಗಳು

ಬದಲಾಯಿಸಿ
  • ವಂಗದರ್ಶನ (ಬಂಗಾಲದ ಕುರಿತು)
  • ಪ್ರೇಯಸಿಗೆ ಪತ್ರಗಳು
  • ಮರುಪಯಣ
  • ಪತ್ರ-ಪರಾಚಿ
  • ಭಗ್ನಸ್ವಪ್ನ (ಕಾದಂಬರಿ)
  • ನಾ ರಾಜಸ್ಥಾನದಲ್ಲಿ
  • ಕಲೆ-ಕಾವಿಕಲೆ
  • ಅಕ್ಷತ
  • ಇರುವೆಯ ಇರುವು
  • The Timeless Theater
  • ಕಾಗೆಯ ಕಾಯಕ
  • ಪ್ರವಾಸಿಯ ಪ್ರಬಂಧಗಳು
  • ಕೊಂಕಣ್ಯಾಲಿ ಕಾವಿಕಲಾ (ಕೊಂಕಣಿ ಭಾಷೆ)


೧೯೭೬ ಒಂದು ವರ್ಷಕಾಲ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಶಿಷ್ಯವೇತನ ಪಡೆದು ಮಧ್ಯಪ್ರದೇಶದಲ್ಲಿ ಗಿರಿವಾಸಿ ಜನಾಂಗಗಳ ಅಧ್ಯಯನ ಮಾಡಿ ಅಲ್ಲಿನ ಬಗ್ಗೆ ಮೂರು ಕೃತಿಗಳನ್ನು ರಚಿಸಿದ್ದಾರೆ.

  • ಕಾಲರಂಗ
  • ಬಸ್ತರ ಪ್ರವಾಸ (ಗಿರಿಜನರ ಪರಿಚಯ)
  • ಮಧ್ಯಪ್ರದೇಶದ ಮಡಿಲಲ್ಲಿ


ಪರಿಸರ, ಪ್ರಾಣಿ, ಸಸ್ಯ ವಿಜ್ಞಾನದ ಕೃತಿಗಳನ್ನು ರಚಿಸಿದ್ದಾರೆ.

  • ಪ್ರಾಣಿಪ್ರಪಂಚ
  • ಪಶುಪಕ್ಷಿ ಪ್ರಪಂಚ
  • ಕೀಟ ಜಗತ್ತು
  • ಸಸ್ಯಪ್ರಪಂಚ
  • ಸಸ್ಯ ಪರಿಸರ
  • ಪ್ರಾಣಿ ಪರಿಸರ
  • ಸರ್ಪಸಂಕುಲ
  • ನಾನೂ ಅಮೆರಿಕೆಗೆ ಹೋಗಿದ್ದೆ (ಪ್ರವಾಸಕಥನ,೧೯೬೯)

ಪ್ರಶಸ್ತಿ ಮತ್ತು ಗೌರವಗಳು

ಬದಲಾಯಿಸಿ
  • ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ನಾನೂ ಅಮೆರಿಕೆಗೆ ಹೋಗಿದ್ದೆ, ಪ್ರಾಣಿಪರಿಸರ, ಬಸ್ತರ ಪ್ರವಾಸ ಕೃತಿಗಳಿಗೆ)
  • ಗೌರೀಶ ಕಾಯ್ಕಿಣಿ ಪ್ರತಿಷ್ಠಾನದ ಪ್ರಶಸ್ತಿ (೧೯೯೪)
  • ಟಿ.ಎಂ.ಎ. ಪೈ ಪ್ರತಿಷ್ಠಾನ ವಿಶೇಷ ಬಹುಮಾನ
  • ಉತ್ತರ ಕನ್ನಡ ಜಿಲ್ಲಾ ಒಂಬತ್ತನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ (೧೯೯೭)
  • ಕೆಲವು ಕೃತಿಗಳು ಬೆಂಗಳೂರು, ಕರ್ನಾಟಕ ವಿ.ವಿ.ದ ತರಗತಿಗಳಿಗೆ ಪಠ್ಯಗಳಾಗಿ ಆಯ್ಕೆ.

ಕೃಷ್ಣಾನಂದ ಕಾಮತರು ೨೦೦೨ ಫೆಬ್ರುವರಿ ೨೦ರಂದು ನಿಧನರಾದರು.[]

ಉಲ್ಲೇಖಗಳು

ಬದಲಾಯಿಸಿ

ಹೊರಕೊಂಡಿಗಳು

ಬದಲಾಯಿಸಿ